ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಐ ಯುಗಕ್ಕೆ ಭರ್ಜರಿಯಾಗಿ ಸಜ್ಜಾಗುತ್ತಿದೆ ಕಾಗ್ನಿಜೆಂಟ್‌, ದೈತ್ಯ ಐಟಿ ಕಂಪನಿಯಿಂದ ಬೃಹತ್ ಕಲಿಕಾ ಕೇಂದ್ರ ಆರಂಭ

ಭಾರತದಲ್ಲಿ ಬಲವಾದ ಅಸ್ತಿತ್ವ ಹೊಂದಿರುವ ಕಾಗ್ನಿಜೆಂಟ್, ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ಚೆನ್ನೈ, ಹೈದರಾಬಾದ್, ಪುಣೆ, ಮುಂಬೈ, ದೆಹಲಿ-ಎನ್‌ಸಿಆರ್, ಕೋಲ್ಕತ್ತಾ, ಕೊಚ್ಚಿ, ಕೊಯಮತ್ತೂರು, ಭುವನೇಶ್ವರ, ಗಿಫ್ಟ್ ಸಿಟಿ, ಇಂದೋರ್ ಹಾಗೂ ವಿಶಾಖಪಟ್ಟಣಂ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಚೆನ್ನೈ: ದೈತ್ಯ ಟೆಕ್‌ ಕಂಪನಿ ಕಾಗ್ನಿಜೆಂಟ್ ಉದ್ಯೋಗಿಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯ ಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಉದ್ದೇಶದಿಂದ ಚೆನ್ನೈನ ಸಿರುಸೇರಿ ಕ್ಯಾಂಪಸ್‌ನಲ್ಲಿ ‘ಕಾಗ್ನಿಜೆಂಟ್ ಇಮ್ಮರ್ಸಿವ್ ಲರ್ನಿಂಗ್ ಸೆಂಟರ್’ (ಸಿಐಎಲ್‌ಸಿ) ಮೊದಲ ಹಂತವನ್ನು ಉದ್ಘಾಟಿಸಿದೆ. ಜಾಗತಿಕ ಗ್ರಾಹಕರಿಗೆ ಎಐ ಆಧಾರಿತ ಪರಿಹಾರಗಳನ್ನು ನೀಡುವ ತನ್ನ ‘ಎಐ ಬಿಲ್ಡರ್’ ಕಾರ್ಯ ತಂತ್ರ ಬಲಪಡಿಸುವ ಉದ್ದೇಶದಿಂದ ಇದನ್ನು ಸ್ಥಾಪಿಸಿದೆ.

ಸುಮಾರು 1,65,000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಆಧುನಿಕ ಕಲಿಕಾ ಕೇಂದ್ರವನ್ನು ಹಂತ-ಹಂತವಾಗಿ ವಿಸ್ತರಿಸಲಾಗುತ್ತಿದೆ. ಇಲ್ಲಿ 1,822 ಕಲಿಕಾ ಆಸನಗಳನ್ನು ಹೊಂದಿರುವ 58 ತರಗತಿ ಕೊಠಡಿಗಳು ಹಾಗೂ 208 ಬಹುಪಯೋಗಿ ಆಸನಗಳಿವೆ.

ಬೋಧಕರ ನೇತೃತ್ವದ ಕಲಿಕೆ, ಹೊಸ ಆಲೋಚನೆಗಳ ಹಂಚಿಕೆ ಮತ್ತು ತಂಡಗಳ ಸಹಯೋಗಕ್ಕಾಗಿ ಡಿಜಿಟಲ್ ಕಲಿಕಾ ಮೂಲಸೌಕರ್ಯ, ಸಭೆ ನಡೆಸಲು ಕೊಠಡಿಗಳು, ವರ್ಕ್ ಕೆಫೆ, ಗ್ರಂಥಾಲಯ ಹಾಗೂ ಟೌನ್ ಹಾಲ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Congnizant: ಎಐ ಲ್ಯಾಬ್ ಮತ್ತು ಕಾಗ್ನಿಜೆಂಟ್ ಮೊಮೆಂಟ್ ಸ್ಟುಡಿಯೋ ಅನಾವರಣಗೊಳಿಸಿದ ಕಾಗ್ನಿಜೆಂಟ್

ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ ಕಾಗ್ನಿಜೆಂಟ್‌ನ ಜಾಗತಿಕ ಕಾರ್ಯಾಚರಣೆಗಳ ಅಧ್ಯಕ್ಷ ಹಾಗೂ ಕಾಗ್ನಿಜೆಂಟ್ ಇಂಡಿಯಾ ಸಿಎಂಡಿ ರಾಜೇಶ್ ವಾರಿಯರ್, "ಗ್ರಾಹಕರಿಗೆ ನವೀನ ಎಐ ಪರಿಹಾರಗಳನ್ನು ರೂಪಿಸಲು ಉದ್ಯೋಗಿಗಳು ಒಟ್ಟಾಗಿ ಕಲಿಯುವ ಮತ್ತು ಸಹಯೋಗದಿಂದ ಕೆಲಸ ಮಾಡುವ ವಾತಾವರಣ ನಿರ್ಮಿಸಲು ಕಂಪನಿ ನಿರಂತರವಾಗಿ ಹೂಡಿಕೆ ಮಾಡುತ್ತಿದೆ" ಎಂದರು.

ಚೀಫ್‌ ಪೀಪಲ್ ಆಫೀಸರ್ ಕ್ಯಾಥಿ ಡಯಾಜ್ ಮಾತನಾಡಿ, "ತಂತ್ರಜ್ಞಾನ ವೇಗವಾಗಿ ಬದಲಾಗು ತ್ತಿರುವ ಈ ಕಾಲದಲ್ಲಿ ನಿರಂತರ ಕಲಿಕೆ ಅತ್ಯಗತ್ಯ. ಎಐ ಆಧಾರಿತ ಭವಿಷ್ಯದಲ್ಲಿ ಉದ್ಯೋಗಿಗಳು ಯಶಸ್ವಿಯಾಗಲು ಈ ಕೇಂದ್ರ ನೆರವಾಗಲಿದೆ" ಎಂದು ಅಭಿಪ್ರಾಯಪಟ್ಟರು.

ತನ್ನ ‘ಫ್ರಾಂಟಿಯರ್’ ಕಾರ್ಯಪಡೆ ಮಾದರಿಯಡಿ 5,000 ಫ್ರಾಂಟಿಯರ್ ಪ್ರಮಾಣೀಕೃತ ಎಂಜಿನಿ ಯರ್‌ಗಳು ಹಾಗೂ 10,000 ಫ್ರಾಂಟಿಯರ್ ಬ್ಯುಸಿನೆಸ್ ಆಪರೇಟರ್‌ಗಳನ್ನು ಸಜ್ಜುಗೊಳಿಸುವ ಗುರಿಯನ್ನೂ ಕಾಗ್ನಿಜೆಂಟ್ ಈಗಾಗಲೇ ಪ್ರಕಟಿಸಿದೆ.

ಭಾರತದಲ್ಲಿ ಬಲವಾದ ಅಸ್ತಿತ್ವ ಹೊಂದಿರುವ ಕಾಗ್ನಿಜೆಂಟ್, ಕರ್ನಾಟಕದ ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ಚೆನ್ನೈ, ಹೈದರಾಬಾದ್, ಪುಣೆ, ಮುಂಬೈ, ದೆಹಲಿ-ಎನ್‌ಸಿಆರ್, ಕೋಲ್ಕತ್ತಾ, ಕೊಚ್ಚಿ, ಕೊಯಮತ್ತೂರು, ಭುವನೇಶ್ವರ, ಗಿಫ್ಟ್ ಸಿಟಿ, ಇಂದೋರ್ ಹಾಗೂ ವಿಶಾಖಪಟ್ಟಣಂ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.