ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೆಪ್ಟೆಂಬರ್‌ ಮೊದಲ ದಿನವೇ ಬಿಗ್‌ ಶಾಕ್‌: LPG ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 9.50 ರೂ. ಏರಿಕೆ

Commercial LPG prices hiked: LPG ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯನ್ನು ಮತ್ತೆ ಹೆಚ್ಚಿಸಿವೆ. ಸೆಪ್ಟೆಂಬರ್ 1ರಿಂದ ವಾಣಿಜ್ಯ ಸಿಲಿಂಡರ್ ದರದಲ್ಲಿ ನಗರವಾರು ಏರಿಕೆ ಕಂಡುಬಂದಿದೆ. ವಾಣಿಜ್ಯ ಸಿಲಿಂಡರ್‌ಗೆ ಪ್ರತಿ ಸಿಲಿಂಡರ್‌ಗೆ 9.50 ರೂ. ಹೆಚ್ಚು ಪಾವತಿಸಬೇಕಾಗುತ್ತದೆ.

ಸಂಗ್ರಹ ಚಿತ್ರ

ನವದೆಹಲಿ: LPG ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್‌ಗಳ (Commercial LPG prices hiked) ಬೆಲೆಯನ್ನು ಮತ್ತೆ ಹೆಚ್ಚಿಸಿವೆ. ಸೆಪ್ಟೆಂಬರ್ 1ರಿಂದ ವಾಣಿಜ್ಯ ಸಿಲಿಂಡರ್ ದರದಲ್ಲಿ ನಗರವಾರು ಏರಿಕೆ ಕಂಡುಬಂದಿದೆ. ವಾಣಿಜ್ಯ ಸಿಲಿಂಡರ್‌ಗೆ ಪ್ರತಿ ಸಿಲಿಂಡರ್‌ಗೆ 9.50 ರೂ. ಹೆಚ್ಚು ಪಾವತಿಸಬೇಕಾಗುತ್ತದೆ. 5 ಕಿಲೋಗ್ರಾಂಗಳಷ್ಟು ಗೃಹಬಳಕೆಯೇತರ ಸಿಲಿಂಡರ್‌ನ ದರವನ್ನು ಎರಡು ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಪರಿಷ್ಕೃತ ದರದ ಪ್ರಕಾರ, ದೆಹಲಿಯಲ್ಲಿ 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್ ಬೆಲೆ 2,738 ರೂ. ರಿಂದ 2,747.50 ರೂ.ಕ್ಕೆ ಏರಿಕೆಯಾಗಿದೆ. ಅಂದರೆ ಪ್ರತಿ ಸಿಲಿಂಡರ್‌ಗೆ 9.50 ರೂ. ಹೆಚ್ಚಳವಾಗಿದೆ. ಮುಂಬೈನಲ್ಲಿ ವಾಣಿಜ್ಯ ಸಿಲಿಂಡರ್ ದರ 2,691.50 ರೂ. ರಿಂದ 2,701 ರೂ. ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ 2,906 ರೂ. ರಿಂದ 2,916.50 ರೂ. ಕ್ಕೆ ಹೆಚ್ಚಳವಾಗಿದ್ದು, ಇಲ್ಲಿ 10.50 ರೂ. ಏರಿಕೆಯಾಗಿದೆ.

ಈ ಬೆಲೆ ಏರಿಕೆಯು ಮುಖ್ಯವಾಗಿ ರೆಸ್ಟೋರೆಂಟ್‌ಗಳು, ಹೊಟೇಲ್ ಗಳು, ಢಾಬಾಗಳು, ಸಿಹಿ ತಿಂಡಿ ಅಂಗಡಿಗಳು ಹಾಗೂ ಅಡುಗೆ ಮತ್ತು ಇತರ ಕಾರ್ಯಾಚರಣೆಗಳಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸುವ ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ.

5 ಕೆ.ಜಿ. ತೂಕದ ನಾನ್-ಡೊಮೆಸ್ಟಿಕ್ LPG ಸಿಲಿಂಡರ್ ಬೆಲೆಯಲ್ಲೂ 2 ರೂ. ಹೆಚ್ಚಳ ಮಾಡಲಾಗಿದೆ. ಈ ಹಿಂದೆ 762 ರೂ. ಇದ್ದ ದರ ಇದೀಗ 764 ರೂ. ಕ್ಕೆ ಏರಿಕೆಯಾಗಿದೆ. ಮನೆ ಬಳಕೆದಾರರಿಗೆ ಕೊಂಚ ನೆಮ್ಮದಿ ದೊರೆತಿದ್ದು, 14.2 ಕೆ.ಜಿ. ದೇಶೀಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಇತ್ತೀಚಿನ ಮಾಸಿಕ ಪರಿಷ್ಕರಣೆಯಲ್ಲಿ ಹೆಚ್ಚಿಸಲಾಗಿಲ್ಲ. ಸೆಪ್ಟೆಂಬರ್ 1ರ ಪರಿಷ್ಕರಣೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಸೀಮಿತವಾಗಿದೆ.

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 183.50 ರೂ. ಇಳಿಕೆ ಇಳಿಕೆ: ಬೆಲೆ ಎಷ್ಟಾಗಲಿದೆ?

ಆಗಸ್ಟ್ 1ರಂದು 19 ಕೆ.ಜಿ. ವಾಣಿಜ್ಯ LPG ಸಿಲಿಂಡರ್ ಬೆಲೆಯಲ್ಲಿ 200 ರೂ. ಕ್ಕೂ ಹೆಚ್ಚು ಕಡಿತ ಮಾಡಲಾಗಿತ್ತು. ಕೋಲ್ಕತ್ತಾದಲ್ಲಿ 209 ರೂ ಮತ್ತು ದೆಹಲಿಯಲ್ಲಿ 202ರೂ. ಗಳಷ್ಟು ದರ ಕಡಿತಗೊಳಿಸಲಾಗಿತ್ತು. ಆ ಬೆಲೆ ಕಡಿತದ ಬಳಿಕ ಕೋಲ್ಕತ್ತಾದಲ್ಲಿ 19 ಕೆ.ಜಿ. ವಾಣಿಜ್ಯ ಸಿಲಿಂಡರ್ 2,872.50 ರೂ. ಹಾಗೂ ದೆಹಲಿಯಲ್ಲಿ 2,728 ರೂ. ಕ್ಕೆ ಲಭ್ಯವಿತ್ತು.

Vishakha Bhat Heggar

View all posts by this author