Defence Budget 2025: ಇನ್ನಷ್ಟು ಬಲಗೊಳ್ಳಲಿದೆ ಭಾರತದ ರಕ್ಷಣಾ ವ್ಯವಸ್ಥೆ; 6.8 ಲಕ್ಷ ಕೋಟಿ ರೂ. ಮೀಸಲು
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆ. 1) ಮೋದಿ 3.0 ಸರ್ಕಾರದ 2ನೇ ಮತ್ತು ತಮ್ಮ 8ನೇ ಬಜೆಟ್ ಮಂಡಿಸಿದರು. ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 6.81 ಲಕ್ಷ ಕೋಟಿ ರೂ. ಅನುದಾನ ಘೋಷಿಸಲಾಗಿದ್ದು, ಇದು ಕಳೆದ ವರ್ಷದ ಬಜೆಟ್‌ಗಿಂತ ತುಸು ಹೆಚ್ಚು. ಈ ವರ್ಷದ ರಕ್ಷಣಾ ಕ್ಷೇತ್ರಕ್ಕೆ ಸಿಕ್ಕ ಅನುದಾನವು 2024-25ರ ಆರ್ಥಿಕ ವರ್ಷದ ಬಜೆಟ್ ಅಂದಾಜಿಗಿಂತ (6.22 ಲಕ್ಷ ಕೋಟಿ ರೂ.) ಸುಮಾರು ಶೇ. 9 ಹೆಚ್ಚು ಎಂದು ಅಂಕಿ-ಅಂಶಗಳು ತಿಳಿಸಿವೆ.


ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆ. 1) ಮೋದಿ 3.0 ಸರ್ಕಾರದ 2ನೇ ಮತ್ತು ತಮ್ಮ 8ನೇ ಬಜೆಟ್ ಮಂಡಿಸಿದರು (Budget 2025-26). ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ 6.81 ಲಕ್ಷ ಕೋಟಿ ರೂ. ಅನುದಾನ ಘೋಷಿಸಲಾಗಿದ್ದು, ಇದು ಕಳೆದ ವರ್ಷದ ಬಜೆಟ್‌ಗಿಂತ ತುಸು ಹೆಚ್ಚು. ಹೊಸ ಉಪಕರಣಗಳ ಖರೀದಿ, ಸೇನೆಯ ಆಧುನೀಕರಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಈ ಅನುದಾನ ವಿನಿಯೋಗಿಸಲಾಗುತ್ತದೆ (Defence Budget 2025). ಇದರಲ್ಲಿ ಸೇನೆಯ ಆಧುನೀಕರಣಕ್ಕಾಗಿ 1.8 ಲಕ್ಷ ಕೋಟಿ ರೂ. ಸೇರಿದೆ. ಹೊಸ ಫೈಟರ್ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳು, ಟ್ಯಾಂಕ್‌ಗಳು, ಫಿರಂಗಿ ಬಂದೂಕುಗಳು, ಡ್ರೋನ್‌ಗಳು ಮತ್ತು ರಾಕೆಟ್‌ಗಳು ಮತ್ತು ಕ್ಷಿಪಣಿಗಳ ಖರೀದಿಯನ್ನೂ ಒಳಗೊಂಡಿದೆ.
ಈ ವರ್ಷದ ರಕ್ಷಣಾ ಕ್ಷೇತ್ರಕ್ಕೆ ಸಿಕ್ಕ ಅನುದಾನವು 2024-25ರ ಆರ್ಥಿಕ ವರ್ಷದ ಬಜೆಟ್ ಅಂದಾಜಿಗಿಂತ (6.22 ಲಕ್ಷ ಕೋಟಿ ರೂ.) ಸುಮಾರು ಶೇ. 9 ಹೆಚ್ಚು ಎಂದು ಅಂಕಿ-ಅಂಶಗಳು ತಿಳಿಸಿವೆ. ಇದರಲ್ಲಿ ಪಿಂಚಣಿಗಾಗಿ 1,60,795 ಕೋಟಿ ರೂ., ರಾಜಸ್ವ ವೆಚ್ಚ 4,88,822 ಕೋಟಿ ರೂ., ವಿಮಾನ ಮತ್ತು ಏರೋ ಇಂಜಿನ್‌ಗಳಿಗೆ 48,614 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಜತೆಗೆ ನೌಕಾಪಡೆಗೆ 24,390 ಕೋಟಿ ರೂ. ಮತ್ತು ಇತರೆ ಉಪಕರಣಗಳ ಖರೀದಿಗೆ 63,099 ಕೋಟಿ ರೂ. ಅನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಆರೋಗ್ಯ, ರಕ್ಷಣೆ, ಕೃಷಿ, ಶಿಕ್ಷಣ ಮತ್ತಿತರ ಪ್ರಮುಖ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.
ವಿವಿಧ ವಲಯಗಳ ಮೂಲ ಸೌಕರ್ಯವನ್ನು ಹೆಚ್ಚಿಸುವುದು, ಸ್ವಾವಲಂಬನೆ ಸಾಧಿಸುವುದು ಮತ್ತು ದೀರ್ಘಕಾಲೀನ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಲಾಗಿದೆ.
ಆರೋಗ್ಯ ವಲಯಕ್ಕೆ ಸಿಕ್ಕಿದ್ದೇನು?
ಆರೋಗ್ಯ ಕ್ಷೇತ್ರಕ್ಕೆ ಒಟ್ಟು 98,311 ಕೋಟಿ ರೂ. ಹಂಚಿಕೆಯಾಗಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ 89,287 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು.
ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಣೆ: ಬಡವರ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (AB PM-JAY)ಗೆ 4,200 ಕೋಟಿ ರೂ. ನಿಗದಿಪಡಿಸಲಾಗಿದೆ.
ಕ್ಯಾನ್ಸರ್ ಆರೈಕೆ: ಸರ್ಕಾರ ಮುಂದಿನ 3 ವರ್ಷಗಳಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ 200 ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಿದೆ.
ವೈದ್ಯಕೀಯ ಶಿಕ್ಷಣ: ಆರೋಗ್ಯ ವೃತ್ತಿಪರರ ಕೊರತೆಯನ್ನು ನೀಗಿಸಲು ಹೆಚ್ಚುವರಿ 10,000 ವೈದ್ಯಕೀಯ ಸೀಟುಗಳನ್ನು ಘೋಷಿಸಲಾಗಿದೆ.
ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ: ಭಾರತವನ್ನು ಜಾಗತಿಕ ವೈದ್ಯಕೀಯ ಕೇಂದ್ರವನ್ನಾಗಿಸಲು ಸರ್ಕಾರ ಮುಂದಾಗಿದ್ದು, ಅದಕ್ಕಾಗಿ ʼಹೀಲ್ ಇನ್ ಇಂಡಿಯಾʼ ಯೋಜನೆ ಪರಿಚಯಿಸಲಿದೆ. ಇದು ಅಂತಾರಾಷ್ಟ್ರೀಯ ರೋಗಿಗಳಿಗೆ ವೀಸಾ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ.
ಔಷಧಗಳ ಆಮದು ಸುಂಕ ಕಡಿತ: 36 ಜೀವರಕ್ಷಕ ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಇತರ 6 ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕವು ಶೇ. 5ರಷ್ಟು ಕಡಿಮೆಯಾಗಲಿದ್ದು, ಅಗತ್ಯ ಔಷಧಿಗಳನ್ನು ಕೈ ಗೆಟುಕುವಂತೆ ಮಾಡಲಾಗಿದೆ.
ಈ ಸುದ್ದಿಯನ್ನೂ ಓದಿ: Union Budget: ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಬಂಪರ್ ! ತೆರಿಗೆಯಲ್ಲಿ ವಿನಾಯಿತಿ