ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ, 1 ರಿಂದ 3 ವರ್ಷಗಳವರೆಗಿನ ಅವಧಿಗೆ ₹ 3 ಕೋಟಿಗಿಂತ ಕಡಿಮೆ ಇರುವ ಮಧ್ಯಮ ಮತ್ತು ದೀರ್ಘಾ ವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಮೇ 18, 2026 ರಿಂದ ಜಾರಿಗೆ ಬರುವಂತೆ ಹೆಚ್ಚಿಸಿದೆ.
1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಪರಿಷ್ಕೃತ ದರಗಳು ವರ್ಷಕ್ಕೆ 6.50%, 2 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ @6.60% ಮತ್ತು 3 ವರ್ಷಗಳಿಗೆ @6.70%. ಹಿರಿಯ ನಾಗರಿಕರು ಮತ್ತು ಸೂಪರ್ ಹಿರಿಯ ನಾಗರಿಕರು(80 ವರ್ಷಕ್ಕಿಂತ ಮೇಲ್ಪಟ್ಟ) 6 ತಿಂಗಳಿನಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ವಾರ್ಷಿಕ 0.50% ಮತ್ತು 0.65% ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ.
ಸ್ಥಿರ ಠೇವಣಿ ಮೇಲೆ ಸಾಲ ಮತ್ತು ಅವಧಿಪೂರ್ವ ಹಿಂಪಡೆಯುವಿಕೆ ಆಯ್ಕೆಗಳು ವಿತ್ಡ್ರಾ ಮಾಡಬಹುದಾದ ಠೇವಣಿಯಲ್ಲಿ ಮಾತ್ರ ಲಭ್ಯವಿದೆ. ಗ್ರಾಹಕರು ಯಾವುದೇ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಅಥವಾ BOI ಓಮ್ನಿ ನಿಯೋ ಅಪ್ಲಿಕೇಶನ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸ್ಥಿರ ಠೇವಣಿಗಳನ್ನು ತೆರೆಯಬಹುದು.