ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today On 5Th February 2026: ಇಳಿಕೆಯ ಹಾದಿಯಲ್ಲಿ ಚಿನ್ನದ ದರ; ಇಂದು ಕೂಡ ಅಗ್ಗವಾಯ್ತು ಬಂಗಾರ

Gold Rate Today: ಗುರುವಾರ (ಫೆಬ್ರವರಿ 5) ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡು ಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 460 ರುಪಾಯಿ ಇಳಿಕೆ ಕಂಡು ಬಂದು, 14,155 ರುಪಾಯಿ ಆಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 502 ರುಪಾಯಿ ಕಡಿಮೆಯಾಗಿ 15,442 ರುಪಾಯಿಗೆ ಬಂದು ತಲುಪಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಫೆ. 5: ಕಳೆದೊಂದು ತಿಂಗಳಿಂದ ಭಾರಿ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇತ್ತೀಚೆಗೆ ಇಳಿಕೆಯ ಹಾದಿಗೆ ಮರಳಿದೆ. ಗುರುವಾರ (ಫೆಬ್ರವರಿ 5) ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡು ಬಂದಿದೆ (Gold Price Today On 5Th February 2026). ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 460 ರುಪಾಯಿ ಇಳಿಕೆ ಕಂಡು ಬಂದು, 14,155 ರುಪಾಯಿ ಆಗಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 502 ರುಪಾಯಿ ಕಡಿಮೆಯಾಗಿ 15,442 ರುಪಾಯಿಗೆ ಬಂದು ತಲುಪಿದೆ.

ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,13,240 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,41,550 ರುಪಾಯಿ ಹಾಗೂ 100 ಗ್ರಾಂಗೆ ನೀವು 14,15,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,23,536 ರುಪಾಯಿ ಹಾಗೂ 10 ಗ್ರಾಂಗೆ ನೀವು 1,54,420 ರುಪಾಯಿ ಹಾಗೂ 100 ಗ್ರಾಂಗೆ ನೀವು 15,44,200 ರುಪಾಯಿ ನೀಡಬೇಕಾಗುತ್ತದೆ.

ಚೆನ್ನೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,320 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,622 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,155 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,442 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,170 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,457 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,155 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,442 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 14,155 ರುಪಾಯಿ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 15,442 ರುಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,320 ರುಪಾಯಿ 15,622 ರುಪಾಯಿ
ಮುಂಬೈ 14,155 ರುಪಾಯಿ 15,442 ರುಪಾಯಿ
ದೆಹಲಿ 14,170 ರುಪಾಯಿ 15,457 ರುಪಾಯಿ
ಕೋಲ್ಕತ್ತಾ 14,155 ರುಪಾಯಿ 15,442 ರುಪಾಯಿ
ಹೈದರಾಬಾದ್‌ 14,155 ರುಪಾಯಿ 15,442 ರುಪಾಯಿ

ಬೆಂಗಳೂರಿನ ಹೊಸ ಕಚೇರಿ ತೆರೆಯಲು ಮುಂದಾದ ಗೂಗಲ್‌ನ ಪೋಷಕ ಕಂಪೆನಿ ಆಲ್ಫಾಬೆಟ್

ಬೆಳ್ಳಿ ದರ

ಬೆಳ್ಳಿ ದರದಲ್ಲಿಯೂ ಇಂದು ಭಾರಿ ಕುಸಿತ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂಗೆ 20 ರುಪಾಯಿ ಕುಸಿತವಾಗಿ 300 ರುಪಾಯಿಗೆ ತಲುಪಿದೆ. 10 ಗ್ರಾಂ ಬೆಳ್ಳಿಗೆ 3,000 ರುಪಾಯಿ ಹಾಗೂ 1 ಕೆಜಿ ಬೆಳ್ಳಿಗೆ ನೀವು 3,00,000 ರುಪಾಯಿ ಪಾವತಿಸಬೇಕು.