ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

HDFC Life: 44 ವಿಮಾ ಕಂಪನಿಗಳ ಸಹಭಾಗಿತ್ವದಲ್ಲಿ 95 ದೂರುಗಳ ಇತ್ಯರ್ಥ; ₹11.63 ಕೋಟಿ ಮೌಲ್ಯದ ಕ್ಲೈಮ್ ಪಾವತಿ

ದೇಶಾದ್ಯಂತ ನಡೆಯುತ್ತಿರುವ ಈ ಶಿಬಿರಗಳು ಐಆರ್‌ಡಿಎಐನ ‘ದೂರು ಪರಿಹಾರ ಮಾಸ’ ಉಪ ಕ್ರಮದ ಭಾಗವಾಗಿವೆ. ಗ್ರಾಹಕರು ತಮ್ಮ ವಿಮಾ ಕಂಪನಿಗಳ ಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ ದೂರುಗಳಿಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ, ಐಆರ್‌ಡಿಎಐ ಜೀವ ವಿಮಾ ಮಂಡಳಿ ಮತ್ತು ಸಾಮಾನ್ಯ ವಿಮಾ ಮಂಡಳಿಯ ಸಹಯೋಗದಲ್ಲಿ ಈ ಶಿಬಿರಗಳನ್ನು ಆಯೋಜಿಸುತ್ತಿದೆ.

ಬೆಂಗಳೂರು: ಭಾರತದ ಪ್ರಮುಖ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಎಚ್‌ಡಿಎಫ್‌ಸಿ ಲೈಫ್(HDFC Life), ಐಆರ್‌ಡಿಎಐನ ‘ದೂರು ಪರಿಹಾರ ಮಾಸ’ದ ಅಂಗವಾಗಿ ಬೆಂಗಳೂರಿನಲ್ಲಿ ದೂರು ಪರಿಹಾರ ಶಿಬಿರವನ್ನು ಆಯೋಜಿಸಿತು.

ಈ ಶಿಬಿರದಲ್ಲಿ ಐಆರ್‌ಡಿಎಐನ ಪಾಲಿಸಿದಾರರ ರಕ್ಷಣಾ ಸಮಿತಿ ಮತ್ತು ದೂರು ಪರಿಹಾರ ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಮುಖ್ಯಸ್ಥರಾದ ಎ.ವಿ. ರಾವ್, ಉಪ ಜನರಲ್ ಮ್ಯಾನೇಜರ್‌ ಗಳಾದ ವಿಕಾಸ್ ಜೈನ್ ಮತ್ತು ಎಚ್. ಬಾಬು ಯೋಗೀಶ್, ವಿಮಾ ಒಂಬುಡ್ಸ್‌ಮನ್ ಮಂಡಳಿಯ ಕಾರ್ಯದರ್ಶಿ ಹರಿಹರಸುಧನ್, ಬೆಂಗಳೂರು ವಿಮಾ ಒಂಬುಡ್ಸ್‌ಮನ್ ಕಾರ್ಯದರ್ಶಿ ಶ್ರೀಮತಿ ನಿರ್ಮಲಾ ದೇವಿ ಎನ್. ಹಾಗೂ ಎಚ್‌ಡಿಎಫ್‌ಸಿ ಲೈಫ್‌ನ ಜನರಲ್ ಕೌನ್ಸೆಲ್ ಮತ್ತು ಮುಖ್ಯ ಅನುಸರಣಾ ಅಧಿಕಾರಿ ನರೇಂದ್ರ ಗಂಗನ್ ಸೇರಿದಂತೆ ವಿಮಾ ಉದ್ಯಮದ ಪ್ರತಿನಿಧಿಗಳು ಭಾಗವಹಿಸಿದ್ದರು.

ಒಟ್ಟು 44 ವಿಮಾ ಕಂಪನಿಗಳು ಪಾಲ್ಗೊಂಡ ಈ ಶಿಬಿರದಲ್ಲಿ 95 ಪಾಲಿಸಿ ಸಂಬಂಧಿತ ದೂರುಗಳನ್ನು ಇತ್ಯರ್ಥಪಡಿಸಲಾಯಿತು. ಅಲ್ಲದೆ, ಪಾಲಿಸಿದಾರರಿಗೆ ₹11.63 ಕೋಟಿ ಮೌಲ್ಯದ ಕ್ಲೈಮ್ ಮೊತ್ತವನ್ನು ಪಾವತಿಸಲಾಯಿತು.

ಇದನ್ನೂ ಓದಿ: HDFC Layoff: ಸ್ವಯಂ ಚಾಲಿತ ತಂತ್ರಜ್ಞಾನ ಅಳವಡಿಕೆ; ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‌ಪಾಸ್‌

ದೇಶಾದ್ಯಂತ ನಡೆಯುತ್ತಿರುವ ಈ ಶಿಬಿರಗಳು ಐಆರ್‌ಡಿಎಐನ ‘ದೂರು ಪರಿಹಾರ ಮಾಸ’ ಉಪ ಕ್ರಮದ ಭಾಗವಾಗಿವೆ. ಗ್ರಾಹಕರು ತಮ್ಮ ವಿಮಾ ಕಂಪನಿಗಳ ಪ್ರತಿನಿಧಿಗಳನ್ನು ನೇರವಾಗಿ ಭೇಟಿ ಮಾಡಿ ದೂರುಗಳಿಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ, ಐಆರ್‌ಡಿಎಐ ಜೀವ ವಿಮಾ ಮಂಡಳಿ ಮತ್ತು ಸಾಮಾನ್ಯ ವಿಮಾ ಮಂಡಳಿಯ ಸಹಯೋಗದಲ್ಲಿ ಈ ಶಿಬಿರಗಳನ್ನು ಆಯೋಜಿಸುತ್ತಿದೆ. ವಿವಿಧ ವಿಮಾ ಕಂಪನಿಗಳನ್ನು ಒಂದೇ ವೇದಿಕೆಗೆ ತಂದು ದೂರುಗಳ ಇತ್ಯರ್ಥವನ್ನು ತ್ವರಿತಗೊಳಿಸುವುದು ಇದರ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಡಿಎಫ್‌ಸಿ ಲೈಫ್‌ನ ಜನರಲ್ ಕೌನ್ಸೆಲ್ ಮತ್ತು ಮುಖ್ಯ ಅನುಸರಣಾ ಅಧಿಕಾರಿ ನರೇಂದ್ರ ಗಂಗನ್, “ಅನಿಶ್ಚಿತತೆಯ ಸಮಯದಲ್ಲಿ ಭದ್ರತೆಯ ಭರವಸೆ ನೀಡುವುದೇ ವಿಮೆಯ ಮೂಲ ಉದ್ದೇಶ. ಈ ಭರವಸೆಯು ಪಾಲಿಸಿ ಒಪ್ಪಂದಕ್ಕೆ ಸೀಮಿತವಾಗದೆ, ಗ್ರಾಹಕರೊಂದಿಗೆ ನಿರಂತರ ವಿಶ್ವಾಸದ ಬಾಂಧವ್ಯವನ್ನು ಬೆಳೆಸುತ್ತದೆ. ಉತ್ಪನ್ನ ವಿನ್ಯಾಸದಿಂದ ಕ್ಲೈಮ್ ಇತ್ಯರ್ಥದವರೆಗೆ ಪ್ರತಿಯೊಂದು ಹಂತದಲ್ಲೂ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ನಮ್ಮ ಆದ್ಯತೆಯಾಗಿದೆ. ಐಆರ್‌ಡಿಎಐ ಮತ್ತು ವಿಮಾ ಮಂಡಳಿಗಳ ಇಂತಹ ಪ್ರಯತ್ನಗಳು ಪಾಲಿಸಿದಾರರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ವಿಮಾ ಕಂಪನಿಗಳ ಹೊಣೆಗಾರಿಕೆಯನ್ನು ಹೆಚ್ಚಿಸುತ್ತವೆ,” ಎಂದು ತಿಳಿಸಿದರು.

ಎಚ್‌ಡಿಎಫ್‌ಸಿ ಲೈಫ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಮೀರ್ ಯೋಗೀಶ್ವರ್ ಮಾತನಾಡಿ, “ಈ ಶಿಬಿರದಲ್ಲಿ ವಿವಿಧ ವಿಮಾ ಕಂಪನಿಗಳೊಂದಿಗೆ ಸೇರಿ ಬಾಕಿ ಉಳಿದಿದ್ದ ದೂರುಗಳನ್ನು ಪರಿಶೀಲಿಸಿ, 95 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಗ್ರಾಹಕ ಕೇಂದ್ರಿತ ಧೋರಣೆಯೇ ನಮ್ಮ ಸಂಸ್ಥೆಯ ಕಾರ್ಯಚಟುವಟಿಕೆಗಳ ಆಧಾರವಾಗಿದೆ. ದೂರು ಪರಿಹಾರ ಪ್ರಕ್ರಿಯೆ ತ್ವರಿತ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿರುವಂತೆ ನಮ್ಮ ತಂಡಗಳು ಕಾರ್ಯನಿರ್ವಹಿಸಿವೆ,” ಎಂದರು.

ಎಚ್‌ಡಿಎಫ್‌ಸಿ ಲೈಫ್ ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ದಾಖಲಿಸಲು ಮತ್ತು ಮೇಲ್ಮನವಿ ಸಲ್ಲಿಸಲು ವಿವಿಧ ವ್ಯವಸ್ಥೆಗಳನ್ನು ಹೊಂದಿದೆ. ಐಎಲ್‌ಎಂ ರಿಸರ್ಚ್‌ನ ದತ್ತಾಂಶದ ಪ್ರಕಾರ, 2021-22ರಿಂದ 2025-26ರವರೆಗಿನ ಐದು ಹಣಕಾಸು ವರ್ಷಗಳ ಸರಾಸರಿ ಆಧಾರದ ಮೇಲೆ, ಜೀವ ವಿಮಾ ಕ್ಷೇತ್ರದಲ್ಲಿ ಕಡಿಮೆ ಕ್ಲೈಮ್ ಸಂಬಂಧಿತ ದೂರುಗಳನ್ನು ಹೊಂದಿರುವ ಕಂಪನಿಗಳಲ್ಲಿ ಎಚ್‌ಡಿಎಫ್‌ಸಿ ಲೈಫ್ ಮುಂಚೂಣಿಯಲ್ಲಿದೆ.