ನವದೆಹಲಿ: ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ನವೆಂಬರ್ 1ರಿಂದ ಜಾರಿಯಾಗುವಂತೆ ಇಪಿಎಫ್ ಒ (EPFO) ಉದ್ಯೋಗಿಗಳ ದಾಖಲಾತಿ ಯೋಜನೆ 2025 ಅನ್ನು ಪ್ರಾರಂಭಿಸಿದೆ. ಈ ಕುರಿತು ಘೋಷಣೆಯನ್ನು ಮಾಡಿರುವ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ (Ministry of Labour and Employment), ನೌಕರರ ಭವಿಷ್ಯ ನಿಧಿಯಿಂದ (Employees Provident Fund) ಹೊರಗುಳಿದ ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ಘೋಷಿಸಲು ಮತ್ತು ದಾಖಲಿಸಲು ಉದ್ಯೋಗದಾತರಿಗೆ ಪ್ರೋತ್ಸಾಹಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಇಪಿಎಫ್ ಒ ನ 73ನೇ ಸಂಸ್ಥಾಪನಾ ದಿನದಂದು ಅನಾವರಣಗೊಳಿಸಿದರು.
ಇಪಿಎಫ್ ಒ ಉದ್ಯೋಗಿಗಳ ದಾಖಲಾತಿ ಯೋಜನೆ 2025ರ ಕುರಿತು ಮಾತನಾಡಿದ ಸಚಿವ ಮನ್ಸುಖ್ ಮಾಂಡವಿಯಾ, ಇಪಿಎಫ್ ಒ ಕೇವಲ ಒಂದು ನಿಧಿಯಲ್ಲ. ಇದು ಸಾಮಾಜಿಕ ಭದ್ರತೆಯಲ್ಲಿ ಭಾರತದ ಕಾರ್ಯಪಡೆಯ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಇದರಿಂದ ಲಕ್ಷಾಂತರ ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: CM Siddaramaiah: ಇನ್ನೊಬ್ಬ ಮೇಟಿ ಹುಟ್ಟುವುದು ಕಷ್ಟ, ಮೇಟಿಗೆ ಮೇಟಿಯೇ ಸಾಟಿ: ಸಿಎಂ ಸಿದ್ದರಾಮಯ್ಯ
ಈ ಯೋಜನೆಯಡಿಯಲ್ಲಿ ಉದ್ಯೋಗದಾತರು ಉದ್ಯೋಗಿಯ ಹಿಂದಿನ ಪಿಎಫ್ ಕೊಡುಗೆಯನ್ನು ಮೊದಲೇ ಕಡಿತಗೊಳಿಸದಿದ್ದರೆ ಅದನ್ನು ಪಾವತಿಸಬೇಕಾಗಿಲ್ಲ. ಬದಲಾಗಿ ಕೇವಲ 100 ನಾಮಮಾತ್ರ ದಂಡವನ್ನು ಪಾವತಿಸಬೇಕಾಗುತ್ತದೆ. ಇದರಿಂದ ಕಂಪೆನಿಗಳ ಮೇಲಿನ ಹೊರೆ ಕಡಿಮೆಯಾಗುವುದು ಮತ್ತು ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಳ್ಳಲು ಉತ್ತೇಜನ ಸಿಕ್ಕಂತಾಗುತ್ತದೆ.
ಯಾರು ಅರ್ಹರು?
2017ರ ಜುಲೈ 1 ಮತ್ತು 2025ರ ಅಕ್ಟೋಬರ್ 31ರ ನಡುವಿನ ಇಪಿಎಫ್ ಅಡಿಯಲ್ಲಿ ನೋಂದಾಯಿಸದ ಎಲ್ಲಾ ಉದ್ಯೋಗಿಗಳನ್ನು ಈ ಯೋಜನೆಯಡಿಯಲ್ಲಿ ಸೇರಿಸಬಹುದಾಗಿದೆ.
ಈ ಯೋಜನೆಗೆ ಜೀವಂತವಾಗಿರುವ ಮತ್ತು ಉದ್ಯೋಗದಲ್ಲಿರುವ ಉದ್ಯೋಗಿಗಳು ಮಾತ್ರ ಅರ್ಹರಾಗಿರುತ್ತಾರೆ. ವಿಚಾರಣೆಯಲ್ಲಿರುವ ಸಂಸ್ಥೆಗಳು ಕೂಡ ಇದರ ಪ್ರಯೋಜನ ಪಡೆಯಬಹುದು.
ಉದ್ಯೋಗದಾತರಿಗೆ ಪ್ರಯೋಜನ ಹೇಗೆ?
ಈ ಯೋಜನೆಯು ಉದ್ಯೋಗದಾತರಿಗೆ ಹೆಚ್ಚಿನ ದಂಡವಿಲ್ಲದೆ ತನ್ನ ನೀತಿಯನ್ನು ಸರಿಪಡಿಸಲು ಅವಕಾಶವನ್ನು ನೀಡುತ್ತದೆ. ನಿಗದಿತ ಅವಧಿಯ ಭವಿಷ್ಯ ನಿಧಿ ಕೊಡುಗೆಗಳಲ್ಲಿ ತಮ್ಮ ಪಾಲನ್ನು 100 ನಾಮಪತ್ರವನ್ನು ಸಲ್ಲಿಸುವ ಮೂಲಕ ದಂಡವಾಗಿ ಪಾವತಿಸಬೇಕಾಗುತ್ತದೆ. ಘೋಷಣೆ ದಿನಾಂಕದ ಮೊದಲು ಸಂಸ್ಥೆಯನ್ನು ತೊರೆದ ಉದ್ಯೋಗಿಗಳಿಗೆ ಇಪಿಎಫ್ ಒನಂತಹ ಉದ್ಯೋಗದಾತರ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಕಾನೂನು ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿರುವ ಕಂಪೆನಿಗಳಿಗೆ ಕೂಡ ಈ ಯೋಜನೆ ಪರಿಹಾರದ ದಾರಿಯಾಗಿದೆ.
ಉದ್ಯೋಗಿಗಳಿಗೆ ಹೇಗೆ ಪ್ರಯೋಜನ?
ಇದು ಉದ್ಯೋಗಿಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಒಮ್ಮೆ ಇದರಲ್ಲಿ ದಾಖಲಾದ ಬಳಿಕ ಕಾರ್ಮಿಕರಿಗೆ ಈ ಕೆಳಗಿನ ಅವಕಾಶಗಳು ಲಭ್ಯವಾಗುವುದು. ಪ್ರಾವಿಡೆಂಟ್ ನಿಧಿ ಉಳಿತಾಯ ಮತ್ತು ಬಡ್ಡಿ ಸಂಗ್ರಹಣೆ, ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಪಿಂಚಣಿ ಪ್ರಯೋಜನಗಳು, ಉದ್ಯೋಗಿಗಳ ಠೇವಣಿ ಲಿಂಕ್ಡ್ ವಿಮಾ ಯೋಜನೆ (EDLI) ಮೂಲಕ ವಿಮಾ ರಕ್ಷಣೆ.
ಈ ಯೋಜನೆಯು ಈ ಹಿಂದೆ ಇಪಿಎಫ್ ನಿಂದ ಹೊರಗೆ ಇದ್ದ ಲಕ್ಷಾಂತರ ಕಾರ್ಮಿಕರಿಗೆ ದೀರ್ಘಕಾಲೀನ ಆರ್ಥಿಕ ರಕ್ಷಣೆಯನ್ನು ವಿಸ್ತರಿಸಲಿದೆ.
ಇದನ್ನೂ ಓದಿ: Operation Sindoor: ಲಷ್ಕರ್, ಜೈಶ್‌ನಿಂದ ಹೊಸ ದಾಳಿಗೆ ಸಜ್ಜು; ಗುಪ್ತಚರ ವಿಭಾಗದಿಂದ ಸೇನೆಗೆ ಹೊಸ ಎಚ್ಚರಿಕೆ
ಏಕೆ ಮುಖ್ಯ?
ನೌಕರರ ದಾಖಲಾತಿ ಯೋಜನೆ 2025ಯು ವ್ಯವಹಾರ ಸುಲಭಗೊಳಿಸುವ ಪ್ರಯತ್ನವಾಗಿದೆ. ಇದರಿಂದ 6 ಕೋಟಿಗೂ ಹೆಚ್ಚು ಸಕ್ರಿಯ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಭದ್ರತೆ, ಲಕ್ಷಾಂತರ ಕಾರ್ಮಿಕರಿಗೆ ಉತ್ತಮ ನಿವೃತ್ತಿ ಭದ್ರತೆಯನ್ನು ಒದಗಿಸಿದಂತಾಗುತ್ತದೆ.
ಇದರಿಂದ ವೇತನ ಮಿತಿ 15,000 ರೂ. ನಿಂದ 25,000 ರೂ. ಗೆ ಹೆಚ್ಚಳ ಮಾಡಬಹುದು. ಹೆಚ್ಚಿನ ಉದ್ಯೋಗಿಗಳನ್ನು ಸಾಮಾಜಿಕ ಭದ್ರತಾ ಚೌಕಟ್ಟಿನ ಅಡಿಯಲ್ಲಿ ತರಬಹುದಾಗಿದೆ.