ಬೆಂಗಳೂರು: ನವೆಂಬರ್ 5ರಂದು ಬೆಂಗಳೂರಿನ ಕನಕಪುರ ಮುಖ್ಯ ರಸ್ತೆಯಲ್ಲಿರುವ ಪೂರ್ವಾ ಜೆಂಟೆಕ್ನಲ್ಲಿ ತನ್ನ ಎರಡನೇ ಮಳಿಗೆ ತೆರೆಯಲು ಖಾಸಗಿ ಸಂಸ್ಥೆ ಸಜ್ಜಾಗಿದೆ. ಇ-ಕಾಮರ್ಸ್ ಮತ್ತು ನಾಗಸಂದ್ರದಲ್ಲಿರುವ ತನ್ನ ಮಳಿಗೆಯ ಮೂಲಕ ಬೆಂಗಳೂರಿನಲ್ಲಿ ಈಗಾಗಲೇ ಉತ್ತಮ ಅಸ್ತಿತ್ವ ಹೊಂದಿರುವ ಈ ಖಾಸಗಿ ಸಂಸ್ಥೆ, ದಕ್ಷಿಣ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಗ್ರಾಹಕ ರಿಗೆ ತನ್ನ ಸಂಪೂರ್ಣ ಶಾಪಿಂಗ್ ಅನುಭವವನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿದೆ.
80,000 ಚದರ ಅಡಿಗಳಿಗಿಂತಲೂ (7,783 ಚದರ ಮೀಟರ್) ಹೆಚ್ಚು ವಿಸ್ತೀರ್ಣ ಹೊಂದಿರುವ ಈ ಮಳಿಗೆಯು ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದಿಂದ ಕಾಲ್ನಡಿಗೆಯಲ್ಲಿ ಸುಲಭವಾಗಿ ತಲುಪಬಹುದಾದ ದೂರದಲ್ಲಿದೆ. ಗ್ರಾಹಕರು ವೀಕ್ಷಿಸಿ ಆಯ್ಕೆ ಮಾಡಿಕೊಳ್ಳಲು ಈ ಮಳಿಗೆಯಲ್ಲಿ 5,200ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯವಿದ್ದು, ಅವುಗಳಲ್ಲಿ 3,000ಕ್ಕೂ ಅಧಿಕ ಉತ್ಪನ್ನಗಳನ್ನು ತಕ್ಷಣವೇ ಖರೀದಿಸಿ ಕೊಂಡೊಯ್ಯುವ ಸೌಲಭ್ಯವಿದೆ.
ಸಂಸ್ಥೆಯ 7 ಸಾವಿರಕ್ಕೂ ಹೆಚ್ಚು ಉತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ಮಳಿಗೆಯಲ್ಲಿ ಅಥವಾ ಸಂಸ್ಥೆಯ ವೆಬ್ಸೈಟ್, ಆ್ಯಪ್ ಹಾಗೂ ಫೋನ್ ಮೂಲಕ ಖರೀದಿಸುವ ಸೇವೆಯ ಮೂಲಕ ಆರ್ಡರ್ ಮಾಡಬಹುದು. ಗ್ರಾಹಕರು ಶಾಪಿಂಗ್ ಮಾಡುವ ಮಧ್ಯೆ ಸ್ವಲ್ಪ ವಿರಾಮ ಪಡೆದು, 100 ಸೀಟ್ ಸಾಮರ್ಥ್ಯವಿರುವ ರೆಸ್ಟೋರೆಂಟ್ನಲ್ಲಿ ಸ್ವೀಡನ್ನ ಜನಪ್ರಿಯ ಆಹಾರ ಪದಾರ್ಥಗಳನ್ನು ಹಾಗೂ ಸ್ಥಳೀಯ ಖಾದ್ಯಗಳನ್ನು ಸವಿಯಬಹುದು.
ಇದನ್ನೂ ಓದಿ: Roopa Gururaj Column: ವಿಕ್ರಮ ಬೇತಾಳ 20: ಸೋಮದತ್ತನ ಉಪಕಾರ ಮರೆತ ಅಕ್ಕಸಾಲಿಗ
ಖಾಸಗಿ ಸಂಸ್ಥೆಯ CEO ಪ್ಯಾಟ್ರಿಕ್ ಆಂಟೋನಿ ಮಾತನಾಡಿ, “ಭಾರತದಲ್ಲಿ ಸಂಸ್ಥೆಯ ಪಯಣದಲ್ಲಿ ಬೆಂಗಳೂರಿಗೆ ವಿಶೇಷ ಸ್ಥಾನವಿದೆ.” ಕಳೆದ ಐದು ವರ್ಷಗಳಲ್ಲಿ, ಸಾವಿರಾರು ಮನೆಗಳಲ್ಲಿ ನಮಗೆ ಆತ್ಮೀಯ ಸ್ವಾಗತ ದೊರೆತಿದೆ. ಗ್ರಾಹಕರು ಹೇಗೆ ಜೀವನ ನಡೆಸುತ್ತಾರೆ, ಯಾವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ ಮತ್ತು ಅವರ ಅಗತ್ಯಗಳು ಹೇಗೆ ಬದಲಾಗುತ್ತಿವೆ ಎಂಬುದನ್ನು ಅವರಿಂದ ತಿಳಿದು ಕೊಳ್ಳುವ ಅವಕಾಶ ನಮಗೆ ದೊರೆತಿದೆ. ಈ ಒಳನೋಟಗಳು ದಕ್ಷಿಣ ಬೆಂಗಳೂರಿನಲ್ಲಿ ನಮ್ಮ ಹೊಸ ಮಳಿಗೆಯನ್ನು ವಿನ್ಯಾಸಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ನಗರದಲ್ಲಿ ನಮ್ಮ ಎರಡನೇ ಮಳಿಗೆಯನ್ನು ಆರಂಭಿಸುತ್ತಿರುವುದು ನಮಗೆ ಹೆಮ್ಮೆಯ ಮೈಲಿಗಲ್ಲಾಗಿದೆ. ಗ್ರಾಹಕರಿಗೆ ನಮ್ಮ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪುವಂತೆ ಮಾಡಲು ಮತ್ತು ಹೆಚ್ಚು ಅನುಕೂಲಕರ ಶಾಪಿಂಗ್ ಅನುಭವವನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂಬುದನ್ನು ಇದು ಪ್ರತಿಬಿಂಬಿಸು ತ್ತದೆ.”
ಬಹು ತಲೆಮಾರುಗಳ ಕುಟುಂಬಗಳು ಒಟ್ಟಿಗೆ ವಾಸಿಸುವ ಸ್ವತಂತ್ರ ಮನೆಗಳಿಂದ ಹಿಡಿದು, ಸೀಮಿತ ಸ್ಥಳಾವಕಾಶವಿರುವ ಆಧುನಿಕ ಬಹುಮಹಡಿ ಅಪಾರ್ಟ್ಮೆಂಟ್ಗಳವರೆಗೆ, ದಕ್ಷಿಣ ಬೆಂಗಳೂರು ಜನರ ವಿಭಿನ್ನ ಜೀವನದ ಹಂತಗಳು ಮತ್ತು ಜೀವನಶೈಲಿಗಳನ್ನು ಪ್ರತಿಬಿಂಬಿಸುತ್ತದೆ. ಹೈಬ್ರಿಡ್ ಕೆಲಸದ ಪದ್ಧತಿ ಮತ್ತು ನಗರದ ಅಭಿವೃದ್ಧಿ ಹೊಂದುತ್ತಿರುವ ಉದ್ಯಮಶೀಲತಾ ಸಂಸ್ಕೃತಿ ಯಿಂದಾಗಿ, ಇಂದಿನ ಮನೆಗಳು ದೈನಂದಿನ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಇನ್ನೂ ಅನೇಕ ಕೆಲಸಗಳಿಗೆ ಮತ್ತು ಅಗತ್ಯಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿವೆ.
ಒಂದೇ ಸ್ಥಳವು ಅನೇಕ ಅಗತ್ಯಗಳನ್ನು ಪೂರೈಸುತ್ತಿದ್ದು, ಕೆಲಸ, ಕುಟುಂಬದ ಚಟುವಟಿಕೆಗಳು, ಹವ್ಯಾಸಗಳು, ವೈಯಕ್ತಿಕ ಯೋಜನೆಗಳು ಮತ್ತು ಸಂಭ್ರಮಾಚರಣೆಗಳಿಗೆ ಅನುಕೂಲ ಕಲ್ಪಿಸುತ್ತಿದೆ. ಇದು ಜನರು ತಮ್ಮ ಮನೆಗಳನ್ನು ಸಜ್ಜುಗೊಳಿಸುವ ರೀತಿಯಲ್ಲಿಯೂ ಬದಲಾವಣೆ ತರುತ್ತಿದೆ. ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿ ಕೊಳ್ಳುವ ಬಹುಪಯೋಗಿ ಪೀಠೋಪಕರಣಗಳು ಮತ್ತು ಜಾಣ್ಮೆಯ ಶೇಖರಣಾ ವ್ಯವಸ್ಥೆಗಳ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ.
ಬಾಲ್ಕನಿಗಳು, ಟೆರೇಸ್ಗಳು ಮತ್ತು ಮನೆಯ ಹೊರಾಂಗಣದ ಮೂಲೆಗಳು ಜನರ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅತಿಥಿಗಳಿಗೆ ಆತಿಥ್ಯ ನೀಡುವುದು, ತೋಟಗಾರಿಕೆ ಮಾಡು ವುದು ಅಥವಾ ಶಾಂತವಾಗಿ ಕುಳಿತು ಪುಸ್ತಕ ಓದಲು ಒಂದು ಮೂಲೆಯನ್ನು ಸೃಷ್ಟಿಸುವುದೇ ಆಗಿರಲಿ, ಜನರು ತಮ್ಮ ಮನೆಗಳಲ್ಲಿನ ಇಂತಹ ಸ್ಥಳಗಳನ್ನು ವರ್ಷವಿಡೀ ಆರಾಮದಾಯಕವಾಗಿ, ಉಪಯುಕ್ತವಾಗಿ ಮತ್ತು ಆನಂದದಾಯಕವಾಗಿ ಬಳಸಲು ಅನುಕೂಲವಾಗುವಂತೆ ರೂಪಿಸಲು ಹೆಚ್ಚಿನ ಗಮನ ನೀಡುತ್ತಿದ್ದಾರೆ.
ದೈನಂದಿನ ಅಗತ್ಯಗಳಿಗೆ ತಕ್ಕಂತೆ, ಈ ಮಳಿಗೆಯಲ್ಲಿ ಆಕರ್ಷಕ ಕೊಠಡಿ ವಿನ್ಯಾಸಗಳು ಮತ್ತು ಉಪಯುಕ್ತ ಪರಿಹಾರಗಳಿವೆ. ದೈನಂದಿನ ಚಟುವಟಿಕೆಗಳಿಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವು ದರಿಂದ ಹಿಡಿದು, ಮನೆಯನ್ನು ಅಚ್ಚುಕಟ್ಟಾಗಿ ಜೋಡಿಸುವುದು ಅಥವಾ ಹೊಸ ಮನೆಯನ್ನು ಸಜ್ಜುಗೊಳಿಸುವವರೆಗೆ, ಗ್ರಾಹಕರು ತಮ್ಮ ಅಗತ್ಯ, ಬಜೆಟ್ ಮತ್ತು ವೈಯಕ್ತಿಕ ಶೈಲಿಗೆ ತಕ್ಕ ಆಲೋಚನೆಗಳನ್ನು ಇಲ್ಲಿ ಪಡೆಯಬಹುದು. ಯೋಜನೆಯಿಂದ ಹಿಡಿದು ವಿತರಣೆ, ಜೋಡಣೆ ಮತ್ತು ಅಳವಡಿಕೆಯವರೆಗೆ, ಗ್ರಾಹಕರ ಅನುಭವವನ್ನು ಸುಲಭಗೊಳಿಸಲು ವಿವಿಧ ಸೇವೆಗಳು ಲಭ್ಯವಿವೆ.
2021ರಲ್ಲಿ ಆನ್ಲೈನ್ ವಾಣಿಜ್ಯ ಸೇವೆಗಳ ಮೂಲಕ ಬೆಂಗಳೂರಿನಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿತು. ನಂತರ, 2022ರಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆಯಿತು ಇಂದು, ಬೆಂಗಳೂರಿ ನಲ್ಲಿ 9 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಗ್ರಾಹಕರ ಸಮುದಾಯವಿದೆ.
ಭಾರತದಾದ್ಯಂತ, ತನ್ನ ಆನ್ಲೈನ್ ಮತ್ತು ಆಫ್ಲೈನ್ ಮಾರ್ಗಗಳ ಮೂಲಕ 30 ಕೋಟಿಗೂ ಹೆಚ್ಚು ಗ್ರಾಹಕರನ್ನು ತಲುಪಿದ್ದು, 30 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ದೊಡ್ಡ ಮಳಿಗೆ ಗಳು, ನಗರ ಮಳಿಗೆಗಳು ಮತ್ತು ಇ-ಕಾಮರ್ಸ್ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿರುವ ಈ ಸಂಸ್ಥೆ, ಜನರ ದೈನಂದಿನ ಜೀವನವನ್ನು ಉತ್ತಮಗೊಳಿಸುವ ಉದ್ದೇಶದೊಂದಿಗೆ ತನ್ನ ಬಹುಮಾಧ್ಯಮ ವಿಸ್ತರಣೆಯನ್ನು ಮುಂದುವರಿಸುತ್ತಿದೆ.
ಇದರ ಮಾತೃಸಂಸ್ಥೆ ಇಂಗ್ಕಾ ಗ್ರೂಪ್ನ ಭವಿಷ್ಯದ ಬೆಳವಣಿಗೆಗೆ ಆದ್ಯತೆ ನೀಡಲಾಗಿರುವ ಮಾರುಕಟ್ಟೆಗಳಲ್ಲಿ ಈ ಫರ್ನಿಚರ್ ಮಾರಾಟ ಕಂಪನಿ ಕೂಡ ಒಂದಾಗಿದೆ. ಜೀವನಶೈಲಿಯನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಮೂಲಕ ಇನ್ನೂ ಹೆಚ್ಚಿನ ಜನರನ್ನು ತಲುಪುವ ಗುರಿಯನ್ನು ಹೊಂದಿದೆ. ಉತ್ತಮ ಗುಣಮಟ್ಟ, ಕೈಗೆಟುಕುವ ಬೆಲೆ ಮತ್ತು ಸುಸ್ಥಿರತೆಯನ್ನು ಗಮನದಲ್ಲಿಟ್ಟು ಕೊಂಡು ವಿನ್ಯಾಸಗೊಳಿಸಲಾದ 7 ಸಾವಿರಕ್ಕೂ ಹೆಚ್ಚು ಉತ್ಪನ್ನಗಳನ್ನು ಒದಗಿಸುತ್ತಿದೆ.
ದೇಶದಾದ್ಯಂತ ಬಲಿಷ್ಠ ಬಹುಚಾನಲ್ ಉಪಸ್ಥಿತಿಯನ್ನು ಹೊಂದುವ ಮೂಲಕ ಮತ್ತು ಮನೆ ಗಳಲ್ಲಿನ ಪ್ರಸ್ತುತ, ಭಾರತದಲ್ಲಿ ನಾಲ್ಕು ಮಾರುಕಟ್ಟೆಗಳಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದ್ದು, ಹೈದರಾಬಾದ್, ನವಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಮೂರು ದೊಡ್ಡ ಗಾತ್ರದ ಮಳಿಗೆಗಳನ್ನು ಹೊಂದಿದೆ ವೊರ್ಲಿ, ಪಶ್ಚಿಮ ದೆಹಲಿ, ಪುಣೆ, ದಕ್ಷಿಣ ದೆಹಲಿ ಮತ್ತು ಇದೀಗ ದಕ್ಷಿಣ ಬೆಂಗಳೂರಿನಲ್ಲಿ ನಗರ ಮಳಿಗೆಗಳನ್ನು ಹೊಂದಿದೆ.
ಇದರ ಜೊತೆಗೆ, ಮಹಾರಾಷ್ಟ್ರ (ಪುಣೆ ಸೇರಿದಂತೆ), ಆಂಧ್ರಪ್ರದೇಶ–ತೆಲಂಗಾಣ, ಗುಜರಾತ್, ಕರ್ನಾಟಕ, ದೆಹಲಿ–ಎನ್ಸಿಆರ್, ಆಗ್ರಾ, ಪ್ರಯಾಗರಾಜ್ (ಅಲಹಾಬಾದ್), ಅಮೃತಸರ, ಚಂಡೀಗಢ, ಜೈಪುರ, ಕಾನ್ಪುರ, ಲಖನೌ, ಲುಧಿಯಾನ, ವಾರಾಣಸಿ ಮತ್ತು ಗೋವಾ ಸೇರಿದಂತೆ ನೂರಾರು ಪಿನ್ ಕೋಡ್ ಪ್ರದೇಶಗಳಲ್ಲಿ ಇಂಗಾಲದ ಹೊರಸೂಸುವಿಕೆ ರಹಿತ ವಿತರಣಾ ಸೇವೆಗಳನ್ನು ಒದಗಿಸುತ್ತಿದೆ.
ತಮಿಳುನಾಡಿನಲ್ಲಿಯೂ ತನ್ನ ಸೇವೆಗಳನ್ನು ವಿಸ್ತರಿಸುವತ್ತ ಗಮನಹರಿಸಿದೆ. ಈ ಕಂಪನಿಯು ಭಾರತದಲ್ಲಿ ಎರಡು ವಿತರಣಾ ಕೇಂದ್ರಗಳನ್ನು ಹೊಂದಿದ್ದು, ಅವುಗಳಲ್ಲಿ ಒಂದು ಪುಣೆಯಲ್ಲಿದೆ ಮತ್ತು ಮತ್ತೊಂದು ಗುರುಗ್ರಾಮದಲ್ಲಿದೆ.