ನವದೆಹಲಿ: ಆದಾಯ ತೆರಿಗೆ ಮರುಪಾವತಿ (Income Tax Refund) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, 2026-27ರ ಮೌಲ್ಯಮಾಪನ ವರ್ಷದ ಆದಾಯ ತೆರಿಗೆ (Income tax) ಮರುಪಾವತಿ ಅರ್ಜಿ ಸಲ್ಲಿಕೆಗೆ ಜುಲೈ 31ರಂದು ಕೊನೆ ದಿನವಾಗಿದೆ. ದೇಶಾದ್ಯಂತ ಈವರೆಗೆ ಒಟ್ಟು 2.2 ಕೋಟಿ ಮಂದಿ ಆದಾಯ ತೆರಿಗೆ ಮರುಪಾವತಿ ಅರ್ಜಿಗಳನ್ನು ಸಲ್ಲಿಸಿದ್ದು, ಇದರಲ್ಲಿ 1.33 ಕೋಟಿ ರಿಟರ್ನ್‌ಗಳ (tax return) ಮರುಪಾವತಿ ಪ್ರಕ್ರಿಯೆ ಆರಂಭವಾಗಿದೆ. ತೆರಿಗೆದಾರರು (taxpayer) ಆದಾಯ ತೆರಿಗೆ ಮರುಪಾವತಿ ಅರ್ಜಿ ಸಲ್ಲಿಸಿದ 7 ರಿಂದ 10 ದಿನಗಳಲ್ಲಿ ಮರುಪಾವತಿಯನ್ನು ಪಡೆಯುತ್ತಿದ್ದಾರೆ.
ಒಂದು ಹಣಕಾಸು ವರ್ಷದಲ್ಲಿ ನಿಗದಿತ ತೆರಿಗೆ ಮೊತ್ತಕ್ಕಿಂತ ಹೆಚ್ಚಿನ ತೆರಿಗೆ ಪಾವತಿಸಿದವರಿಗೆ ಆದಾಯ ತೆರಿಗೆ ಇಲಾಖೆಯು ಮರುಪಾವತಿಯನ್ನು ಮಾಡುತ್ತದೆ. ಇದನ್ನು ಪಡೆಯಲು ತೆರಿಗೆದಾರರು ನಿಗದಿತ ನಮೂನೆಯ ಅರ್ಜಿ ಸಲ್ಲಿಸಬೇಕಾಗುತ್ತದೆ.
AACCI ಕರ್ನಾಟಕ ರಾಜ್ಯದ 'ಮೆಂಬರ್ ವೆಲ್ಫೇರ್ ಕಮಿಟಿ' ಅಧ್ಯಕ್ಷರಾಗಿ ಕಾರ್ತಿಕ್ ಸೋಮಯಾಜಿ ನೇಮಕ
ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್ ಮಾಹಿತಿ ಪ್ರಕಾರ ತೆರಿಗೆದಾರರು ಸಲ್ಲಿಸಿದ ಅರ್ಜಿ ಇ-ಪರಿಶೀಲನೆಯು 4–5 ವಾರಗಳಲ್ಲಿ ನಡೆಯುತ್ತದೆ. ಬಳಿಕ ಆದಾಯ ತೆರಿಗೆ ಮರುಪಾವತಿಯು ನೇರವಾಗಿ ತೆರಿಗೆದಾರರ ಖಾತೆಗೆ ಜಮೆ ಮಾಡಲಾಗುತ್ತದೆ. ಐಟಿಆರ್ ವಿವರಗಳು ನಿಖರವಾಗಿದ್ದರೆ ಎಐಎಸ್ ಮತ್ತು ಟಿಡಿಎಸ್ ಮಾಹಿತಿಗಳು, ಬ್ಯಾಂಕ್ ಖಾತೆ ವಿವರಗಳು ಸರಿಯಾಗಿದ್ದರೆ ಸಂಪೂರ್ಣ ಇ-ಪರಿಶೀಲನೆ ಬಳಿಕ ತೆರಿಗೆ ಮರುಪಾವತಿಯು 7 ರಿಂದ 10 ಕೆಲಸದ ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಈ ಪ್ರಕ್ರಿಯೆಯು ಸಾಮಾನ್ಯವಾಗಿ ಗರಿಷ್ಠ ಒಂದು ತಿಂಗಳವರೆಗೆ ತೆಗೆದುಕೊಳ್ಳಬಹುದು.
ಈ ಹಿಂದೆ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆಯು ಸುದೀರ್ಘ ಸಮಯ ತೆಗೆದುಕೊಳ್ಳುತ್ತಿತ್ತು. ಯಾಕೆಂದರೆ ಪಾವತಿ ಪ್ರಕ್ರಿಯೆಗಳು ವಿಳಂಬವಾಗಿದ್ದವು. 2025-26ರ ಮೌಲ್ಯಮಾಪನ ವರ್ಷದಲ್ಲಿ ತೆರಿಗೆದಾರರು ಒಟ್ಟು 6.97 ಕೋಟಿ ಆದಾಯ ತೆರಿಗೆ ಮರುಪಾವತಿ ಅರ್ಜಿಗಳು ಸಲ್ಲಿಕೆಯಾಗಿದ್ದವು.
ಪರಿಶೀಲನೆ ಹೇಗೆ?
ಆದಾಯ ತೆರಿಗೆ ಮರುಪಾವತಿ ಆಗಿದೆಯೇ ಇಲ್ಲವೇ ಎಂಬುದನ್ನು ಇ-ಫೈಲಿಂಗ್ ಪೋರ್ಟಲ್ https://www.incometax.gov.in/iec/foportal/ ಗೆ ಭೇಟಿ ನೀಡಿ ಪರಿಶೀಲಿಸಬಹುದಾಗಿದೆ. ಇದಕ್ಕಾಗಿ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ. ಬಳಿಕ ‘ಇ-ಫೈಲ್’ ಟ್ಯಾಗ್- ಆದಾಯ ತೆರಿಗೆ ರಿಟರ್ನ್ಸ್- ಸಲ್ಲಿಸಿದ ರಿಟರ್ನ್ಸ್ ಮಾಹಿತಿಯನ್ನು ನೋಡಬಹುದು.
ಈಗಾಗಲೇ 2025-26 ರ ಮೌಲ್ಯಮಾಪನ ವರ್ಷದ ಮರುಪಾವತಿಗೆ ಅರ್ಜಿ ಸಲ್ಲಿಸಿರುವ ತೆರಿಗೆದಾರರು ಇದರಲ್ಲಿ ಸ್ಥಿತಿಯನ್ನು ಪರಿಶೀಲಿಸಬಹುದು. ಪ್ರಕ್ರಿಯೆಯಲ್ಲಿದೆ, ಭಾಗಶಃ ಮರುಪಾವತಿ ಹೊಂದಾಣಿಕೆ ಮಾಡಲಾಗಿದೆ, ‘ಪೂರ್ಣ ಮರುಪಾವತಿ ಹೊಂದಾಣಿಕೆ ಮಾಡಲಾಗಿದೆ ಅಥವಾ ಮರುಪಾವತಿ ವಿಫಲವಾಗಿದೆ ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ.
JioHome: ಜಿಯೋ ಹೋಮ್ ಟಿವಿ ಪ್ಯಾಕ್ ಬಿಡುಗಡೆ: ತಿಂಗಳಿಗೆ ಕೇವಲ 400 ರೂ.ಗೆ 1,000+ ಲೈವ್ ಟಿವಿ ಚಾನೆಲ್ಸ್
ಮರುಪಾವತಿ ವಿಫಲವಾದರೆ ಅದಕ್ಕೆ ಹಲವು ಕಾರಣಗಳಿರುತ್ತವೆ. ಮುಖ್ಯವಾಗಿ ಪ್ಯಾನ್ ಕಾರ್ಡ್ ನಿಷ್ಕ್ರಿಯ, ಪ್ಯಾನ್- ಆಧಾರ್ ಲಿಂಕ್ ಆಗದೆ ಇರುವುದು, ಬ್ಯಾಂಕ್ ಖಾತೆಯಲ್ಲಿ ತೊಂದರೆ, ಬ್ಯಾಂಕ್ ಖಾತೆಯಲ್ಲಿ ಉಲ್ಲೇಖಿಸಲಾದ ಹೆಸರು ಪ್ಯಾನ್ ಕಾರ್ಡ್ ವಿವರಗಳೊಂದಿಗೆ ಹೊಂದಿಕೆಯಾಗದೇ ಇದ್ದರೆ, ಇಎಫ್ ಎಸ್ ಸಿ ಕೋಡ್ ಅಮಾನ್ಯವಾಗಿದ್ದರೆ, ಐಟಿಆರ್ ನಲ್ಲಿ ಉಲ್ಲೇಖಿಸಿರುವ ಖಾತೆ ಮುಚ್ಚಿದ್ದರೆ ಆದಾಯ ತೆರಿಗೆ ಮರುಪಾವತಿ ಪ್ರಕ್ರಿಯೆ ವಿಳಂಬವಾಗಬಹುದು ಎನ್ನುತ್ತದೆ ಆದಾಯ ತೆರಿಗೆ ಇಲಾಖೆ.