ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Glance AI: ʻಡೀಪ್ ಕಾಮರ್ಸ್ ಇಂಟೆಲಿಜೆನ್ಸ್ʼ ಮತ್ತು ʻಹೈಪರ್-ರಿಯಲ್ ವಿಶುವಲ್ ಶಾಪಿಂಗ್ʼ ಮೇಲೆ ನಿರ್ಮಿಸಲಾದ ʻಎಐ-ನೇಟಿವ್ ಕಾಮರ್ಸ್ʼ ವೇದಿಕೆ ಪ್ರಾರಂಭಿಸಿದ ʻಗ್ಲಾನ್ಸ್ ಎಐ’

ಗೂಗಲ್ ಬೆಂಬಲಿತ ಪ್ರಮುಖ ಗ್ರಾಹಕ ತಂತ್ರಜ್ಞಾನ ಕಂಪನಿಯಾದ ʻಗ್ಲಾನ್ಸ್ʼ, ತನ್ನ ಅತ್ಯಾಧುನಿಕ ಸ್ವಾಮ್ಯ ʻಎಐʼ ಮಾದರಿಗಳಿಂದ ಚಾಲಿತವಾದ ಎಐ-ಸ್ಥಳೀಯ ವಾಣಿಜ್ಯ ವೇದಿಕೆಯಾದ ʻಗ್ಲಾನ್ಸ್ ಎಐ ʼ ಅನ್ನು ಅನಾವರಣಗೊಳಿಸಿದೆ. ಇದು ಜಾಗತಿಕ ವಾಣಿಜ್ಯ ಮತ್ತು ʻಎಐʼ ನಾವೀನ್ಯತೆಗೆ ಒಂದು ಪ್ರಮುಖ ಮೈಲುಗಲ್ಲಾಗಿದೆ. ಜನರು ಶಾಪಿಂಗ್ ಮಾಡುವ ವಿಧಾನದಲ್ಲಿ ಕ್ರಾಂತಿ ತರಲು ಹಾಗೂ ನಿರ್ಧಾರಗಳು ಮತ್ತು ಆರ್ಥಿಕತೆಗಳನ್ನು ಬುದ್ಧಿಮತ್ತೆಯು ಹೇಗೆ ಪ್ರೇರೇಪಿಸುತ್ತದೆ ಎಂಬುದನ್ನು ಮರುರೂಪಿಸಲು ನಿರ್ಮಿಸಲಾದ ʻಗ್ಲಾನ್ಸ್ ಎಐʼ ತಂತ್ರಾಂಶವು ಆನ್ಲೈನ್ ಶಾಪಿಂಗ್ ಅನ್ನು ಹುಡುಕಾಟವನ್ನು ಮೀರಿ ದಂತಹ ಸ್ಫೂರ್ತಿ-ಆಧರಿತ ಆವಿಷ್ಕಾರ ಅನುಭವದ ಮಟ್ಟಕ್ಕೆ ಕೊಂಡೊಯ್ಯಲಿದೆ.

ʻಎಐ-ನೇಟಿವ್ ಕಾಮರ್ಸ್ʼ ವೇದಿಕೆ ಪ್ರಾರಂಭಿಸಿದ ʻಗ್ಲಾನ್ಸ್ ಎಐ’

Profile Ashok Nayak May 23, 2025 11:44 AM

ಪ್ರೆಡಿಕ್ಟಿವ್ ಇಂಟೆಲಿಜೆನ್ಸ್, ನ್ಯೂರಲ್ ವಿಶುವಲೈಸೇಶನ್ ಮತ್ತು ರಿಯಲ್-ಟೈಮ್ ಆರ್ಕೆಸ್ಟ್ರೇಶನ್ ಅನ್ನು ಸಂಯೋಜಿಸುವ ವಿಶಿಷ್ಟ ಎಐ ಆರ್ಕಿಟೆಕ್ಚರ್ ಮೂಲಕ ಕೃತಕ ಬುದ್ಧಿಮತ್ತೆ ಆಧರಿತ ವ್ಯಾಪಾರವನ್ನು ಮರುಕಲ್ಪಿಸಲಿರುವ ʻಗ್ಲಾನ್ಸ್ ಎಐʼ

ಪ್ರಮುಖ ಮುಖ್ಯಾಂಶಗಳು

  • ಜೆನ್ ಎಐ ಚಾಲಿತ ಡಿಸ್ಕವರಿ: ʻಗ್ಲಾನ್ಸ್ ಎಐʼ ಉತ್ಪನ್ನಗಳ ಹುಡುಕಾಟವನ್ನು ಕ್ರಾಂತಿಕಾರಿಯಾಗಿ ಬದಲಾಯಿಸುತ್ತದೆ, ಬಳಕೆದಾರರು ಸೆಲ್ಫಿ ಅಥವಾ ಚಿತ್ರವನ್ನು ಅಪ್ಲೋಡ್ ಮಾಡುವ ಮೂಲಕ ʻಎಐ-ಕ್ಯುರೇಟೆಡ್ʼ ನೋಟವನ್ನು ತಕ್ಷಣವೇ ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ.
  • ಹೈಪರ್ ರಿಯಲಿಸ್ಟಿಕ್ ದೃಶ್ಯೀಕರಣ: ಸುಧಾರಿತ ಪ್ರಸರಣ ಮತ್ತು ರೇಖಾಗಣಿತ ಆಧರಿತ ಮಾಡೆಲಿಂಗ್ ಅನ್ನು ಬಳಸಿಕೊಂಡು, ʻಗ್ಲಾನ್ಸ್ ಎಐʼ ಪ್ರತಿ ಬಳಕೆದಾರರ ದೇಹ, ಶೈಲಿ, ಚರ್ಮ ಮುಂತಾದವುಗಳಿಗೆ ಅನುಗುಣವಾಗಿ ನೈಜದಂತೆ ಕಾಣುವ ರೆಂಡರಿಂಗ್ಗಳನ್ನು ನೀಡುತ್ತದೆ.
  • ಪ್ರೆಡಿಕ್ಟಿವ್ ಕಾಂಟೆಕ್ಟ್ ಅವೇರ್ ಇಂಟೆಲಿಜೆನ್ಸ್: ಎರಡು ದಶಕಗಳ ಜಾಗತಿಕ ವಾಣಿಜ್ಯ ಡೇಟಾದ ಮೇಲೆ ತರಬೇತಿ ಪಡೆದ ʻಗ್ಲಾನ್ಸ್ ಎಐʼ ತಂತ್ರಾಂಶವು ಬಳಕೆದಾರರ ಉದ್ದೇಶ, ನಡವಳಿಕೆ ಮತ್ತು ಆದ್ಯತೆಗಳನ್ನು ನಿರೀಕ್ಷಿಸುವ ಆಳವಾದ, ಮುನ್ಸೂಚನೆಯ ಒಳನೋಟಗಳನ್ನು ನೀಡುತ್ತದೆ.
  • ಅಂತರ-ವೇದಿಕೆ ವಿತರಣೆ: ಮುಕ್ತ ವೇದಿಕೆಯಲ್ಲಿ ನಿರ್ಮಿಸಲಾದ ʻಗ್ಲಾನ್ಸ್ ಎಐʼ ತಂತ್ರಾಂಶವು ಮೊಬೈಲ್ ಲಾಕ್ ಸ್ಕ್ರೀನ್ಗಳು, ಟಿವಿಗಳು, ಥರ್ಡ್-ಪಾರ್ಟಿ ತಂತ್ರಾಂಶಗಳು ಮತ್ತು ಬ್ರಾಂಡ್ ವೆಬ್ಸೈಟ್ಗಳಲ್ಲಿ ಯಾವುದೇ ಹಾರ್ಡ್ವೇರ್ ಅಥವಾ ಸಾಫ್ಟ್ವೇರ್ಗೆ ತಡೆರಹಿತವಾಗಿ ಸಂಯೋಜಿಸುತ್ತದೆ.

ಗೂಗಲ್ ಬೆಂಬಲಿತ ಪ್ರಮುಖ ಗ್ರಾಹಕ ತಂತ್ರಜ್ಞಾನ ಕಂಪನಿಯಾದ ʻಗ್ಲಾನ್ಸ್ʼ, ತನ್ನ ಅತ್ಯಾಧುನಿಕ ಸ್ವಾಮ್ಯ ʻಎಐʼ ಮಾದರಿಗಳಿಂದ ಚಾಲಿತವಾದ ಎಐ-ಸ್ಥಳೀಯ ವಾಣಿಜ್ಯ ವೇದಿಕೆಯಾದ ʻಗ್ಲಾನ್ಸ್ ಎಐ ʼ ಅನ್ನು ಅನಾವರಣಗೊಳಿಸಿದೆ. ಇದು ಜಾಗತಿಕ ವಾಣಿಜ್ಯ ಮತ್ತು ʻಎಐʼ ನಾವೀನ್ಯತೆಗೆ ಒಂದು ಪ್ರಮುಖ ಮೈಲುಗಲ್ಲಾಗಿದೆ. ಜನರು ಶಾಪಿಂಗ್ ಮಾಡುವ ವಿಧಾನದಲ್ಲಿ ಕ್ರಾಂತಿ ತರಲು ಹಾಗೂ ನಿರ್ಧಾರಗಳು ಮತ್ತು ಆರ್ಥಿಕತೆಗಳನ್ನು ಬುದ್ಧಿಮತ್ತೆಯು ಹೇಗೆ ಪ್ರೇರೇಪಿಸುತ್ತದೆ ಎಂಬುದನ್ನು ಮರುರೂಪಿಸಲು ನಿರ್ಮಿಸಲಾದ ʻಗ್ಲಾನ್ಸ್ ಎಐʼ ತಂತ್ರಾಂಶವು ಆನ್ಲೈನ್ ಶಾಪಿಂಗ್ ಅನ್ನು ಹುಡುಕಾಟವನ್ನು ಮೀರಿದಂತಹ ಸ್ಫೂರ್ತಿ-ಆಧರಿತ ಆವಿಷ್ಕಾರ ಅನುಭವದ ಮಟ್ಟಕ್ಕೆ ಕೊಂಡೊ ಯ್ಯಲಿದೆ. ಇದು 'ಎಐ ಗ್ರಾಹಕರ' ಹೊರಹೊಮ್ಮುವಿಕೆಯನ್ನು ಸಹ ಸೂಚಿಸುತ್ತದೆ. ಅವು ಬ್ರೌಸ್ ಮಾಡಲು ಕಾಯುವುದಿಲ್ಲ, ಬದಲಿಗೆ ತಂತ್ರಜ್ಞಾನವು ಗ್ರಾಹಕರನ್ನು ಅರ್ಥಮಾಡಿಕೊಳ್ಳುತ್ತದೆ, ಅವರಿಗಾಗಿ ಕಲ್ಪಿಸಿಕೊಳ್ಳುತ್ತದೆ ಮತ್ತು ಅವರಿಗೆ ಏನು ಬೇಕು ಎಂದು ಅವರು ತಿಳಿಯುವ ಮೊದಲೇ ಬಯಕೆಯನ್ನು ಹುಟ್ಟುಹಾಕುತ್ತದೆ.

ಇದನ್ನೂ ಓದಿ: Shishir Hegde Column: ಓದದವರಿಗೇನ್‌ ಗೊತ್ತು ಪುಸ್ತಕ ಪಸರಿಸುವ ಪರಿಮಳ !

ಇಂದು ಈ ಸ್ವತಂತ್ರ ತಂತ್ರಾಂಶವು ವಿಶ್ವಾದ್ಯಂತ ʻಗೂಗಲ್ ಪ್ಲೇ ಸ್ಟೋರ್ʼ ಮತ್ತು ʻಆಪಲ್ ಆಪ್ ಸ್ಟೋರ್ʼ ಎರಡರಲ್ಲೂ ಲಭ್ಯವಿದೆ. ಆಂಡ್ರಾಯ್ಡ್ ಹ್ಯಾಂಡ್ಸೆಟ್ ತಯಾರಕರು ಮತ್ತು ಟೆಲಿಕಾಂ ಆಪರೇಟರ್ಗಳೊಂದಿಗೆ ಆಳವಾದ ಸಹಯೋಗ ಏರ್ಪಡುತ್ತಿದೆ. ಆರಂಭಿಕ ಮಾದರಿಯು ಫ್ಯಾಷನ್ ಬಗ್ಗೆ ತರಬೇತಿ ಪಡೆದಿದ್ದರೂ, ʻಗ್ಲಾನ್ಸ್ʼ ಇದೇ ಅನುಭವವನ್ನು ಈ ವರ್ಷದ ಕೊನೆಯಲ್ಲಿ ಸೌಂದರ್ಯ, ಪರಿಕರಗಳು ಮತ್ತು ಪ್ರಯಾಣದಂತಹ ವಿಭಾಗಗಳಿಗೆ ವಿಸ್ತರಿಸಲು ಯೋಜಿಸಿದೆ. ಇದು ʻಎಐ ವಾಣಿಜ್ಯʼದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಲಿದೆ.

ಬ್ರೌಸ್ ಮಾಡಲು ಅಥವಾ ಹುಡುಕಲು ಅನೇಕ ಉತ್ಪನ್ನಗಳನ್ನು ಪ್ರದರ್ಶಿಸುವ ಸಾಂಪ್ರದಾಯಿಕ

ಇ-ಕಾಮರ್ಸ್ ಮಳಿಗೆಗಳಿಗಿಂತ ಭಿನ್ನವಾಗಿ, ʻಗ್ಲಾನ್ಸ್ ಎಐʼ ಬಳಕೆದಾರರಿಗೆ ತಮ್ಮ ಎಐ-ಆಯ್ಕೆಯ ಶೈಲಿಯುತ ನೋಟವನ್ನು ಕಂಡುಹಿಡಿಯಲು ಅನುವು ಮಾಡಿಕೊಡುತ್ತದೆ. ಸರಳವಾಗಿ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅಥವಾ ಚಿತ್ರವನ್ನು ಅಪ್ಲೋಡ್ ಮಾಡುವ ಮೂಲಕ ಗ್ರಾಹಕರನ್ನು ʻಗ್ಲಾನ್ಸ್ ಎಐʼ ದೃಶ್ಯ ಜಗತ್ತಿನಲ್ಲಿ ಮುಳುಗಿಸುತ್ತದೆ, ಅಲ್ಲಿ ಅವರು ಕೇಂದ್ರ ಸ್ಥಾನವನ್ನು ಅಲಂಕರಿಸು ತಾರೆ. ಸುಧಾರಿತ ಪ್ರಸರಣ ಮಾದರಿಗಳು, ವೈಯಕ್ತೀಕರಣ ಎಂಜಿನ್ಗಳು ಮತ್ತು ಲೈವ್ ಕಾಮರ್ಸ್ ಲೇಯರ್ ಅನ್ನು ಬಳಸಿಕೊಂಡು ಎಐ-ಸ್ಥಳೀಯ ವಾಣಿಜ್ಯ ಎಂಜಿನ್ನೊಂದಿಗೆ ಪ್ರತಿ ಅನುಭವವನ್ನು ನೈಜ ಸಮಯದಲ್ಲಿ ರಚಿಸಲಾಗುತ್ತದೆ.

ಪ್ರತಿ ಬಳಕೆದಾರರ ವಿಶಿಷ್ಟ ಎಐ ನೋಟವನ್ನು ಪ್ರಪಂಚ ದಾದ್ಯಂತದ ಆಯ್ದ ಬ್ರಾಂಡ್ಗಳಿಂದ ನೈಜ, ಶಾಪಿಂಗ್ ಮಾಡಬಹುದಾದ ಉತ್ಪನ್ನಗಳನ್ನು ಅವರಿಗೆ ಅನ್ವಯಿಸಿ ತೋರಿಸುತ್ತದೆ . ಒಂದೇ ಟ್ಯಾಪ್ ಮೂಲಕ, ಬಳಕೆದಾರರು ಈಗ ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ನೋಟ ಮತ್ತು ಉತ್ಪನ್ನ ಗಳನ್ನು ಅನ್ವೇಷಿಸಬಹುದು ಮತ್ತು 400ಕ್ಕೂ ಹೆಚ್ಚಿನ ಜಾಗತಿಕ ಬ್ರಾಂಡ್ಗಳಿಂದ ಖರೀದಿ ಗಳನ್ನು ತಡೆರಹಿತವಾಗಿ ಪೂರ್ಣಗೊಳಿಸಬಹುದು. ಬಳಕೆದಾರರು ತಮ್ಮ ವೈಯಕ್ತಿಕ ದತ್ತಾಂಶದ ಖಾಸಗಿ ತನವನ್ನು ಉಳಿಸಿಕೊಂಡೇ ಇವೆಲ್ಲವೂ ಮಾಡಬಹುದು.

ʻಇನ್ ಮೊಬಿʼ & ʻಗ್ಲಾನ್ಸ್ʼನ ಸಂಸ್ಥಾಪಕರು ಹಾಗೂ ಸಿಇಒ ನವೀನ್ ತಿವಾರಿ ಅವರು ಮಾತನಾಡಿ, "ಇಂಟರ್ನೆಟ್ ಅನ್ನು ಕ್ಯುರೇಟೆಡ್ ಫೀಡ್ ಗಳಿಂದ ಎಐ-ಸೃಷ್ಟಿತ ವಾಸ್ತವಗಳಿಗೆ ಬದಲಾಯಿಸ ಲಾಗುತ್ತಿದೆ. ʻಗ್ಲಾನ್ಸ್ʼನಲ್ಲಿ, ನಮ್ಮ ಅತ್ಯಂತ ಸುಧಾರಿತ ಎಐ-ಸ್ಥಳೀಯ ವಾಣಿಜ್ಯ ವೇದಿಕೆಯೊಂದಿಗೆ ಈ ರೂಪಾಂತರವನ್ನು ಮುನ್ನಡೆಸಲು ನಾವು ಹೆಮ್ಮೆಪಡುತ್ತೇವೆ. ಪ್ರಪಂಚದಾದ್ಯಂತದ ಕೋಟ್ಯಂತರ ಗ್ರಾಹಕರು ಹೇಗೆ ಉತ್ಪನ್ನಗಳನ್ನು ಅನ್ವೇಷಣೆ, ದೃಶ್ಯೀಕರಿಸುತ್ತಾರೆ ಮತ್ತು ಶಾಪಿಂಗ್ ಮಾಡುತ್ತಾರೆ ಹಾಗೂ ಬುದ್ಧಿವಂತ, ಸ್ವಾಯತ್ತ ಎಐ ಏಜೆಂಟಗಳೊಂದಿಗೆ ಹೇಗೆ ಹುಡುಕಾಟ ನಡೆಸುತ್ತಾರೆ ಎಂಬುದನ್ನು ʻಗ್ಲಾನ್ಸ್ ಎಐʼ ಮರುಕಲ್ಪಿಸುತ್ತದೆ. ಫೋನ್ಗಳು, ಟಿವಿಗಳು ಮತ್ತು ಬ್ರಾಂಡ್ ಸ್ಟೋರ್ ಗಳಲ್ಲಿ ಹುದುಗಿರುವ ʻಗ್ಲಾನ್ಸ್ʼ ತಂತ್ರಾಂಶವು ʻಎಐ ವಾಣಿಜ್ಯʼದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯನ್ನು ಸೂಚಿಸುತ್ತದೆ. ಇದು ನಮ್ಮ ಪ್ರಯಾಣದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ತಾಂತ್ರಿಕ ಪ್ರಯತ್ನಗಳಲ್ಲಿ ಒಂದಾಗಿದೆ ಮತ್ತು ಎಐ ಚಾಲಿತ ಗ್ರಾಹಕ ಅನುಭವಗಳ ಭವಿಷ್ಯವನ್ನು ರೂಪಿಸುವ ದಿಟ್ಟ ಹೆಜ್ಜೆಯಾಗಿದೆ,ʼʼ ಎಂದು ಹೇಳಿದರು.

ಮೂಲದಲ್ಲಿ, ʻಗ್ಲಾನ್ಸ್ ಎಐʼ ಅನ್ನು ಮೂರು ಪದರಗಳ ಡೀಪ್ಟೆಕ್ ವಾಸ್ತುಶಿಲ್ಪದ ಮೇಲೆ ನಿರ್ಮಿಸ ಲಾಗಿದೆ:

  • ವಾಣಿಜ್ಯ ಬುದ್ಧಿಮತ್ತೆ ಮಾಡೆಲ್: ದಶಕಗಳ ಜಾಗತಿಕ ವಾಣಿಜ್ಯ ದತ್ತಾಂಶದ ಬಗ್ಗೆ ತರಬೇತಿ ನೀಡಲಾಗಿದೆ, ಹೊಸ ಪ್ರವೃತ್ತಿಗಳು, ಸಂಸ್ಕೃತಿಗಳು ಮತ್ತು ಗ್ರಾಹಕರ ನಡವಳಿಕೆಯಿಂದ ಇದು ಕಲಿಯುತ್ತದೆ.
  • ಜೆನ್ಎಐ ಎಕ್ಸ್ಪೀರಿಯನ್ಸ್ ಮಾಡೆಲ್: ಲಿಂಗ, ದೇಹ ಪ್ರಕಾರ, ಜನಾಂಗೀಯತೆ, ಚರ್ಮದ ಟೋನ್, ಫಿಟ್, ಶೈಲಿ ಮತ್ತು ಋತುವಿನಂತಹ ಸಾವಿರಾರು ನಿಯತಾಂಕಗಳ ಆಧಾರದ ಮೇಲೆ ಹೈಪರ್-ರಿಯಲಿಸ್ಟಿಕ್ ದೃಶ್ಯೀಕರಣವನ್ನು ರಚಿಸುತ್ತದೆ.
  • ಟ್ರಾನ್ಸಾಕ್ಷನ್ ಜರ್ನಿ ಮಾಡೆಲ್, ಗ್ರಾಹಕರಿಗಿಂತಲೂ ಮೊದಲೇ ಅವರ ಶಾಪಿಂಗ್ ಉದ್ದೇಶವನ್ನು ಅರ್ಥಮಾಡಿಕೊಳ್ಳುವ ಏಜೆಂಟ್ ಇದಾಗಿದ್ದು, ಜಾಗತಿಕವಾಗಿ ಲಕ್ಷಾಂತರ ಕ್ಯಾಟಲಾಗ್ಗಳಿಂದ ಉತ್ತಮವಾಗಿ ಹೊಂದಿಕೆಯಾಗುವ ಉತ್ಪನ್ನದೊಂದಿಗೆ ದೃಶ್ಯೀಕರಣಗಳನ್ನು ಜೋಡಿಸುತ್ತದೆ.

ʻಗ್ಲಾನ್ಸ್ ಎಐʼ ತನ್ನ ವಿಶಿಷ್ಟ ಮಾದರಿಗಳನ್ನು ʻಗೂಗಲ್ ಜೆಮಿನಿʼ ಮತ್ತು ʻಇಮೇಜನ್ ʼ ಸೇರಿದಂತೆ ಅತ್ಯಾಧುನಿಕ ವೇದಿಕೆಗಳೊಂದಿಗೆ ʻವರ್ಟೆಕ್ಸ್ ಎಐʼನಲ್ಲಿ ಸಂಯೋಜಿಸಿದೆ. ಇದು ಬಳಕೆದಾರರಿಗೆ ಹೈಪರ್-ರಿಯಲಿಸ್ಟಿಕ್, ವೈಯಕ್ತೀಕರಿಸಿದ ಅನುಭವಗಳನ್ನು ನೀಡುತ್ತದೆ.

ʻಗ್ಲಾನ್ಸ್ ಎಐʼ ಸಂಪೂರ್ಣವಾಗಿ ಆಪ್ಟ್-ಇನ್ ವೇದಿಕೆಯಾಗಿದ್ದು, ಗೌಪ್ಯತೆ ಮತ್ತು ಬಳಕೆದಾರ ನಿಯಂತ್ರಣವನ್ನು ಅದರ ಪ್ರಮುಖ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ. ಬಳಕೆದಾರರು ನೋಟಳನ್ನು ಅನ್ವೇಷಿಸಬಹುದು, ಅವುಗಳನ್ನು ಉಳಿಸಬಹುದು ಅಥವಾ ಹಂಚಿಕೊಳ್ಳಬಹುದು, ಅವುಗಳನ್ನು ವಾಲ್ ಪೇಪರ್ ಗಳಾಗಿ ಹೊಂದಿಸಬಹುದು ಮತ್ತು ಜಾಗತಿಕ ಪ್ರವೃತ್ತಿಗಳು ಮತ್ತು ಸಂದರ್ಭಗಳಿಂದ ಪ್ರೇರಿತವಾದ ವಿಶಿಷ್ಟ ನೋಟಗಳು ಮತ್ತು ಸಂಗ್ರಹಗಳಲ್ಲಿ ತಮ್ಮನ್ನು ತಾವು ದೃಶ್ಯೀಕರಿಸಬಹುದು.

ʻಗ್ಲಾನ್ಸ್ ಎಐʼ ಒಂದು ತಂತ್ರಾಂಶದ ಅನುಭವಕ್ಕಿಂತಲೂ ಮಿಗಿಲಾದದ್ದು. ವಿವಿಧ ಉತ್ಪನ್ನ ತಯಾಕರು, ಟೆಲಿಕಾಂ ಆಪರೇಟರ್ಗಳು ಮತ್ತು ಬ್ರಾಂಡ್ಗಳೊಂದಿಗೆ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ನಾದ್ಯಂತ ಆಳವಾದ ಏಕೀಕರಣದೊಂದಿಗೆ ಮುಕ್ತ ವಾಸ್ತುಶಿಲ್ಪದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ಫೋನ್ ಗಳನ್ನು ಎಐ ಫೋನ್ಗಳಾಗಿ, ಟಿವಿಗಳನ್ನು ಗೃಹ ವಾಣಿಜ್ಯ ಸಾಧನಗಳಾಗಿ ಮತ್ತು ಬ್ರಾಂಡ್ ಅಂಗಡಿಗಳನ್ನು ʻಎಐʼ ಮಳಿಗೆಗಳಾಗಿ ಪರಿವರ್ತಿಸುತ್ತದೆ.

ʻಗ್ಲಾನ್ಸ್ ಎಐʼ ಅಮೆರಿಕದಲ್ಲಿ ನಡೆಸಿದ ಪ್ರಯೋಗಗಳ ಆರಂಭಿಕ ಫಲಿತಾಂಶಗಳು ಸ್ಫೂರ್ತಿದಾಯಕ ಶಾಪಿಂಗ್ನಲ್ಲಿ ಗ್ರಾಹಕರ ಉತ್ತಮ ತೊಡಗಿಸಿಕೊಳ್ಳುವಿಕೆಯನ್ನು ಸೂಚಿಸಿವೆ. ಕೆಲವೇ ವಾರಗಳಲ್ಲಿ ವೇದಿಕೆಯು 1.5 ದಶಲಕ್ಷಕ್ಕೂ ಅಧಿಕ ಸಕ್ರಿಯ ಬಳಕೆದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಅವರಲ್ಲಿ ಅರ್ಧದಷ್ಟು ಜನರು ಅನುಭವವನ್ನು ಪ್ರಯತ್ನಿಸಿದ ನಂತರ ವಾರಕ್ಕೊಮ್ಮೆ ಮರಳುತ್ತಿದ್ದಾರೆ.

ಆಳವಾದ ತೊಡಗಿಸಿಕೊಳ್ಳುವಿಕೆ: ಬಳಕೆದಾರರು 40 ದಶಲಕ್ಷ ಶೈಲಿಯ ವಿನಂತಿಗಳನ್ನು ರಚಿಸಿದ್ದಾರೆ, 50 ಪ್ರತಿಶತದಷ್ಟು ಜನರು ತಮ್ಮ ವೈಯಕ್ತಿಕಗೊಳಿಸಿದ ಶೈಲಿಗಳನ್ನು ಡೌನ್ಲೋಡ್ ಮಾಡಿದ್ದಾರೆ ಅಥವಾ ಹಂಚಿಕೊಂಡಿದ್ದಾರೆ, 40 ಪ್ರತಿಶತದಷ್ಟು ಜನರು ಶಾಪಿಂಗ್ ಪ್ರಯಾಣವನ್ನು ಪ್ರಾರಂಭಿಸ ಲು ಟ್ಯಾಪ್ ಮಾಡಿದಾರೆ; ಇದು ʻಎಐ ಕಾಮರ್ಸ್ ಅಪ್ಲಿಕೇಶನ್ʼಗಳ ಆಕರ್ಷಣೆ ಮತ್ತು ಜನಪ್ರಿಯತೆಗೆ ಹೊಸ ಮಾನದಂಡವನ್ನು ನಿಗದಿಪಡಿಸಿದೆ.