ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಚುಪಾ ಚುಪ್ಸ್‌ನಿಂದ ‘ಕ್ರೇಜಿ ರಾಫೆ’ ಬಿಡುಗಡೆ: ತಿನ್ನಲು ಮಜಾ ನೀಡುವ ಉದ್ದನೆಯ, ಸುರುಳಿಯಾಕಾರದ ಜೆಲ್ಲಿಯೊಂದಿಗೆ ಸ್ನ್ಯಾಕಿಂಗ್ ಲೋಕಕ್ಕೆ ಹೊಸ ಮೆರುಗು!

ಪರ್ಫೆಟ್ಟಿ ವಾನ್ ಮೆಲ್ಲೆ ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್ 'ಚುಪಾ ಚುಪ್ಸ್', ತನ್ನ ಹೊಸ ಉತ್ಪನ್ನ ‘ಕ್ರೇಜಿ ರಾಫೆ’ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಸ್ನ್ಯಾಕಿಂಗ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಉದ್ದನೆಯ, ಸುರುಳಿಯಾಕಾರದ ಮತ್ತು ಮಧ್ಯದಲ್ಲಿ ಕ್ರೀಮ್ ತುಂಬಿದ ಈ ಜೆಲ್ಲಿಯು ಸಾಮಾನ್ಯ ತಿಂಡಿ ತಿನ್ನುವ ಸಮಯವನ್ನು ಒಂದು ಸಾಹಸಮಯ ಆಟದಂತೆ ಬದಲಾಯಿಸುತ್ತದೆ

ಬೆಂಗಳೂರು: ಪರ್ಫೆಟ್ಟಿ ವಾನ್ ಮೆಲ್ಲೆ ಸಂಸ್ಥೆಯ ಜನಪ್ರಿಯ ಬ್ರ್ಯಾಂಡ್ 'ಚುಪಾ ಚುಪ್ಸ್', ತನ್ನ ಹೊಸ ಉತ್ಪನ್ನ ‘ಕ್ರೇಜಿ ರಾಫೆ’ ಅನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಸ್ನ್ಯಾಕಿಂಗ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಉದ್ದನೆಯ, ಸುರುಳಿಯಾಕಾರದ ಮತ್ತು ಮಧ್ಯದಲ್ಲಿ ಕ್ರೀಮ್ ತುಂಬಿದ ಈ ಜೆಲ್ಲಿಯು ಸಾಮಾನ್ಯ ತಿಂಡಿ ತಿನ್ನುವ ಸಮಯವನ್ನು ಒಂದು ಸಾಹಸಮಯ ಆಟದಂತೆ ಬದಲಾಯಿಸುತ್ತದೆ. ಕೇವಲ ₹20 ಬೆಲೆಯ ಈ 30 ಗ್ರಾಂ ಜೆಲ್ಲಿಯು ಹದಿಹರೆಯದವರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದ್ದು, ನೋಟ ದಲ್ಲೂ ಆಕರ್ಷಕವಾಗಿದೆ.

ಇಂದಿನ ಯುವ ಗ್ರಾಹಕರು ಕೇವಲ ರುಚಿಯನ್ನು ಮಾತ್ರ ನೋಡುವುದಿಲ್ಲ; ಅವರು ನೋಡಲು ಸುಂದರವಾಗಿರುವ, ಗೆಳೆಯರೊಂದಿಗೆ ಹಂಚಿಕೊಳ್ಳಲು ಮಜಾ ನೀಡುವ ಮತ್ತು ಕುತೂಹಲ ಕೆರಳಿಸುವ ಕ್ಯಾಂಡಿಗಳನ್ನು ಬಯಸುತ್ತಾರೆ. ಇದೇ ಆಲೋಚನೆಯಿಂದ ಪ್ರೇರಿತಗೊಂಡ ‘ಕ್ರೇಜಿ ರಾಫೆ’, ಜಿರಾಫೆಯ ವಿನ್ಯಾಸದಿಂದ ಸ್ಫೂರ್ತಿ ಪಡೆದಿದೆ. ಇದರ ವಿಭಿನ್ನ ಆಕಾರವು ತಿನ್ನುವ ಅನುಭವವನ್ನು ಕೇವಲ ಆಸ್ವಾದನೆಗೆ ಸೀಮಿತಗೊಳಿಸದೆ, ಅದರಲ್ಲಿ ಒಂದು ಸೃಜನಶೀಲತೆಯನ್ನು ತರುತ್ತದೆ.

ಈ ಜೆಲ್ಲಿಯು ಸ್ಟ್ರಾಬೆರಿಯ ಎರಡು ಗಾಢ ಕೆಂಪು ಬಣ್ಣದ ಹೊರಪದರವನ್ನು ಹೊಂದಿದ್ದು, ಒಳಗೆ ಮೃದುವಾದ ವೆನಿಲ್ಲಾ ಕ್ರೀಮ್ ಅನ್ನು ಒಳಗೊಂಡಿದೆ. ಸಿಹಿ ಮತ್ತು ಹುಳಿಯ ಈ ಅದ್ಭುತ ಸಮ್ಮಿಶ್ರಣವು ನಾಲಿಗೆಗೆ ಹೊಸ ಅನುಭವ ನೀಡುತ್ತದೆ. ಇದರ ಉದ್ದನೆಯ ಸುರುಳಿ ವಿನ್ಯಾಸವು ಜೆಲ್ಲಿಯನ್ನು ಎಳೆದು ಸವಿಯಲು, ಗೆಳೆಯರೊಂದಿಗೆ ಹಂಚಿಕೊಳ್ಳಲು ಮತ್ತು ಆಟವಾಡುತ್ತಾ ತಿನ್ನಲು ಪ್ರೇರೇಪಿಸುತ್ತದೆ. ಶಾಲಾ-ಕಾಲೇಜುಗಳ ಬಿಡುವಿನ ಸಮಯದಲ್ಲಿ ಅಥವಾ ಸ್ನೇಹಿತರೊಂದಿಗೆ ಹರಟೆ ಹೊಡೆಯುವಾಗ ‘ಕ್ರೇಜಿ ರಾಫೆ’ ನಿಮ್ಮ ಸಮಯವನ್ನು ಮತ್ತಷ್ಟು ಖುಷಿಯಾಗಿಸುವುದರಲ್ಲಿ ಸಂಶಯವಿಲ್ಲ.

ಇದನ್ನೂ ಓದಿ:Bangalore Tunnel Road: ಸಂಚಾರ ದಟ್ಟಣೆ ಮುಕ್ತಿಗೆ ಬೆಂಗಳೂರಿನಲ್ಲಿ ಶೀಘ್ರವೇ ಮತ್ತೊಂದು ಸುರಂಗ ಮಾರ್ಗ

ಈ ಹೊಸ ಉತ್ಪನ್ನದ ಬಿಡುಗಡೆಯ ಕುರಿತು ಮಾತನಾಡಿದ ಪರ್ಫೆಟ್ಟಿ ವಾನ್ ಮೆಲ್ಲೆ ಇಂಡಿಯಾದ ಮಾರ್ಕೆಟಿಂಗ್ ಡೈರೆಕ್ಟರ್ ಗುಂಜನ್ ಖೇತನ್ ಅವರು "ಚುಪಾ ಚುಪ್ಸ್ ಎನ್ನುವುದು ಸೃಜನಶೀಲತೆ, ಸ್ವಯಂ ಅಭಿವ್ಯಕ್ತಿ ಮತ್ತು ಮೋಜಿನ ಸಂಕೇತವಾಗಿದೆ.

'ಕ್ರೇಜಿ ರಾಫೆ' ಮೂಲಕ ನಾವು ಇಂದಿನ ಹದಿಹರೆಯದವರಿಗೆ ಹೊಸತನದ, ಪರಸ್ಪರ ಹಂಚಿ ಕೊಳ್ಳಲು ಪೂರಕವಾದ ಮತ್ತು ರೋಮಾಂಚಕವಾದ ಒಂದು ಕ್ಯಾಂಡಿಯನ್ನು ಪರಿಚಯಿ ಸಲು ಬಯಸಿದ್ದೇವೆ. ಇದು ಕೇವಲ ರುಚಿಗೆ ಸೀಮಿತವಾಗಿಲ್ಲ; ದೈನಂದಿನ ಸಾಮಾನ್ಯ ಕ್ಷಣಗಳನ್ನು ಅಭಿವ್ಯಕ್ತಿಶೀಲ ಮತ್ತು ಚಟುವಟಿಕೆಯಿಂದ ಕೂಡಿದ ಕ್ಷಣಗಳನ್ನಾಗಿ ಮಾಡುವುದು ನಮ್ಮ ಉದ್ದೇಶ. ಇದರ ಉದ್ದನೆಯ ಸುರುಳಿಯಾಕಾರ ಮತ್ತು ಒಳಗೆ ತುಂಬಿರುವ ಕ್ರೀಮ್, ಜೆಲ್ಲಿ ವಿಭಾಗದಲ್ಲಿ ಒಂದು ಹೊಸ ಅಲೆ ಹಾಗೂ ಕುತೂಹಲವನ್ನು ಸೃಷ್ಟಿಸಲಿದೆ" ಎಂದಿದ್ದಾರೆ. ಜಿರಾಫೆಯ ವಿನ್ಯಾಸದಿಂದ ಸ್ಫೂರ್ತಿ ಪಡೆದ ಇದರ ಪ್ಯಾಕೇ ಜಿಂಗ್, ಉತ್ಪನ್ನದ ವ್ಯಕ್ತಿತ್ವಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಅಂಗಡಿಗಳಲ್ಲಿ ಕಂಡ ತಕ್ಷಣ ಗಮನ ಸೆಳೆಯುವ ಈ ವಿನ್ಯಾಸವು, ಯುವ ಗ್ರಾಹಕರು ತಮ್ಮ ಬಿಡುವಿನ ಕ್ಷಣಗಳಲ್ಲಿ ಸಣ್ಣದೊಂದು ವಿರಾಮ ಪಡೆದು ಖುಷಿ ಪಡಲು ಪ್ರೇರೇಪಿಸುವ ಬ್ರ್ಯಾಂಡ್‌ನ ಉದ್ದೇಶವನ್ನು ಪ್ರತಿಬಿಂಬಿಸುತ್ತದೆ.

ಭಾರತದ ಮಿಠಾಯಿ ಮಾರುಕಟ್ಟೆಯು ವೇಗವಾಗಿ ಬದಲಾಗುತ್ತಿದೆ. ರುಚಿಯ ಜೊತೆಗೆ ಮೋಜನ್ನೂ ನೀಡುವ ತಿಂಡಿಗಳಿಗೆ ಇಂದು ಹೆಚ್ಚಿನ ಬೇಡಿಕೆಯಿದೆ. 'ಕ್ರೇಜಿ ರಾಫೆ' ಮೂಲಕ ಚುಪಾ ಚುಪ್ಸ್, ಯುವ ಸಂಸ್ಕೃತಿ ಮತ್ತು ಸೃಜನಶೀಲ ಪ್ರಯೋಗಗಳಿಗೆ ಒತ್ತು ನೀಡುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಫೆಬ್ರವರಿ 2026 ರಲ್ಲಿ ಬಿಡುಗಡೆಯಾದ ‘ಕ್ರೇಜಿ ರಾಫೆ’ ಈಗ ಭಾರತದಾದ್ಯಂತ ಎಲ್ಲಾ ರೀಟೇಲ್ ಮಳಿಗೆಗಳಲ್ಲಿ ಪ್ರತಿ ಪ್ಯಾಕ್‌ಗೆ ಕೇವಲ ₹20 ದರದಲ್ಲಿ ಲಭ್ಯವಿದೆ.