ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀಮಂತರಾಗಬೇಕೆ? ಈ ತಪ್ಪುಗಳನ್ನು ಮಾಡಲೇಬಾರದು

ಶ್ರೀಮಂತನಾಗುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ನಾವು ಮಾಡುವ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ನಮ್ಮನ್ನು ಶ್ರೀಮಂತ ಆಗದಂತೆ ತಡೆಯುತ್ತದೆ. ಹೀಗಾಗಿ ಶ್ರೀಮಂತನಾಗಬೇಕಾದರೆ ಕೆಲವೊಂದು ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತಾರೆ ತಜ್ಞರು. ಅಂತಹ ತಪ್ಪುಗಳು ಯಾವುದು ಎನ್ನುವ ಕುರಿತು ಮೈಂಡ್ ಥೆರಪಿಸ್ಟ್, ವೆಲ್ತ್ ಎಕ್ಸ್‌ಪರ್ಟ್‌ ಮೈಸೂರಿನ ಸುರೇಶ ಶೈವ ʼವಿಶ್ವವಾಣಿ ಟಿವಿ ಸ್ಪೆಷಲ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿರುವುದು ಹೀಗೆ...

ಮೈಂಡ್ ಥೆರಪಿಸ್ಟ್, ವೆಲ್ತ್ ಎಕ್ಸ್‌ಪರ್ಟ್‌ ಮೈಸೂರಿನ ಸುರೇಶ ಶೈವ

ಬೆಂಗಳೂರು, ಮಾ. 18: ಮನುಷ್ಯನಿಗೆ ಮನಸ್ಸೇ ಶತ್ರು, ಮನಸ್ಸೇ ಮಿತ್ರ. ಅವನು ತನ್ನ ಮನಸ್ಸನ್ನು ನಿಯಂತ್ರಣದಲ್ಲಿ (Mind control) ಇರಿಸಿಕೊಳ್ಳದೇ ಇದ್ದರೆ ಶ್ರೀಮಂತನಾಗಲು ಸಾಧ್ಯವಿಲ್ಲ ಎನ್ನುತ್ತಾರೆ ಮೈಂಡ್ ಥೆರಪಿಸ್ಟ್, ವೆಲ್ತ್ ಎಕ್ಸ್‌ಪರ್ಟ್‌ (Mind Therapist, Wealth Expert) ಮೈಸೂರಿನ ಸುರೇಶ ಶೈವ (Suresha Shaiva from Mysore). ʼವಿಶ್ವವಾಣಿ ಟಿವಿ ಸ್ಪೆಷಲ್‌ʼ (Vishwavani money) ಯೂಟ್ಯೂಬ್‌ ಚಾನೆಲ್‌ನಲ್ಲಿ ಕೇಶವ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಅವರು ಹಣ ಗಳಿಸಬೇಕಾದರೆ ಮನಸ್ಸಿನ ನಿರ್ಧಾರಗಳು ಹೇಗಿರಬೇಕು, ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ತಿಳಿಸಿದರು.

ಶ್ರೀಮಂತನನಾಗಲು ವೆಲ್ತ್ ಮೈಂಡ್ ಸೆಟ್ ತುಂಬಾ ಮುಖ್ಯ. ಇದಕ್ಕಾಗಿ ಯಾವ ರೀತಿ ವೆಲ್ತ್ ಕ್ರಿಯೇಟ್ ಮಾಡಬೇಕು ಎಂಬುದನ್ನು ಯೋಚಿಸಬೇಕು. ಇದನ್ನು ನಾವು ಹೊರಗೆ ನೋಡುವುದಕ್ಕಿಂತ ಮೊದಲು ನಮ್ಮೊಳಗಿನಿಂದ ನೋಡಬೇಕು ಎಂದರು.

ಚಿನ್ನ ಅಥವಾ ಬೆಳ್ಳಿ ಹೂಡಿಕೆಗೆ ಯಾವುದು ಬೆಸ್ಟ್? ತಜ್ಞರು ಏನಂತಾರೆ?

ಯಾವುದೇ ಕೆಲಸವನ್ನು ಮಾಡುವಾಗಲೂ ಅರಿವಿನಿಂದ ಮಾಡುವುದು ಬಹಳ ಮುಖ್ಯ. ಅದು ಸಂಬಂಧಗಳಾಗಿರಲಿ ಅಥವಾ ಹಣ ಮಾಡುವುದು ಆಗಿರಲಿ. ಅರಿವು ಇಟ್ಟುಕೊಳ್ಳದೇ ಇದ್ದರೆ ಜೀವನದಲ್ಲಿ ಸಾಧನೆ ಮಾಡುವುದು ಸಾಧ್ಯವಿಲ್ಲ. ಯಾವ ಕಾರ್ಯದಲ್ಲಿ ಮನುಷ್ಯನ ಅರಿವು ಇರುವುದಿಲ್ಲವೋ ಅಲ್ಲಿ ಎಲ್ಲವೂ ಕಳೆದುಕೊಳ್ಳುವ ಭಯ ವಿರುತ್ತದೆ ಎಂದು ಅವರು ವಿವರಿಸಿದರು.

ವಿಡಿಯೊ ಇಲ್ಲಿದೆ:



ಹಣ ಗಳಿಕೆಯ ವಿಚಾರದಲ್ಲಿ ಅದೃಷ್ಟ ಎನ್ನುವುದು ಇದೆ. ಇದು ನಮ್ಮ ಜನ್ಮದಿಂದ, ಕರ್ಮದಿಂದ, ಸಿದ್ಧತೆಯಿಂದ, ಹೊಸದನ್ನು ನಿರ್ಮಿಸುವುದರಿಂದ ಬರುತ್ತದೆ. ಜೀವನದಲ್ಲಿ ಎಲ್ಲರಿಗೂ ಅವಕಾಶ ಬರುತ್ತದೆ. ಆದರೆ ಅದನ್ನು ಬಳಕೆ ಮಾಡದೇ ಹೋದರೆ ಇದ್ದುದನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದರು.

ಶ್ರೀಮಂತನಾಗಲು ಪರಿಶ್ರಮ ಬೇಕೇಬೇಕು. ಒಂದು ದಿನ ನೀವು ಸ್ಟಾರ್ ಆಗುತ್ತೀರಿ. ಆದರೆ ಅದಕ್ಕಾಗಿ ನೀವು ಹಲವು ವರ್ಷಗಳ ಪರಿಶ್ರಮ ಹಾಕಿರುತ್ತೀರಿ. ಜೀವನದಲ್ಲಿ ನಾವು ಅದೃಷ್ಟವನ್ನು ಉಳಿಸಿಕೊಳ್ಳಲು ಮೂರು ದಾರಿಯಿದೆ. ಒಂದು ಅಪ್ಪ ಶ್ರೀಮಂತನಾಗಿರಬೇಕು ಅಥವಾ ಹೆಂಡತಿ ಶ್ರೀಮಂತವಾಗಿರಬೇಕು ಅಥವಾ ಸ್ವಂತ ಪ್ರಯತ್ನದಿಂದ ಶ್ರೀಮಂತನಾಗಬೇಕು. ಮೊದಲನೆಯ ಎರಡನ್ನು ನಿರೀಕ್ಷಿಸುವುದು ತಪ್ಪು. ಆದರೆ ಮೂರನೆಯದನ್ನು ನಾವು ಮಾಡಬಹುದು ಎಂದರು.

ಏನೇ ಆಗಲಿ. ಹೊಸದನ್ನು ತಯಾರಿಸಲು ನಾವು ಸಿದ್ಧವಾಗಿರಬೇಕು. ಇದಕ್ಕಾಗಿ ಒಂದು ಹೆಜ್ಜೆ ನೀವು ಇಟ್ಟರೆ ಯೂನಿವರ್ಸ್ ಅದಕ್ಕೆ ಹತ್ತು ಹೆಜ್ಜೆಗಳನ್ನು ಇಡುತ್ತದೆ. ಭಯವಿದ್ದರೆ ಯಾವುದನ್ನೂ ಕೂಡ ಉಳಿಸುವುದು ಸಾಧ್ಯವಾಗುವುದಿಲ್ಲ. ಜೀವನದಲ್ಲಿ ತಪ್ಪುಗಳನ್ನು ಮಾಡಲೇಬಾರದು. ದೇವರು ಸೃಷ್ಟಿಸಿದ ದಾರಿಯಲ್ಲಿ ನೀನು ಹೋಗದಿದ್ದರೆ ನೀನು ಮಾಡಿರುವ ದಾರಿಯಲ್ಲಿ ನಿನಗೆ ನಡೆಯೋಕೆ ಆಗೋಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪಾಪ ಪ್ರಜ್ಞೆ ನಮ್ಮಲ್ಲಿ ತುಂಬಿಕೊಂಡರೆ ಏನೂ ಮಾಡೋಕೆ ಆಗಲ್ಲ. ಎಷ್ಟೋ ಬಾರಿ ನಮ್ಮನ್ನು ನಾವು ಕ್ಷಮಿಸುವುದು ಕೂಡ ಮುಖ್ಯ. ನಿಯಮಗಳಿಗೆ ನಾವು ಮೋಸ ಮಾಡಿದಾಗ ಜೀವನ ಕೂಡ ನಮಗೆ ಮೋಸ ಮಾಡಲು ಪ್ರಾರಂಭಿಸುತ್ತದೆ ಎಂದು ಅವರು ತಿಳಿಸಿದರು.

ಭಾರತದ ವಾರೆನ್ ಬಫೆಟ್ ರಾಕೇಶ್ ಜುಂಜುನ್ವಾಲಾ ಯಶಸ್ಸಿನ ಗುಟ್ಟೇನು?

ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನಿಯಮ ಪಾಲನೆ ಮುಖ್ಯ. ಹಣಕ್ಕಿಂತಲೂ ಮುಖ್ಯವಾಗಿರುವುದು ಎಂದರೆ ಕೆಲಸದಲ್ಲಿ ಪ್ರಾಮಾಣಿಕತೆ ಇರಲೇಬೇಕು ಎಂದ ಅವರು, ಹೆಚ್ಚು ಭಾವನಾತ್ಮಕವಾಗಿ ಯೋಚಿಸುವುದು ಬದುಕನ್ನು ದುರಂತ ಮಾಡುತ್ತದೆ. ಹೀಗಾಗಿ ಭಾವನೆಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದನ್ನು ನಾವು ಬ್ಯಾಲೆನ್ಸ್ ಮಾಡುವುದು ಅರಿತಿರಬೇಕು. ಹಳೆಯ ನೆನಪುಗಳು ಭಾರವಾಗಿರುತ್ತದೆ. ಅದನ್ನು ಇಳಿಸಿಬಿಡಬೇಕು ಎಂದ ಅವರು ಹಳೆಯ ನೆನಪುಗಳು ಖಾಲಿಯಾದಾಗಲೇ ಮನಸ್ಸಿನಲ್ಲಿ ಹೊಸ ಯೋಚನೆಗಳನ್ನು ತುಂಬಿಕೊಳ್ಳಲು ಸಾಧ್ಯ. ಕಳೆದುಕೊಂಡಿದ್ದಕ್ಕೆ ದುಃಖ ಪಡಬಾರದು. ಅದರ ದುಪ್ಪಟ್ಟನ್ನು ಮರಳಿ ಪಡೆಯುವ ಬಗ್ಗೆ ಯೋಚಿಸಬೇಕು ಎಂದು ಸುರೇಶ ಶೈವ ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ವೆಬ್‌ಸೈಟ್:‌ https://sureshshaiva.com/vv/
ಮೊಬೈಲ್: 6364795551 / 9538735551

ವಿದ್ಯಾ ಇರ್ವತ್ತೂರು

View all posts by this author