ನವದೆಹಲಿ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ (Union Budget) ಮಂಡನೆಯಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರಿಗೆ ಬಂಪರ್ ಕೊಡುಗೆ ಸಿಕ್ಕಂತಾಗಿದೆ. ಈ ಬಾರಿಯೂ ರೈಲ್ವೇ ಇಲಾಖೆಗೆ (Railway) 2.51 ಲಕ್ಷ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕಳೆದ ಬಾರಿಯೂ ಇಷ್ಟೇ ಅನುದಾನ ನೀಡಲಾಗಿತ್ತು.
2025 - 26 ರಲ್ಲಿ ಪ್ರಯಾಣಿಕರ ಸವಲತ್ತುಗಳಿಗಾಗಿ 12 ಸಾವಿರ ಕೋಟಿ ರೂಪಾಯಿ, ಸುರಕ್ಷತೆ ವ್ಯವಸ್ಥೆಗಳಿಗಾಗಿ ರೂ.1,16,500 ಕೋಟಿ ರೂ. ಮೀಸಲಿಡಲಾಗಿದೆ. ರೈಲ್ವೆಗಳಿಗೆ ರೋಲಿಂಗ್ ಸ್ಟಾಕ್‌ಗೆ 45,530 ಕೋಟಿ ರೂ. ಹಂಚಿಕೆಯಾಗಿದೆ. ಸಿಗ್ನಲಿಂಗ್ ಮತ್ತು ದೂರಸಂಪರ್ಕಕ್ಕೆ 6,800 ಕೋಟಿ ರೂ. ಹಂಚಿಕೆಯಾಗಿದ್ದರೆ, ವಿದ್ಯುದೀಕರಣ ಯೋಜನೆಗಳಿಗೆ 6,150 ಕೋಟಿ ರೂ. ಹಂಚಿಕೆಯಾಗಿದೆ.
ಇನ್ನು ಈ ಬಾರಿಯ ಬಜೆಟ್ ನಲ್ಲಿ ಐಷಾರಾಮಿ ರೈಲುಗಳ ಜತೆಗೆ ಸಾಮಾನ್ಯ ಜನರಿಗಾಗಿ ವಿಶೇಷ ರೈಲುಗಳಿಗೂ ಒತ್ತು ನೀಡಲಾಗಿದೆ. ಸದ್ಯ 228 ವಂದೇ ಭಾರತ್ ರೈಲುಗಳು ಓಡುತ್ತಿದ್ದು, ಇನ್ನು ಮುಂದಿನ ವರ್ಷದೊಳಗಾಗಿ ರೈಲಿನ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ವಂದೇ ಭಾರತ್ ರೈಲಿನಲ್ಲಿ ಸ್ಲೀಪರ್ ಕೋಚ್ ಕೂಡ ನಿರ್ಮಿಸಲು ತಯಾರಿ ನಡೆದಿವೆ.
ಹೊಸ ಯೋಜನೆಗಳ, ವಿನಾಯಿತಿ ಜೊತೆಗೆ ಒಂದಷ್ಟು ಸುರಕ್ಷಾ ಕ್ರಮಗಳನ್ನು ಪರಿಚಯಿಸಲಾಗಿದೆ. ಈ ಸಂಬಂಧ ರೇಲ್ವೆ ಸುರಕ್ಷತೆಗೆ ಕವಚ್ 4.0 ಯೋಜನೆ ಜಾರಿಗೊಳಿಸಿದೆ. ಈಗಾಗಲೇ ಈ ಪ್ರಯೋಗ ನಡೆದಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೈಲುಗಳಿಗೆ ಅಳವಡಿಸಲಾಗುವುದು ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Union Budget: ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಬಂಪರ್ ! ತೆರಿಗೆಯಲ್ಲಿ ವಿನಾಯಿತಿ
ರೈಲ್ವೆ ಸಚಿವಾಲಯದ ಪ್ರಕಾರ, ಈ ವರ್ಷದ ಬಜೆಟ್‌ನಲ್ಲಿ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಹಿಂದಿನ ಘೋಷಣೆಗಳನ್ನು ಪೂರೈಸುವುದು ರೈಲ್ವೆಯ ಆದ್ಯತೆಯಾಗಿದೆಹಿಂದಿನ ಬಜೆಟ್‌ನಲ್ಲಿ ಕವಚ ಅಳವಡಿಸುವುದಾಗಿ ಘೋಷಣೆ ಮಾಡಲಾಗಿತ್ತು, ಈ ಬಾರಿ ಗರಿಷ್ಠ ಮಾರ್ಗಗಳಲ್ಲಿ ಅಳವಡಿಸಲಾಗುವುದು.