ಅಮೆಜಾನ್ ಇಂದು ಭಾರತದಲ್ಲಿ 2026ರ ಜುಲೈ ತಿಂಗಳಿನಲ್ಲಿ 'ಪ್ರೈಮ್ ಡೇ' ಆಯೋಜಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ಇದು 10ನೇ ಆವೃತ್ತಿಯ ಪ್ರೈಮ್ ಡೇ ಆಗಿದ್ದು, ಪ್ರೈಮ್ ಸದಸ್ಯರು ಈ ಬಾರಿ ಅತ್ಯುತ್ತಮ ಡೀಲ್‌ಗಳು, ಉಳಿತಾಯ, ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಬ್ಲಾಕ್‌ಬಸ್ಟರ್ ಮನರಂಜನೆಯನ್ನು ನಿರೀಕ್ಷಿಸಬಹುದು. ಪ್ರೈಮ್ ಸದಸ್ಯರಿಗೆ ಈ ಕಾರ್ಯಕ್ರಮವನ್ನು ಮತ್ತಷ್ಟು ಮೌಲ್ಯಯುತವಾಗಿಸಲು ಜನಪ್ರಿಯ ಬ್ರಾಂಡ್‌ಗಳು ಮತ್ತು ಟ್ರೆಂಡಿಂಗ್ ಉತ್ಪನ್ನಗಳ ಮೇಲೆ ಭರ್ಜರಿ ಆಫರ್‌ಗಳನ್ನು ನೀಡಲಾಗುವುದು. ಎಲೆಕ್ಟ್ರಾನಿಕ್ಸ್, ಕಿಚನ್, ಬ್ಯೂಟಿ, ಫ್ಯಾಷನ್, ತಾಜಾ ದಿನಸಿ ಮತ್ತು ದೈನಂದಿನ ಅಗತ್ಯ ವಸ್ತುಗಳ ಮೇಲೆ ಸದಸ್ಯರು ಉತ್ತಮ ರಿಯಾಯಿತಿಗಳನ್ನು ಪಡೆಯಬಹುದಾಗಿದೆ.
ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಕೊಲಂಬಿಯಾ, ಈಜಿಪ್ಟ್, ಫ್ರಾನ್ಸ್, ಜರ್ಮನಿ, ಇಟಲಿ, ಐರ್ಲೆಂಡ್, ಲಕ್ಸೆಂಬರ್ಗ್, ಮೆಕ್ಸಿಕೋ, ನೆದರ್ಲ್ಯಾಂಡ್ಸ್, ಪೋಲೆಂಡ್, ಪೋರ್ಚುಗಲ್, ಸೌದಿ ಅರೇಬಿಯಾ, ಸಿಂಗಾ ಪುರ, ಸ್ಪೇನ್, ಸ್ವೀಡನ್, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳಲ್ಲಿ ಪ್ರೈಮ್ ಡೇ 2026 ಜೂನ್ ತಿಂಗಳಿನಲ್ಲಿ ನಡೆಯಲಿದೆ. ಆದರೆ, ಆಸ್ಟ್ರೇಲಿಯಾ, ಬ್ರೆಜಿಲ್, ಜಪಾನ್ ಮತ್ತು ಭಾರತದ ಪ್ರೈಮ್ ಸದಸ್ಯರು ಜುಲೈ ತಿಂಗಳಿನಲ್ಲಿ ಪ್ರೈಮ್ ಡೇ ಡೀಲ್‌ಗಳ ಲಾಭ ಪಡೆಯಲಿದ್ದಾರೆ.
ಇದನ್ನೂ ಓದಿ: AI ಚಾಲಿತ Amazon.in ನ 'ಹೋಳಿ ಸ್ಟೋರ್' ಈಗ ಲೈವ್...
2025ರಲ್ಲಿ ಅಮೆಜಾನ್ ಇಂಡಿಯಾ ತನ್ನ ಅತಿ ವೇಗದ ವಿತರಣಾ ವೇಗವನ್ನು ಘೋಷಿಸಿತ್ತು. ಇದರಲ್ಲಿ 55 ಕೋಟಿಗೂ ಹೆಚ್ಚು ಉತ್ಪನ್ನಗಳನ್ನು ಒಂದೇ ದಿನ ಅಥವಾ ಮರುದಿನವೇ ತಲುಪಿಸ ಲಾಗಿತ್ತು—ಇದು ವರ್ಷದಿಂದ ವರ್ಷಕ್ಕೆ ಶೇಕಡಾ 40 ರಷ್ಟು ಹೆಚ್ಚಳವಾಗಿದೆ. ಅಷ್ಟೇ ಅಲ್ಲದೆ, ಭಾರತದ ಪ್ರೈಮ್ ಸದಸ್ಯರು 2025ರಲ್ಲಿ ತಮ್ಮ ವಾರ್ಷಿಕ ಪ್ರೈಮ್ ಸದಸ್ಯತ್ವದ ಶುಲ್ಕಕ್ಕಿಂತ ಸರಾಸರಿ ಎರಡು ಪಟ್ಟು ಹೆಚ್ಚು ಉಳಿತಾಯ ಮಾಡಿದ್ದಾರೆ, ಇದು ದೇಶಾದ್ಯಂತ ಗ್ರಾಹಕರಿಗೆ ಪ್ರೈಮ್ ನೀಡುವ ಮೌಲ್ಯವನ್ನು ಎತ್ತಿ ತೋರಿಸುತ್ತದೆ.
ಭಾರತದಲ್ಲಿ, ಪ್ರೈಮ್ ಸದಸ್ಯರು ಆಯ್ದ ನಗರಗಳಲ್ಲಿ 'ಅಮೆಜಾನ್ ನೌ' ಮೂಲಕ ಕೆಲವೇ ನಿಮಿಷಗಳಲ್ಲಿ ವಿತರಣೆಯನ್ನು ಪಡೆಯುತ್ತಾರೆ. ಇದರೊಂದಿಗೆ 10 ಲಕ್ಷ ಉತ್ಪನ್ನಗಳ ಮೇಲೆ ಉಚಿತ ಮತ್ತು ಅಪರಿಮಿತ 'ಸೇಮ್-ಡೇ' (ಅಂದೇ ದಿನ) ವಿತರಣೆ, 40 ಲಕ್ಷ ಉತ್ಪನ್ನಗಳ ಮೇಲೆ 'ನೆಕ್ಸ್ಟ್-ಡೇ' (ಮರುದಿನ) ವಿತರಣೆ ಮತ್ತು 40,000ಕ್ಕೂ ಹೆಚ್ಚು ಹೆಚ್ಚು ಮಾರಾಟವಾಗುವ ಉತ್ಪನ್ನಗಳ ಮೇಲೆ 4-ಗಂಟೆಗಳ ವಿತರಣಾ ಸೌಲಭ್ಯವನ್ನು ಪಡೆಯುತ್ತಾರೆ.
ಪ್ರೈಮ್ ಸದಸ್ಯರು ಅಮೆಜಾನ್ ನೌ ನಲ್ಲಿ ಶಾಪಿಂಗ್ ಮಾಡುವಾಗ ವಿಶೇಷ ಕೊಡುಗೆಗಳನ್ನು ಪಡೆಯುತ್ತಾರೆ; ಉದಾಹರಣೆಗೆ ₹99 ಮೊತ್ತದ ಶಾಪಿಂಗ್ ಮೇಲೆ ಉಚಿತ ವಿತರಣೆ ಮತ್ತು ₹1,399 ಕ್ಕಿಂತ ಹೆಚ್ಚಿನ ಶಾಪಿಂಗ್ ಮಾಡಿದಾಗ ₹200 ಗಳ ಹೆಚ್ಚುವರಿ ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಅವರು ವಿಶೇಷ ಡೀಲ್‌ಗಳು, ಪ್ರೈಮ್ ಡೇಗೆ ವಿಶೇಷ ಪ್ರವೇಶ ಹಾಗೂ ಪ್ರೈಮ್ ವಿಡಿಯೋ ಮತ್ತು ಅಮೆಜಾನ್ ಮ್ಯೂಸಿಕ್ ಸೇರಿದಂತೆ ಇನ್ನು ಹೆಚ್ಚಿನ ಸೌಲಭ್ಯ ಗಳನ್ನು ಪಡೆಯುತ್ತಾರೆ. ಅಲ್ಲದೆ, ಪ್ರೈಮ್ ಸದಸ್ಯರು 'ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್' ಕ್ರೆಡಿಟ್ ಕಾರ್ಡ್ ಬಳಸಿ Amazon.in ನಲ್ಲಿ ಮಾಡುವ ಎಲ್ಲಾ ಖರೀದಿಗಳ ಮೇಲೆ ಅಪರಿಮಿತ 5% ಕ್ಯಾಶ್ ಬ್ಯಾಕ್ ಗಳಿಸುತ್ತಾರೆ.
ಈಗಲೇ ಪ್ರೈಮ್ ಸೇರಿ, ಭಾರತದಲ್ಲಿ ಯಾರು ಬೇಕಾದರೂ ಪ್ರೈಮ್ ಸದಸ್ಯತ್ವವನ್ನು ಪಡೆಯ ಬಹುದು. ವಾರ್ಷಿಕ ಪ್ರೈಮ್ ಸದಸ್ಯತ್ವ - ₹1,499: ಸಂಪೂರ್ಣ ಶಾಪಿಂಗ್ ಮತ್ತು ಮನರಂಜನೆಯ ಪ್ರೈಮ್ ಪ್ರಯೋಜನಗಳೊಂದಿಗೆ. ಪ್ರೈಮ್ ಲೈಟ್ - ₹799: ಸಂಪೂರ್ಣ ಶಾಪಿಂಗ್ ಪ್ರಯೋಜನಗಳು ಮತ್ತು ಸೀಮಿತ ಪ್ರೈಮ್ ವಿಡಿಯೋ ಪ್ರಯೋಜನಗಳೊಂದಿಗೆ. ಪ್ರೈಮ್ ಶಾಪಿಂಗ್ ಎಡಿಷನ್ - ₹399: ಇದು ಕೇವಲ ಶಿಪ್ಪಿಂಗ್ ಮತ್ತು ಶಾಪಿಂಗ್ ಪ್ರಯೋಜನಗಳನ್ನು ಬಯಸುವ ಗ್ರಾಹಕರಿಗಾಗಿ ರೂಪಿಸ ಲಾಗಿದೆ; ಇದರಲ್ಲಿ ಪ್ರೈಮ್ ವಿಡಿಯೋ ಅಥವಾ ಅಮೆಜಾನ್ ಮ್ಯೂಸಿಕ್‌ನಂತಹ ಯಾವುದೇ ಡಿಜಿಟಲ್ ಅಥವಾ ಮನರಂಜನಾ ಪ್ರಯೋಜನಗಳು ಇರುವುದಿಲ್ಲ.