ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸರ್ಕಾರಿ ನೌಕರರಿಗೆ ಶುಭ ಸುದ್ದಿ: ಶೀಘ್ರದಲ್ಲೇ ಕನಿಷ್ಠ ಪಿಂಚಣಿ ಹೆಚ್ಚಳ ಸಾಧ್ಯತೆ

ಸರ್ಕಾರಿ ನೌಕರರಿಗೆ ಒಂದು ಶುಭ ಸುದ್ದಿ ಇದೆ. ಕೇಂದ್ರ ಸರ್ಕಾರವು ಕನಿಷ್ಠ ಪಿಂಚಣಿ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಿದೆ. ಇದರಿಂದ ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ. ಶೀಘ್ರದಲ್ಲಿ ಪಿಂಚಣಿ ಹಣವನ್ನು ಎಟಿಎಂ ಮೂಲಕ ಪಡೆಯುವ ಮತ್ತು ಪಿಂಚಣಿ ಕನಿಷ್ಠ ಮೊತ್ತವನ್ನು 7,500 ರೂ. ಗೆ ಹೆಚ್ಚಿಸುವ ಕುರಿತು ಸರ್ಕಾರ ಪರಿಗಣಿಸುತ್ತಿದೆ ಎನ್ನಲಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರವು ಕನಿಷ್ಠ ಪಿಂಚಣಿ (Pension) ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ಸರ್ಕಾರಿ ನೌಕರರು, ನಿವೃತ್ತರ ಪಿಂಚಣಿ ಮೊತ್ತವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಬಹುದು ಎನ್ನಲಾಗಿದೆ. ಕನಿಷ್ಠ ಪಿಂಚಣಿ ಮೊತ್ತವನ್ನು (retirement and provident fund) 7,500 ರೂ. ಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೇ ಪಿಂಚಣಿ ಹಣವನ್ನು ಎಟಿಎಂ ಮೂಲಕ ಪಡೆಯುವ, ಇಪಿಎಫ್‌ಒ (EPFO) ವರದಿ, ಕ್ಲೈಮ್ ಇತ್ಯರ್ಥಗಳ ದಾಖಲೆಗೆ ಡಿಜಿಟಲ್ ಸೇವೆಗಳನ್ನು ವಿಸ್ತರಿಸುವ ಕುರಿತು ಕೂಡ ಪ್ರಸ್ತಾಪ ನಡೆಸಲಾಗುತ್ತಿದೆ. ಇದು ದೇಶದ ಕೋಟ್ಯಾಂತರ ಪಿಂಚಣಿದಾರರಿಗೆ ಅನುಕೂಲ ಮಾಡಿಕೊಡಲಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ನೌಕರರ ಪಿಂಚಣಿ ಯೋಜನೆ (ಇಪಿಎಸ್-95) ಅಡಿಯಲ್ಲಿ ಕನಿಷ್ಠ ಪಿಂಚಣಿಯನ್ನು ತಿಂಗಳಿಗೆ ಪ್ರಸ್ತುತ ಇರುವ 1,000 ರೂ. ನಿಂದ 7,500 ರೂ. ಗೆ ಹೆಚ್ಚಿಸುವ ಪ್ರಸ್ತಾಪವನ್ನು ಪರಿಗಣಿಸುತ್ತಿದೆ. ಇದಕ್ಕೆ ಅನುಮೋದನೆ ದೊರೆತರೆ ನೌಕರರ ಭವಿಷ್ಯ ನಿಧಿ ಸಂಸ್ಥೆ ಅಡಿಯಲ್ಲಿ ಪಿಂಚಣಿ ಪ್ರಯೋಜನಗಳಿಗೆ ಅತ್ಯಂತ ಮಹತ್ವದ ಬದಲಾವಣೆ ಎಂದು ಇದು ಗುರುತಿಸಲ್ಪಡಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ: ದೇಶದಲ್ಲೂ ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಹೆಚ್ಚಳ ಸಾಧ್ಯತೆ

ಪಿಂಚಣಿ ಮೊತ್ತ ಪರಿಷ್ಕರಣೆಗೆ ನಿರ್ಧರಿಸಿರುವ ಕೇಂದ್ರ ಸರ್ಕಾರ ಇದರೊಂದಿಗೆ ಇಪಿಎಫ್ ಒ ​​ಭವಿಷ್ಯ ನಿಧಿ ಠೇವಣಿಗಳ ಮೇಲಿನ ವಾರ್ಷಿಕ ಬಡ್ಡಿ ದರವನ್ನು 8.25ರಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಸದ್ಯ ಈ ಪ್ರಸ್ತಾವನೆಯು ಹಣಕಾಸು ಸಚಿವಾಲಯದ ಅನುಮೋದನೆಗಾಗಿ ಕಾಯುತ್ತಿದೆ.

ಇನ್ನು ಮುಂದೆ ಪಿಂಚಣಿ ಹಣವನ್ನು ಹಿಂಪಡೆಯಲು ಎಟಿಎಂ ಬಳಕೆ ಮಾಡಬಹುದಾಗಿದೆ. ಭವಿಷ್ಯ ನಿಧಿ ಖಾತೆಗಳಿಗೆ ಎಟಿಎಂ ಆಧಾರಿತ ಹಿಂಪಡೆಯುವಿಕೆಗಳನ್ನು ಪರಿಚಯಿಸುವ ಪ್ರಸ್ತಾಪವನ್ನು ಕೂಡ ಪರಿಗಣಿಸಲಾಗುತ್ತಿದ್ದು, ಇದು ಭವಿಷ್ಯ ನಿಧಿಗಳಿಗೆ ಗ್ರಾಹಕರ ಪ್ರವೇಶವನ್ನು ಸುಲಭ ಮತ್ತು ವೇಗ ಗೊಳಿಸುವ ಗುರಿಯನ್ನು ಹೊಂದಿದೆ. ಇದರಿಂದ ಹೆಚ್ಚು ಕಾಲ ತೆಗೆದುಕೊಳ್ಳುವ ಕ್ಲೈಮ್ ಪ್ರಕ್ರಿಯೆಗಳ ಹೊರೆ ಕಡಿಮೆಯಾಗಲಿದೆ. ಇದು ತುರ್ತು ಪರಿಸ್ಥಿತಿಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನ ಕೊಡಲಿದೆ.

ಇದರೊಂದಿಗೆ ನೌಕರರ ಭವಿಷ್ಯ ನಿಧಿ ಸಂಸ್ಥೆಯು 2025–26ರ ಹಣಕಾಸು ವರ್ಷದಲ್ಲಿ ಕ್ಲೈಮ್ ಇತ್ಯರ್ಥಗಳಲ್ಲಿ ಹೆಚ್ಚಳವಾಗಿರುವುದಾಗಿ ಹೇಳಿದೆ. ಹಿಂದಿನ ವರ್ಷದಲ್ಲಿ 6.01 ಕೋಟಿ ಕ್ಲೈಮ್ ಇತ್ಯರ್ಥ ಮಾಡಲಾಗಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 8.31 ಕೋಟಿ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲಾಗಿದೆ. ಇವುಗಳಲ್ಲಿ 5.51 ಕೋಟಿ ಮುಂಗಡ ಅಥವಾ ಭಾಗಶಃ ಹಿಂಪಡೆಯುವಿಕೆ ಕ್ಲೇಮ್‌ಗಳಾಗಿವೆ. ಕಳೆದ ತಿಂಗಳು ಅಂದರೆ 2026ರ ಏಪ್ರಿಲ್ ನಲ್ಲಿ ​​61.03 ಲಕ್ಷ ಕ್ಲೇಮ್‌ಗಳನ್ನು ಇತ್ಯರ್ಥಪಡಿಸಲಾಗಿದೆ. ಇದನ್ನು ಕೇವಲ 20 ದಿನಗಳಲ್ಲಿ ಪ್ರಕ್ರಿಯೆಗೊಳಿಸಲಾಯಿತು.

ಡಿಜಿಟಲ್ ಸೇವೆಯ ಮೂಲಕ ಸುಮಾರು 6.68 ಕೋಟಿ ಕ್ಲೇಮ್‌ಗಳನ್ನು ವಿತರಿಸಲಾಗಿದ್ದು, ಇದರಲ್ಲಿ 1.59 ಕೋಟಿ ಖಾತೆಗಳನ್ನು ಉದ್ಯೋಗದಾತರ ಹಸ್ತಕ್ಷೇಪವಿಲ್ಲದೆ ನೇರವಾಗಿ ಬ್ಯಾಂಕ್‌ಗಳಿಗೆ ಲಿಂಕ್ ಮಾಡಲಾಗಿದೆ. ಹೆಚ್ಚುವರಿಯಾಗಿ, 70.55 ಲಕ್ಷ ವರ್ಗಾವಣೆ ಕ್ಲೇಮ್‌ಗಳನ್ನು ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗಿದೆ.

ಭರ್ಜರಿ ಲಾಭ ದಾಖಲಿಸಿದ ಫೆಡರಲ್‌ ಬ್ಯಾಂಕ್‌ - Q4 ನಲ್ಲಿ ನಿವ್ವಳ ಲಾಭ 1,259 ಕೋಟಿ ರೂ!

ಭವಿಷ್ಯ ನಿಧಿ ಖಾತೆಗೆ ಗ್ರಾಹಕರ ಪ್ರವೇಶವನ್ನು ಮತ್ತಷ್ಟು ಹೆಚ್ಚಿಸಲು, EPFO ​​E-PRAAPTI ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದ್ದು, ಇದು ಆಧಾರ್ ಆಧಾರಿತ ಪರಿಶೀಲನೆಯನ್ನು ಬಳಸಿಕೊಂಡು ನಿಷ್ಕ್ರಿಯ ಖಾತೆಗಳನ್ನು ಸಕ್ರಿಯಗೊಳಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಅಲ್ಲದೇ ಖಾತೆಗಳನ್ನು ಸಾರ್ವತ್ರಿಕ ಖಾತೆ ಸಂಖ್ಯೆ (UAN) ಗೆ ಲಿಂಕ್ ಮಾಡದವರಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ. ಶೀಘ್ರದಲ್ಲೇ ಇದನ್ನು ಸದಸ್ಯರ ಐಡಿ ಇಲ್ಲದ ಬಳಕೆದಾರರಿಗೆ ವಿಸ್ತರಿಸುವ ಯೋಜನೆಯನ್ನು ಕೂಡ ಮಾಡಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author