ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕ, ಚೀನಾ, ಭಾರತ...ಯಾರಿಗೆ ಸಿಗುತ್ತೆ ವಿಶ್ವದ ಸೂಪರ್ ಪವರ್ ಪಟ್ಟ?

Vishwavani Money: ಇತ್ತೀಚಿನ ಭೌಗೋಳಿಕ, ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ವಿಶ್ವದಲ್ಲೇ ಸೂಪರ್ ಪವರ್ ಪಟ್ಟಕ್ಕಾಗಿ ಅಮೆರಿಕ, ಚೀನಾ ಮತ್ತು ಭಾರತದ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಚೀನಾವು ಅಮೆರಿಕಕ್ಕೆ ಪ್ರಬಲ ಪೈಪೋಟಿಯನ್ನು ನೀಡುತ್ತಿದೆ. ಹೀಗಾಗಿ ಅಮೆರಿಕವು ಭಾರತವನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞ ಅಶೋಕ್ ದೇವನಾಂಪ್ರಿಯ.

ಅಶೋಕ್ ದೇವನಾಂಪ್ರಿಯ

ಬೆಂಗಳೂರುಮ, ಮೇ 28: 2030ರೊಳಗೆ ವಿಶ್ವದ ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಹೊರಹೊಮ್ಮುವುದೇ? ಅಮೆರಿಕ ಸೂಪರ್ ಪವರ್ ಸ್ಥಾನದಿಂದ ಕೆಳಗಿಳಿಯಲು ಕಾರಣವಾಗುವ ಅಂಶಗಳು ಏನು? ಸೂಪರ್ ಪವರ್ ಸ್ಥಾನಕ್ಕಾಗಿ ಚೀನಾ ನಡೆಸುತ್ತಿರುವ ತಂತ್ರವೇನು? ಭಾರತ ಎದುರಿಸಬೇಕಾದ ಸವಾಲುಗಳು, ಇದಕ್ಕಾಗಿ ಇರುವ ಅವಕಾಶಗಳು ಯಾವುದು? ಎಂಬುದರ ಕುರಿತು ಖ್ಯಾತ ಹೂಡಿಕೆ ತಜ್ಞ, ಕೌಟಿಲ್ಯ ಕ್ಯಾಪಿಟಲ್ ಸಂಸ್ಥಾಪಕ (Founder of cautilya Capital) ಅಶೋಕ್ ದೇವನಾಂಪ್ರಿಯ (Ashok Devanampriya) 'ವಿಶ್ವವಾಣಿ ಮನಿ' (Vishwavani money) ಯುಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಹೇಳಿರುವುದು ಹೀಗೆ...

ವಿಶ್ವದ ಸೂಪರ್ ಪವರ್ ಸ್ಥಾನಕ್ಕಾಗಿ ಭೌಗೋಳಿಕ, ರಾಜಕೀಯ, ಆರ್ಥಿಕ ಪರಿಸ್ಥಿತಿಯ ಆಧಾರದಲ್ಲಿ ಅಮೆರಿಕ, ಚೀನಾ ಮತ್ತು ಭಾರತದ ನಡುವೆ ಶೀತಲ ಸಮರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಈ ದೃಷ್ಟಿಯಲ್ಲಿ ಭಾರತ ಈಗಷ್ಟೇ ಹೆಜ್ಜೆ ಇಡುತ್ತಿದೆ ಎಂದು ಅವರು ತಿಳಿಸಿದರು.

ವಿಡಿಯೊ ಇಲ್ಲಿದೆ:



ಸುಮಾರು 300- 400 ವರ್ಷಗಳ ಕಾಲ ಬ್ರಿಟಿಷ್ ದಬ್ಬಾಳಿಕೆ ಇತ್ತು. ಆಗ ಬ್ರಿಟಿಷ್ ಪೌಂಡ್ ಮತ್ತು ಸುಪ್ರೀಂ ಕರೆನ್ಸಿ ನಡುವೆ ಸಂಘರ್ಷ ನಡೆಯುತ್ತಿತ್ತು. ಅದರ ಬಳಿಕ ಡಾಲರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿತ್ತು. ಇದಕ್ಕೆ ಮೊದಲು ಪೌಂಡ್ ಅಂತಾರಾಷ್ಟ್ರೀಯ ಸ್ಥಾನ ಪಡೆದಿದ್ದು, ಆಗ ಅದರ ಕೇಂದ್ರ ಬ್ರಿಟನ್ ಆಗಿತ್ತು ಎಂದು ಅವರು ತಿಳಿಸಿದರು.

ಮೊದಲನೇ, ಎರಡನೇ ವಿಶ್ವ ಯುದ್ಧದಲ್ಲಿ ಬ್ರಿಟಿಷರು ಎಲ್ಲ ಸಂಪತ್ತನ್ನು ಕಳೆದುಕೊಂಡಿದ್ದರಿಂದ ಸೂಪರ್ ಪವರ್ ರಾಷ್ಟ್ರವಾಗಿ ಅಮೆರಿಕ ಹೊರಹೊಮ್ಮಿತ್ತು. ಈಗ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಅಮೆರಿಕ, ಚೀನಾ ಮತ್ತು ಭಾರತ ಸ್ಥಾನ ಪಡೆದಿದೆ ಎಂದರು.

ರಾಜಕೀಯ ಪಕ್ಷಗಳ ಉಚಿತ ಕೊಡುಗೆಯ ಹೊರೆ ಯಾರ ಮೇಲೆ? ದೇಶದ ಆರ್ಥಿಕತೆಯ ಮೇಲೆ ಇದರ ಪರಿಣಾಮವೇನು?

ದೇಶದ ಉತ್ಪಾದನೆ ಶಕ್ತಿ ಹೆಚ್ಚಿದಂತೆಲ್ಲ ದೇಶ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಇವತ್ತು ಚೀನಾದಲ್ಲಿ ಉತ್ಪಾದನೆ ತೀವ್ರವಾಗಿ ಹೆಚ್ಚಳವಾಗಿದೆ. ಹೀಗಾಗಿ ಅದು ಎರಡನೇ ಸ್ಥಾನದಲ್ಲಿದೆ. ಕೋವಿಡ್ ಬಳಿಕ ಭಾರತ ಈ ನಿಟ್ಟಿನಲ್ಲಿ ತೀವ್ರವಾಗಿ ಹೆಜ್ಜೆ ಇಡಲು ಪ್ರಾರಂಭಿಸಿದೆ ಎಂದು ಹೇಳಿದರು.

ಚೀನಾ ವಿವಿಧ ದೇಶಗಳಿಗೆ ಸಾಲ ಕೊಟ್ಟು ಅವುಗಳ ಮೇಲೆ ನಿಯಂತ್ರಣ ಮಾಡುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಎಲ್ಲರೂ ಚೀನಾದಿಂದ ದೂರ ಇರುವಂತೆ ಅಮೆರಿಕ ಸಲಹೆ ನೀಡುತ್ತಿದೆ. ಕೋವಿಡ್ ಬಳಿಕ ಭಾರತದಲ್ಲಿ ಮೇಕಿಂಗ್ ಇಂಡಿಯಾ ಸಾಕಷ್ಟು ಪ್ರಗತಿಯ ಹಾದಿಯನ್ನು ತೆರೆದಿದೆ. ಭಾರತದಲ್ಲಿ ಉತ್ಪಾದನೆ ಹೆಚ್ಚಾಗಿದ್ದರಿಂದ ಅದು ಶಕ್ತಿಶಾಲಿ ರಾಷ್ಟ್ರಗಳ ಪೈಕಿಯಲ್ಲಿ ಮೂರನೇ ಸ್ಥಾನದಲ್ಲಿದೆ ಎಂದರು.

ಚೀನಾ ಅಮೆರಿಕಕ್ಕೆ ಪ್ರಬಲವಾದ ಪ್ರತಿಸ್ಪರ್ಧಿಯಾಗಿರುವುದರಿಂದ ಅದು ಭಾರತದ ಮೇಲೆ ಹೆಚ್ಚು ಕಾಳಜಿ ತೋರಿಸುತ್ತಿದೆ. ಭಾರತದಲ್ಲಿ ಕೃಷಿ, ಸೇವೆ, ಉತ್ಪಾದನೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕೃಷಿ ಸ್ವ ಉದ್ಯಮವಾಗಿರುವುದರಿಂದ ಇದರಲ್ಲಿ ಹೆಚ್ಚಿನ ಆದಾಯವಿಲ್ಲ. ಉತ್ಪಾದನೆ ಕ್ಷೇತ್ರದಲ್ಲಿ ಹೆಚ್ಚಿನ ಆದಾಯವಿದೆ. ಸೇವಾ ಕ್ಷೇತ್ರ ಭಾರತದಲ್ಲಿ ಚೆನ್ನಾಗಿದೆ. ಆದರೆ ಇದನ್ನು ನಾವು ಉತ್ಪಾದನೆ ಕ್ಷೇತ್ರವಾಗಿ ಪರಿಗಣಿಸಿಲ್ಲ ಎಂದು ವಿವರಿಸಿದರು.

ಅನ್ ಲಿಸ್ಟೆಡ್ ಸ್ಟಾಕ್ ಮೇಲೆ ಹೂಡಿಕೆ ಮಾಡುವಾಗ ಇರಲಿ ಎಚ್ಚರ

ಚೀನಾದಲ್ಲಿ ಯುವ ಶಕ್ತಿ ಕಡಿಮೆ ಇದೆ. ಆದರೆ ಇದು ಪ್ರಸ್ತುತ ಭಾರತದ ಬಹುದೊಡ್ಡ ಶಕ್ತಿಯಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಇಂಡಿಯಾ ಈಗ ಈ ನಿಟ್ಟಿನಲ್ಲಿ ಪ್ರಪಂಚದ ಭೂಪಟದಲ್ಲಿ ಒಂದು ಸಣ್ಣ ಮಗು. ಸ್ವಾತಂತ್ರ್ಯ ಪಡೆದು ಕೇವಲ 75 ವರ್ಷವಾಗಿದೆ. ಅಮೆರಿಕಕ್ಕೆ ಸೂಪರ್ ಪವರ್ ರಾಷ್ಟ್ರವಾಗಲು 250 ವರ್ಷಗಳು ಬೇಕಾಗಿತ್ತು ಎಂದು ಅಶೋಕ್ ದೇವನಾಂಪ್ರಿಯ ತಿಳಿಸಿದರು.

ವಿದ್ಯಾ ಇರ್ವತ್ತೂರು

View all posts by this author