ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 25th December 2025: ಚಿನ್ನದ ದರದಲ್ಲಿ ಸತತ ಏರಿಕೆ; ಇಂದಿನ ಬೆಲೆ ಎಷ್ಟಿದೆ?

Gold Rate Today: ಚಿನ್ನದ ಬೆಲೆಯಲ್ಲಿ ಇಂದೂ ಸಹ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆ ಕಂಡು ಬಂದಿದ್ದು, ಬೆಲೆ 12,765 ರೂ. ಆಗಿದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) -

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದೂ ಸಹ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ (Gold Price Today on 25th December 2025) ಚಿನ್ನದ ಬೆಲೆಯಲ್ಲಿ 30 ರೂ. ಏರಿಕೆ ಕಂಡು ಬಂದಿದ್ದು, ಬೆಲೆ 12,765 ರೂ. ಆಗಿದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ದರದಲ್ಲಿ 32 ರೂ. ಏರಿಕೆಯಾಗಿ 13,925 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,02,120 ರೂ. ಇದ್ದರೆ, 10 ಗ್ರಾಂಗೆ 1,27,650 ರೂ. ಹಾಗೂ 100 ಗ್ರಾಂಗೆ ನೀವು 12,76,50 ರೂ. ಪಾವತಿಸಬೇಕು. ಇನ್ನು 24 ಗ್ರಾಂ 8 ಗ್ರಾಂ ಚಿನ್ನಕ್ಕೆ 1,11,400 ರೂ. ಇದ್ದರೆ 10 ಗ್ರಾಂಗೆ 1,39,250 ರೂ. ಪಾವತಿಸಬೇಕು. 1000 ಗ್ರಾಂಗೆ ನೀವು 13,92,500 ರೂ. ನೀಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,765 ರೂ. 13,925 ರೂ.
ಮುಂಬೈ 12,765 ರೂ. 13,925 ರೂ.
ದೆಹಲಿ 12,765 ರೂ. 13,925 ರೂ.
ಕೋಲ್ಕತ್ತಾ 12,765 ರೂ. 13,925 ರೂ.
ಹೈದರಾಬಾದ್‌ 12,765 ರೂ. 13,925 ರೂ.

ಬೆಳ್ಳಿ ದರದಲ್ಲಿಯೂ ಭಾರೀ ಏರಿಕೆ ಕಂಡು ಬಂದಿದೆ. ಒಂದು ಗ್ರಾಂ ಬೆಳ್ಳಿ ದರದಲ್ಲಿ 1 ರೂ. ಏರಿಕೆ ಕಂಡು ಬಂದಿದ್ದು, ಬೆಲೆ 234 ರೂ. ಇದ್ದರೆ, 10 ಗ್ರಾಂಗೆ ನೀವು 2,340 ರೂ. ನೀಡಿದರೆ, 1 ಕೆಜಿ ಬೆಳ್ಳಿಗೆ 2,34,000 ರೂ. ಪಾವತಿ ಮಾಡಬೇಕು.

ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಬೆಂಗಳೂರಿನ ದಾನಿಯಿಂದ 30 ಕೋಟಿ ರೂ. ಮೌಲ್ಯದ ಚಿನ್ನದ ಕಲಾಕೃತಿ ದಾನ

ಚಿನ್ನದ ಬೆಲೆಯು ಅಂತಾರಾಷ್ಟ್ರೀಯ ಸ್ಪಾಟ್ ಗೋಲ್ಡ್ ಬೆಲೆ, ಅಮೆರಿಕಾದ ಡಾಲರ್ ಮೌಲ್ಯದ ಏರಿಳಿತ ಹಾಗೂ ಚಿನ್ನದ ಮೇಲಿನ ಅಮದು ದರದ ಮೇಲೆ ನಿರ್ಧಾರವಾಗುತ್ತೆ. ಜೊತೆಗೆ ಜಾಗತಿಕ ರಾಜಕೀಯ, ಆರ್ಥಿಕ ಅನಿಶ್ಚಿತತೆಯೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತೆ. ಅಮೆರಿಕಾ ಈಗ ವೆನಿಜುವೆಲಾ ಮೇಲೆ ದಾಳಿ ನಡೆಸುವ ಮೂಡ್ ನಲ್ಲಿದೆ. ರಷ್ಯಾ- ಉಕ್ರೇನ್ ಯುದ್ಧ ನಿಲ್ಲುತ್ತಿಲ್ಲ. ಇವೆಲ್ಲವೂ ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರಿ ಬೆಲೆ ಏರಿಕೆಗೆ ಕಾರಣವಾಗಿವೆ.