ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: GDP ಬೂಸ್ಟ್‌; ಸೆನ್ಸೆಕ್ಸ್‌ 567 ಅಂಕ ಜಿಗಿತ

ಸ್ಟಾಕ್‌ ಮಾರ್ಕೆಟ್‌ನಲ್ಲಿ ಇವತ್ತು ಸೆನ್ಸೆಕ್ಸ್‌ 567 ಅಂಕ ಏರಿಕೆಯಾಗಿ 80,377 ಅಂಕಗಳ ಗಡಿ ದಾಟಿತು. ನಿಫ್ಟಿ 197 ಅಂಕ ಏರಿಕೆಯಾಗಿ 24,624 ಕ್ಕೆ ವೃದ್ಧಿಸಿತು. ಮಹೀಂದ್ರಾ & ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ ಷೇರು ದರದಲ್ಲಿ ತಲಾ 3% ಏರಿಕೆ ದಾಖಲಾಯಿತು.

GDP ಬೂಸ್ಟ್‌; ಸೆನ್ಸೆಕ್ಸ್‌ 567 ಅಂಕ ಜಿಗಿತ

-

Vishakha Bhat Vishakha Bhat Sep 1, 2025 4:43 PM

ಕೇಶವಪ್ರಸಾದ.ಬಿ

ಸ್ಟಾಕ್‌ ಮಾರ್ಕೆಟ್‌ನಲ್ಲಿ (Stock Market) ಇವತ್ತು ಸೆನ್ಸೆಕ್ಸ್‌ 567 ಅಂಕ ಏರಿಕೆಯಾಗಿ 80,377 ಅಂಕಗಳ ಗಡಿ ದಾಟಿತು. ನಿಫ್ಟಿ 197 ಅಂಕ ಏರಿಕೆಯಾಗಿ 24,624 ಕ್ಕೆ ವೃದ್ಧಿಸಿತು. ಮಹೀಂದ್ರಾ & ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್‌ ಷೇರು ದರದಲ್ಲಿ ತಲಾ 3% ಏರಿಕೆ ದಾಖಲಾಯಿತು. ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿ ಜಿಡಿಪಿ ಬೆಳವಣಿಗೆ ದಾಖಲಿಸಿರುವುದು ಮತ್ತು ಟ್ರಂಪ್‌ ಟಾರಿಫ್‌ಗಳು ಕಾನೂನು ಬಾಹಿರ ಎಂದು ಅಮೆರಿಕದ ಕೋರ್ಟ್‌ ಹೇಳಿರುವುದು ಸ್ಟಾಕ ಮಾರ್ಕೆಟ್‌ ಮೇಲೆ ಪ್ರಭಾವ ಬೀರಿದೆ.

ಇವತ್ತು ಆಟೊಮೊಬೈಲ್‌, ಐಟಿ ಮತ್ತು ಕನ್‌ಸ್ಯೂಮರ್‌ ಡ್ಯೂರಬಲ್ಸ್‌ ಸೆಕ್ಟರ್‌ ಷೇರುಗಳು ಲಾಭ ಗಳಿಸಿತು. ಎನರ್ಜಿ ಮತ್ತು ಮೆಟಲ್‌ ಸ್ಟಾಕ್ಸ್‌ ಕೂಡ ಲಾಭ ಗಳಿಸಿತು. FMCG , ಫಾರ್ಮಾ, ಮೀಡಿಯಾ ಸೆಕ್ಟರ್‌ ಷೇರುಗಳು ಸ್ವಲ್ಪ ಇಳಿಕೆ ದಾಖಲಿಸಿತು. ಅದಾನಿ ಪವರ್‌ ಷೇರು ದರದಲ್ಲಿ ಮಧ್ಯಂತರದಲ್ಲಿ 2% ಏರಿಕೆ ದಾಖಲಾಯಿತು. 615/- ಕ್ಕೆ ಷೇರು ದರ ಏರಿಕೆ ಆಯಿತು. ಅದಾನಿ ಪವರ್‌ ಕಂಪನಿಯು ಮಧ್ಯಪ್ರದೇಶದಲ್ಲಿ 800 ಮೆಗಾವ್ಯಾಟ್‌ ಥರ್ಮಲ್‌ ಪವರ್‌ ಪ್ರಾಜೆಕ್ಟ್‌ ಸಲುವಾಗಿ 10,500 ಕೋಟಿ ರುಪಾಯಿ ಹೂಡಿಕೆ ಮಾಡುತ್ತಿರುವುದು ಇದಕ್ಕೆ ಕಾರಣ.

ರಿಲಯನ್ಸ್‌ ಷೇರಿಗೆ ಸಂಬಂಧಿಸಿ ಮೋರ್ಗಾನ್‌ ಸ್ಟ್ಯಾನ್ಲಿಯು 1,733/-ಕ್ಕೆ ದರದ ಗುರಿಯನ್ನು ನಿಗದಿಪಡಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್ ಎಜಿಎಂ ಆದ ಬಳಿಕ ದರದಲ್ಲಿ ಸ್ವಲ್ಪ ಇಳಿಕೆ ಆಗಿದ್ದರೂ, ಬ್ರೋಕರೇಜ್‌ ಸಂಸ್ಥೆಗಳು ವಿಶ್ವಾಸವನ್ನು ವ್ಯಕ್ತಪಡಿಸಿವೆ. ಜಿಯೊ ಐಪಿಒ ಟೆಲಿಕಾಂ ಷೇರುಗಳ ವಲಯದಲ್ಲಿಯೇ ಸಂಚಲನ ಮೂಡಿಸಲಿವೆ. ಇದು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುದಾರರಿಗೂ ಲಾಭದಾಯಕವಾಗಬಹುದು ಎಂದು ಬ್ರೋಕರೇಜ್‌ ಸಂಸ್ಥೆಗಳು ತಿಳಿಸಿವೆ.

ಓಲಾ ಎಲೆಕ್ಟ್ರಿಕ್‌ ಷೇರುಗಳ ದರದಲ್ಲಿ ಕಳೆದ 5 ದಿನಗಳಲ್ಲಿ 30% ಏರಿಕೆಯಾಗಿದೆ. ಬಿಎಸ್‌ಇನಲ್ಲಿ ಷೇರಿನ ದರ 61/- ಕ್ಕೆ ಏರಿಕೆಯಾಗಿತ್ತು. ಓಲಾ ಎಲೆಕ್ಟ್ರಿಕ್‌ನ ಜನರೇಷನ್‌ 3 ಸ್ಕೂಟರ್‌ ಉತ್ಪಾದನೆಗೆ ಪಿಎಲ್‌ಐ ಸರ್ಟಿಫಿಕೇಶನ್‌ ಸಿಕ್ಕಿದ ನಂತರ ಷೇರು ದರದಲ್ಲಿ ಏರಿಕೆ ಆಗಿದೆ. ಪಿಎಲ್‌ಐ ಸರ್ಟಿಫಿಕೇಶನ್‌ ಸಿಕ್ಕಿರುವುದರಿಂದ ಕಂಪನಿಯು ಲಾಭದ ಹಳಿಗೆ ಮರಳುವ ನಿರೀಕ್ಷೆ ಇದೆ ಎಂದು ಮ್ಯಾನೇಜ್‌ಮೆಂಟ್‌ ಹೇಳಿರುವುದು ಗಮನಾರ್ಹ.

CMS Info Systems ಅಂಚೆ ಇಲಾಖೆಯ ಪೇಮೆಂಟ್ಸ್‌ ಬ್ಯಾಂಕ್‌ನಿಂದ 1,000 ಎಟಿಎಂ ಸ್ಥಾಪನೆ ಸಂಬಂಧ ಗುತ್ತಿಗೆಯನ್ನು ಪಡೆದಿದೆ. ಇದಾದ ಬಳಿಕ ಕಂಪನಿಯ ಷೇರಿನ ದರದಲ್ಲಿ 3% ಏರಿಕೆ ಆಗಿದೆ. ಷೇರಿನ ದರ 421 ರುಪಾಯಿಯಷ್ಟಿತ್ತು.

ಈ ಸುದ್ದಿಯನ್ನೂ ಓದಿ: Stock Market: ಟಾಟಾ ಸ್ಟಾಕ್‌ ವಿಭಜನೆ, 1ಕ್ಕೆ ಸಿಗಲಿದೆ 10 ಸ್ಟಾಕ್ಸ್; ಸೆನ್ಸೆಕ್ಸ್‌ 418 ಅಂಕ ಜಿಗಿತ

ಮೋರ್ಗಾನ್‌ ಸ್ಟಾನ್ಲಿ ಸಂಸ್ಥೆಯ ವರದಿ ಪ್ರಕಾರ ಸೆನ್ಸೆಕ್ಸ್‌ 2026ರ ಜೂನ್‌ ವೇಳೆಗೆ 1 ಲಕ್ಷ ಅಂಕಗಳ ಗಡಿ ದಾಟುವ ನಿರೀಕ್ಷೆ ಇದೆ. ಭಾರತದ ಆರ್ಥಿಕ ಪ್ರಗತಿಯು ಜನಸಂಖ್ಯೆ, ಮೂಲಸೌಕರ್ಯ, ಆರ್ಥಿಕ ಸ್ಥಿರತೆ ಮತ್ತು ಉದ್ಯಮಶೀಲತೆಯ ಪರಿಣಾಮ ನಡೆಯುತ್ತಿದೆ. ಕಚ್ಚಾ ತೈಲ ದರ ಮಂದಗತಿಯಲ್ಲಿರುವುದು, ಜಿಎಸ್‌ ಟಿ ಸುಧಾರಣಾ ಕ್ರಮಗಳು ಆರ್ಥಿಕತೆಯ ಪ್ರಗತಿಗೆ ಸಹಕಾರಿಯಾಗಿದೆ.