ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಜಿಗಿಯುತ್ತಿದೆ ಸೆನ್ಸೆಕ್ಸ್‌, ನಿಫ್ಟಿ; ಯಾವ ಸ್ಟಾಕ್ಸ್‌ ಖರೀದಿಸಿದ್ರೆ ಲಾಭ?‌

Share Market: ಕೆಲವು ದಿನಗಳ ಹಿಂದೆ ಕುಸಿದಿದ್ದ ಭಾರತೀಯ ಷೇರು ಮಾರುಕಟ್ಟೆ ಚೇತರಿಸಿಕೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಏಪ್ರಿಲ್‌ 2ರಂದು ಪ್ರತಿ ಸುಂಕಗಳನ್ನು ನಾನಾ ದೇಶಗಳ ವಿರುದ್ಧ ಘೋಷಿಸಿದ ಬಳಿಕ ಷೇರು ಮಾರುಕಟ್ಟೆಗೆ ಉಂಟಾಗಿದ್ದ ನಷ್ಟ ಇದೀಗ ಭರ್ತಿಯಾಗಿದೆ. ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರುತ್ತಿರುವ ಈ ಹಂತದಲ್ಲಿ ಯಾವ ಸ್ಟಾಕ್ಸ್‌ಗಳನ್ನು ಖರೀದಿಸಿದ್ರೆ ಲಾಭವಾಗಬಹುದು ಎನ್ನುವ ವಿವರ ಇಲ್ಲಿದೆ.

ಜಿಗಿಯುತ್ತಿದೆ ಸೆನ್ಸೆಕ್ಸ್‌, ನಿಫ್ಟಿ; ಯಾವ ಸ್ಟಾಕ್ಸ್‌ ಖರೀದಿಸಿದ್ರೆ ಲಾಭ?‌

ಸಾಂದರ್ಭಿಕ ಚಿತ್ರ.

Profile Ramesh B Apr 16, 2025 7:55 PM
  • ಕೇಶವ ಪ್ರಸಾದ್‌ ಬಿ.

ಮುಂಬೈ: ಭಾರತೀಯ ಷೇರು ಮಾರುಕಟ್ಟೆ (Stock Market) ಮಂಗಳವಾರ ಗಣನೀಯವಾಗಿ ಚೇತರಿಸಿದೆ. ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 10 ಲಕ್ಷ ಕೋಟಿ ರೂ.ಗೆ ವೃದ್ದಿಸಿದ್ದು, ಒಟ್ಟು 412 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ನಿಫ್ಟಿ 500 ಅಂಕ ಏರಿಕೆಯಾಗಿದ್ದು 22,328 ಅಂಕಗಳಿಗೆ ಚೇತರಿಸಿದೆ. ಸೆನ್ಸೆಕ್ಸ್‌ 1,577 ಅಂಕ ಏರಿಕೆಯಾಗಿ 76,734ಕ್ಕೆ ಮಂಗಳವಾರ ದಿನದ ವಹಿವಾಟನ್ನು ಮುಕ್ತಾಯಗೊಳಿಸಿತ್ತು. ಭಾರತದ ವೊಲಟಾಲಿಟಿ ಇಂಡೆಕ್ಸ್‌ - ಇಂಡಿಯಾ ವಿಕ್ಸ್‌ 19% ಇಳಿದಿತ್ತು. ಹೂಡಿಕೆದಾರರ ಭಾವನೆಗಳು ಸಕಾರಾತ್ಮಕವಾಗಿ ಸುಧಾರಿಸಿರುವುದನ್ನು ಇದು ಬಿಂಬಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಏಪ್ರಿಲ್‌ 2ರಂದು ಪ್ರತಿ ಸುಂಕಗಳನ್ನು ನಾನಾ ದೇಶಗಳ ವಿರುದ್ಧ ಘೋಷಿಸಿದ ಬಳಿಕ ಷೇರು ಮಾರುಕಟ್ಟೆಗೆ ಉಂಟಾಗಿದ್ದ ನಷ್ಟ ಇದೀಗ ಭರ್ತಿಯಾಗಿದೆ.

ಸೆನ್ಸೆಕ್ಸ್‌ ಮತ್ತು ನಿಫ್ಟಿ ಏರುತ್ತಿರುವ ಈ ಹಂತದಲ್ಲಿ ಯಾವ ಸ್ಟಾಕ್ಸ್‌ಗಳನ್ನು ಖರೀದಿಸಿದ್ರೆ ಲಾಭವಾಗಬಹುದು ಎಂಬುದನ್ನೂ ತಿಳಿಯೋಣ.



ಈ ಸುದ್ದಿಯನ್ನೂ ಓದಿ: Stock Market: ಹೂಡಿಕೆದಾರರಿಗೆ ಶುಭ ಮಂಗಳವಾರ; ಸೆನ್ಸೆಕ್ಸ್‌ 1,500 ಪಾಯಿಂಟ್‌ ಹೆಚ್ಚಳ: ಗೂಳಿ ನೆಗೆತಕ್ಕೆ ಕಾರಣವೇನು?

ಸ್ಟಾಕ್ ಮಾರುಕಟ್ಟೆಯ ಚೇತರಿಕೆಗೆ ಕಾರಣವೇನು?

ಮೊದಲನೆಯದಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಸುಂಕ ಸಮರಕ್ಕೆ 90 ದಿನಗಳ ಬ್ರೇಕ್‌ ಹಾಕಿರುವುದು, ಟಾರಿಫ್‌ಗಳನ್ನು ಸಡಿಲಗೊಳಿಸಿರುವುದು, ಚೀನಾಕ್ಕೂ ಕೆಲವು ವಿನಾಯಿತಿಗಳನ್ನು ನೀಡಿರುವುದು ಜಾಗತಿಕ ಸ್ಟಾಕ್‌ ಮಾರುಕಟ್ಟೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ. ಬ್ಯಾಂಕಿಂಗ್‌ ಷೇರುಗಳೂ ಏರಿವೆ. ಆಟೊಮೊಬೈಲ್‌ ವಲಯಕ್ಕೂ ಟಾರಿಫ್‌ ರಿಲೀಫ್‌ ಸಿಗುವ ನಿರೀಕ್ಷೆ ಇದೆ. ಕಚ್ಚಾ ತೈಲ ದರ ಇಳಿಕೆಯಾಗಿದೆ. ಹಣದುಬ್ಬರ ಕಡಿಮೆಯಾಗುತ್ತಿದೆ. ಇದೆಲ್ಲವೂ ಸ್ಟಾಕ್‌ ಮಾರ್ಕೆಟ್‌ ನಲ್ಲಿ ಸೂಚ್ಯಂಕಗಳ ಜಿಗಿತಕ್ಕೆ ಪುಷ್ಟಿ ನೀಡಿದೆ.

ನಿರೀಕ್ಷೆಗೂ ಮೀರಿದ ಹಣದುಬ್ಬರದ ಇಳಿಕೆ ಕೂಡ ಷೇರು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿದೆ. ಭಾರತದ ರಿಟೇಲ್‌ ಹಣದುಬ್ಬರವು ಕಳೆದ ಮಾರ್ಚ್‌ನಲ್ಲಿ 3.34%ಕ್ಕೆ ಇಳಿಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿಯೇ ಕಡಿಮೆ ಮಟ್ಟ ಇದಾಗಿದೆ. ಆಹಾರ ವಸ್ತುಗಳ ದರಗಳೂ ಇಳಿಕೆಯಾಗಿವೆ.

ಆಹಾರ ಹಣದುಬ್ಬರ ಕೂಡ ಮಾರ್ಚ್‌ನಲ್ಲಿ 2.69%ಕ್ಕೆ ಇಳಿಕೆಯಾಗಿದೆ. ಫೆಬ್ರವರಿಯಲ್ಲಿ ಇದು 3.75% ಇತ್ತು. ಮೊಟ್ಟೆ, ಮಾಂಸ ಮತ್ತು ತರಕಾರಿಗಳ ದರ ಮಾರ್ಚ್‌ನಲ್ಲಿ ಇಳಿಕೆಯಾಗಿದೆ.

ಹಣದುಬ್ಬರ ಕಡಿಮೆಯಾದರೆ ಆರ್‌ಬಿಐ ತನ್ನ ಬಡ್ಡಿ ದರವನ್ನು ಕೂಡ ಕಡಿಮೆ ಮಾಡುವ ಸಾಧ್ಯತೆ ಇದೆ. ಆರ್‌ಬಿಐ ಈಗಾಗಲೇ ಸತತ ಎರಡನೇ ಬಾರಿಗೆ ರೆಪೊ ದರ ಕಡಿತಗೊಳಿಸಿದ್ದು 6%ಕ್ಕೆ ತಗ್ಗಿದೆ.

ಭಾರತದಲ್ಲಿ ಈ ವರ್ಷ ಕೂಡ ಸರಾಸರಿಗಿಂತ ಮೇಲ್ಮಟ್ಟದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಈ ಉತ್ತಮ ಮಟ್ಟದ ಮಳೆಯಿಂದ ಕೃಷಿ ಚಟುವಟಿಕೆಗಳು ಮತ್ತು ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ. ಜೂನ್-ಸೆಪ್ಟೆಂಬರ್‌ ಅವಧಿಯಲ್ಲಿ ಬರುವ ಮುಂಗಾರು ಮಳೆ ಆರ್ಥಿಕ ಬೆಳವಣಿಗೆ, ಕೃಷಿ ಚಟುವಟಿಕೆಗಳಿಗೆ ನಿರ್ಣಾಯಕವಾಗಿರುತ್ತದೆ. ಮಳೆ ಚೆನ್ನಾಗಿ ಆದಾಗ ಆಹಾರ ವಸ್ತುಗಳ ದರಗಳು ಇಳಿಯುತ್ತದೆ. ಹೆಚ್ಚಿನ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲೂ ಅವಕಾಶ ಉಂಟಾಗುತ್ತದೆ.

ಇಕನಾಮಿಕ್‌ ಟೈಮ್ಸ್‌ ತಜ್ಞರ ಟೆಕ್ನಿಕಲ್‌ ಅನಾಲಿಸಿಸ್‌ ಪ್ರಕಾರ ಅಲ್ಪಾವಧಿಗೆ 34% ತನಕ ಏರಿಕೆಯಾಗಬಲ್ಲ 4 ಷೇರುಗಳ ಪಟ್ಟಿಯನ್ನು ಪ್ರಕಟಿಸಿದೆ.

stocks 2

ಭಾರ್ತಿ ಹೆಕ್ಸಾಕಾಮ್‌

Buy Bharti Hexacom at Rs 1,505 | Target: Rs 1,580 | Stop loss: Rs 1,465 | Returns: 5%

ಮೆಡ್‌ ಪ್ಲಸ್‌ ಹೆಲ್ತ್‌

Buy MedPlus Health at Rs 789 | Target: Rs 875 | Stop loss: Rs 760 | Returns: 11%

ಕೆನೆಸ್‌ ಟೆಕ್ನಾಲಜಿ

Buy Kaynes Technology at Rs 5,091 | Target: Rs 6,150-6,800 | Returns: 34%

ಷೇರು ಹೂಡಿಕೆದಾರರಿಗೆ 2024-25ರ ಸಾಲಿನಲ್ಲಿ ಹೆಚ್ಚು ಡಿವಿಡೆಂಡ್‌ ನೀಡಿರುವ ಪಿಎಸ್‌ಯು ಸ್ಟಾಕ್ಸ್‌ಗಳು ಯಾವುದು ಎಂಬುದನ್ನು ನೋಡೋಣ. ಡಿವಿಡೆಂಡ್‌ ಮೊತ್ತವನ್ನು ಕಂಪನಿಗಳು ಹೂಡಿಕೆದಾರರ ಬ್ಯಾಂಕ್‌ ಅಕೌಂಟ್‌ಗೆ ನೇರವಾಗಿ ಡೆಪಾಸಿಟ್‌ ಮಾಡುತ್ತವೆ. ಪಿಎಸ್‌ಯು ಕಂಪನಿ ಹಾಗೂ ಅವು ನೀಡಿರಿವ ಡಿವಿಡೆಂಡ್‌ ವಿವರ ಹೀಗಿದೆ

ಕೋಲ್‌ ಇಂಡಿಯಾ: ಪ್ರತಿ ಷೇರಿಗೆ 26 ರೂ.

ಒಎನ್‌ಜಿಸಿ: 13.50 ರೂ.

ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (BPCL): 15.50 ರೂ.

ಆರ್‌ಇಸಿ: 20 ರೂ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌: 7 ರೂ.

ಶಾರ್ಟ್‌ ಟರ್ಮ ಟ್ರೇಡರ್‌ಗಳಿಗೆ ಅನುಕೂಲವಾಗುವಂತೆ ತಜ್ಞರು ಕೆಲವು ಷೇರುಗಳನ್ನು ಖರೀದಿಸಲು ಶಿಫಾರಸು ಮಾಡಿದ್ದಾರೆ. ಅವುಗಳ ವಿವರಗಳನ್ನು ನೋಡೋಣ. HDFC Securities ಸಂಸ್ಥೆಯ ಟೆಕ್ನಿಕಲ್‌ ರಿಸರ್ಚ್‌ ಅನಾಲಿಸ್ಟ್‌ ಆಗಿರುವ ನಾಗರಾಜ ಶೆಟ್ಟಿ ಅವರ ರೆಕಮಂಡೇಶನ್‌ ಹೀಗಿದೆ.

CreditAccess Grameen Ltd: Buy | Target: Rs 1,110 | Stop Loss: Rs 1,020

IRFC: Buy | Target: Rs 136 | Stop Loss: Rs 124

Five-Star Business Finance Ltd: Buy | Target: Rs 785 | Stop Loss: Rs 720

ಮಾರುಕಟ್ಟೆ ತಜ್ಞ ಕುನಾಲ್‌ ಬಾತ್ರಾ ಅವರ ರೆಕಮಂಡೇಶನ್‌ ಹೀಗಿದೆ:

Infosys: Buy | Target: Rs 1,500 | Stop Loss: Rs 1,370

Hero MotoCorp: Buy | Target: Rs 4,000 | Stop Loss: Rs 3,650

IEX: Buy | Target: Rs 195 | Stop Loss: Rs 178

ಭಾರತ ಮತ್ತು ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳ ನಿಯೋಗವು ಮೇ ಮಧ್ಯ ಭಾಗದಲ್ಲಿ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿ ಮಾತುಕತೆ ಆರಂಭಿಸಲಿದ್ದಾರೆ. ಸೆಪ್ಟೆಂಬರ್ - ಅಕ್ಟೋಬರ್‌ ವೇಳೆಗೆ ಒಪ್ಪಂದಗಳು ಅಂತಿಮವಾಗುವ ಸಾಧ್ಯತೆ ಇದೆ. ಟ್ರಂಪ್‌ ಸುಂಕ ಸಮರದ ಹಿನ್ನೆಲೆಯಲ್ಲಿ ನಡೆಯಲಿರುವ ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಇದೀಗ ಮಹತ್ವ ಪಡೆದಿದೆ.

ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರವನ್ನು 2030ರ ವೇಳೆಗೆ 500 ಶತಕೋಟಿ ಡಾಲರ್‌ಗೆ ಏರಿಸುವ ಗುರಿಯನ್ನು ಹೊಂದಲಾಗಿದೆ. ಈ ನಡುವೆ ಟ್ರಂಪ್‌ ಅವರ ಪ್ರತಿ ಸುಂಕದ ಪರಿಣಾಮ ಚೀನಾ, ವಿಯೆಟ್ನಾಂ ಮತ್ತು ಇಂಡೊನೇಷ್ಯಾಕ್ಕೆ ಅಮೆರಿಕಕ್ಕೆ ಸರಕುಗಳ ರಫ್ತು ದುಬಾರಿಯಾಗಲಿದೆ. ಹೀಗಾಗಿ ಈ ದೇಶಗಳಿಂದ ಭಾರತಕ್ಕೆ ಸರಕುಗಳ ರಫ್ತು ಹೆಚ್ಚುವ ನಿರೀಕ್ಷೆ ಇದೆ. ಇದರ ಪರಿಣಾಮಗಳ ಬಗ್ಗೆ ಭಾರತೀಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಅಮೆರಿಕದಿಂದ ಭಾರತಕ್ಕೆ ಕೃಷಿ ಉತ್ಪನ್ನಗಳೂ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುವ ಸಾಧ್ಯತೆ ಇದೆ.