ಬೆಂಗಳೂರು: ಚಿನ್ನದ ದರದಲ್ಲಿ ಇಂದು ಕೊಂಚ ಇಳಿಕೆ ಕಂಡು ಬಂದಿದೆ. (Gold Price Today on 19th December 2025) ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂ. ಇಳಿಕೆ ಕಂಡು ಬಂದಿದ್ದು, 12,300 ರೂ ಆಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 66 ರೂ. ಇಳಿಕೆ ಕಂಡು 13,418 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 98,400 ರೂ. ಆದರೆ 10 ಗ್ರಾಂಗೆ ನೀವು 1,23,000 ರೂ. ಮತ್ತು 100 ಗ್ರಾಂ ಗೆ 12,30,000 ರೂ. ಪಾವತಿ ಮಾಡಬೇಕು. ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 80,512 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 1,00,640 ರೂ. ಮತ್ತು 100 ಗ್ರಾಂಗೆ ನೀವು 10,06,400 ರೂ. ಪಾವತಿ ಮಾಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,300 ರೂ | 13,418 ರೂ. |
| ಮುಂಬೈ | 12,300 ರೂ | 13,418 ರೂ. |
| ದೆಹಲಿ | 12,300 ರೂ | 13,418 ರೂ. |
| ಕೋಲ್ಕತ್ತಾ | 12,300 ರೂ | 13,418 ರೂ. |
| ಹೈದರಾಬಾದ್ | 12,300 ರೂ | 13,418 ರೂ. |
ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿ ದರ ಇಂದು 209 ರೂ. ಇದ್ದು, 10 ಗ್ರಾಂಗೆ ನೀವು 2,090 ರೂ. ಮತ್ತು 1 ಕೆಜಿಗೆ 2,09,000 ಪಾವತಿ ಮಾಡಬೇಕು.
ಚಿನ್ನದ ಬೆಲೆಯೇರಿಕೆ ಏಕೆ?
ಯುದ್ಧದಂತಹ ಸನ್ನಿವೇಶಗಳು, ಜಾಗತಿಕ ಹಿಂಜರಿತದ ಭಯ ಅಥವಾ ಜಾಗತಿಕವಾಗಿ ಆರ್ಥಿಕ ಅಸ್ಥಿರತೆ ಹೆಚ್ಚಾದಾಗ, ಹೂಡಿಕೆದಾರರು ತಮ್ಮ ಹಣವನ್ನು ಷೇರು ಮಾರುಕಟ್ಟೆಯಂತಹ ಅಪಾಯಕಾರಿ ಸಾಧನಗಳಿಂದ ಚಿನ್ನ ಮತ್ತು ಬೆಳ್ಳಿಯಂತಹ ಸುರಕ್ಷಿತ ಸ್ವತ್ತುಗಳಿಗೆ ಬದಲಾಯಿಸುತ್ತಾರೆ, ಇದು ಅವುಗಳ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.