ನವದೆಹಲಿ: ಒಮಾನ್‌ನ (Oman) ಉತ್ತರ ಕರಾವಳಿಯ ಬಳಿ ಭಾರತದ ಸರಕು ಹಡಗಿನ (Indian cargo ship) ಮೇಲೆ ಡ್ರೋನ್ ದಾಳಿ (drone attack) ನಡೆಸಲಾಗಿದ್ದು, ಇದರಿಂದ ಹಡಗು ಸಮುದ್ರದಲ್ಲಿ ಮುಳುಗಿದೆ. ಹಡಗಿನಲ್ಲಿದ್ದ ಎಲ್ಲಾ 14 ಭಾರತೀಯ ಸಿಬ್ಬಂದಿಯನ್ನು ಒಮಾನ್ ಅಧಿಕಾರಿಗಳು ರಕ್ಷಿಸಿದ್ದಾರೆ. ಭಾರತದ ಸರಕು ಹೊತ್ತು ಬರುತ್ತಿದ್ದ ಗುಜರಾತ್‌ನ ಲಿಮಾ ಬಳಿ ಹಾಜಿ ಅಲಿ (Cargo ship Haji Ali ) ಎಂಬ ಹಡಗಿನ ಮೇಲೆ ಬುಧವಾರ ಬೆಳಗಿನ ಜಾವ 3.30ರ ಸುಮಾರಿಗೆ ಸ್ಫೋಟಕ ವಸ್ತುವನ್ನು ಹೊಂದಿದ್ದ ಡ್ರೋನ್ ದಾಳಿಯಾಗಿದೆ.
ಇರಾನ್ ಮತ್ತು ಯುಎಸ್ ನಡುವಿನ ಸಂಘರ್ಷದ ಮಧ್ಯೆ ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಇದರ ಮಧ್ಯೆ ಒಮಾನ್ ಕರಾವಳಿಯಲ್ಲಿ ಬರುತ್ತಿದ್ದ ಗುಜರಾತ್‌ನ ಸರಕು ಹಡಗು ಹಾಜಿ ಅಲಿ ಮೇಲೆ ಬುಧವಾರ ಬೆಳಗ್ಗೆ ಶಂಕಿತ ಡ್ರೋನ್ ದಾಳಿಯಾಗಿದ್ದು, ಹಡಗು ಸಮುದ್ರದಲ್ಲಿ ಮುಳುಗಿದೆ. ಇದರಿಂದ ಈ ಪ್ರದೇಶದಲ್ಲಿ ಕಳವಳ ಹೆಚ್ಚಾಗಿದೆ.
ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಕೇಸ್: ವಾದ ಮಂಡನೆಗೆ ತಾನೇ ವಕೀಲೆಯಾಗಿ ಹೈಕೋರ್ಟ್‌ಗೆ ಎಂಟ್ರಿ ಕೊಟ್ಟ ಮಮತಾ!
ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯ ಸಲಾಯಾ ಬಂದರಿನಲ್ಲಿ ನೋಂದಾಯಿಸಲಾದ ಹಾಜಿ ಅಲಿ ಹಡಗು ಬುಧವಾರ ಮುಂಜಾನೆ ಜಾನುವಾರುಗಳನ್ನು ಹೊತ್ತುಕೊಂಡು ಸೊಮಾಲಿಯಾದಿಂದ ಶಾರ್ಜಾಗೆ ತೆರಳುತ್ತಿತ್ತು. ಡ್ರೋನ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡು ತಕ್ಷಣವೇ ಸ್ಥಿರತೆ ಕಳೆದುಕೊಂಡು ಸಮುದ್ರದಲ್ಲಿ ಮುಳುಗಿತು.
ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಒಂದು ಟಂಡೆಲ್ ಮತ್ತು 13 ಸಿಬ್ಬಂದಿ ಸೇರಿದಂತೆ 14 ನಾವಿಕರು ಅಪಾಯದ ಸಂಕೇತವನ್ನು ಕಳುಹಿಸಿದರು. ತಕ್ಷಣವೇ ಓಮನ್ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ದೀಬಾ ಬಂದರಿಗೆ ಕರೆತಂದಿತ್ತು ಎಂದು ಹಡಗು ಮಾಲೀಕ ಸುಲ್ತಾನ್ ಅಹ್ಮದ್ ಸಂಘರ್ ತಿಳಿಸಿದ್ದಾರೆ.
ಹಡಗಿನ ಮೇಲೆ ದಾಳಿ ನಡೆಸಿರುವುದು ಯಾರು ಎಂಬುದು ದೃಢಪಟ್ಟಿಲ್ಲ. ಆದರೆ ಇದು ಸ್ವೀಕಾರಾರ್ಹವಲ್ಲ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದ್ದು, ಭಾರತೀಯ ಧ್ವಜ ಹೊಂದಿರುವ ವಾಣಿಜ್ಯ ಹಡಗು ಮತ್ತು ನಾಗರಿಕ ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಈ ದಾಳಿಯನ್ನು ಖಂಡಿಸುವುದಾಗಿ ಹೇಳಿದೆ.
ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯನ್ನು ರಕ್ಷಿಸಿರುವುದಕ್ಕೆ ಒಮಾನಿ ಅಧಿಕಾರಿಗಳಿಗೆ ಧನ್ಯವಾದ. ಸರಕು, ನಾಗರಿಕರಿರುವ ಹಡಗನ್ನು ಗುರಿಯಾಗಿಸಬಾರದು. ಘಟನೆಯ ಕುರಿತು ಒಮಾನಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಭಾರತೀಯ ನೌಕಾಯಾನ ಹಡಗುಗಳ ಸಂಘ ತಿಳಿಸಿದೆ.
ಹಡಗಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ತಕ್ಷಣ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಭಾರತೀಯ ನೌಕಾಯಾನ ಹಡಗುಗಳ ಸಂಘದ ಪ್ರಧಾನ ಕಾರ್ಯದರ್ಶಿ ಆಡಮ್ ಭಯಾ ತಿಳಿಸಿದ್ದಾರೆ.
ವರ್ಕ್ ಫ್ರಮ್ ಹೋಮ್ ಕಡ್ಡಾಯವಲ್ಲ, ಆಮದು ನಿರ್ಬಂಧವಿಲ್ಲ: ಪ್ರಧಾನಿ ಮೋದಿ ಹೇಳಿಕೆಗೆ ಕೇಂದ್ರದ ಸ್ಪಷ್ಟನೆ
ಹಾಜಿ ಅಲಿ ಇಲ್ಲಿ ಮುಳುಗುವುದಕ್ಕಿಂತ ವಾರಗಳ ಮೊದಲು ಗುಜರಾತ್‌ಗೆ ಸೇರಿದ ಮತ್ತೊಂದು ಹಡಗು ಅಲ್ ಫೈಜ್ ನೂರ್ ಸುಲೇಮಾನಿ -1 ಕ್ರಾಸ್‌ಫೈರ್‌ನಲ್ಲಿ ಸಿಲುಕಿ ಮುಳುಗಿತ್ತು. ಈ ಎರಡು ಘಟನೆಗಳು ಗುಜರಾತ್‌ನ ಸಾಂಪ್ರದಾಯಿಕ ಕಡಲ ವಲಯದ ಹಡಗು ನಿರ್ವಾಹಕರು ಮತ್ತು ವ್ಯಾಪಾರಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.