ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Russian Oil Purchase: ರಷ್ಯಾದಿಂದ ಇಂಧನ ಖರೀದಿ ವಿಚಾರ; ಟ್ರಂಪ್‌ ಹೇಳಿಕೆ ಬೆನ್ನಲ್ಲೇ ಭಾರತ ಸ್ಪಷ್ಟನೆ

Donald Trump: ಭಾರತ ತೈಲ ಮತ್ತು ಅನಿಲದ ಗಮನಾರ್ಹ ಆಮದುದಾರ. ಅಸ್ಥಿರ ಇಂಧನ ಸನ್ನಿವೇಶದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಸ್ಥಿರ ಆದ್ಯತೆಯಾಗಿದೆ. ನಮ್ಮ ಆಮದು ನೀತಿಗಳು ಸಂಪೂರ್ಣವಾಗಿ ಈ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವದೆಹಲಿ: ಅಮೆರಿಕದ ಒತ್ತಾಯದಂತೆ ಭಾರತ ರಷ್ಯಾದಿಂದ ಇಂಧನ ಖರೀದಿಯನ್ನು (Russian Oil Purchase) ಸಂಪೂರ್ಣವಾಗಿ ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಒಪ್ಪಿಕೊಂಡಿದ್ದಾರೆ ಎಂದು ಡೊನಾಲ್ಡ್‌ ಟ್ರಂಪ್‌(Donald Trump) ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಭಾರತ ಸ್ಪಷ್ಟನೆ ನೀಡಿದೆ. ವಿದೇಶಾಂಗ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಸ್ಥಿರ ಇಂಧನ ಸನ್ನಿವೇಶದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಭಾರತದ ನಿರಂತರ ಆದ್ಯತೆಯಾಗಿದೆ ಎಂದು ಹೇಳಿದೆ.

ಭಾರತ ತೈಲ ಮತ್ತು ಅನಿಲದ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಸ್ಥಿರ ಇಂಧನ ಸನ್ನಿವೇಶದಲ್ಲಿ ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಸ್ಥಿರ ಆದ್ಯತೆಯಾಗಿದೆ. ನಮ್ಮ ಆಮದು ನೀತಿಗಳು ಸಂಪೂರ್ಣವಾಗಿ ಈ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಥಿರ ಇಂಧನ ಬೆಲೆಗಳು ಮತ್ತು ಸುರಕ್ಷಿತ ಪೂರೈಕೆಗಳನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಇಂಧನ ನೀತಿಯ ಅವಳಿ ಗುರಿಗಳಾಗಿವೆ. ಇದರಲ್ಲಿ ನಮ್ಮ ಇಂಧನ ಮೂಲವನ್ನು ವಿಶಾಲ ಆಧಾರದ ಮೇಲೆ ಪಡೆಯುವುದು ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಪೂರೈಸಲು ಸೂಕ್ತವಾದಂತೆ ವೈವಿಧ್ಯಗೊಳಿಸುವುದು ಸೇರಿದೆ. ಯುಎಸ್‌ಗೆ ಸಂಬಂಧಿಸಿದಂತೆ, ನಾವು ಹಲವು ವರ್ಷಗಳಿಂದ ನಮ್ಮ ಇಂಧನ ಸಂಗ್ರಹಣೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಇದು ಕಳೆದ ದಶಕದಲ್ಲಿ ಸ್ಥಿರವಾಗಿ ಪ್ರಗತಿ ಸಾಧಿಸಿದೆ. ಪ್ರಸ್ತುತ ಆಡಳಿತವು ಭಾರತದೊಂದಿಗೆ ಇಂಧನ ಸಹಕಾರವನ್ನು ಗಾಢವಾಗಿಸಲು ಆಸಕ್ತಿ ತೋರಿಸಿದೆ. ಚರ್ಚೆಗಳು ನಡೆಯುತ್ತಿವೆ ಎಂದು ಅದು ಹೇಳಿದೆ.

ಇದನ್ನೂ ಓದಿ: PM Modi: ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಪ್ರಧಾನಿ ಮೋದಿ ಸ್ವಾಗತ, ಟ್ರಂಪ್‌ ಶಾಂತಿ ಪ್ರಯತ್ನಕ್ಕೆ ಶ್ಲಾಘನೆ

ಟ್ರಂಪ್‌ ಹೇಳಿದ್ದೇನು?

ಭಾರತದ ಮೇಲೆ ಶೇ.25 ರಷ್ಟು ದಂಡನಾತ್ಮಕ ಸುಂಕ ವಿಧಿಸಿದ ತಿಂಗಳುಗಳ ನಂತರ, ರಷ್ಯಾದಿಂದ ಸಮುದ್ರದ ಮೂಲಕ ಕಚ್ಚಾ ತೈಲ ರಫ್ತನ್ನು ತಡೆಯುವುದಾಗಿ ಭಾರತ ತನಗೆ ಭರವಸೆ ನೀಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ ಎಂದು ಅವರು ಹೇಳಿದರು. ರಷ್ಯಾದ ಇಂಧನ ಆದಾಯವನ್ನು ಕಡಿತಗೊಳಿಸುವ ಪ್ರಯತ್ನಗಳನ್ನು ಅಮೆರಿಕ ಮಾಡುತ್ತಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಅಮೆರಿಕದ ಅಭಿಪ್ರಾಯಕ್ಕೆ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಖರೀದಿಸುವುದು ನಮಗೂ ತೃಪ್ತಿದಾಯಕವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಚೀನಾ ಮೇಲೆಯೂ ಇದೇ ರೀತಿ ನಿರ್ಬಂಧ ಹೇರಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ ಟ್ರಂಪ್‌, ಭಾರತ ನಮ್ಮ ಮನವಿಗೆ ಒಪ್ಪಿದೆ, ಮೋದಿ ನನ್ನ ಆಪ್ತ ಎಂದು ಹೇಳಿದರು. ಟ್ರಂಪ್ ಅವರ ಹೇಳಿಕೆಗಳನ್ನು ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂಧನ ಬೆಲೆಗಳನ್ನು ಕಡಿಮೆ ಇರಿಸಲು ಮತ್ತು ತನ್ನ ದೇಶೀಯ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ರಷ್ಯಾದ ತೈಲ ಆಮದು ಅಗತ್ಯ ಎಂದು ಭಾರತ ಹೇಳಿದೆ.

ಟ್ರಂಪ್ ಆಡಳಿತವು ಭಾರತದ ಮೇಲೆ ರಷ್ಯಾದ ತೈಲ ಖರೀದಿಗೆ ದಂಡವಾಗಿ ಶೇ.25 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದೆ, ಇದರಿಂದಾಗಿ ಅಮೆರಿಕ ಭಾರತದ ಮೇಲೆ ವಿಧಿಸಿರುವ ಒಟ್ಟು ಸುಂಕವು ಶೇ.50 ಕ್ಕೆ ತಲುಪಿದೆ. ಚೀನಾ ಕೂಡ ರಷ್ಯಾದ ಕಚ್ಚಾ ತೈಲದ ಪ್ರಮುಖ ಖರೀದಿದಾರನಾಗಿದ್ದರೂ, ಟ್ರಂಪ್ "ದ್ವಿತೀಯ ಸುಂಕ" ಎಂದು ವಿವರಿಸಿರುವುದರಿಂದ ಭಾರತಕ್ಕೆ ಪರಿಣಾಮ ಹೆಚ್ಚಿದೆ.