ಉತ್ತರಪ್ರದೇಶ: ಶಾಸಕ ಧೀರೇಂದ್ರ ಸಿಂಗ್ (MLA Dhirendra Singh) ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ( Yamuna Expressway Industrial Development Authority ) ಅಧಿಕಾರಿಗಳೊಂದಿಗೆ ಒಟ್ಟು 172 ರೈತರು ಸೋಮವಾರ ನೋಯ್ಡಾದ ಜೆವಾರ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Noida International Airport) ಲಕ್ನೋಗೆ (Lucknow) ಪ್ರಯಾಣಿಸಿದರು. ಇದು ರೈತರ ಮೊದಲ ವಿಮಾನಯನವಾಗಿತ್ತು. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಗ್ಗೆ 7.55 ರ ಸುಮಾರಿಗೆ ವಾಣಿಜ್ಯ ವಿಮಾನ ಸೇವೆಗಳು ಅಧಿಕೃತವಾಗಿ ಆರಂಭಗೊಂಡಿದೆ. ಮೊದಲ ವಿಮಾನ ಲಕ್ನೋದಿಂದ ಇಂಡಿಗೋ ಇಲ್ಲಿಗೆ ಆಗಮಿಸಿತ್ತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ಬಿಟ್ಟುಕೊಟ್ಟ 172 ರೈತರು ಹೊಸ ವಾಯುಯಾನ ಕೇಂದ್ರದಿಂದ ಮೊದಲ ವಿಮಾನಗಳಲ್ಲಿ ಒಂದರಲ್ಲಿ ಪ್ರಯಾಣಿಸಿದರು. ಇದರಲ್ಲಿ 20 ಮಹಿಳೆಯರು ಕೂಡ ಸೇರಿದ್ದರು.
ಅತಿಯಾದ ಕ್ಯಾಫಿನ್ ಮತ್ತು ಎನರ್ಜಿ ಡ್ರಿಂಕ್ಸ್ ಹೃದಯದ ಲಯದ ಮೇಲೆ ಪರಿಣಾಮ ಬೀರುತ್ತವೆಯೇ?
ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 7.55 ರ ಸುಮಾರಿಗೆ ಇಂಡಿಗೋ ವಿಮಾನ ಲಕ್ನೋದಿಂದ ಆಗಮಿಸಿತ್ತು. ವಿಮಾನವು ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪ್ರಯಾಣಿಕರು ಚಪ್ಪಾಳೆ ತಟ್ಟಿದರು ಮತ್ತು ವಿಮಾನವನ್ನು ಸಾಂಪ್ರದಾಯಿಕ ಜಲಫಿರಂಗಿ ವಂದನೆಯೊಂದಿಗೆ ಸ್ವಾಗತಿಸಲಾಯಿತು.
ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 28ರಂದು ಉದ್ಘಾಟಿಸಿದ್ದು, ಇದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ದೆಹಲಿ-ಎನ್‌ಸಿಆರ್ ಪ್ರದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ.
ಇಲ್ಲಿಂದ ಹೊರಹೋಗುವ ಮೊದಲ ವಿಮಾನದಲ್ಲಿ ರೈತರ ತಂಡ ಲಕ್ನೋಗೆ ತೆರಳಿ ಅಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಯೋಜನೆಗೆ ಕೃತಜ್ಞತೆಯನ್ನು ಸಲ್ಲಿಸಲಿದ್ದಾರೆ.
ಇದರೊಂದಿಗೆ ಈ ವಿಮಾನ ನಿಲ್ದಾಣದಿಂದ ಸೋಮವಾರ ಬೆಂಗಳೂರಿಗೆ ಮೊದಲ ನಿಯಮಿತ ವಾಣಿಜ್ಯ ಸೇವೆಯನ್ನು ಪ್ರಾರಂಭವಾಗಿದೆ. ಇಲ್ಲಿಂದ ತೆರಳುವ ಇಂಡಿಗೋ ಮುಂದಿನ ದಿನಗಳಲ್ಲಿ ಹೈದರಾಬಾದ್, ಜೈಪುರ, ಚಂಡೀಗಢ ಮತ್ತು ಅಮೃತಸರ ಸೇರಿದಂತೆ 16 ಕ್ಕೂ ಹೆಚ್ಚು ಸ್ಥಳಗಳಿಗೆ ವಿಮಾನಯಾನ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯನ್ನು ಹೊಂದಿದೆ.
ಅತ್ಯಾಧುನಿಕ ಸೌಲಭ್ಯಗಳು ಮತ್ತು ಸುಲಭ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಇಲ್ಲಿಂದ ವಿಮಾನಯಾನದ ಬಗ್ಗೆಅನೇಕರು ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಪ್ರಯಾಣಿಕ ಮೊದಲ ಬಾರಿಗೆ ನೋಯ್ಡಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದೇನೆ. ಇಲ್ಲಿ ಯಾವುದೇ ದಟ್ಟಣೆ ಇರಲಿಲ್ಲ ಎಂದು ಹೇಳಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 13.14 ಕೋಟಿ ರೂ ಮೌಲ್ಯದ ಗಾಂಜಾ ವಶ; ಆರು ಜನರ ಬಂಧನ
ಯಮುನಾ ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ನ ಉದ್ದಕ್ಕೂ ಸುಮಾರು 1,334 ಹೆಕ್ಟೇರ್ ಭೂಮಿಯಲ್ಲಿ ನಿರ್ಮಿಸಲಾದ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶಕ್ಕೆ ಪ್ರಮುಖ ವಾಯುಯಾನ ಪ್ರವೇಶ ದ್ವಾರವಾಗುವ ನಿರೀಕ್ಷೆಯಿದೆ. ಮೊದಲ ಹಂತದಲ್ಲಿ, ಇದು ವಾರ್ಷಿಕವಾಗಿ 12 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಿದ್ದು, ಕ್ರಮೇಣ ಇದನ್ನು ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣಗಳಲ್ಲಿ ಪರಿವರ್ತಿಸುವ ಗುರಿ ಹೊಂದಲಾಗಿದೆ. ಮೊದಲ ಸರಕು ವಿಮಾನ ಸೇವೆಯನ್ನು ಇಲ್ಲಿಂದ ಜೂನ್ 17ರಿಂದ ಕಾರ್ಯನಿರ್ವಹಿಸಲಿದೆ.