Viral Video: ನಾಯಿಮರಿಯನ್ನು ನೆಲಕ್ಕೆ ಬಡಿದು ಕೊಲೆ ಪ್ರಕರಣ; ಕೃತ್ಯ ಎಸಗಿದ ಪಾಪಿ ಮಹಿಳೆಯ ಬಂಧನ
Viral Video: ಬೆಂಗಳೂರು ನಗರದ ಬಾಗಲೂರು ಅಪಾರ್ಟ್ ಮೆಂಟ್ ನ ಲಿಫ್ಟ್‌ನಲ್ಲಿ ಸಾಕು ನಾಯಿಮರಿ ಯನ್ನು ನೆಲಕ್ಕೆ ಬಡಿದು ಬರ್ಬರವಾಗಿ ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಮನೆ ಕೆಲಸದಾಕೆ ಯೊಬ್ಬಳು ನಾಯಿ ಮರಿಯನ್ನು ಲಿಫ್ಟ್ ಒಳಗೆ ನೆಲಕ್ಕೆ ಬಡಿದು ಕ್ರೂರವಾಗಿ ಕೊಂದಿದ್ದಾಳೆ.. ಸದ್ಯ ಈ ಪ್ರಾಣಿ ಹಿಂಸೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕೆಲಸದಾಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪುಷ್ಪಲತಾ ಎನ್ನುವ ಮನೆಕೆಲಸದಾಕೆ ಈ ಕೃತ್ಯ ಎಸಗಿದ್ದು ಪ್ರಾಣಿ ಪ್ರಿಯರು ಈಕೆಯ ನಡೆಗೆ ಆಕ್ರೋಶ ವ್ಯಕ್ತ ಪಡಿಸಿ ದ್ದಾರೆ. ಶ್ವಾನದ ಮಾಲೀಕರ ದೂರಿನ ಆಧಾರದ ಮೇರೆಗೆ ಪೊಲೀಸರಿಗೆ ಪುಷ್ಪಲತಾನೇ ನಾಯಿಯನ್ನು ಕೊಲೆ ಮಾಡಿದ್ದಾಳೆ ಅನ್ನೋದು ಸತ್ಯ ತಿಳಿದಿದೆ..
ಲಿಫ್ಟ್‌ನಲ್ಲಿ ನಾಯಿಯನ್ನು ಎಳೆದೊಯ್ಯುತ್ತಿರುವ ಪುಷ್ಪಲತಾ -
ಬೆಂಗಳೂರು: ಇತ್ತೀಚೆಗೆ ಪ್ರಾಣಿ ಹಿಂಸೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾಕು ಪ್ರಾಣಿಗಳನ್ನು ಬೈಕ್ ಗೆ ಕಟ್ಟಿ ರಸ್ತೆಯಲ್ಲಿ ಎಳೆದೊಯ್ದಿರುವ ದೃಶ್ಯ, ಹೊಡೆದು ಹಿಂಸೆ ನೀಡುವ ಅಮಾನವೀಯ ದೃಶ್ಯಗಳು ವೈರಲ್ ಆಗುತ್ತವೆ. ಅಂತೆಯೇ ಬೆಂಗಳೂರು (Bengaluru) ನಗರದ ಬಾಗಲೂರು ಅಪಾರ್ಟ್ ಮೆಂಟ್ ನ ಲಿಫ್ಟ್‌ನಲ್ಲಿ ಸಾಕು ನಾಯಿಮರಿಯನ್ನು ನೆಲಕ್ಕೆ ಬಡಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಯೊಂದು ನಡೆದಿದೆ. ಮನೆ ಕೆಲಸದಾಕೆಯೊಬ್ಬಳು ನಾಯಿ ಮರಿಯನ್ನು ಲಿಫ್ಟ್ ಒಳಗೆ ನೆಲಕ್ಕೆ ಬಡಿದು ಕ್ರೂರವಾಗಿ ಕೊಂದಿದ್ದಾಳೆ.. ಸದ್ಯ ಈ ಪ್ರಾಣಿ ಹಿಂಸೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಯಾಗಿದ್ದು ಕೆಲಸದಾಕೆಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಪುಷ್ಪಲತಾ ಎನ್ನುವ ಮನೆಕೆಲಸದಾಕೆ ಈ ಕೃತ್ಯ ಎಸಗಿದ್ದು ಪ್ರಾಣಿ ಪ್ರಿಯರು ಈಕೆಯ ನಡೆಗೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಶ್ವಾನದ ಮಾಲೀಕರ ದೂರಿನ ಆಧಾರದ ಮೇರೆಗೆ ಪೊಲೀಸರಿಗೆ ಪುಷ್ಪ ಲತಾನೇ ನಾಯಿಯನ್ನು ಕೊಲೆ ಮಾಡಿದ್ದಾಳೆ ಅನ್ನೋದು ಸತ್ಯ ತಿಳಿದಿದೆ. ಕೆಲಸದಾಕೆ ಪುಷ್ಪಲತಾ ಮಾಲೀಕರ ಮನೆಯಲ್ಲಿ ನಾಯಿಮರಿಯ ಆರೈಕೆಗಾಗಿಯೇ ನೇಮಕವಾಗಿದ್ದಳು. ಇದಕ್ಕಾಗಿ ಪುಷ್ಪ ಲತಾಳಿಗೆ ಮಾಸಿಕ 23 ಸಾವಿರ ರೂ. ಸಂಬಳವನ್ನೂ ನೀಡುತ್ತಿದ್ದರು. ಆದರೆ ಈಕೆಯೇ ಲಿಫ್ಟ್‌ನಲ್ಲಿ ನಾಯಿಯನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಾಳೆ
ವೈರಲ್ ವಿಡಿಯೊ ಇಲ್ಲಿದೆ:
A domestic help allegedly threw & killed a pet dog ‘Goofy’ inside a lift, like washing clothes, as seen in CCTV footage in an apartment lift in #Bengaluru. FIR under BNS Sec 325 of #AnimalCruelty. Accused Pushpalatha absconding after complaint by owner Rashi Poojari pic.twitter.com/HHJLLN54hS
— Sagay Raj P || ಸಗಾಯ್ ರಾಜ್ ಪಿ (@sagayrajp) November 3, 2025
ರಾಶಿಕಾ ಎಂಬವರು ಮಾನೆಯ ಮಾಲೀಕರಾಗಿದ್ದು ‘ಗೂಸಿ’ ಹೆಸರಿನ ನಾಯಿಯನ್ನು ನೋಡಿ ಕೊಳ್ಳಲು ಪುಷ್ಪಲತಾಳನ್ನು ಮನೆ ಕೆಲಸದಾಕೆಯಾಗಿ ನೇಮಿಸಿಕೊಂಡಿದ್ದರು. ಆದರೆ ಅಕ್ಟೋಬರ್ 31 ರಂದು, ಪುಷ್ಪಲತಾಳು ತನ್ನ ಕೋಪ ನಿಯಂತ್ರಿಸಲಾಗದೇ, ಲಿಫ್ಟ್‌ನೊಳಗೆ ನಾಯಿಮರಿಯನ್ನು ನೆಲಕ್ಕೆ ಬಡಿದು ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾಳೆ. ಈ ಕೃತ್ಯದ ನಂತರ ನಾಯಿ ಸತ್ತು ಹೋಗಿದೆ ಎಂದು ಸುಳ್ಳು ಕಥೆ ಹೇಳಿದ್ದಾಳೆ. ನಾಯಿಮರಿ ಕೊಲೆಯಾದ ನಂತರ, ಮಾಲಕರ ಮನೆಯಿಂದ ಚಿನ್ನಾಭರಣಗಳು ಮತ್ತು ಬೆಲೆಬಾಳಿಕೆ ವರುವ ವಸ್ತುಗಳು ಕಾಣೆಯಾಗಿದ್ದು ಈ ಬಗ್ಗೆ ರಾಶಿ ಅವರು ಪ್ರತ್ಯೇಕ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಕಳುವಾದ ವಸ್ತುಗಳು ಆರೋಪಿಯ ಬಳಿಯೇ ಪತ್ತೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:Viral Video: ಛೀ.. ಈತನೆಂಥಾ ನೀಚ! ಎಂಜಲು ಉಗುಳಿ ರೊಟ್ಟಿ ಮಾಡಿದ ಕಿಡಿಗೇಡಿ- ವಿಡಿಯೊ ಫುಲ್ ವೈರಲ್
ಈ ಸಂಪೂರ್ಣ ಅಮಾನವೀಯ ಕೃತ್ಯವು ಲಿಫ್ಟ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು ಈ ದೃಶ್ಯ ನೋಡಿದ ನಂತರ ಮಾಲಕಿ ರಾಶಿ ಅವರು ದೂರು ನೀಡಿದ್ದಾರೆ. ಬಾಗಲೂರು ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿ ಪುಷ್ಪಲತಾಳನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯ ವಿರುದ್ಧ ಎರಡು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ನಾಯಿ ಮರಿಯನ್ನು ಕೊಂದಿದ್ದಕ್ಕಾಗಿ ಪ್ರಾಣಿ ಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, 1960 ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 325 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.