ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today 2nd March 2026: ಮಧ್ಯ ಪ್ರಾಚ್ಯ ಯುದ್ಧದ ನಡುವೆಯೂ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ!

ಹಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 300 ರೂ. ಇಳಿಕೆ ಕಂಡು ಬಂದಿದ್ದು, 15,565 ರೂ. ಇದೆ.

ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ)

ಹಲವು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿಂದು ಭಾರೀ ಇಳಿಕೆ ( Gold Price Today 2nd March 2026 ) ಕಂಡು ಬಂದಿದೆ. ಬೆಂಗಳೂರಿನಲ್ಲಿ ಸೋಮವಾರ 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 300 ರೂ. ಇಳಿಕೆ ಕಂಡು ಬಂದಿದ್ದು, 15,565 ರೂ. ಇದೆ. 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 329 ರೂ. ಇಳಿಕೆಯಾಗಿ, 16,980 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,24,520 ರೂ. ಹಾಗೂ 10 ಗ್ರಾಂಗೆ ನೀವು 1,55,650 ರೂ. ಮತ್ತು 100 ಗ್ರಾಂ ಚಿನ್ನದ ಬೆಲೆ 15,56,500 ರೂ. ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,35,840 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ 1,69,800 ರೂ. 100 ಗ್ರಾಂಗೆ ನೀವು 16,98,000 ರೂ. ಪಾವತಿ ಮಾಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 15,565 ರೂ. 16,980 ರೂ.
ಮುಂಬೈ 15,565 ರೂ. 16,980 ರೂ.
ಹೈದರಾಬಾದ್‌ 15,565 ರೂ. 16,980 ರೂ.
ಕೋಲ್ಕತ್ತಾ 15,565 ರೂ. 16,980 ರೂ.

ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿಗೆ ನೀವು ಬೆಲೆ 330 ರೂ. ಇದೆ. 10 ಗ್ರಾಂ ಬೆಳ್ಳಿಗೆ 3300 ರೂ. ಹಾಗೂ 1 ಕೆಜಿ ಬೆಳ್ಳಿಗೆ ನೀವು 330,000 ರೂಪಾಯಿ ಪಾವತಿಸಬೇಕು.

Vishakha Bhat Heggar

View all posts by this author