ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕುಕ್ಕಿಸ್‌ ತಿನ್ನುವವರಿಗೆ ಸಿಹಿ ಸುದ್ದಿ: ಸಕ್ಕರೆ ರಹಿತ ಕುಕ್ಕೀಸ್‌ ಈಗ ಮಾರುಕಟ್ಟೆಗೆ ಲಗ್ಗೆ

ಪ್ರತಿದಿನದ ತಿಂಡಿಯಲ್ಲಿ ಸಕ್ಕರೆಯನ್ನು ಕಡಿಮೆ ಮಾಡಬೇಕೆಂದು ಯೋಚಿಸುವ ಗ್ರಾಹಕರಿಗಾಗಿ ಈ ಹೊಸ ಶ್ರೇಣಿಯನ್ನು ರೂಪಿಸಲಾಗಿದೆ. ರುಚಿ ಅಥವಾ ಸವಿಯನ್ನು ಕಡಿಮೆ ಮಾಡದೇ, ಆರೋಗ್ಯಕರ ಆಯ್ಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಈ ಶ್ರೇಣಿಯಲ್ಲಿ ಚೊಕೊ ನಟ್ಸ್ ಕುಕೀಸ್ ಮತ್ತು ಹೇಜಲ್‌ನಟ್ ಹಾಗೂ ಓಟ್ಸ್ ಕುಕೀಸ್ ಎಂಬ ಎರಡು ವಿಧಗಳಿವೆ.

ಬೆಂಗಳೂರು: ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿಯನ್ನು ಗಮನದಲ್ಲಿಟ್ಟು, ಐಟಿಸಿ ಫುಡ್ಸ್‌ ಇದೇ ಮೊದಲ ಬಾರಿಗೆ ಸಕ್ಕರೆರಹಿತ ಕುಕೀಸ್ ಬಿಡುಗಡೆ ಮಾಡಿದೆ.

ಪ್ರತಿದಿನದ ತಿಂಡಿಯಲ್ಲಿ ಸಕ್ಕರೆಯನ್ನು ಕಡಿಮೆ ಮಾಡಬೇಕೆಂದು ಯೋಚಿಸುವ ಗ್ರಾಹಕರಿಗಾಗಿ ಈ ಹೊಸ ಶ್ರೇಣಿಯನ್ನು ರೂಪಿಸಲಾಗಿದೆ. ರುಚಿ ಅಥವಾ ಸವಿಯನ್ನು ಕಡಿಮೆ ಮಾಡದೇ, ಆರೋಗ್ಯಕರ ಆಯ್ಕೆಯನ್ನು ಒದಗಿಸುವುದು ಇದರ ಉದ್ದೇಶವಾಗಿದೆ. ಈ ಶ್ರೇಣಿಯಲ್ಲಿ ಚೊಕೊ ನಟ್ಸ್ ಕುಕೀಸ್ ಮತ್ತು ಹೇಜಲ್‌ನಟ್ ಹಾಗೂ ಓಟ್ಸ್ ಕುಕೀಸ್ ಎಂಬ ಎರಡು ವಿಧಗಳಿವೆ. ಇವು ಪ್ರೋಟೀನ್‌ನ ಮೂಲವಾಗಿದ್ದು, ಟ್ರಾನ್ಸ್ ಕೊಬ್ಬುಗಳಿಲ್ಲ. ವಿಶೇಷವಾಗಿ ಹೇಜಲ್‌ನಟ್ ಹಾಗೂ ಓಟ್ಸ್ ರೂಪಾಂತರವು ಲ್ಯಾಕ್ಟೋಸ್‌ರಹಿತವಾಗಿದೆ.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಈ ಬಿಡುಗಡೆ ಕುರಿತು ಮಾತನಾಡಿದ ಐಟಿಸಿ ಲಿಮಿಟೆಡ್‌ನ ಆಹಾರ ವಿಭಾಗ ಬಿಸ್ಕಟ್ ಮಾರ್ಕೆಟಿಂಗ್ ಉಪಾಧ್ಯಕ್ಷ ಸೂರಜ್ ಕತೂರಿಯಾ, “ಸನ್‌ಫೀಸ್ಟ್ ಫಾರ್ಮ್‌ಲೈಟ್‌ನಲ್ಲಿ ನಾವು ಆರೋಗ್ಯಕರ ತಿಂಡಿ ಎಂದರೆ ಸವಿಯನ್ನು ತ್ಯಜಿಸುವುದು ಎಂದು ನಂಬುವುದಿಲ್ಲ. ಸಕ್ಕರೆರಹಿತ ಕುಕೀಸ್ ಮೂಲಕ, ರುಚಿಕರ ಹಾಗೂ ಮನಸ್ಸಿಗೆ ತೃಪ್ತಿ ನೀಡುವ ತಿಂಡಿ ಅನುಭವವನ್ನು ಗ್ರಾಹಕರಿಗೆ ಒದಗಿಸುತ್ತಿದ್ದೇವೆ,” ಎಂದರು.

ITC ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಶಾಂತನು ದಾಸ್ ಮಾತನಾಡಿ, “ಗ್ರಾಹಕರ ನಿರೀಕ್ಷೆ ಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವುದು ನಮ್ಮ ಹೊಣೆಗಾರಿಕೆ. ಸಕ್ಕರೆ ರಹಿತ ವಾಗಿದ್ದರೂ, ರುಚಿ ಮತ್ತು ಗುಣಮಟ್ಟವನ್ನು ಕಾಪಾಡುವಂತೆ ಈ ಕುಕೀಸ್‌ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ವಿವಿಧ ಆರೋಗ್ಯ ಅಗತ್ಯಗಳಿಗೆ ಹೊಂದುವ ಉತ್ಪನ್ನಗಳನ್ನು ಒದಗಿಸುವ ಮೂಲಕ, ಆರೋಗ್ಯಕರ ತಿಂಡಿಯನ್ನು ದಿನನಿತ್ಯದ ಜೀವನದ ಭಾಗವನ್ನಾಗಿಸುವುದು ನಮ್ಮ ಗುರಿ,” ಎಂದು ಹೇಳಿದರು.

ಪ್ರತಿ ಕುಕೀಸ್‌ ಪ್ಯಾಕ್‌ಗಳನ್ನು ತಾಜಾತನ ಮತ್ತು ಗುಣಮಟ್ಟ ಕಾಪಾಡುವಂತೆ ಸಿಂಗಲ್ ಸರ್ವ್ ಪ್ಯಾಕ್‌ಗಳಲ್ಲಿ ಪ್ಯಾಕ್ ಮಾಡಲಾಗಿದೆ. ಈ ಎರಡು ರೂಪಾಂತರಗಳು ಬ್ಲಿಂಕಿಟ್, ಸ್ವಿಗ್ಗಿ ಇನ್‌ ಸ್ಟಾಮಾರ್ಟ್ ಮತ್ತು ಜೆಪ್ಟೋ ಮೊದಲಾದ ತ್ವರಿತ ವಾಣಿಜ್ಯ ವೇದಿಕೆಗಳಲ್ಲಿ 100 ಗ್ರಾಂ ಪ್ಯಾಕ್‌ನಲ್ಲಿ ₹100 ದರದಲ್ಲಿ ಲಭ್ಯವಿರುತ್ತವೆ.