ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 10th December 2025: ಮತ್ತೆ ಗಗನಮುಖಿಯಾದ ಚಿನ್ನದ ಬೆಲೆ; ಇಂದು ಭಾರಿ ಹೆಚ್ಚಳ

Gold Rate Today: ಚಿನ್ನದ ಬೆಲೆಯಲ್ಲಿ ಬುಧವಾರ (ಡಿಸೆಂಬರ್ 10) ಭಾರಿ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 80 ರೂ. ಹೆಚ್ಚಾದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 87 ರೂ. ದುಬಾರಿಯಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 11,945 ರೂ.ಗೆ ತಲುಪಿದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ ನೀವು 13,031 ರೂ. ಪಾವತಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಡಿ. 10: ಕೆಲವು ದಿನಗಳಿಂದ ಏರಿತದ ಹಾದಿಯಲ್ಲಿರುವ ಚಿನ್ನದ ಬೆಲೆಯಲ್ಲಿ ಬುಧವಾರ (ಡಿಸೆಂಬರ್ 10) ಭಾರಿ ಹೆಚ್ಚಳವಾಗಿದೆ (Gold Price Today on 10th December 2025). ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 80 ರೂ. ಹೆಚ್ಚಾದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 87 ರೂ. ದುಬಾರಿಯಾಗಿದೆ. ಆ ಮೂಲಕ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 11,945 ರೂ.ಗೆ ತಲುಪಿದರೆ, 24 ಕ್ಯಾರಟ್ನ 1 ಗ್ರಾಂ ಚಿನ್ನಕ್ಕೆ ನೀವು 13,031 ರೂ. ಪಾವತಿಸಬೇಕಾಗುತ್ತದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 95,560 ರೂ., 10 ಗ್ರಾಂಗೆ 1,19,450 ರೂ. ಮತ್ತು 100 ಗ್ರಾಂಗೆ 11,94,500 ರೂ. ಇದೆ. 24 ಕ್ಯಾರಟ್‌ನ 8 ಗ್ರಾಂನ ಬೆಲೆ 1,04,248 ರೂ., 10 ಗ್ರಾಂನ ಬೆಲೆ 1,30,310 ರೂ. ಮತ್ತು 100 ಗ್ರಾಂನ ಬೆಲೆ 13,03,100 ರೂ.ಗೆ ಬಂದು ತಲುಪಿದೆ.

ಪ್ರಮುಖ ನಗರಗಳಾದ ಚೆನ್ನೈಯಲ್ಲಿ ಇಂದು 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 12,030 ರೂ. ಇದ್ದರೆ, ಮುಂಬೈಯಲ್ಲಿ 11,945 ರೂ., ದೆಹಲಿಯಲ್ಲಿ 11,960 ರೂ., ಕೋಲ್ಕತ್ತಾ 11,945 ರೂ., ಹೈದರಾಬಾದ್‌ನಲ್ಲಿ 11,945 ರೂ. ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ದರ ಪಟ್ಟಿ ಹೀಗಿದೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,030 ರೂ. 13,124 ರೂ.
ಮುಂಬೈ 11,945 ರೂ. 13,031 ರೂ.
ದೆಹಲಿ 11,960 ರೂ. 13,046 ರೂ.
ಕೋಲ್ಕತ್ತಾ 11,945 ರೂ. 13,031 ರೂ.
ಹೈದರಾಬಾದ್‌ 11,945 ರೂ. 13,031 ರೂ.

ಬೆಳ್ಳಿ ದರ

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಹೆಚ್ಚಳ ಕಂಡು ಬಂದಿದೆ. 1 ಗ್ರಾಂಗೆ 9 ರೂ. ಅಧಿಕವಾಗಿದ್ದು, 199 ರೂ.ಗೆ ಬಂದು ತಲುಪಿದೆ. 8 ಗ್ರಾಂಗೆ 1,592 ರೂ., 10 ಗ್ರಾಂಗೆ 1,990 ರೂ., 100 ಗ್ರಾಂಗೆ 19,900 ರೂ. ಮತ್ತು 1 ಕೆಜಿಗೆ 1,99,000 ರೂ. ಹೆಚ್ಚಳವಾಗಿದೆ.

ಪ್ರತಿಯೊಬ್ಬರಲ್ಲೂ ಇರಲೇಬೇಕು ಟರ್ಮ್‌ ಇನ್ಶೂರೆನ್ಸ್‌; ಇದರಿಂದ ಏನು ಲಾಭ?

ಕ್ಯಾರಟ್ ಎಂದರೇನು?

ಕ್ಯಾರಟ್ ಎನ್ನುವುದು ಆಭರಣಗಳಲ್ಲಿನ ಚಿನ್ನದ ಶುದ್ಧತೆಯನ್ನು ಅಳೆಯಲು ಬಳಸುವ ಘಟಕ. 24 ಕ್ಯಾರಟ್ ಅನ್ನು ಶುದ್ಧ ಚಿನ್ನ ಎಂದು ಕರೆಯಲಾಗುತ್ತದೆ. ಇದು 99.9% ಚಿನ್ನವನ್ನು ಹೊಂದಿರುತ್ತದೆ. ಆದರೆ ಶುದ್ಧ ಚಿನ್ನವು ಮೃದುವಾಗಿರುತ್ತದೆ ಮತ್ತು ಆಭರಣಗಳನ್ನು ತಯಾರಿಸಲು ಸೂಕ್ತವಲ್ಲ. ಅದಕ್ಕಾಗಿಯೇ ಆಭರಣ ತಯಾರಿಕೆಗೆ ತಾಮ್ರ, ಬೆಳ್ಳಿ ಅಥವಾ ನಿಕಲ್ನಂತಹ ಇತರ ಲೋಹ ಬೆರೆಸಲಾಗುತ್ತದೆ. 22 ಕ್ಯಾರಟ್ ಚಿನ್ನವು ಶೇ. 91.67ರಷ್ಟು ಶುದ್ದ ಚಿನ್ನವನ್ನು ಹೊಂದಿರುತ್ತದೆ. ಉಳಿದ 8.33% ಇತರ ಲೋಹಗಳನ್ನು ಮಿಶ್ರಣ ಮಾಡಲಾಗುತ್ತದೆ. ಈ ಲೋಹಗಳು ಚಿನ್ನವನ್ನು ಗಟ್ಟಿಗೊಳಿಸುವ ಕಾರಣ ಸಾಮಾನ್ಯವಾಗಿ ಆಭರಣ ತಯಾರಿಕೆಯಲ್ಲಿ 22 ಕ್ಯಾರಟ್ ಚಿನ್ನವನ್ನು ಬಳಸಲಾಗುತ್ತದೆ.