ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026: ಪರ್ಸನಲ್ ಕೇರ್ ಶ್ರೇಣಿಯ ಉತ್ಪನ್ನಗಳ ಮೇಲೆ ಅಮೆಜಾನ್‌ನಲ್ಲಿ ವಿಶೇಷ ಆಫರ್‌ಗಳು

ಅ.8ರಿಂದ ಆರಂಭವಾಗುವ ಈ ಸೇಲ್‌ನಲ್ಲಿ ಡ್ರೀಮಿಯ ರೋಬೋಟಿಕ್ ವ್ಯಾಕ್ಯೂಮ್‌ಗಳು, ವೆಟ್ & ಡ್ರೈ ವ್ಯಾಕ್ಯೂಮ್ ಕ್ಲೀನರ್‌ಗಳು, ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್‌ಗಳು ಹಾಗೂ ಗ್ರೂಮಿಂಗ್ ಸೊಲ್ಯೂಷನ್‌ಗಳ ಶ್ರೇಣಿಯ ಮೇಲೆ ಆಕರ್ಷಕ ಆಫರ್‌ಗಳು ಲಭ್ಯವಿರಲಿವೆ. ಇದರ ಮೂಲಕ ಗ್ರಾಹಕರು ಸ್ಮಾರ್ಟ್ ತಂತ್ರಜ್ಞಾನದ ನೆರವಿನಿಂದ ತಮ್ಮ ದೈನಂದಿನ ಜೀವನಶೈಲಿಯನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಅವಕಾಶ ಪಡೆಯಲಿದ್ದಾರೆ

ಬೆಂಗಳೂರು: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಸ್ಮಾರ್ಟ್ ಹೋಮ್ ಆವಿಷ್ಕಾರ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆಯಾದ ಡ್ರೀಮಿ ಟೆಕ್ನಾಲಜಿ, ತನ್ನ ಸ್ಮಾರ್ಟ್ ಹೋಮ್ ಮತ್ತು ಪರ್ಸನಲ್ ಕೇರ್ ಉತ್ಪನ್ನಗಳ ಶ್ರೇಣಿಯನ್ನು ಅಮೆಜಾನ್ ಇಂಡಿಯಾ ನಲ್ಲಿ ವಿಶೇಷ ಆಫರ್‌ಗಳೊಂದಿಗೆ ಗ್ರಾಹಕರಿಗೆ ಪರಿಚಯಿಸುತ್ತಿದೆ.

ಅ.8ರಿಂದ ಆರಂಭವಾಗುವ ಈ ಸೇಲ್‌ನಲ್ಲಿ ಡ್ರೀಮಿಯ ರೋಬೋಟಿಕ್ ವ್ಯಾಕ್ಯೂಮ್‌ಗಳು, ವೆಟ್ & ಡ್ರೈ ವ್ಯಾಕ್ಯೂಮ್ ಕ್ಲೀನರ್‌ಗಳು, ಕಾರ್ಡ್‌ಲೆಸ್ ಸ್ಟಿಕ್ ವ್ಯಾಕ್ಯೂಮ್‌ಗಳು ಹಾಗೂ ಗ್ರೂಮಿಂಗ್ ಸೊಲ್ಯೂಷನ್‌ಗಳ ಶ್ರೇಣಿಯ ಮೇಲೆ ಆಕರ್ಷಕ ಆಫರ್‌ಗಳು ಲಭ್ಯವಿರಲಿವೆ. ಇದರ ಮೂಲಕ ಗ್ರಾಹಕರು ಸ್ಮಾರ್ಟ್ ತಂತ್ರಜ್ಞಾನದ ನೆರವಿನಿಂದ ತಮ್ಮ ದೈನಂದಿನ ಜೀವನಶೈಲಿಯನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಅವಕಾಶ ಪಡೆಯಲಿದ್ದಾರೆ. ಈ ಉತ್ಪನ್ನಗಳು ಇದೇ ಹಬ್ಬದ ವಿಶೇಷ ಬೆಲೆಗಳಲ್ಲಿ ಡ್ರೀಮಿ ಇಂಡಿಯಾ ವೆಬ್‌ಸೈಟ್, ಕ್ರೋಮಾ ಮತ್ತು ರಿಲಯನ್ಸ್ ರಿಟೇಲ್ ಮಳಿಗೆಗಳಲ್ಲಿಯೂ ಲಭ್ಯ ವಿರಲಿವೆ.

ಇದನ್ನೂ ಓದಿ: AI-ಚಾಲಿತ ಸಾಧನಗಳಿಗಾಗಿ ಸರ್ಚ್ ಡಿಮ್ಯಾಂಡ್ ವರ್ಷದಿಂದ ವರ್ಷಕ್ಕೆ ಶೇ.60ರಷ್ಟು ಹೆಚ್ಚಳ: Amazon.in ಈಗ ವಿಶೇಷವಾದ 'AI ಸ್ಟೋರ್' ಪ್ರಾರಂಭ

ಹಬ್ಬದ ಸೀಸನ್‌ಗೆ ಭಾರತೀಯ ಕುಟುಂಬಗಳು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ಡ್ರೀಮಿ ಟೆಕ್ನಾಲಜಿ ಉತ್ಪನ್ನಗಳ ಶ್ರೇಣಿಯು ಬುದ್ಧಿವಂತ ಆಟೊಮೇಷನ್, ಸುಧಾರಿತ ಕ್ಲೀನಿಂಗ್ ತಂತ್ರಜ್ಞಾನಗಳು ಮತ್ತು ಅನುಕೂಲಕರ ಉತ್ಪನ್ನ ಅನುಭವಗಳನ್ನು ಒಟ್ಟುಗೂಡಿಸಿ, ದೈನಂದಿನ ಮನೆ ನಿರ್ವಹಣೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶ ಹೊಂದಿದೆ. ಸೇಲ್ ಅವಧಿಯಲ್ಲಿ ಗ್ರಾಹಕರು ಆಕರ್ಷಕ ಆಫರ್‌ ಗಳ ಜೊತೆಗೆ, ಆಯ್ದ ಉತ್ಪನ್ನಗಳ ಮೇಲೆ ನೋ-ಕಾಸ್ಟ್ ಇಎಂಐ ಹೆಚ್ಚುವರಿ ಬ್ಯಾಂಕ್ ಆಫರ್‌ಗಳು ಮತ್ತು ಕ್ಯಾಶ್‌ಬ್ಯಾಕ್ ಸೌಲಭ್ಯಗಳನ್ನು ಪಡೆಯಬಹುದು.

ಡ್ರೀಮಿ ಟೆಕ್ನಾಲಜಿ, ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನು ಶರ್ಮಾ ಅವರು ಮಾತನಾಡಿ, “ಹಬ್ಬದ ಸೀಸನ್ ಎಂದರೆ ಒಟ್ಟಾಗಿ ಸೇರಿ, ಸಂಭ್ರಮಿಸಿ ಮತ್ತು ನಮಗೆ ಅತ್ಯಂತ ಮುಖ್ಯವಾದ ವಿಷಯಗಳಿಗೆ ಸಮಯ ಮೀಸಲಿಡುವ ಸಂದರ್ಭ. ಡ್ರೀಮಿ ತಂತ್ರಜ್ಞಾನವು ಕೇವಲ ದೈನಂದಿನ ಕೆಲಸಗಳನ್ನು ಸರಳಗೊಳಿಸುವುದಕ್ಕಿಂತ ಹೆಚ್ಚಿನದನ್ನು ಮಾಡಬೇಕು ಎಂದು ನಾವು ನಂಬುತ್ತೇವೆ ಜನರು ಸ್ಮಾರ್ಟ್ ರೀತಿಯಲ್ಲಿ ಬದುಕಲು, ಹೆಚ್ಚಿನ ಅನುಕೂಲವನ್ನು ಪಡೆಯಲು ಮತ್ತು ಮುಖ್ಯ ವಾದ ವಿಷಯಗಳತ್ತ ಗಮನಹರಿಸಲು ಹೆಚ್ಚಿನ ಸಮಯವನ್ನು ಒದಗಿಸಬೇಕು.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಮೂಲಕ ನಮ್ಮ ಸ್ಮಾರ್ಟ್ ಹೋಮ್ ಮತ್ತು ಪರ್ಸನಲ್ ಕೇರ್ ಸೊಲ್ಯೂಷನ್‌ಗಳನ್ನು ಭಾರತೀಯ ಗ್ರಾಹಕರಿಗೆ ಮತ್ತಷ್ಟು ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತಿದ್ದೇವೆ. ಇದರಿಂದ ಅವರು ತಮ್ಮ ದೈನಂದಿನ ಜೀವನದಲ್ಲಿ ಹೆಚ್ಚಿನ ಬುದ್ಧಿವಂತಿಕೆ ಮತ್ತು ಅನುಕೂಲತೆಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಭಾರತದಲ್ಲಿ ನಮ್ಮ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತಿರುವ ಸಂದರ್ಭದಲ್ಲಿ, ಗ್ರಾಹಕರಿಗೆ ಸುಗಮವಾದ ಉತ್ಪನ್ನ ಮಾಲೀಕತ್ವದ ಅನುಭವದೊಂದಿಗೆ ಚಿಂತನಶೀಲ ಆವಿಷ್ಕಾರಗಳನ್ನು ಒದಗಿಸುವುದೇ ನಮ್ಮ ಪ್ರಮುಖ ಆದ್ಯತೆಯಾಗಿದೆ” ಎಂದು ಹೇಳಿದರು.