ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gold Price Today on 5th December 2025: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಎಷ್ಟಿದೆ ಇಂದಿನ ದರ?

Gold Rate Today: ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 25 ರೂ. ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್‌ನ ಒಂದು 27 ರೂ. ಕಂಡು ಬಂದಿದೆ.

ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದೆ(ಸಂಗ್ರಹ ಚಿತ್ರ) -

ಬೆಂಗಳೂರು: ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದು 22 (Gold Price Today on 5th December 2025) ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 25 ರೂ. ಏರಿಕೆ ಕಂಡು ಬಂದಿದ್ದು, 24 ಕ್ಯಾರೆಟ್‌ನ ಒಂದು 27 ರೂ. ಕಂಡು ಬಂದಿದೆ. 22 ಕ್ಯಾರಟ್‌ ಚಿನ್ನದ ಬೆಲೆ 11,910 ರೂ. ಆದರೆ, 24 ಕ್ಯಾರಟ್‌ ಚಿನ್ನದ ದರ 12,993 ರೂ. ಇದೆ. 22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 95,280 ರೂ. ಇದ್ದರೆ, 10 ಗ್ರಾಂಗೆ ನೀವು 1,19,100 ರೂ. ಮತ್ತು 100 ಗ್ರಾಂ ಗೆ 11,91,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,03,944 ರೂ. ನೀಡಿದರೆ, 10 ಗ್ರಾಂಗೆ ನೀವು 1,29,930 ರೂ. ಮತ್ತು 100 ಗ್ರಾಂಗೆ 12,99,300 ರೂ. ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,910 ರೂ 12,993 ರೂ.
ಮುಂಬೈ 11,910 ರೂ 12,993 ರೂ.
ದೆಹಲಿ 11,925 ರೂ. 13,008 ರೂ.
ಕೋಲ್ಕತ್ತಾ 11,910 ರೂ 12,993 ರೂ.
ಹೈದರಾಬಾದ್‌ 11,910 ರೂ 12,993 ರೂ.

ದೇಶದ ಬೇರೆ ಬೇರೆ ನಗರಗಳಲ್ಲಿ ಚಿನ್ನದ ದರವನ್ನು ನೋಡುವುದಾದರೆ ಬೆಂಗಳೂರು, ಹೈದರಾಬಾದ್‌ ಹಾಗೂ ಕೊಲ್ಕತ್ತಾದಲ್ಲಿ 22 ಕ್ಯಾರಟ್‌ ಚಿನ್ನ 11,910 ರೂ. ಆದರೆ, 24 ಕ್ಯಾರಟ್‌ ಚಿನ್ನದ ದರ 12,993 ರೂ. ಇದೆ. ದೆಹಲಿಯಲ್ಲಿ ಕೊಂಚ ವ್ಯತ್ಯಾಸವಿದ್ದು, 22 ಕ್ಯಾರಟ್‌ ಚಿನ್ನ 11,925 ರೂ. ಹಾಗೂ 24 ಕ್ಯಾರಟ್‌ ಚಿನ್ನ 13,008 ರೂ. ಇದೆ.

ಬೆಳ್ಳಿ ದರದಲ್ಲಿ ಇಂದು ಇಳಿಕೆ ಕಂಡು ಬಂದಿದೆ. ಬೆಳ್ಳಿ ದರ 187 ರೂ. ಇದ್ದು, 8 ಗ್ರಾಂ ಬೆಳ್ಳಿಗೆ 1,496 ರೂ. 10 ಗ್ರಾಂಗೆ 1,870 ರೂ. ಮತ್ತು 1 ಕೆ.ಜಿಗೆ 1,87,000 ರೂ. ಪಾವತಿಸಬೇಕು. ದೆಹಲಿ, ಮುಂಬೈ, ಕೋಲ್ಕತ್ತಾದಲ್ಲಿಯೂ ಇದೇ ದರ ಇದೆ.

Vishakha Bhat Heggar

View all posts by this author