ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Daily Horoscope: ಪುಷ್ಯ ನಕ್ಷತ್ರದ ಅಧಿಪತಿ ಶನಿಯಿಂದ ಇಂದು ಈ ರಾಶಿಗೆ ಶುಭ ಫಲ

ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಾದಶಿ ತಿಥಿ, ಪುಷ್ಯ ನಕ್ಷತ್ರದ ಸೆಪ್ಟೆಂಬರ್ 18ನೇ ತಾರೀಕಿನ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Daily Horoscope -

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಕೃಷ್ಣ ಪಕ್ಷದ ದ್ವಾದಶಿ ತಿಥಿ, ಪುಷ್ಯ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ: ಪುಷ್ಯ ನಕ್ಷತ್ರದ ಅಧಿಪತಿ ಶನಿಯಾಗಿರುವುದರಿಂದ ಆಲಸ್ಯ ಹೆಚ್ಚಾಗಿರುತ್ತದೆ. ಮೇಷ ರಾಶಿಯವರಿಗೆ ಈ‌ ದಿನ ಕಷ್ಟದ ದಿನ ಆಗಲಿದೆ. ಕೋರ್ಟ್ ವ್ಯವಹಾರ, ಆಸ್ತಿ ಪಾಸ್ತಿ ವ್ಯವಹಾರದಲ್ಲಿ ತೊಂದರೆ ಆಗಬಹುದು.‌ ಅದೇ ರೀತಿ ನೀವು ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಬೇಕು.‌ ಎಲ್ಲ ಕೆಲಸ ಕಾರ್ಯದಲ್ಲಿ ತಾಳ್ಮೆ ಇರಬೇಕು.

ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು ಪತ್ರಿಕೋದ್ಯಮ, ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಉತ್ತಮ ದಿನವಾಗುತ್ತದೆ. ಅದರಲ್ಲೂ ಯೂಟ್ಯೂಬ್, ಫೇಸ್‌ಬುಕ್ ಇತ್ಯಾದಿ ಕ್ಷೇತ್ರದಲ್ಲಿ ವ್ಯವಹಾರ ಮಾಡುವವರಿಗೆ ಲಾಭದ ದಿನವಾಗಲಿದೆ.

ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಸಂಸಾರಿಕ ವ್ಯವಹಾರದಲ್ಲಿ ಒಡಕು ಉಂಟಾಗಿ ಕಷ್ಟವಾಗಬಹುದು. ಆದ್ದರಿಂದ ಬಹಳ ಸಮಾಧಾನ ರೀತಿಯಲ್ಲಿ ಎಲ್ಲವನ್ನು ನಿಭಾಯಿಸಬೇಕು.

ಕಟಕ ರಾಶಿ: ಕಟಕ ರಾಶಿಯಲ್ಲೇ ಚಂದ್ರ ಇರುವುದರಿಂದ ಹಿಂದಿನ ನಾಲ್ಕು ದಿನಗಳಲ್ಲಿ ಇದ್ದ ತೊಂದರೆ ಎಲ್ಲವೂ ಮಾಯವಾಗುತ್ತದೆ. ಮುಂದಿನ‌ ಕೆಲಸಗಳಿಗೆ ನಿಮ್ಮಲ್ಲಿ ಆತ್ಮವಿಶ್ವಾಸ ಕೂಡ ಚೆನ್ನಾಗಿ ಇರುತ್ತದೆ. ಹಾಗಾಗಿ ಮುಂದಿನ ದಿನದಲ್ಲಿ ನಿಮಗೆ ಒಳ್ಳೆಯದಾಗಲಿದೆ.

ಸಿಂಹ ರಾಶಿ: ಸಿಂಹ ರಾಶಿಯವರ ವ್ಯಯ ಸ್ಥಾನದಲ್ಲಿ ಚಂದ್ರ ಬಂದಿರುವುದರಿಂದ ಮುಖ್ಯ ನಿರ್ಧಾರಗಳು ಒಳ್ಳೆಯದಲ್ಲ. ಯಾವುದೇ ನಿರ್ಧಾರಗಳನ್ನು ಮಾಡುವುದು ಇಂದು ಸರಿಯಲ್ಲ. ನಿಮ್ಮ ಮಿತ್ರರ ಜತೆ ಒಡಕು ಉಂಟಾಗಬಹುದು. ಎಲ್ಲ ಕೆಲಸ ಕಾರ್ಯದಲ್ಲೂ ಅಪಜಯವಾಗಲಿದೆ. ಹಾಗಾಗಿ ಧ್ಯಾನಾದಿಗಳನ್ನು ಮಾಡುವ ಮೂಲಕ ಸಮಯ ಕಳೆಯುವುದು ಉತ್ತಮ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಧನ ಆಗಮನ ಕೂಡ ಆಗಲಿದೆ. ಅದೇ ರೀತಿ ನಿಮ್ಮ ಕೆಲಸ ಕಾರ್ಯದಲ್ಲೂ ಬಹಳಷ್ಟು ಯಶಸ್ಸು ಸಿಗಲಿದೆ.

ತುಲಾ ರಾಶಿ: ತುಲಾ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನ ಆಗುತ್ತದೆ. ನಿಮ್ಮ ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗಬಹುದು. ಮನಸ್ಸಿಗೆ ಅತೀ ಹೆಚ್ಚಿನ ಬೇಸರ‌ ಉಂಟಾಗಬಹುದು. ಆದ್ದರಿಂದ ಬಹಳ ತಾಳ್ಮೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ.

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅತ್ಯುತ್ತಮ ದಿನ ಆಗಲಿದ್ದು, ಭಾಗ್ಯದ ದಿನ ಆಗುತ್ತದೆ. ಮನಸ್ಸಿಗೆ ನೆಮ್ಮದಿ ಇದೆ. ಆದರೆ ಕೆಲವೊಂದು ಮುಖ್ಯವಾದ ನಿರ್ಧಾರದಲ್ಲಿ ಯಾರ ಸಹಕಾರ ಕೂಡ ಪ್ರಾಪ್ತಿಯಾಗುವುದಿಲ್ಲ. ಆದ್ದರಿಂದ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಲು ಮರೆಯಬೇಡಿ.

ಇದನ್ನು ಓದಿ:Vastu Tips: ಮನೆ ಅಲಂಕಾರಕ್ಕೆ ಈ ಚಿತ್ರಗಳನ್ನು ಇಡಬೇಡಿ

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಮನಸ್ಸಿಗೆ ಕಷ್ಟದ ದಿನವಾಗಲಿದೆ. ಯಾವುದೇ ಸಂದರ್ಭದಲ್ಲಿ ಯಾರ ಸಹಕಾರಗಳು ನಿಮಗೆ ಸಿಗುವುದಿಲ್ಲ. ನಿಮ್ಮ ಪ್ರೀತಿ ಪಾತ್ರರಿಂದಲೂ ನಿಮಗೆ ನೋವು ಆಗಬಹುದು. ಹಾಗಾಗಿ ಧ್ಯಾನಾದಿಗಳನ್ನು ಮಾಡಿ ದಿನ ಕಳೆಯಿರಿ. ಯಾವುದೇ ಮುಖ್ಯ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡಿ.

ಮಕರ ರಾಶಿ: ಮಕರ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಎಲ್ಲ ಕೆಲಸ ಕಾರ್ಯದಲ್ಲೂ ಸಹಕಾರ ಸಿಗುತ್ತದೆ. ದಾಂಪತ್ಯ ಜೀವನದಲ್ಲೂ ಕೂಡ ನೆಮ್ಮದಿ ಸಿಗುತ್ತದೆ.

ಕುಂಭರಾಶಿ: ಕುಂಭ ರಾಶಿಯವರಿಗೆ ಈ ದಿನ ಜಯ ಪ್ರಾಪ್ತಿಯಾಗುತ್ತದೆ. ಸಾಮಾಜಿಕ ಕೆಲಸದಲ್ಲಿ ಬಹಳಷ್ಟು ಯಶಸ್ಸು ಸಿಗಲಿದೆ. ಶತ್ರುಗಳಿಂದ ಜಯಸಿಗಲಿದ್ದು ಆರೋಗ್ಯದಲ್ಲೂ ಸುಧಾರಣೆ ಕಂಡು ಬರಲಿದೆ.

ಮೀನ ರಾಶಿ: ಮೀನ ರಾಶಿಯವರಿಗೆ ಈ ದಿನ ಸ್ವಲ್ಪ ಕಷ್ಟ ಗೋಚರವಾಗಲಿದೆ. ನಿಮ್ಮ ಬುದ್ದಿ ಚಾಕಚಾಕ್ಯತೆ ಇದ್ದರೂ ಬೇರೆ ಯವರಿಂದ ಯಾವುದೇ ನೆರವು ನಿಮಗೆ ಸಿಗುವುದಿಲ್ಲ. ದಾಂಪತ್ಯ, ಮಿತೃತ್ವದಲ್ಲಿ ಒಡಕು ಉಂಟಾಗಬಹುದು. ಮಕ್ಕಳ ಆರೋಗ್ಯದ ಬಗ್ಗೆ ಗಮನ ನೀಡಬೇಕಾಗುತ್ತದೆ.