ಬೆಂಗಳೂರು: ಕಳೆದೆರಡು ದಿನಗಳಿಂದ ಏರಿಕೆ ಕಾಣದೆ ಯಥಾಸ್ಥಿತಿಯಲ್ಲಿದ್ದ ಚಿನ್ನದ ದರದಲ್ಲಿ ಇಂದು ಭಾರೀ (Gold Price Today on 22th December 2025) ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆ ಕಂಡು ಬಂದಿದ್ದು, 12,400 ರೂ. ಆಗಿದೆ. 24 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 110 ರೂ. ಏರಿಕೆಯಾಗಿ 13,528 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 99,200 ರೂ. ಆದರೆ 10 ಗ್ರಾಂಗೆ ನೀವು 1,24,000 ರೂ. ನೀಡಬೇಕು. 100 ಗ್ರಾಂಗೆ ನೀವು 12,40,000 ರೂ. ಪಾವತಿಸಬೇಕು. 24 ಕ್ಯಾರಟ್‌ನ ಚಿನ್ನ1,08,224 ರೂ. ಹಾಗೂ 10 ಗ್ರಾಂ ಗೆ 1,35,280 ರೂ. ಮತ್ತು 100 ಗ್ರಾಂಗೆ ನೀವು 13,52,800 ರೂ. ನೀಡಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,400 ರೂ. | 13,528 ರೂ. |
| ಮುಂಬೈ | 12,400 ರೂ. | 13,528 ರೂ. |
| ದೆಹಲಿ | 12,405 ರೂ. | 13,528 ರೂ. |
| ಕೋಲ್ಕತ್ತಾ | 12,400 ರೂ. | 13,528 ರೂ. |
| ಹೈದರಾಬಾದ್ | 12,400 ರೂ. | 13,528 ರೂ. |
ವಿವಿಧ ನಗರಗಳಲ್ಲಿನ ಚಿನ್ನದ ದರವನ್ನು ನೋಡುವುದಾದರೆ, ಚೆನ್ನೈ, ಮುಂಬೈ ಸೇರಿಂದತೆ ಹಲವು ಕಡೆ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,400 ರೂ. ಇದ್ದರೆ, 24 ಗ್ರಾಂ ಚಿನ್ನದ ಬೆಲೆ 13,528 ರೂ. ದೆಹಲಿಯಲ್ಲಿ ಕೊಂಚ ವ್ಯತ್ಯಾಸವಿದ್ದು, 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 12,405 ರೂ. ಇದ್ದರೆ, 24 ಗ್ರಾಂ ಚಿನ್ನದ ಬೆಲೆ 13,543 ರೂ. ಇದೆ.
ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದ್ದು, ಒಂದು ಗ್ರಾಂ ಬೆಳ್ಳಿಗೆ 219 ರೂ. ಇದೆ. 10 ಗ್ರಾಂಗೆ 2,190 ರೂ. ಮತ್ತು ಒಂದು ಕೆಜಿ ಬೆಳ್ಳಿಗೆ ನೀವು 2,19,000 ರೂ. ಪಾವತಿ ಮಾಡಬೇಕು.