ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 2nd December 2025: ಕೊಂಚ ಇಳಿಕೆ ಕಂಡ ಚಿನ್ನ; ಬೆಂಗಳೂರಿನಲ್ಲಿ ರೇಟ್‌ ಎಷ್ಟು ಗೊತ್ತಾ?

Gold Rate Today: ಹಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡು (Gold Price Today on 2nd December 2025) ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ ಇಳಿಕೆ ಕಂಡು ಬಂದಿದೆ.

ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ)

ಹಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡು (Gold Price Today on 2nd December 2025) ಬಂದಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 25 ರೂ ಇಳಿಕೆ ಕಂಡು ಬಂದಿದ್ದು, 24 ಕ್ಯಾರೆಟ್‌ನ ಒಂದು ಗ್ರಾಂನಲ್ಲಿ 28 ರೂ ಇಳಿಕೆಯಾಗಿದೆ. 22 ಕ್ಯಾರಟ್‌ ಚಿನ್ನದ ಬೆಲೆ 11,935 ಆದರೆ, 24 ಕ್ಯಾರಟ್‌ನ ಬೆಲೆ 13,020 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 95,480 ರೂ. ಆದರೆ 10 ಗ್ರಾಂಗೆ ನೀವು 1,19,350 ರೂ. ಪಾವತಿಸಬೇಕಾಗುತ್ತದೆ. 100 ಗ್ರಾಂಗೆ 11,93,500 ರೂ ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,04,160 ಇದ್ದರೆ, 10 ಗ್ರಾಂಗೆ 1,30,200 ಹಾಗೂ 100 ಗ್ರಾಂಗೆ 13, 02,200 ರೂ. ನೀಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,935 ರೂ. 13,020 ರೂ.
ಮುಂಬೈ 11,935 ರೂ. 13,020 ರೂ.
ದೆಹಲಿ 11, 950 ರೂ 13,035 ರೂ.
ಕೋಲ್ಕತ್ತಾ 11,935 ರೂ. 13,020 ರೂ.
ಹೈದರಾಬಾದ್‌ 11,935 ರೂ. 13,020 ರೂ.

ದೇಶದ ಬೇರೆ ಬೇರೆ ನಗರದಲ್ಲಿ ಚಿನ್ನದ ದರ ಎಷ್ಟಿದೆ ಎಂದು ನೋಡುವುದಾರೆ, ಚೆನ್ನೈ, ಮುಂಬೈ, ಕೊಲ್ಕತ್ತಾ ಹಾಗೂ ಹೈದರಾಬಾದ್‌ನಲ್ಲಿ 22 ಗ್ರಾಂ ಚಿನ್ನದ ಬೆಲೆ 11,935 ರೂ. ಇದೆ. ದೆಹಲಿಯಲ್ಲಿ 11, 950 ರೂ ಇದೆ. ಚೆನ್ನೈ, ಮುಂಬೈ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ13,020 ರೂ ಇದ್ದರೆ, ದೆಹಲಿಯಲ್ಲಿ 13,035 ರೂ. ಆಗಿದೆ.

ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಯತಾಸ್ಥಿತಿ ಕಂಡು ಬಂದಿದೆ. 1 ಗ್ರಾಂ ಬೆಳ್ಳಿ ದರ 188 ರೂ ಇದ್ದು, 8 ಗ್ರಾಂ ಬೆಳ್ಳಿಗೆ 1,504 ರೂ. ಹಾಗೂ ಒಂದು ಕೆಜಿ ಬೆಳ್ಳಿಗೆ ನೀವು 1,88,000 ರೂ. ಪಾವತಿಸಬೇಕು. ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿಯೂ ಇದೇ ದರ ಇದೆ.

Vishakha Bhat Heggar

View all posts by this author