ಬೆಂಗಳೂರು: ಚಿನ್ನದ ದರದಲ್ಲಿ ಇಂದೂ ಸಹ ಏರಿಕೆ ಕಂಡು ಬಂದಿದೆ. (Gold Price Today on 18th December 2025) ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆ ಕಂಡು ಬಂದಿದ್ದು, 12,360 ರೂ. ಇದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 33 ರೂ. ಏರಿಕೆ ಕಂಡು ಬಂದು ಒಟ್ಟು ಬೆಲೆ 13,484 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 98,880 ರೂ. ಹಾಗೂ 10 ಗ್ರಾಂ ಚಿನ್ನಕ್ಕೆ ನೀವು 1,23,600 ರೂ. ಮತ್ತು 100 ಗ್ರಾಂ ಚಿನ್ನದ ಬೆಲೆ 12,36,000 ರೂ. ಇದೆ. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 1,07,872 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 1,34,840 ರೂ. ಮತ್ತು 100 ಗ್ರಾಂಗೆ 13,48,400 ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,360 ರೂ. | 13,484 ರೂ |
| ಮುಂಬೈ | 12,360 ರೂ. | 13,484 ರೂ |
| ದೆಹಲಿ | 12,360 ರೂ. | 13,484 ರೂ |
| ಕೋಲ್ಕತ್ತಾ | 12,360 ರೂ. | 13,484 ರೂ |
| ಹೈದರಾಬಾದ್ | 12,360 ರೂ. | 13,484 ರೂ |
ಬೆಳ್ಳಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಒಂದು ಗ್ರಾಂ ಬೆಳ್ಳಿ ದರ ಇಂದು 211 ರೂ. ಇದ್ದು, 10 ಗ್ರಾಂಗೆ ನೀವು 2,110 ರೂ. ಹಾಗೂ 1 ಕೆಜಿಗೆ 2,11,000 ರೂ ಪಾವತಿ ಮಾಡಬೇಕು.
ಮತ್ತಷ್ಟು ಏರಿಕೆಯಾಗುತ್ತಾ ಚಿನ್ನ?
ಪ್ರಪಂಚದಾದ್ಯಂತ ಸರ್ಕಾರಗಳು ಮಾಡಿಕೊಂಡಿರುವ ವಿಪರೀತ ಸಾಲದಿಂದಾಗಿ ಚಿನ್ನದ ಬೆಲೆ ಇನ್ನಷ್ಟು ಏರಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಿಇಒ ಡೇವಿಡ್ ಟೈಟ್ ಹೇಳಿದ್ದಾರೆ. 2026 ರ ರ ಹೊತ್ತಿಗೆ ಬಂಗಾರದ ಬೆಲೆ ಊಹಿಸಲೂ ಆಗದಷ್ಟು ಹೆಚ್ಚಾಗುತ್ತದೆ ಎಂದು ಡೇವಿಡ್ ಟೈಟ್ ಖಚಿತವಾಗಿ ಹೇಳಿದ್ದಾರೆ. ಚೀನಾ ದೇಶದಲ್ಲಿ ಚಿನ್ನದ ಮೇಲಿನ ನಿಯಮಗಳನ್ನು ಸಡಿಲ ಮಾಡಿರುವ ಕಾರಣ ಬೆಲೆ ಅತಿಯಾಗಿ ಏರಲಿದೆ. ಪ್ರಪಂಚದ ಹಲವು ದೇಶಗಳ ಕರೆನ್ಸಿ ಮೌಲ್ಯ ಕುಸಿತ ಕಾಣಿಸುತ್ತಿದೆ. ಇದರ ಜೊತೆಗೆ ಯುದ್ಧದ ಭೀತಿಯೂ ಇರುವುದರಿಂದ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಿರುವುದು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.