Karnataka Budget 2026: ಶಾಶ್ವತ ನೀರಾವರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಯೋಜನೆ ಘೋಷಣೆಯಾಗದಿರುವುದು ಬಗ್ಗೆ ಚಕಾರ ಎತ್ತದ 17ನೇ ಬಜೆಟ್ ವಿಶೇಷ
ಬಯಲು ಸೀಮೆ ಜಿಲ್ಲೆಯಷ್ಟೇ ಅಲ್ಲದೆ, ಬರಡು ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವ ಜನಪರ ಸರಕಾರವೂ ನಿರ್ದಿಷ್ಟ ಯೋಜನೆ ಯನ್ನು ಘೋಷಿಸಿ ಕಾರ್ಯಗತ ಮಾಡದಿರುವುದು 17 ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ಧರಾಮಯ್ಯ ಅವರ ಸರಕಾರವೂ ಸೇರಿ ಈ ವರೆಗೆ ಅಧಿಕಾರ ನಡೆಸಿರುವ ಎಲ್ಲಾ ಸರಕಾರಗಳು ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣಿಸುವಂತಾಗಿರುವ ಕೊರತೆಯೆಂದರೆ ತಪ್ಪಾಗಲಾರದು
-
ಚಿಕ್ಕಬಳ್ಳಾಪುರ : ಜನಪ್ರಿಯ ಮುಖ್ಯಮಂತ್ರಿ ಖ್ಯಾತಿಯ ಸಿದ್ಧರಾಮಯ್ಯ ಮಂಡಿಸಿರುವ 17ನೇ ಬಜೆಟ್‌ನಲ್ಲಿ ಕೂಡ ಜಿಲ್ಲೆಯ ಒಕ್ಕೊರಲ ಬೇಡಿಕೆ ಶಾಶ್ವತ ಶುದ್ದ ನೀರು ಒದಗಿಸುವ ಬಗ್ಗೆ ಯಾವೊಂದು ಯೋಜನೆ ಘೋಷಣೆ ಮಾಡದಿರುವುದು, ಹೆಚ್.ಎನ್.ವ್ಯಾಲಿ 3ನೇ ಹಂತದ ಶುದ್ಧೀಕರಣಕ್ಕೆ ಅನುದಾನ ಒದಗಿಸುವ ಬಗ್ಗೆ ಚಕಾರ ಎತ್ತದಿರುವುದು ಜಿಲ್ಲೆಯ ಪಾಲಿಗೆ ಅತ್ಯಂತ ನಿರಾಸೆ ಮೂಡಿಸಿದೆ.
ಬಯಲು ಸೀಮೆ ಜಿಲ್ಲೆಯಷ್ಟೇ ಅಲ್ಲದೆ, ಬರಡು ಜಿಲ್ಲೆ ಎಂಬ ಹಣೆಪಟ್ಟಿ ಕಳಚಲು ಸ್ವಾತಂತ್ರ್ಯ ಬಂದಾಗಿನಿಂದಲೂ ಯಾವ ಜನಪರ ಸರಕಾರವೂ ನಿರ್ದಿಷ್ಟ ಯೋಜನೆ ಯನ್ನು ಘೋಷಿಸಿ ಕಾರ್ಯಗತ ಮಾಡದಿರುವುದು 17 ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿದ್ಧರಾಮಯ್ಯ ಅವರ ಸರಕಾರವೂ ಸೇರಿ ಈ ವರೆಗೆ ಅಧಿಕಾರ ನಡೆಸಿರುವ ಎಲ್ಲಾ ಸರಕಾರಗಳು ಜಿಲ್ಲೆಯನ್ನು ಕಡೆಗಣಿಸಿರುವುದು ಸ್ಪಷ್ಟವಾಗಿ ಕಾಣಿಸುವಂತಾಗಿರುವ ಕೊರತೆಯೆಂದರೆ ತಪ್ಪಾಗಲಾರದು.
ಜಿಲ್ಲೆಯ ರೈತರು ಪ್ರಗತಿಪರ ರೈತರಾಗಿದ್ದು ಅಂತರ್ಜಲವನ್ನು ಸಮರ್ಥವಾಗಿ ಬಳಸುವಲ್ಲಿ ಇಸ್ರೇಲ್‌ಗೂ ಪಾಠ ಮಾಡುವಷ್ಟು ಕೌಶಲ್ಯವನ್ನು ಪಡೆದಿದ್ದಾರೆ. ಸಾವಿರಾರು ಅಡಿಗಳ ಆಳದಿಂದ ನೀರನ್ನು ಪಡೆಯುವ ಕಾರಣ ಪ್ಲೋರೈಡ್, ನೈಟ್ರೇಟ್, ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಖನಿಜಾಂಶಗಳನ್ನು ಕುಡಿದು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದಾರೆ.
ಇದನ್ನು ಮನಗಂಡು ಅಂತರ್ಜಲ ವೃದ್ಧಿಗೆಂದು ಜಾರಿಗೆ ತಂದ ಹೆಚ್.ಎನ್.ವ್ಯಾಲಿ ನೀರು ಅಂತರ್ಜಲ ವೃದ್ದಿಯಲ್ಲಿ ಗಮನಾರ್ಹ ಪರಿಹಾಣ ಉಂಟು ಮಾಡಿದ್ದರೂ ಈ ನೀರಿನಿಂದ ಬೆಳೆಯುವ ತರಕಾರಿ, ಇದೇ ನೀರು ಹಿಂಗಿ ಬತ್ತಿದ್ದ ಕೊಳವೆಬಾವಿಗಳಲ್ಲಿ ಅಂತರ್ಜಲ ಮರು ಪೂರಣವಾಗಿ ಅದೇ ನೀರನ್ನು ನಗರವಾಸಿಗಳಿಗೆ ಕುಡಿಯಲು ಹರಿಸುತ್ತಿರುವುದು ಜನರ ಆರೋಗ್ಯದ ಮೇಲೆ ಇನ್ನಷ್ಟು ಗಂಭೀರ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿರುವು ದನ್ನು ವಿಜ್ಞಾನಿಗಳೇ ತಿಳಿಸಿದ್ದಾರೆ.
ಇಷ್ಟಾದರೂ ಈಬಾರಿಯ ಬಜೆಟ್‌ನಲ್ಲಿ 3ನೇ ಹಂತದ ಶುದ್ಧೀಕರಣದ ಬಗ್ಗೆ ಯಾವ ಭರವಸೆ ಯನ್ನೂ ನೀಡದಿರುವುದು ಜಿಲ್ಲೆಯ ಜನತೆ ಬಾರೀ ನಿರಾಸೆ ಅನುಭವಿಸು ವಂತಾಗಿದೆ. ಸಂಘ ಸಂಸ್ಥೆಗಳ ಮುಖಂಡರು ಕೂಡ ಪ್ರತಿಭಟನೆಯ ಹಾದಿ ತುಳಿಯುವ ಬಗ್ಗೆ ಮಾತನಾಡಿದ್ದಾರೆ.
2026-27ನೇ ಸಾಲಿನ ಆಯವ್ಯಯದಲ್ಲಿ ಜಿಲ್ಲೆಗೆ ದಕ್ಕಿರುವ ಯೋಜನೆಗಳು
೧. ಜೀವಿತಾವಧಿ ಮುಗಿದ ವಾಹನಗಳನ್ನು ಸುರಕ್ಷಿತ ರೀತಿಯಲ್ಲಿ ವಿಲೇವಾರಿ ಮಾಡಲು ಕೆಐಎಡಿಬಿ ಮೂಲಕ ಜಿಲ್ಲೆಯಲ್ಲಿ 100 ಎಕರೆ ಪ್ರದೇಶದಲ್ಲಿ ವಾಹನ ಸ್ಕಾçಪಿಂಗ್ ಸೌಲಭ್ಯ ಘಟಕ ಸ್ಥಾಪನೆ.
೨. ಡ್ರೋಣ್‌ಗಳ ಪರೀಕ್ಷೆ ಮತ್ತು ಕಾರ್ಯಕ್ಷಮತೆ ಮೌಲ್ಯಮಾಪನಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಡ್ರೋಣ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪನೆ ಬಗಗೆ ಘೋಷಣೆ.
೩. ವಿಶ್ವೇಶ್ವರಯ್ಯ ಇಂಜನಿಯರಿAಗ್ ಕಾಲೇಜು ವಿಶ್ವವಿದ್ಯಾಲಯವನ್ನು ಐಐಟಿ ಮಾದರಿ ಯಲ್ಲಿ 500 ಕೋಟಿ ವೆಚ್ಚದಲ್ಲಿ ಅಭಿವೃದ್ದಿಗೆ ಒತ್ತು ನೀಡಿರುವುದು ಜಿಲ್ಲೆಯ ಕ್ಯಾಂಪಸ್ ಅಭಿವೃದ್ದಿಗೂ ಮುನ್ನುಡಿ ಬರೆದಿದ್ದು ಇದರಿಂದಾಗಿ ಜಿಲ್ಲೆಯ ವಿದ್ಯಾರ್ಥಿಗಳ ಪಾಲಿಗೆ ಅನುಕೂಲ.
೪.ರಾಮನಗರ, ಶಿಡ್ಲಘಟ್ಟ, ಹಾವೇರಿ, ತಾಂಡವಪುರ(ಮೈಸೂರು ಜಿಲ್ಲೆ) ಕಲಬುರುಗಿ ತಾಲೂಕುಗಳಲ್ಲಿ ಸಿಲ್ಕ್ ಪಾರ್ಕ್ಗಳ ಸ್ಥಾಪನೆಗೆ ಕ್ರಮ.
೫. ಮೆಕ್ಕೆಜೋಳ ಬೆಲೆ ಕುಸಿತದಿಂದ ಸಂಕಷ್ಟಕೀಡಾದ ರೈತರ ಹಿತ ಕಾಪಾಡಲು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು 100 ಕೋಟಿ ನೆರವು ಜಿಲ್ಲೆಯ ರೈತರಿಗೆ ಅನುಕೂಲ.
೬. ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಹೆಬ್ಬಾಳ ನಾಗವಾರ ಕಣಿವೆಯ 3ನೇ ಹಂತದಲ್ಲಿ ಶಿಡ್ಲಘಟ್ಟ ಅಮಾನಿ ಕೆರೆಯಿಂದ ಶಿಡ್ಲಘಟ್ಟ ತಾಲೂಕಿನ 45 ಕೆರೆ, ಚಿಂತಾಮಣಿ ತಾಲೂಕಿನ 119 ಕೆರೆಗಳು ಸೇರಿ 164 ಕೆರಗಳಿಗೆ ನೀರು ತುಂಬಿಸುವ ಯೋಜನೆಯನ್ನು 237ಕೋಟಿ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.
೭. 6 ರಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೋಂದಾಯಿತ ಕಾರ್ಮಿಕರ ಮಕ್ಕಳಿಗಾಗಿ 2025-26ನೇ ಸಾಲಿನಲ್ಲಿ 42 ಶ್ರಮಿಕ ಶಾಲೆಗಳ ಪೈಕಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಒಂದು ಶಾಲೆ ಕಾರ್ಯಾರಂಭಕ್ಕೆ ಕ್ರಮ.
೮. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮೊದಲೇ ಹಂತದ ಏನ ನೀರಾ ವರಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಬಾಕಿಯಿರುವ 18.73ಕಿ.ಮೀ ಉದ್ದದ ಕಾಲುವೆ ಕಾಮಗಾರಿಗಳನ್ನು ಶೀಘ್ರವೆ ಪೂರ್ಣಗೊಳಿಸಲಾಗುವುದು.ಹೆಚ್ಚುವರಿಯಾಗಿ ನೀರನ್ನು ಸಂಗ್ರಹಿಸಿ ಸದ್ಭಳಕೆ ಮಾಡಿಕೊಳ್ಳಲು ಕೊರಟಗೆರೆ ತಾಲೂಕು ವಡೇರಹಳ್ಳಿ ಸಮೀಪ ೧.೨ ಟಿಎಂಸಿ ಸಾಮರ್ಥ್ಯದ ಸಮತೋಲನ ಜಲಾಶಯ ನಿರ್ಮಾಣಕ್ಕೆ ಒತ್ತು ನೀಡಿರುವುದು ಜಿಲ್ಲೆಗೆ ನೀರು ಹರಿಯುವ ಸೂಚನೆ ನೀಡಿದೆ.
ಸಣ್ಣ ನೀರಾವರಿ ಇಲಾಖೆಯಿಂದ
೯.ಗುಡಿಬAಡೆ ತಾಲೂಕಿನ ಹಂಪಸAದ್ರ ಕೆರೆ ಅಭಿವೃದ್ದಿ,
೧೦.ಚಿಂತಾಮಣಿ ತಾಲೂಕಿನತುಳವನೂರು ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ
೧೧.ಗುಡಿಬಂಡೆ ತಾಲೂಕಿನ ಅಮಾನಿ ಬೈರಸಾಗರ ಕೆರೆಗೆ ಕೋಡಿ ಕಂ ಬ್ರಿಡ್ಜ್ ನಿರ್ಮಾಣ
೧೨.ಬಾಗೇಪಲ್ಲಿ ತಾಲೂಕಿನ ಮುದ್ದಹಳ್ಳಿ ಕೊಮಟಹಳ್ಳಿ ಕುಂಟೆ ಮರು ನಿರ್ಮಾಣ,
೧೩. ಚಿಂತಾಮಣಿ ತಾಲೂಕಿನ ಭಕ್ತರಹಳ್ಳಿ ಬಖಳಿ ಹೊಸ ಕರೆ ನಿರ್ಮಾಣ
೧೪. ಶಿಡ್ಲಘಟ್ಟ ಭಾಗದ 164 ಕೆರೆಗಳಿಗೆ ಏತ ನೀರಾವರಿ ಯೋಜನೆ
೧೫. ಬಾಗೇಪಲ್ಲಿ ತಾಲೂಕು ಗಂಟಲಮಲ್ಲಮ್ಮ ಕಣಿವೆ ಮೇಲೆ ಮಣ್ಣಿನ ಅಣೆಕಟ್ಟು ನಿರ್ಮಾಣ.
ಹೀಗೆ ಜಿಲ್ಲೆಯ ಪಾಲಿಗೆ ಆಶಾದಾಯಕವಲ್ಲದ ಬಜೆಟ್ ಎಂದು ಹೇಳಬಹುದಾದರೂ, ಸಣ್ಣ ಪುಟ್ಟ ಯೋಜನೆಗಳನ್ನು ಘೋಷಣೆ ಮಾಡಿರುವುದು ನೋಡಿದರೆ ಏನೂ ಇಲ್ಲ ಎಂಬು ದಕ್ಕಿಂತ ಇರುವುದರಲ್ಲೇ ತೃಪ್ತಿ ಪಡುವ ಅವಕಾಶವನ್ನು ಜಿಲ್ಲೆಯ ಜನತೆಗೆ ನೀಡಿರುವುದು ಸಮಾಧಾನ ತಂದಿದೆ.ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆದು ಬೆಂಗಳೂರಿನ ಉಪನಗರವಾಗುವ ಕನಸನ್ನು ನನಸು ಮಾಡದಿರುವುದು ಕೂಡ ಜನಪ್ರತಿನಿಧಿಗಳ ಮೇಲೆ ಜನತೆಗೆ ಅಸಹನೆ ಉಂಟಾಗುವಗಂತೆ ಆಗಿರುವುದು ಸುಳ್ಳಲ್ಲ.