ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡ್ರೀಮಿ ಟೆಕ್ನಾಲಜಿ ಭಾರತದಲ್ಲಿ X60 ಅಲ್ಟ್ರಾ ಕಂಪ್ಲೀಟ್ ರೋಬೋಟ್ ವ್ಯಾಕ್ಯೂಮ್ ಬಿಡುಗಡೆ

ರೋಬೋಟ್‌ನ ಫ್ಲೆಕ್ಸಿಅಡಾಪ್ಟ್ ತಂತ್ರಜ್ಞಾನವು 4.2 ಸೆಂ.ಮೀ.ವರೆಗೆ ಸಿಂಗಲ್-ಲೆವೆಲ್ ಹಾಗೂ 8 ಸೆಂ.ಮೀ.ವರೆಗೆ ಡಬಲ್-ಲೆವೆಲ್ ಮೆಟ್ಟಿಲುಗಳನ್ನು ದಾಟಲು ಸಹಾಯ ಮಾಡುತ್ತದೆ. ಡ್ಯುಯಲ್ ಫ್ಲೆಕ್ಸ್ ಆರ್ಮ್ ತಂತ್ರಜ್ಞಾನ ಮೂಲಕ ಮೂಲೆಗಳು ಮತ್ತು ಕಷ್ಟಕರ ಪ್ರದೇಶಗಳಿಗೂ ಪರಿಣಾಮ ಕಾರಿಯಾಗಿ ತಲುಪಬಹುದು.

ಬೆಂಗಳೂರು: ಸ್ಮಾರ್ಟ್ ಹೋಮ್ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಪ್ರಮುಖ ಸಂಸ್ಥೆಯಾದ ಡ್ರೀಮಿ ಟೆಕ್ನಾಲಜಿ, ಭಾರತದಲ್ಲಿ ತನ್ನ ಫ್ಲ್ಯಾಗ್‌ಶಿಪ್ ಡ್ರೀಮಿ X60 ಅಲ್ಟ್ರಾ ಕಂಪ್ಲೀಟ್ ರೋಬೋಟ್ ವ್ಯಾಕ್ಯೂಮ್ ಅನ್ನು ಬಿಡುಗಡೆ ಮಾಡಿದೆ. ಕೇವಲ 7.95 ಸೆಂ.ಮೀ. ದಪ್ಪದೊಂದಿಗೆ ಡ್ರೀಮಿ ಅತ್ಯಂತ ಸಣ್ಣ ರೋಬೋಟ್ ವ್ಯಾಕ್ಯೂಮ್ ಆಗಿರುವ ಇದು, ತನ್ನ ವಿಭಾಗದಲ್ಲೇ ಗರಿಷ್ಠ 35,000Pa ವೋರ್‌ ಮ್ಯಾಕ್ಸ್ ಸಕ್ಷನ್ ಪವರ್ ಹೊಂದಿದ್ದು, ಸಂಪೂರ್ಣ ಮನೆಯ ಸ್ವಚ್ಛತೆಗೆ ಹೆಚ್ಚು ಬುದ್ಧಿವಂತ ಮತ್ತು ಸ್ವಯಂಚಾಲಿತ ಪರಿಹಾರವನ್ನು ಒದಗಿಸುತ್ತದೆ.

ಡ್ರೀಮಿ X60 ಅಲ್ಟ್ರಾ ಕಂಪ್ಲೀಟ್. ಸೆ.27ರಿಂದ  ಅಮೆಜಾನ್ ಇಂಡಿಯಾ ನಲ್ಲಿ ₹1,34,999ಕ್ಕೆ ಲಭ್ಯ ವಾಗಲಿದೆ. ಡ್ರೀಮಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನಲ್ಲಿ ಸೆ.22ರಿಂದ ಹಾಗೂ ಕ್ರೋಮಾ ಮತ್ತು ಆಯ್ದ ರಿಟೇಲ್ ಸ್ಟೋರ್‌ಗಳಲ್ಲಿ ಸಹ ಲಭ್ಯವಿರಲಿದೆ.

ಇದನ್ನೂ ಓದಿ: Jawa 42 FJ All Stars Bike: ಆಕರ್ಷಕ ಲುಕ್, ಬಲಿಷ್ಠ ಎಂಜಿನ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ 'ಜಾವಾ 42 ಎಫ್‌ಜೆ ಆಲ್ ಸ್ಟಾರ್ಸ್'; ಬೆಲೆ ಎಷ್ಟು?

ಡ್ರೀಮಿ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ಮನು ಶರ್ಮಾ ಮಾತನಾಡಿ, “ಸ್ಮಾರ್ಟ್ ಹೋಮ್ ತಂತ್ರಜ್ಞಾನದಲ್ಲಿ ನಾವು ಹೊಸ ಹಂತಕ್ಕೆ ಪ್ರವೇಶಿಸುತ್ತಿದ್ದೇವೆ. ಯಂತ್ರಗಳು ಏನು ಮಾಡಬಲ್ಲವು ಎಂಬುದಕ್ಕಿಂತ, ಅವು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಎಷ್ಟು ಬುದ್ಧಿವಂತಿಕೆಯಿಂದ ಅರ್ಥಮಾಡಿಕೊಂಡು ಪ್ರತಿಕ್ರಿಯಿಸುತ್ತವೆ ಎಂಬುದು ಮುಖ್ಯವಾಗುತ್ತಿದೆ. X60 ಅಲ್ಟ್ರಾ ಕಂಪ್ಲೀಟ್ ಮೂಲಕ AI ಆಧಾರಿತ ಗುರುತಿಸುವಿಕೆ, ಅಡಾಪ್ಟಿವ್ ನ್ಯಾವಿಗೇಶನ್ ಮತ್ತು ಸುಧಾರಿತ ಸ್ವಚ್ಛತಾ ತಂತ್ರಜ್ಞಾನಗಳನ್ನು ಒಟ್ಟುಗೂಡಿಸಿದ್ದೇವೆ,” ಎಂದರು.

ರೋಬೋಟ್‌ನ ಫ್ಲೆಕ್ಸಿಅಡಾಪ್ಟ್ ತಂತ್ರಜ್ಞಾನವು 4.2 ಸೆಂ.ಮೀ.ವರೆಗೆ ಸಿಂಗಲ್-ಲೆವೆಲ್ ಹಾಗೂ 8 ಸೆಂ.ಮೀ.ವರೆಗೆ ಡಬಲ್-ಲೆವೆಲ್ ಮೆಟ್ಟಿಲುಗಳನ್ನು ದಾಟಲು ಸಹಾಯ ಮಾಡುತ್ತದೆ. ಡ್ಯುಯಲ್ ಫ್ಲೆಕ್ಸ್ ಆರ್ಮ್ ತಂತ್ರಜ್ಞಾನ ಮೂಲಕ ಮೂಲೆಗಳು ಮತ್ತು ಕಷ್ಟಕರ ಪ್ರದೇಶಗಳಿಗೂ ಪರಿಣಾಮ ಕಾರಿಯಾಗಿ ತಲುಪಬಹುದು. AI ಆಧಾರಿತ ಕ್ಯಾಮೆರಾ ವ್ಯವಸ್ಥೆಯು 280ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸಿ ತಪ್ಪಿಸಿಕೊಳ್ಳಲು ನೆರವಾಗುತ್ತದೆ.