ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Flight Ticket: ವಿಮಾನ ಟಿಕೆಟ್ ಮರುಪಾವತಿ ನಿಯಮದಲ್ಲಿ ಇನ್ಮುಂದೆ ಭಾರೀ ಬದಲಾವಣೆ; ಪ್ರಯಾಣಿಕರ ಅನುಕೂಲಕ್ಕಾಗಿ ಡಿಜಿಸಿಎ ನಿರ್ಧಾರವೇನು?

ವಿಮಾನಯಾನವನ್ನು ಹೆಚ್ಚು ಪ್ರಯಾಣಿಕ ಸ್ನೇಹಿ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ವಿಮಾನ ಟಿಕೆಟ್ (Flight Ticket) ರದ್ದುಗೊಳಿಸುವ ಪ್ರಯಾಣಿಕರಿಗೆ ಮರುಪಾವತಿ ಮಾಡುವ ನಿಯಮಗಳಲ್ಲಿ ಭಾರತದ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯವು (Directorate General of Civil Aviation) ಮಹತ್ವದ ಬದಲಾವಣೆಯನ್ನು ಪ್ರಸ್ತಾಪಿಸಿದೆ. ಇದರಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳಲ್ಲಿ ಟಿಕೆಟ್ ರದ್ದು (Cancellation Fee On Flight Tickets) ಮಾಡುವ ಪ್ರಯಾಣಿಕರಿಗೆ ಮರುಪಾವತಿಯನ್ನು 21 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರೊಂದಿಗೆ ಇನ್ನು ಹಲವು ಕ್ರಮಗಳ ಕುರಿತು ಪ್ರಸ್ತಾಪಿಸಲಾಗಿದ್ದು,ಇದರ ಕರಡು ನಿಯಮವನ್ನು ಬಿಡುಗಡೆ ಮಾಡಲಾಗಿದೆ.

ನವದೆಹಲಿ: ವಿಮಾನ ಟಿಕೆಟ್ (Flight Ticket) ಗಳ ಮರುಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗೆ ಭಾರತದ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯವು (Directorate General of Civil Aviation) ಪ್ರಸ್ತಾವನೆ (flight ticket refund rules) ಮಾಡಿದೆ. ವಿಮಾನಯಾನವನ್ನು ಹೆಚ್ಚು ಪ್ರಯಾಣಿಕ ಸ್ನೇಹಿ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ವಿಮಾನ ಟಿಕೆಟ್ (Cancellation Fee On Flight Tickets) ಮರುಪಾವತಿ ನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳಿಗೆ ( New Refund Proposals) ಪ್ರಸ್ತಾಪಿಸಲಾಗಿದೆ. ಈ ಕ್ರಮವು ವಿಮಾನ ಪ್ರಯಾಣಿಕರ ಹಕ್ಕುಗಳನ್ನು ಬಲಪಡಿಸುವ ಮತ್ತು ವಿಮಾನಯಾನ ಸಂಸ್ಥೆಗಳಿಂದ ಹೆಚ್ಚಿನ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ವಿಶಾಲ ಪ್ರಯತ್ನದ ಭಾಗವಾಗಿದೆ ಎಂದು ಡಿಜಿಸಿಎ ತಿಳಿಸಿದೆ.

ಭಾರತದ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯವು ಹೊಸ ಮರುಪಾವತಿ ಪ್ರಸ್ತಾವನೆಗಳನ್ನು ಮಾಡಿದ್ದು, ಇದರ ಕರಡು ನಿಯಮಗಳಲ್ಲಿ ಪ್ರಯಾಣಿಕರು ಮರುಪಾವತಿಯಲ್ಲಿ ಎದುರಿಸುವ ಅನಗತ್ಯ ವಿಳಂಬವನ್ನು ಕೊನೆಗೊಳಿಸಲು 21 ಕೆಲಸದ ದಿನಗಳಲ್ಲಿ ಮರುಪಾವತಿಯನ್ನು ಪೂರ್ಣಗೊಳಿಸಬೇಕು ಎಂದು ಪ್ರಸ್ತಾಪಿಸಲಾಗಿದೆ.

ಇದನ್ನೂ ಓದಿ: Vande Bharat sleeper train: ವಂದೇ ಭಾರತ್‌ನಲ್ಲಿ ಇನ್ಮುಂದೆ ಸಿಗಲಿದೆ ಸ್ಲೀಪರ್‌ ಕೋಚ್‌ ಸೌಲಭ್ಯ; ರೈಲ್ವೆ ಸಚಿವಾಲಯದ ಮಾಹಿತಿಯೇನು?

ಹೊಸ ನಾಗರಿಕ ವಿಮಾನಯಾನ ಅವಶ್ಯಕತೆ (CAR)ಯು ಮರುಪಾವತಿ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ, ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ, ವಿಳಂಬ, ಗುಪ್ತ ಶುಲ್ಕ ಮತ್ತು ರದ್ದತಿ ನೀತಿಗಳಿಂದ ಪ್ರಯಾಣಿಕರು ನಿರಾಶೆಗೊಳ್ಳದಂತೆ ಮಾಡಿ ಅವರ ವಿಶ್ವಾಸವನ್ನು ಹೆಚ್ಚಿಸುವ ಪ್ರಯತ್ನ ಮಾಡುತ್ತದೆ ಎಂದು ಭಾರತದ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ಪರಿಷ್ಕರಿಸಿದ ಮೂರು ಪ್ರಮುಖ ಅಂಶಗಳು

48 ಗಂಟೆಗಳ ಉಚಿತ ರದ್ದತಿ

ವಿಮಾನ ಟಿಕೆಟ್ ಬುಕ್ ಮಾಡಿದ 48 ಗಂಟೆಗಳ ಕಾಲ 'ಲುಕ್-ಇನ್' ಅವಧಿಯನ್ನು ಪಡೆಯಬಹುದು. ಇದರಿಂದ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದೆ ಟಿಕೆಟ್‌ಗಳನ್ನು ರದ್ದುಗೊಳಿಸಲು ಅಥವಾ ಮಾರ್ಪಡಿಸಲು ಅವಕಾಶವಿದೆ.

ಹೆಚ್ಚಿನ ದರವಿದ್ದಾಗ ಬೇರೆ ವಿಮಾನಕ್ಕೆ ಬದಲಾಯಿಸಲು ಕೂಡ ವಿನಾಯಿತಿ ಅವಕಾಶವಿದೆ. ಆದರೆ ಇದು ವಿಮಾನ ನಿರ್ಗಮನಕ್ಕೆ ಐದು ದಿನಗಳಿಗಿಂತ ಮೊದಲು ಮಾಡಿದ ದೇಶೀಯ ಬುಕಿಂಗ್‌ಗಳಿಗೆ ಅಥವಾ ನಿರ್ಗಮನಕ್ಕೆ 15 ದಿನಗಳ ನಂತರ ಮಾಡಿದ ಅಂತಾರಾಷ್ಟ್ರೀಯ ಬುಕಿಂಗ್‌ಗಳಿಗೆ ಅನ್ವಯಿಸುವುದಿಲ್ಲ. 48 ಗಂಟೆಗಳ ಬಳಿಕ ಮಾಡುವ ರದ್ದತಿಗೆ ವಿಮಾನಯಾನ ನೀತಿಯ ಪ್ರಕಾರ ಪ್ರಮಾಣಿತ ರದ್ದತಿ ಶುಲ್ಕಗಳು ಅನ್ವಯವಾಗುತ್ತದೆ.

ಶೀಘ್ರದಲ್ಲೇ ಮರುಪಾವತಿ

ಯಾವುದೇ ರೀತಿಯ ಕಡಿತಗಳು ಇಲ್ಲದೆ 21 ಕೆಲಸದ ದಿನಗಳಲ್ಲಿ ಮರುಪಾವತಿಗಳನ್ನು ಪೂರ್ಣಗೊಳಿಸಲು ಭಾರತದ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಕರಡು ನಿಯಮಗಳಲ್ಲಿ ಪ್ರಸ್ತಾವಿಸಲಾಗಿದೆ. ತಡವಾಗಿ ರದ್ದುಗೊಳಿಸಿದರೂ ಕೂಡ ವಿಮಾನಯಾನ ಸಂಸ್ಥೆಗಳು ತೆರಿಗೆಗಳು ಮತ್ತು ವಿಮಾನ ನಿಲ್ದಾಣ ಶುಲ್ಕಗಳನ್ನು ಮರುಪಾವತಿಸಬೇಕಾಗುತ್ತದೆ. ಇನ್ನು ವಿಮಾನಯಾನ ಸಂಸ್ಥೆಗಳ ವೆಬ್‌ಸೈಟ್‌ನಲ್ಲಿ ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ಸಣ್ಣ ಹೆಸರು ತಿದ್ದುಪಡಿಗಳಿಗೆ ಶುಲ್ಕ ವಿಧಿಸಲು ಸಾಧ್ಯವಿಲ್ಲ ಎಂದು ಭಾರತದ ವಾಯುಯಾನ ನಿಯಂತ್ರಕ, ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ಇದನ್ನೂ ಓದಿ: Viral Video: ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಪ್ರಕರಣ; ಕೃತ್ಯ ಎಸಗಿದ ಪಾಪಿ ಮಹಿಳೆಯ ಬಂಧನ

ಮರುಪಾವತಿ ಜವಾಬ್ದಾರಿ ನಿಯಮ

ಟ್ರಾವೆಲ್ ಏಜೆಂಟ್‌ಗಳ ಮೂಲಕ ಬುಕ್ ಮಾಡಿದ ಟಿಕೆಟ್‌ಗಳ ಮರುಪಾವತಿಯ ಜವಾಬ್ದಾರಿ ನೇರವಾಗಿ ವಿಮಾನಯಾನ ಸಂಸ್ಥೆಗಳ ಮೇಲಿರುತ್ತದೆ. ಇದು ಹೊಣೆಗಾರಿಕೆ ಮತ್ತು ವೇಗದ ಪರಿಹಾರ ನೀಡುವುದನ್ನು ಖಚಿತಪಡಿಸುತ್ತದೆ. ವೈದ್ಯಕೀಯ ತುರ್ತು ಪರಿಸ್ಥಿತಿಗಳಿದ್ದರೆ ಪ್ರಯಾಣಿಕರು ಒಪ್ಪಿಕೊಂಡರೆ ಮಾತ್ರ ವಿಮಾನಯಾನ ಸಂಸ್ಥೆಗಳು ಕ್ರೆಡಿಟ್ ಶೆಲ್ ಅನ್ನು ನೀಡಬಹುದು.

ವಿದ್ಯಾ ಇರ್ವತ್ತೂರು

View all posts by this author