ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಚ್.ಡಿ.ಎಫ್.ಸಿ. ಬ್ಯಾಂಕ್ ವಾಟ್ಸಾಪ್ ಬ್ಯಾಂಕಿಂಗ್ 1 ಕೋಟಿ ವಿಶಿಷ್ಟ ಮಾಸಿಕ ಸಕ್ರಿಯ ಬಳಕೆದಾರರ ಮೈಲಿಗಲ್ಲು ಮೀರಿ ಸಾಧನೆ

ಅಳವಡಿಕೆಯನ್ನು ಉತ್ತೇಜಿಸಲು ಬ್ಯಾಂಕ್ ಸತತವಾಗಿ ಆವಿಷ್ಕಾರಕ ಉತ್ಪನ್ನ ವಿನ್ಯಾಸಕ್ಕೆ ಆದ್ಯತೆ ನೀಡುತ್ತದೆ. ಇದು ಹಲವಾರು ಉದ್ಯಮದಲ್ಲಿ ಪ್ರಥಮ ಸಾಮರ್ಥ್ಯಗಳನ್ನು ಪರಿಚಯಿ ಸಿದ್ದು ಅದರಲ್ಲಿ ಗ್ರಾಹಕರಿಗೆ ತಡೆಹಿತವಾಗಿ ಹಿಂದಿ, ಇಂಗ್ಲಿಷ್ ಅಥವಾ ಹಿಂಗ್ಲಿಷ್ ನಲ್ಲಿ ಧ್ವನಿ ಆಧರಿತ ಸೂಚನೆಗಳನ್ನು ನೀಡಲು ಅವಕಾಶ ನೀಡುತ್ತದೆ.

ಮುಂಬೈ: ಎಚ್.ಡಿ.ಎಫ್.ಸಿ. ಬ್ಯಾಂಕಿನ ವಾಟ್ಸಾಪ್ ಚಾಟ್ ಬ್ಯಾಂಕಿಂಗ್ ಪ್ಲಾಟ್ ಫಾರಂ ಅಪಾರ ಸಂಖ್ಯೆಯ ಮೈಲಿಗಲ್ಲುಗಳನ್ನು ಮೀರಿದ್ದು ಮಾರ್ಚ್ 31, 2026ರಂತೆ 30 ದಿನದ ಸಕ್ರಿಯ ಬಳಕೆದಾರರು 1 ಕೋಟಿ ಮೀರಿದ್ದಾರೆ ಮತ್ತು 90 ದಿನಗಳ ಸಕ್ರಿಯ ಬಳಕೆದಾರರು 2 ಕೋಟಿ ಮೀರಿದ್ದಾರೆ. ಈ ಪ್ಲಾಟ್ ಫಾರಂ ಈಗ 4 ಕೋಟಿಗೂ ಮೀರಿ ನೋಂದಾಯಿತ ಗ್ರಾಹಕರಿಗೆ ಸೇವೆ ಒದಗಿಸುತ್ತಿದ್ದು ಇದು ಬ್ಯಾಂಕಿನ ಗ್ರಾಹಕರ ಶೇ.40ರಷ್ಟಾಗುತ್ತದೆ. ಬಳಕೆ ದಾರರ ಪ್ರಗತಿಯೊಂದಿಗೆ ಈ ವಹಿವಾಟುಗಳು ಶೇ.20ರಷ್ಟು ಹೆಚ್ಚಿದ್ದು ಆಳವಾದ ಸಕ್ರಿಯತೆ ಯನ್ನು ತೋರಿಸುತ್ತದೆ.

ಇಂದು ಎಚ್.ಡಿ.ಎಫ್.ಸಿ. ಬ್ಯಾಂಕ್ ವಾಟ್ಸಾಪ್ ಮೂಲಕ ಅತ್ಯಂತ ಸಮಗ್ರ ಸೇವೆಗಳ ಗುಚ್ಛವನ್ನು ಒದಗಿಸುತ್ತಿದೆ. 19 ಉತ್ಪನ್ನ ಸರಣಿಗಳಲ್ಲಿ 225ಕ್ಕೂ ಹೆಚ್ಚು ಸೇವೆಗಳನ್ನು ಹೊಂದಿರುವ ಈ ಪ್ಲಾಟ್ ಫಾರಂ ಪ್ರತಿನಿತ್ಯದ ಬ್ಯಾಂಕಿಂಗ್ ಅಗತ್ಯಗಳು, ವಹಿವಾಟಿನ ಪ್ರಯಾಣಗಳು ಮತ್ತು ಕ್ರಿಯಾಶೀಲ ಸರ್ವೀಸ್ ಅಲರ್ಟ್ ಗಳನ್ನು ಹೊಂದಿದೆ. ಇದು ಉದ್ಯಮದ ಅತ್ಯಂತ ಸುಧಾರಿತ ಸಂವಹನೀಯ ಬ್ಯಾಂಕಿಂಗ್ ಇಕೊಸಿಸ್ಟಂಗಳಲ್ಲಿ ಒಂದಾಗಿ ವಿಕಾಸಗೊಂಡಿದೆ.

ಎಚ್.ಡಿ.ಎಫ್.ಸಿ. ಬ್ಯಾಂಕ್ ಸರಳವಾದ ಸಂವಹನಗಳಿಂದ ವಾಣಿಜ್ಯಕ್ಕೆ ಶಕ್ತಿಯುತ ಪ್ಲಾಟ್ ಫಾರಂಗಳಾಗಿ ಸಂವಹನೀಯ ಇಂಟರ್ಫೇಸ್ ಗಳನ್ನು ಗುರುತಿಸಿದ್ದು ಅದರಲ್ಲಿ ಶಾಪಿಂಗ್, ಫುಡ್ ಆರ್ಡರ್ ಮಾಡುವುದು ಮತ್ತು ಪ್ರತಿನಿತ್ಯದ ಸಕ್ರಿಯತೆ ಒಳಗೊಂಡಿದೆ. ಈ ಬದಲಾವಣೆಯನ್ನು ಗಮನಿಸಿದ ಬ್ಯಾಂಕ್ 2022ರಲ್ಲಿ ಚಾಟ್ ಬ್ಯಾಂಕಿಂಗ್ ಪ್ರಾರಂಭಿಸಿದ್ದು ಇದು ಮೂಲಭೂತ ಬ್ಯಾಂಕಿಂಗ್ ಅಗತ್ಯಗಳಿಗೆ ಅತ್ಯಂತ ಅನುಕೂಲಕರ ಸೇವಾ ಮಾರ್ಗವಾಗಿ ಸ್ಥಾನೀಕರಿಸಿದೆ ಮತ್ತು ಬ್ಯಾಂಕಿಂಗ್ ಅನ್ನು ನೇರವಾಗಿ ಗ್ರಾಹಕರ ದೈನಂದಿನ ಡಿಜಿಟಲ್ ಅಭ್ಯಾಸಗಳಿಗೆ ತರುತ್ತಿದೆ.

ಇದನ್ನೂ ಓದಿ: ದೀರ್ಘಕಾಲಿಕ ಆರ್ಥಿಕ ಯೋಜನೆಗೆ ದಕ್ಷಿಣ ಭಾರತವು ಬಲವಾದ ಮನೋಭಾವ ತೋರಿಸುತ್ತದೆ: HDFC ಲೈಫ್‌ನ ರೆಡಿ ಫಾರ್ ಲೈಫ್ ಇಂಡೆಕ್ಸ್

ಅಳವಡಿಕೆಯನ್ನು ಉತ್ತೇಜಿಸಲು ಬ್ಯಾಂಕ್ ಸತತವಾಗಿ ಆವಿಷ್ಕಾರಕ ಉತ್ಪನ್ನ ವಿನ್ಯಾಸಕ್ಕೆ ಆದ್ಯತೆ ನೀಡುತ್ತದೆ. ಇದು ಹಲವಾರು ಉದ್ಯಮದಲ್ಲಿ ಪ್ರಥಮ ಸಾಮರ್ಥ್ಯಗಳನ್ನು ಪರಿಚಯಿಸಿದ್ದು ಅದರಲ್ಲಿ ಗ್ರಾಹಕರಿಗೆ ತಡೆಹಿತವಾಗಿ ಹಿಂದಿ, ಇಂಗ್ಲಿಷ್ ಅಥವಾ ಹಿಂಗ್ಲಿಷ್ ನಲ್ಲಿ ಧ್ವನಿ ಆಧರಿತ ಸೂಚನೆಗಳನ್ನು ನೀಡಲು ಅವಕಾಶ ನೀಡುತ್ತದೆ. ಇದು ಕೋರ್ ಬ್ಯಾಂಕಿಂಗ್ ಸಿಸ್ಟಂಗಳಿಂದ ಮೊದಲ ಜಾಗತಿಕವಾಗಿ ಏಕೀಕೃತ ಸರ್ವೀಸ್ ಅಲರ್ಟ್ ಗಳನ್ನು ನೀಡುವ ಮೊದಲಿಗನಾಗಿದ್ದು ಅದರೊಂದಿಗೆ ಎಐ-ಪವರ್ಡ್ ಬಾಟ್ ಗಳು ಮತ್ತು ಹೆಚ್ಚಿನ ಸಂಕೀರ್ಣ ವಿಚಾರಣೆಗಳಿಗೆ ಮಾನವ ಏಜೆಂಟರು ಇರುತ್ತಾರೆ.

ಅನುಕೂಲವನ್ನು ಮತ್ತಷ್ಟು ಹೆಚ್ಚಿಸಲು ಬ್ಯಾಂಕ್ ಆರ್.ಎಂ. ಫೀಚರ್ ಗೆ ಸಂಪರ್ಕ ನೀಡುವಲ್ಲಿ ಮುಂಚೂಣಿಯಲ್ಲಿದ್ದು ಬಳಕೆದಾರರು ಅವರ ರಿಲೇಷನ್ ಶಿಪ್ ಮ್ಯಾನೇಜರ್ ರ ವಿವರಗಳನ್ನು ವೀಕ್ಷಿಸಬಹುದು ಮತ್ತು ತಕ್ಷಣ ಕಾಲ್ ಬ್ಯಾಕ್ ಕೋರಬಹುದು. ಬಹಳ ಇತ್ತೀಚೆಗೆ ಇದು ಕ್ವಿಕ್ ಎಫ್.ಡಿ. ಬುಕಿಂಗ್ ಮತ್ತು ಕನ್ವರ್ಟ್ ಟು ಇಎಂಐನಂತ ಪೂರ್ಣ ಸ್ಥಳೀಯ ವಿಶೇಷತೆಗಳನ್ನು ಪರಿಚಯಿಸಿದ್ದು ಅದನ್ನು ಕೇವಲ ಮೂರು ಹಂತಗಳಲ್ಲಿ ಸಮಗ್ರವಾಗಿ ಪೂರೈಸಬಹುದು, ಇದರಿಂದ ಭೇಟಿ ನೀಡುವ ಸಮಯ ತಪ್ಪುತ್ತದೆ.

ಈ ಮೈಲಿಗಲ್ಲಿನ ಕುರಿತು ಎಚ್.ಡಿ.ಎಫ್.ಸಿ. ಬ್ಯಾಂಕ್ ಪೇಮೆಂಟ್ಸ್ ಅಂಡ್ ಡಿಜಿಟಲ್ ಬ್ಯಾಂಕಿಂಗ್ ಚಾನೆಲ್ಸ್ ಮುಖ್ಯಸ್ಥ ರಜನೀಶ್ ಪರಮಾನಂದ ಪ್ರಭು, “1 ಕೋಟಿ ವಿಶಿಷ್ಟ ಮಾಸಿಕ ಸಕ್ರಿಯ ಬಳಕೆದಾರರ ಮೈಲಿಗಲ್ಲು ದಾಟುವುದು ನಮ್ಮ ಡಿಜಿಟಲ್ ಪ್ರಯಾಣದಲ್ಲಿ ಗಮನಾರ್ಹ ಕ್ಷಣವಾಗಿದೆ. ನಾವು ಸರಳವಾದ ಸರ್ವೀಸ್ ಇಂಟರ್ಫೇಸ್ ಎಂದು ಪ್ರಾರಂಭಿಸಿದ್ದು ಈಗ ಪೂರ್ಣ ಪ್ರಮಾಣದ ಸಂವಹನೀಯ ಬ್ಯಾಂಕಿಂಗ್ ಇಕೊಸಿಸ್ಂ ಆಗಿ ವಿಕಾಸಗೊಂಡಿದೆ. ಗ್ರಾಹಕರು ಹೆಚ್ಚಾಗಿ ನಿಯಮಿತ ಸೇವೆಗಳು ಮತ್ತು ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಚಾಟ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಆದ್ಯತೆ ಬ್ಯಾಂಕಿಂಗ್ ಅನ್ನು ಹೆಚ್ಚು ಗ್ರಾಹಕ-ಕೇಂದ್ರಿತ, ಅಂತರ್ಬೋಧೆಯ ಮತ್ತು ಗ್ರಾಹಕರು ಪ್ರತಿನಿತ್ಯ ಬಳಸುವ ಪ್ಲಾಟ್ ಫಾರಂಗಳ ಒಳಗಡೆ ಲಭ್ಯವಿರುವಂತೆ ಮಾಡುವುದಾಗಿದೆ” ಎಂದರು.

ಈ ಪ್ರಮಾಣವನ್ನು ಕೇಂದ್ರೀಕೃತ 360-ಡಿಗ್ರಿ ಕಾರ್ಯತಂತ್ರದಿಂದ ಸಾಧ್ಯವಾಗಿಸಿದ್ದು ಅದರಲ್ಲಿ ಉದ್ದೇಶಿತ ಸೇವಾ ವಿಸ್ತರಣೆಗಳ ಕುರಿತು ಗ್ರಾಹಕರ ಒಳನೋಟಗಳು, ಮೊಬೈಲ್ ಬ್ಯಾಂಕಿಂಗ್ ಮತ್ತು ಪೇಝಾಪ್ ನಂತಹ ಡಿಜಿಟಲ್ ಟಚ್ ಪಾಯಿಂಟ್ ಗಳಲ್ಲಿ ಕ್ರಾಸ್-ಚಾನೆಲ್ ಗಳ ಮೂಲಕ ಚಾಟ್ ಬ್ಯಾಂಕಿಂಗ್ ಉತ್ತೇಜನ, ಸುಧಾರಿತ ಫ್ರೀಕ್ವೆನ್ಸಿ ಮೂಲಕ ಸಂವಹನ ಗರಿಷ್ಠಗೊಳಿಉವುದು ಮತ್ತು ಕ್ರಿಯೇಟಿವ್ ಗಳನ್ನು ಸಕ್ರಿಯಗೊಳಿಸುವುದು ಮತ್ತು ಸತತವಾಗಿ ರಿಯಲ್-ಟೈಮ್ ಎನ್.ಪಿ.ಎಸ್. ಟ್ರ್ಯಾಕಿಂಗ್ ಮತ್ತು ಗ್ರಾಹಕರ ಫೀಡ್ ಬ್ಯಾಕ್ ಆಧರಿಸಿ ಪ್ರಯಾಣವನ್ನು ಪರಿಷ್ಕರಿಸುವುದು ಒಳಗೊಂಡಿದೆ.

ಭಾರತದಲ್ಲಿ ಮೆಟಾ ಬಿಸಿನೆಸ್ ಮೆಸೇಜಿಂಗ್ ನಿರ್ದೇಶಕ ರವಿ ಗಾರ್ಗ್, “ವಾಟ್ಸಾಪ್ ಹೇಗೆ ಉದ್ಯಮಗಳು ಮತ್ತು ಗ್ರಾಹಕರು ಸಂವಹನ ನಡೆಸುತ್ತಾರೆ ಮತ್ತು ಕೆಲಸ ಮಾಡುತ್ತಾರೆ ಎನ್ನುವುದನ್ನು ಪರಿವರ್ತನೆಗೊಳಿಸಿದೆ ಮತ್ತು ಇಂತಹ ಮೈಲಿಗಲ್ಲುಗಳು ಹೇಗೆ ಮೆಸೇಜಿಂಗ್ ನಿಜಕ್ಕೂ ಅರ್ಥಪೂರ್ಣವಾಗಿ ಮೌಲ್ಯ ಉತ್ತೇಜಿಸಬಲ್ಲದು ಮತ್ತು ಉತ್ತಮ ಅನುಭವ ಗಳನ್ನು ನಿರ್ಮಿಸಬಹುದು ಎನ್ನುವುದನ್ನು ನಿರೂಪಿಸುತ್ತವೆ. ಎಚ್.ಡಿ.ಎಫ್.ಸಿ. ಬ್ಯಾಂಕ್ ವಾಟ್ಸಾಪ್ ಶಕ್ತಿಯನ್ನು ಅನುಕೂಲಕರ ಮತ್ತು ಸುರಕ್ಷಿತ ಬ್ಯಾಂಕಿಂಗ್ ಅನುಭವಗಳನ್ನು ದೊಡ್ಡ ಪ್ರಮಾಣದಲ್ಲಿ ಪೂರೈಸಲು ಅನುಷ್ಠಾನಗೊಳಿಸಿರುವುದು ನೋಡಿ ಬಹಳ ಸಂತೋಷವಾಗಿದೆ” ಎಂದರು.

ಎಚ್.ಡಿ.ಎಫ್.ಸಿ. ಬ್ಯಾಂಕ್ ಹೊಸ ಉತ್ಪನ್ನ ಸರಣಿಯೊಂದಿಗೆ ಚಾಟ್ ಬ್ಯಾಂಕಿಂಗ್ ಸಾಮರ್ಥ್ಯಗಳನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹೊಂದಿದ್ದು ಚಾಟ್ ಬ್ಯಾಂಕಿಂಗ್ ಅನ್ನು ಗ್ರಾಹಕರಿಗೆ ಅತ್ಯಂತ ಆದ್ಯತೆಯ ಸ್ವಯಂ-ಸೇವಾ ಚಾನೆಲ್ ಗಳಲ್ಲಿ ಒಂದಾಗಿ ಸದೃಢಗೊಳಿಸುವ ಗುರಿ ಹೊಂದಿದೆ.