ನವದೆಹಲಿ: ಇರಾನ್‌ನಲ್ಲಿರುವ (Iran) ಭಾರತದ ಚಾಬಹಾರ್ ಬಂದರಿಗೆ (Chabahar Port) ಅಮೆರಿಕದ (US) ನಿರ್ಬಂಧಗಳು ಅನ್ವಯಿಸುವುದಿಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ (Ministry of External Affairs) ಗುರುವಾರ ಸ್ಪಷ್ಟಪಡಿಸಿದೆ. ಭಾರತ ಸರ್ಕಾರವು 2024ರಲ್ಲಿ ಇರಾನ್‌ನೊಂದಿಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (India Ports Global Limited) ಚಾಬಹಾರ್ ಬಂದರಿಗೆ 370 ಮಿಲಿಯನ್ ಡಾಲರ್ ಹೂಡಿಕೆಗಳನ್ನು (Investments in Chabahar) ಮಾಡುವುದಾಗಿ ಒಪ್ಪಂದದಲ್ಲಿ ಘೋಷಿಸಿಕೊಂಡಿತ್ತು.
ಇರಾನ್‌ನೊಂದಿಗಿನ ಪ್ರಮುಖ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಭಾರತ ಮತ್ತು ಅಮೆರಿಕದ ನಡುವೆ ತೀವ್ರ ಮಾತುಕತೆಗಳು ನಡೆಯುತ್ತಿವೆ. ಈ ಮಧ್ಯೆಯೇ ಭಾರತದ ವಿದೇಶಾಂಗ ಸಚಿವಾಲಯ ಈ ಘೋಷಣೆ ಮಾಡಿದೆ.
2024ರ ಮೇ 13ರಂದು ಭಾರತವು ಇರಾನ್‌ನ ಚಾಬಹಾರ್ ಬಂದರನ್ನು ನಿರ್ವಹಿಸಲು ದಶಕದ ದೀರ್ಘ ಒಪ್ಪಂದವನ್ನು ಮಾಡಿಕೊಂಡಿತು. ಇಂಡಿಯನ್ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್, ಇರಾನ್‌ನ ಬಂದರು ಮತ್ತು ಸಮುದ್ರ ಸಂಸ್ಥೆ ನಡುವೆ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಟ್ರಂಪ್ ಆಡಳಿತ ಅವಧಿಯ 2018ರಲ್ಲಿಯೂ ಭಾರತೀಯ ಕಂಪೆನಿಗಳು ಚಾಬಹಾರ್ ಅನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲು ಅವಕಾಶ ನೀಡುವ ಅಪರೂಪದ ವಿನಾಯಿತಿಯನ್ನು ಅಮೆರಿಕ ನೀಡಿತು. ಅಮೆರಿಕವು ಇರಾನ್ ಮೇಲೆ ವ್ಯಾಪಕವಾಗಿ ಏಕಪಕ್ಷೀಯ ನಿರ್ಬಂಧಗಳನ್ನು ವಿಧಿಸಿದ್ದರು ಕೂಡ ಭಾರತಕ್ಕೆ ಇದರಿಂದ ವಿನಾಯಿತಿ ನೀಡಿದೆ. ಬಂದರು ಅಬ್ಬಾಸ್‌ನಲ್ಲಿರುವ ಮುಖ್ಯ ಬಂದರಾಗಿರುವ ಚಾಬಹಾರ್ ಅಧಿಕ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಕಂಪನಿಗಳು ಚಾಬಹಾರ್ ಬಂದರು ಪ್ರವೇಶಿಸಲು ಅಮೆರಿಕ ಅವಕಾಶ ನೀಡಿದೆ.
ರಷ್ಯಾದ ತೈಲ ಕಂಪೆನಿಗಳ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳ ಪರಿಣಾಮಗಳನ್ನು ಭಾರತ ವಿಶ್ಲೇಷಿಸುತ್ತಿರುವುದಾಗಿ ಈ ಸಂದರ್ಭದಲ್ಲಿ ವಿದೇಶಾಂಗ ಸಚಿವಾಲಯವು ತಿಳಿಸಿದೆ.
ಚಬಹಾರ್ ಬಂದರು ಏಕೆ ಮುಖ್ಯ?
ಇರಾನ್‌ನ ದಕ್ಷಿಣ ಕರಾವಳಿಯಲ್ಲಿರುವ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಚಬಹಾರ್ ಬಂದರಿನಲ್ಲಿ ಭಾರತವು ಶಾಹಿದ್ ಬೆಹೆಶ್ಟಿ ಟರ್ಮಿನಲ್ ಅನ್ನು ನಿರ್ವಹಿಸುತ್ತಿದೆ. ಅಫ್ಘಾನಿಸ್ತಾನ ಕೂಡ ಚಾಬಹಾರ್ ಬಂದರು ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ. ಯಾಕೆಂದರೆ ಇದು ಪಾಕಿಸ್ತಾನವನ್ನು ಬಿಟ್ಟು ಅರೇಬಿಯನ್ ಸಮುದ್ರ ಮತ್ತು ಅದರಾಚೆಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ.
ಭಾರತ ಮತ್ತು ಅಫ್ಘಾನಿಸ್ತಾನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಅಫ್ಘಾನ್ ವಿದೇಶಾಂಗ ಸಚಿವರ ಇತ್ತೀಚಿನ ಭೇಟಿಯ ಸಮಯದಲ್ಲಿ ಭಾರತ ಒದಗಿಸಿದ ಆಂಬ್ಯುಲೆನ್ಸ್‌ಗಳು ಸೇರಿದಂತೆ ಮಾನವೀಯ ನೆರವು ನೀಡುವಲ್ಲಿ ಚಾಬಹಾರ್ ಬಂದರು ಪ್ರಮುಖ ಪಾತ್ರ ವಹಿಸಿದೆ. ತಾಲಿಬಾನ್ ಆಡಳಿತವು ಚಾಬಹಾರ್ ಬಂದರನ್ನು ಅಂತಾರಾಷ್ಟ್ರೀಯ ಸಂಪರ್ಕಗಳಿಗಾಗಿ ಬಳಸಿಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದೆ.
ಚಾಬಹಾರ್ ಬಂದರಿನಲ್ಲಿ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ಸಂಪರ್ಕಿಸುವ ಯೋಜನೆಗಳು ನಡೆಯುತ್ತಿವೆ. ಮಧ್ಯ ಏಷ್ಯಾದ ಮಿತ್ರ ರಾಷ್ಟ್ರ ಉಜ್ಬೇಕಿಸ್ತಾನ್ ಮೂಲಕ ಯುರೇಷಿಯಾದ ಸಂಪರ್ಕಕ್ಕಾಗಿ ಚೀನಾದ ಸಾರಿಗೆ ಬದಲು ಚಾಬಹಾರ್ ಬಂದರನ್ನು ಬಳಸಿಕೊಳ್ಳಲು ಭಾರತ ಯೋಜನೆ ರೂಪಿಸುತ್ತಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Viral Video: ಕುಡುಕ ಶಿಕ್ಷಕನ ಹುಚ್ಚಾಟ! ಬೈಕ್ ಸಮೇತ ಸವಾರರನ್ನು ರಸ್ತೆಯಲ್ಲಿ ಎಳೆದೊಯ್ದ ಕಾರು- ಭಯಾನಕ ವಿಡಿಯೊ ವೈರಲ್
ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ
ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಸಿದ್ಧತೆಯಲ್ಲಿದೆ. ಭಾರತವು ಆತುರದಿಂದ ಅಥವಾ ನಮ್ಮ ತಲೆಗೆ ಬಂದೂಕು ಇಟ್ಟುಕೊಂಡು ಯಾವುದೇ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಎರಡೂ ಕಡೆಯವರು ನ್ಯಾಯಯುತ ಮತ್ತು ಸಮಾನ ಒಪ್ಪಂದದತ್ತ ಕೆಲಸ ಮಾಡುತ್ತಾರೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಗುರುವಾರ ತಿಳಿಸಿದ್ದಾರೆ.