ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೇ ಬೆಳ್ಳುಳ್ಳಿ ಬೆಲೆ ಏರಿಕೆ

ಈಗ ಸದ್ಯ ಈರುಳ್ಳಿ ಟೊಮೆಟೊಗಿಂತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬಹುಬೇಡಿಕೆ ವಸ್ತುವಾಗಿದೆ. ಪ್ರತಿಯೊಬ್ಬರೂ ಬೆಳ್ಳುಳ್ಳಿ ಬೆಲೆ ಕೇಳಿ ಹೇಗೆ ಖರೀದಿ ಮಾಡುವುದು? ಎಂಬ ಜಿಜ್ಞಾಸೆಯಲ್ಲಿದ್ದಾರೆ. ದರ ಹೆಚ್ಚಾಗುತ್ತಿರುವುದರಿಂದ ಬೆಳ್ಳುಳ್ಳಿ ಬಳಕೆ ಕಡಿಮೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲಿ ಜನಸಾಮಾನ್ಯರು ಬೆಳ್ಳುಳ್ಳಿ ಬಳಸುವುದನ್ನು ಮರೆತು ಬಿಡುವಂತಾಗಿದೆ.

ಹೂವಪ್ಪ ಐ.ಎಚ್. ಬೆಂಗಳೂರು

ಬೆಳ್ಳುಳ್ಳಿ ಆವಕ ಅರ್ಧದಷ್ಟು ಕುಸಿತ

ಕೆಲವೇ ದಿನಗಳಲ್ಲಿ ದುಪ್ಪಟ್ಟಾದ ಬೆಳ್ಳುಳ್ಳಿ ಬೆಲೆ

ಕೆಜಿಗೆ ಚಿಲ್ಲರೆ ದರ 120ರಿಂದ 240 ರುಪಾಯಿಗೆ ಏರಿಕೆ

ಆಹಾರ ತಯಾರಿಕೆಯಲ್ಲಿ ನಿತ್ಯ ಬಳಕೆ ಆಗುವ ಬೆಳ್ಳುಳ್ಳಿ ಬೆಲೆ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಪೂರೈಕೆ ಕೊರತೆ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ಹಿಂದಿನ ಬೆಲೆಗೆ ಹೋಲಿಸಿದರೆ ಬೆಳ್ಳುಳ್ಳಿ ಬೆಲೆ ದುಪ್ಪಟ್ಟಾಗಿದೆ. ಬೆಂಗಳೂರು ಎಪಿಎಂಸಿಗೆ ನಿತ್ಯ ಅಂದಾಜು 5-6 ಸಾವಿರ ಕ್ವಿಂಟಲ್ ಪೂರೈಕೆಯಾಗುತ್ತಿದ್ದ ಬೆಳ್ಳುಳ್ಳಿ 2500-2600 ಕ್ವಿಂಟಲ್ ಪೂರೈಕೆಯಾಗುತ್ತಿದೆ. ಅಂದರೆ ಅರ್ಧಕ್ಕರ್ಧ ಕಡಿಮೆಯಾಗಿದೆ. ಈ ಹಿಂದೆ ಸಗಟು ದರ ಫುಲ್ ದಪ್ಪ ಕ್ವಿಂಟಲ್‌ಗೆ 9000 ಇದ್ದದ್ದು, 18000 ರು. ಆಗಿದೆ. ಸಾಧಾರಣ ದಪ್ಪ 8000 ರು.ಗೆ ಇದ್ದ ಬೆಲೆ 16000 ರು. ಆಗಿದೆ. ಮಧ್ಯಮ ದರ್ಜೆ 4500 ರು. ಇದ್ದ ಬೆಲೆ ಇದೀಗ 9000 ರು.ಗೆ ಏರಿಕೆಯಾಗಿದೆ.

ಕಳೆದ ವಾರದ ಹಿಂದೆ ದರ ಕಡಿಮೆ ಇತ್ತು. ಚಿಲ್ಲರೆ ಅಂಗಡಿ ಕೈ ಗಾಡಿ ಬೀದಿಬದಿ ಕೆಜಿಗೆ ೧೩೦-೧೪೦ ರು.ಗೆ ಮಾರಾಟ ಆಗುತ್ತಿದ್ದ ಬೆಲೆ ಇದೀಗ 200-220 ರು.ಗೆ ಮಾರಾಟವಾಗುತ್ತಿದೆ. ಗ್ರಾಹಕರು ಈ ದರ ಕೇಳಿ ಶಾಕ್ ಆಗುವಂತಾಗಿದೆ. ಈ ವರ್ಷ ಬೆಳೆ ಕಡಿಮೆ ಇದೆ, ಹೊಸ ಬೆಳೆ ಬರಲು ಇನ್ನೂ ಒಂದೂವರೆ ತಿಂಗಳು ತಡವಿರುದರಿಂದ ಮಧ್ಯಪ್ರದೇಶ ವರ್ತಕರು ದಾಸ್ತಾನು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೇಡಿಕೆಯಾಗಿದೆ ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ಮಂಡಿ ಬೆಳ್ಳುಳ್ಳಿ ವ್ಯಾಪಾರಿ ಸಂಜಯ್ ಸೋನಾ.

ಈಗ ಸದ್ಯ ಈರುಳ್ಳಿ ಟೊಮೆಟೊಗಿಂತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬಹುಬೇಡಿಕೆ ವಸ್ತುವಾಗಿದೆ. ಪ್ರತಿಯೊಬ್ಬರೂ ಬೆಳ್ಳುಳ್ಳಿ ಬೆಲೆ ಕೇಳಿ ಹೇಗೆ ಖರೀದಿ ಮಾಡುವುದು? ಎಂಬ ಜಿಜ್ಞಾಸೆಯಲ್ಲಿದ್ದಾರೆ. ದರ ಹೆಚ್ಚಾಗುತ್ತಿರುವುದರಿಂದ ಬೆಳ್ಳುಳ್ಳಿ ಬಳಕೆ ಕಡಿಮೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲಿ ಜನಸಾಮಾನ್ಯರು ಬೆಳ್ಳುಳ್ಳಿ ಬಳಸುವುದನ್ನು ಮರೆತು ಬಿಡುವಂತಾಗಿದೆ.

ಬದುಕಿಗೆ ಹೊರೆ: ಟೊಮೆಟೊ ದರ 50 ರು. ದಾಟಿದಾಗ ತೆಂಗಿನಕಾಯಿ ಕೆಜಿಗೆ ೮೦ ರು., ನುಗ್ಗೆಕಾಯಿ ಕೆಜಿಗೆ 600 ರು., ಬಟಾಣಿಕಾಯಿ 300 ರು. ಆಗಿzಗ ಗಾಬರಿಯಾಗಿದ್ದ ಜನ ಈಗ ಬೆಳ್ಳುಳ್ಳಿ ಬೆಲೆ ಕೇಳಿ ಹುಬ್ಬೆರಿಸುವಂತಾಗಿದೆ. ಖಾದ್ಯ ತಯಾರಿಸುವವರ ಬಜೆಟ್ ಅಂತೂ ಬಿಗಡಾಯಿಸಿದಂತಾಗಿದೆ. ಇತ್ತಿಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗುತ್ತಿದ್ದು, ಜನಸಾಮಾನ್ಯರ ಬದುಕಿಗೆ ಹೊರೆಯಾಗುತ್ತಿದೆ. ಮಧ್ಯಮ ಹಾಗೂ ಕೆಳವರ್ಗದ ಮನೆಗಳ ಬಜೆಟ್ ಏರುಪೇರಾಗುತ್ತಿದೆ.

ಇಷ್ಟೇ ಅಲ್ಲ, ನಿತ್ಯ ಹೋಟೆಲ್, ರೆಸ್ಟೊರೆಂಟ್, ದಾಬಾ, ಖಾನಾವಳಿಗಳಲ್ಲಿ ಬೆಳ್ಳುಳ್ಳಿ ಟೊಮೆಟೊ ಬಳಕೆ ಅಧಿಕವಾಗಿರುತ್ತಿತ್ತು. ಆದರೀಗ ಮಾಲೀಕರು ಚಡಪಡಿಸುವಂತಾಗಿದೆ. ಬೆಳ್ಳುಳ್ಳಿ ಇಲ್ಲದೆ ಅಡುಗೆ ಮಾಡಲು ಸಾಧ್ಯವಿಲ್ಲದಂತಾಗಿದ್ದು, ಬೆಳ್ಳುಳ್ಳಿ ಖರೀದಿ ಮಾಡುವುದು ತಲೆ ನೋವಾಗಿದೆ.

ಹೆಚ್ಚಳ ಏಕೆ ?

ಮುಖ್ಯವಾಗಿ ಬೆಳ್ಳುಳ್ಳಿ ಮಧ್ಯಪ್ರದೇಶದಿಂದ ಗುಜರಾತ್, ರಾಜಸ್ಥಾನ್ʼಗಳಿಂದ ಆಮದು ಮಾಡಿಕೊಳ್ಳ ಲಾಗುತ್ತದೆ. ಮಸಾಲಾ ಕಂಪನಿಯವರಿಗೆ ಬೇಡಿಕೆ ಇರುವುದರಿಂದ ರಾಜಸ್ಥಾನ ಹಳೇ ಬೆಳ್ಳುಳ್ಳಿ ಜನವರಿಯವರಿಗೂ ಮಾರುಕಟ್ಟೆಗೆ ಬಿಡುವುವುದಿಲ್ಲ. ಕೆಲವು ದಿನಗಳಿಂದ ಅಲ್ಲಿ ಹವಾಮಾನ ವೈಪರೀತ್ಯದಿಂದ ಬೆಳ್ಳುಳ್ಳಿ ಬೆಳೆ ಸ್ವಲ್ಪ ಹಾಳಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25ರಷ್ಟು ಬೆಳೆ ಕಡಿಮೆ ಇದೆ. ಜತೆಗೆ ಹಳೇ ಬೆಳ್ಳುಳ್ಳಿ ಶೇ.15ರಷ್ಟು ಮಾತ್ರ ಇದೆ. ಹೊಸ ಬೆಳ್ಳುಳ್ಳಿ ಫೆಬ್ರವರಿಗೆ ಬರುತ್ತದೆ.

ಅಲ್ಲಿಯವರಿಗೂ ಬೆಳ್ಳುಳ್ಳಿ ಬೇಕಾಗಿದೆ. ಇದು ಅಭಾವ ಸೃಷ್ಟಿಯಾಗಿದೆ. ಇದರ ಪರಿಣಾಮ ಮಧ್ಯ ಪ್ರದೇಶದಿಂದ ಬರುವ ಬೆಳ್ಳುಳ್ಳಿ ಆವಕದಲ್ಲಿ ಕಡಿಮೆಯಾಗಿದೆ. ಹೀಗಾಗಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಬೆಂಗಳೂರು ಎಪಿಎಂಸಿ ಸಗಟು ವ್ಯಾಪಾರಿಗಳು. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ದುಪ್ಪಟ್ಟಾಗಿದೆ. ಗ್ರಾಹಕರು, ಸಗಟು ವ್ಯಾಪಾರಸ್ಥರ ಮಧ್ಯೆ ನಿತ್ಯ ಖರೀದಿಸಿ ಮಾರಾಟ ಮಾಡುವ ನಮ್ಮಂತಹ ಚಿಲ್ಲರೆ ಮಾರಾಟಗಾರರಿಗೂ ಬೆಲೆ ಏರಿಕೆ ಹೈರಾಣಾಗಿಸಿದೆ. ಬೆಳ್ಳುಳ್ಳಿ ಬೆಲೆ ದುಪ್ಪಟ್ಟಾಗು ವುದರಿಂದ ಗ್ರಾಹಕರು ಕೆಜಿ ಬದಲಿಗೆ ಅರ್ಧ ಕೆಜಿ, ಕಾಲು ಕೆಜಿ ಖರೀದಿಸುತ್ತಾರೆ. ಹೀಗಾಗಿ ವ್ಯಾಪಾರ ಕಡಿಮೆಯಾಗಿದೆ. ಬೆಲೆ ಕಡಿಮೆಯಾದರೆ ನಮಗೂ, ಗ್ರಾಹಕರಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆ ಚಿಲ್ಲರೆ ಬೆಳ್ಳುಳ್ಳಿ ವ್ಯಾಪಾರಿ ವಿಜಯಕುಮಾರ್.

*

ಹಳೇ ಬೆಳ್ಳುಳ್ಳಿ ಶೇ.೧೫ ರಷ್ಟು ಮಾತ್ರ ಇದೆ. ಹೀಗಾಗಿ ಮಾರುಕಟ್ಟೆಗೆ ಆವಕ ಅರ್ಧದಷ್ಟು ಕಡಿಮೆ ಆಗಿದೆ. ಈ ವರ್ಷ ಹೊಸ ಬೆಳ್ಳುಳ್ಳಿ ಬರಲು ಒಂದೂವರೆ ತಿಂಗಳು ತಡವಿದೆ. ಬೆಳ್ಳುಳ್ಳಿ ಬೆಲೆ ಏರಿಕೆಗೆ ಇದು ಪ್ರಮುಖ ಕಾರಣವಾಗಿದೆ.

- ಶಿವಸ್ವಾಮಿ ಎಪಿಎಂಸಿ ಬೆಳ್ಳುಳ್ಳಿ ವ್ಯಾಪಾರಿ

ಬೆಳ್ಳುಳ್ಳಿ ಕಳೆದ ವರ್ಷ ಕೆಜಿಗೆ ೫೦೦-೬೦೦ ರು.ವಗೆಗೂ ಏರಿಕೆಯಾಗಿತ್ತು. ಈ ವರ್ಷ ಕೆಜಿಗೆ ೧೩೦-೧೪೦ ರು. ಸಿಗುತ್ತಿದೆ ಎಂದು ಖುಷಿಯಾಗಿzವು. ಆದರೆ ಈಗ ಕಿಲೋ ಬೆಳ್ಳುಳ್ಳಿಗೆ ೨೪೦ ರು. ಕೊಡಬೇಕಾಗಿದೆ. ತುಂಬಾ ಬೇಸರವಾಗುತ್ತಿದೆ.

- ಸುನಂದಾ ಸೊನಳ್ಳಿ ಗೃಹಿಣಿ, ಬೆಂಗಳೂರು