ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಅತಿದೊಡ್ಡ ಪರಿಸರಸ್ನೇಹಿ ಆಭರಣ ರಂಗವಲ್ಲಿ ಅನಾವರಣ

ಬರೋಬ್ಬರಿ 1600 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಕಲಾಕೃತಿಯು ಸಂಸ್ಥೆಯ ಇತ್ತೀಚಿನ ಹಬ್ಬದ ಸಂಗ್ರಹವಾದ ಪದ್ಮಿಕಾದ ಅಪರೂಪದ ಆಭರಣ ವಿನ್ಯಾಸದಿಂದ ಪ್ರೇರಿತವಾಗಿದೆ. ಅತ್ಯುನ್ನತ ಚಿನ್ನಾಭರಣ ಕಲೆಯ ಸಂಕೀರ್ಣ ಸೂಕ್ಷ್ಮತೆಗಳನ್ನು ಭಕ್ತಿ, ಶ್ರೇಷ್ಠ ಕರಕುಶಲತೆ ಮತ್ತು ಸಮುದಾಯ ಪ್ರಜ್ಞೆಯ ಸಂಕೇತವಾಗಿರುವ ಭವ್ಯ ರಂಗವಲ್ಲಿಯನ್ನಾಗಿ ಈ ಕಲಾ ಸ್ಥಾಪನೆ ಪರಿವರ್ತಿಸಿದೆ.

ಬೆಂಗಳೂರು: ಪ್ರಮುಖ ಆಭರಣ ಬ್ರ್ಯಾಂಡ್ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಪಾರಂಪರಿಕ ಹಬ್ಬದ ಆಚರಣೆಗಳಿಗೆ ಅರ್ಥಪೂರ್ಣ ಗೌರವ ಸಲ್ಲಿಸುವ ಸಲುವಾಗಿ ಧಾನ್ಯಗಳಿಂದ ರಚಿಸಲಾದ ಸುಸ್ಥಿರ ಆಭರಣ ರಂಗವಲ್ಲಿಯನ್ನು ಬೆಂಗಳೂರಿನ ಒರಾಯನ್ ಮಾಲ್ ಹಾಗೂ ತ್ಯಾಗರಾಜನಗರದ ಶ್ರೀ ಸತ್ಯ ಗಣಪತಿ ಶಿರಡಿ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ವಿದ್ಯುಕ್ತವಾಗಿ ಅನಾವರಣಗೊಳಿಸಿದೆ.

ಬರೋಬ್ಬರಿ 1600 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಕಲಾಕೃತಿಯು ಸಂಸ್ಥೆಯ ಇತ್ತೀಚಿನ ಹಬ್ಬದ ಸಂಗ್ರಹವಾದ ಪದ್ಮಿಕಾದ ಅಪರೂಪದ ಆಭರಣ ವಿನ್ಯಾಸದಿಂದ ಪ್ರೇರಿತವಾಗಿದೆ. ಅತ್ಯುನ್ನತ ಚಿನ್ನಾಭರಣ ಕಲೆಯ ಸಂಕೀರ್ಣ ಸೂಕ್ಷ್ಮತೆಗಳನ್ನು ಭಕ್ತಿ, ಶ್ರೇಷ್ಠ ಕರಕುಶಲತೆ ಮತ್ತು ಸಮುದಾಯ ಪ್ರಜ್ಞೆಯ ಸಂಕೇತವಾಗಿರುವ ಭವ್ಯ ರಂಗವಲ್ಲಿಯನ್ನಾಗಿ ಈ ಕಲಾ ಸ್ಥಾಪನೆ ಪರಿವರ್ತಿಸಿದೆ.

22 ಕ್ಯಾರೆಟ್ ಅಪರಂಜಿ ಚಿನ್ನದಲ್ಲಿ ಅರಳಿರುವ ಪದ್ಮಿಕಾ ಆಭರಣ ಸರಣಿಯು, ಶತಮಾನಗಳ ಪ್ರಾಚೀನ ಹಾಗೂ ಅಪರೂಪದ ಗುಲಾಬಿ ಬಣ್ಣದ ಎನಾಮೆಲ್ ಕಲೆಯಾದ ಗುಲಾಬಿ ಮೀನಾಕಾರಿಗೆ ಮರುಜೀವ ನೀಡಿದೆ. ಈ ನೆಕ್ಲೇಸ್ ನವಿರಾದ ನಕ್ಷಿ ಹೂವಿನ ಕೆತ್ತನೆಗಳೊಂದಿಗೆ, ಸಕಲ ಸಂಪತ್ತು, ಸಮೃದ್ಧಿ, ಸೌಭಾಗ್ಯ ಹಾಗೂ ಹೊಸ ಶುಭಾರಂಭಗಳ ಸಂಕೇತವಾಗಿ ಕಮಲದ ಹೂವಿನ ಮೇಲೆ ಆಸೀನಳಾಗಿರುವ ಲಕ್ಷ್ಮೀ ದೇವಿಯ ಮಂಗಳಕರ ಆಕೃತಿಯನ್ನು ಒಳಗೊಂಡಿದೆ.

ಇದನ್ನೂ ಓದಿ: Jewel Fashion 2026: ಜೆನ್‌ ಝೀ ಹುಡುಗಿಯರನ್ನು ಸೆಳೆದ ಪಾಯಲ್‌ ರಜಪೂತ್‌ ಧರಿಸಿದ ಲೇಯರ್ಡ್ ಜುಮ್ಕಾ ಮಾಟಿ

ಅಕ್ಕಿ, ರಾಗಿ, ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳು ಹಾಗೂ ನೈಸರ್ಗಿಕ ಕಾಳುಗಳಂತಹ ಪರಿಸರಸ್ನೇಹಿ ವಸ್ತುಗಳನ್ನು ಬಳಸಿ ಈ ಭವ್ಯ ರಂಗವಲ್ಲಿಯನ್ನು ಅತ್ಯಂತ ಕಲಾತ್ಮಕವಾಗಿ ರೂಪಿಸಲಾಗಿದೆ. ಆ ಮೂಲಕ ಆಭರಣ ಹಾರದ ಸಂಕೀರ್ಣ ಕಲಾತ್ಮಕತೆಯನ್ನು ನಮ್ಮ ಸಾಂಸ್ಕೃತಿಕ ಪರಂಪರೆಗೆ ಸಲ್ಲಿಸುವ ಬೃಹತ್ ಗೌರವ ಸಮರ್ಪಣೆಯಾಗಿ ಮರುಸೃಷ್ಟಿಸಲಾಗಿದೆ.

ಸಾವಿರಾರು ವೈಯಕ್ತಿಕ ಅಂಶಗಳನ್ನು ಒಗ್ಗೂಡಿಸಿ ರಚಿಸಲಾದ ಈ ಕಲಾಕೃತಿಯು, ಆಭರಣ ತಯಾರಿಕೆ ಹಾಗೂ ರಂಗವಲ್ಲಿ ರಚನೆ—ಎರಡರಲ್ಲೂ ಅವಶ್ಯವಿರುವ ಅತ್ಯುನ್ನತ ನಿಖರತೆ, ಅಪಾರ ತಾಳ್ಮೆ ಹಾಗೂ ಕುಶಲಕರ್ಮಿಗಳ ಕೌಶಲ್ಯವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಧಾನ್ಯಗಳು, ಸಿರಿಧಾನ್ಯಗಳು ಮತ್ತು ಕಾಳುಗಳಿಂದ ರಚಿತವಾಗಿರುವ ಈ ಕಲಾಕೃತಿಯು ಸಾಂಪ್ರದಾಯಿಕ ಕಲೆಗಳ ಶಾಶ್ವತ ಸೌಂದರ್ಯವನ್ನು ಸಾರುವುದರ ಜೊತೆಗೆ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಒಂದು ವಿಶಿಷ್ಟ ಹಾಗೂ ಆಹ್ಲಾದಕರ ಅನುಭವವನ್ನು ಕಟ್ಟಿಕೊಡುತ್ತದೆ.

ಸಾಂಸ್ಕೃತಿಕ ನೈಜತೆಯಲ್ಲಿ ಬೇರೂರಿರುವ ಈ ವಿನೂತನ ಯೋಜನೆಗೆ, ಗಿನ್ನೆಸ್ ದಾಖಲೆಯ ರಂಗೋಲಿಗಳನ್ನು ಸೃಷ್ಟಿಸಿ ಜನಮಾನಸದಲ್ಲಿ "3ಡಿ ರಂಗೋಲಿ ಕ್ವೀನ್" ಎಂದೇ ಪ್ರಖ್ಯಾತರಾಗಿರುವ ಖ್ಯಾತ ರಂಗೋಲಿ ಕಲಾವಿದೆ ಶಿಖಾ ಶರ್ಮಾ ಅವರ ನೈಪುಣ್ಯತೆಯನ್ನು ಬಳಸಿಕೊಳ್ಳಲಾಗಿದೆ. ಪ್ರಾಚೀನ ದೇವಾಲಯ ಶೈಲಿಯ (ಟೆಂಪಲ್ ಜ್ಯುವೆಲ್ಲರಿ) ಸಾಂಪ್ರದಾಯಿಕ ಆಭರಣದ ಸೂಕ್ಷ್ಮ ಕೆತ್ತನೆಗಳನ್ನು ರಂಗವಲ್ಲಿಯಾಗಿ ಪರಿವರ್ತಿಸುವ ಮೂಲಕ, ಸಂಕೀರ್ಣ ವಿನ್ಯಾಸ, ಸೂಕ್ಷ್ಮ ಕರಕುಶಲತೆ ಮತ್ತು ವೈವಿಧ್ಯಮಯ ಅಂಶಗಳನ್ನು ಒಗ್ಗೂಡಿಸಿ ಅದ್ಭುತ ಕಲಾಕೃತಿ ನಿರ್ಮಿಸುವ ಈ ಎರಡೂ ಶ್ರೇಷ್ಠ ಕಲಾ ಪ್ರಕಾರಗಳನ್ನು ಇಂದ್ರಿಯಾ ಸಂಸ್ಥೆಯು ಒಂದೇ ವೇದಿಕೆಯಲ್ಲಿ ಅದ್ಧೂರಿ ಯಾಗಿ ಸಂಭ್ರಮಿಸಿದೆ.

ಪರಿಸರ ಸುಸ್ಥಿರತೆ ಹಾಗೂ ಸಮಾಜಮುಖಿ ಕಾಳಜಿಯು ಈ ಯೋಜನೆಯ ಅವಿಭಾಜ್ಯ ಅಂಗವಾಗಿದ್ದು, ಕಲಾಕೃತಿಯ ಉದ್ದೇಶವನ್ನು ಕೇವಲ ಹಬ್ಬದ ಆಚರಣೆಗೆ ಮಾತ್ರ ಸೀಮಿತಗೊಳಿಸದೆ ಅದರಾಚೆಗೂ ವಿಸ್ತರಿಸಿದೆ. ವಿಜಯದಶಮಿ ಹಬ್ಬ ಮುಗಿದ ನಂತರ, ಈ ರಂಗವಲ್ಲಿ ಕಲಾಕೃತಿಯಲ್ಲಿ ಬಳಸಲಾದ ಸಮಗ್ರ ಅಕ್ಕಿ, ಸಿರಿಧಾನ್ಯಗಳು ಮತ್ತು ಕಾಳುಗಳನ್ನು ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ಗೋಶಾಲೆಯ ಸಹಯೋಗದೊಂದಿಗೆ ಪಕ್ಷಿಗಳು ಹಾಗೂ ಮೂಕ ಪ್ರಾಣಿಗಳಿಗೆ ಆಹಾರವಾಗಿ ವಿತರಿಸುವ ಮೂಲಕ ಪರಿಸರಸ್ನೇಹಿಯಾಗಿ ಹಾಗೂ ಅತ್ಯಂತ ಜವಾಬ್ದಾರಿಯುತವಾಗಿ ಸದ್ಬಳಕೆ ಮಾಡಿಕೊಳ್ಳಲಾಗುತ್ತದೆ.

ಈ ವಿನೂತನ ಯೋಜನೆಯ ಕುರಿತು ವಿವರ ನೀಡಿದ ಸಂಸ್ಥೆಯ ಮಾರ್ಕೆಟಿಂಗ್ ಮತ್ತು ವಿಶುವಲ್ ಮರ್ಚಂಡೈಸಿಂಗ್ ಮುಖ್ಯಸ್ಥರಾದ ಶಾಂತಿಸ್ವರೂಪ್ ಪಾಂಡಾ, "ಸಂಸ್ಥೆಯಲ್ಲಿ ನಮ್ಮ ನಿರಂತರ ಪ್ರಯತ್ನವೆಂದರೆ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅತ್ಯಂತ ಅರ್ಥಪೂರ್ಣ ಹಾಗೂ ಸಮಕಾಲೀನ ಅಭಿವ್ಯಕ್ತಿಗಳ ಮೂಲಕ ಆಚರಿಸುವುದಾಗಿದೆ. ಈ ಆಭರಣ ರಂಗವಲ್ಲಿಯು ನಮ್ಮ ಆ ದೃಷ್ಟಿಕೋನದ ವಿಸ್ತರಣೆಯಾಗಿದ್ದು, ಗ್ರಾಹಕರ ಹೃದಯಕ್ಕೆ ಹತ್ತಿರವಾದ ಜನಪ್ರಿಯ ಹಬ್ಬದ ಸಂಪ್ರದಾಯದ ಮೂಲಕ ಪದ್ಮಿಕಾದ ವಿಶಿಷ್ಟ ವಿನ್ಯಾಸವನ್ನು ಜನಸಾಮಾನ್ಯರೆದುರು ಮರುರೂಪಿಸಿದೆ. ಭಾರತೀಯ ಸಂಸ್ಕೃತಿ ಮತ್ತು ಕರಕುಶಲತೆಯಿಂದ ಪ್ರೇರಿತವಾದ ಬ್ರ್ಯಾಂಡ್ ಆಗಿ, ಕೇವಲ ನಮ್ಮ ಆಭರಣಗಳ ಹಿಂದಿರುವ ಕಲಾತ್ಮಕತೆಯನ್ನು ಪ್ರದರ್ಶಿಸುವುದು ಮಾತ್ರವಲ್ಲದೆ, ಗ್ರಾಹಕರು ಇದರೊಂದಿಗೆ ಭಾವನಾತ್ಮಕವಾಗಿ ಮತ್ತು ಅವಿಸ್ಮರಣೀಯವಾಗಿ ಬೆರೆಯುವಂತಹ ಮುಕ್ತ ವಾತಾವರಣ ಸೃಷ್ಟಿಸುವುದು ನಮ್ಮ ಆಶಯವಾಗಿತ್ತು. ಈ ಉಪಕ್ರಮದ ಮೂಲಕ ನಾವು ನಮ್ಮ ಪ್ರಾಚೀನ ಪರಂಪರೆ, ಶ್ರೇಷ್ಠ ಕರಕುಶಲತೆ ಮತ್ತು ವಿಜಯದಶಮಿ ಹಬ್ಬದ ಜೀವಾಳ ವಾಗಿರುವ ಐಕ್ಯತೆಯ ಒಗ್ಗಟ್ಟಿನ ಭಾವವನ್ನು ಸಂಭ್ರಮಿಸುತ್ತಿದ್ದೇವೆ" ಎಂದು ತಿಳಿಸಿದರು.

ಈ ಹಬ್ಬದ ಸಂಭ್ರಮವನ್ನು ಕೇವಲ ಪ್ರದರ್ಶನಕ್ಕಷ್ಟೇ ಸೀಮಿತವಾಗಿಡದೆ ಗ್ರಾಹಕರ ಮನೆಮನೆಗೂ ಕೊಂಡೊಯ್ಯುವ ಉದ್ದೇಶದಿಂದ, ಸಂಸ್ಥೆಯು ಸಾರ್ವಜನಿಕರಿಗಾಗಿ ವಿಶೇಷ ರಂಗವಲ್ಲಿ ಸ್ಪರ್ಧೆ ಯನ್ನು ಕೂಡ ಆಯೋಜಿಸಿದೆ. ಗ್ರಾಹಕರು ತಮ್ಮ ಮನೆಗಳಲ್ಲೇ ಪದ್ಮಿಕಾ ಆಭರಣ ವಿನ್ಯಾಸದಿಂದ ಪ್ರೇರಿತವಾದ ರಂಗವಲ್ಲಿಯನ್ನು ರಚಿಸಲು ಮುಕ್ತ ಆಹ್ವಾನ ನೀಡಲಾಗಿದೆ. ಪತ್ರಿಕಾ ಮಾಧ್ಯಮ ನಾವೀನ್ಯತೆಗಳು ಮತ್ತು ವಿಶೇಷ ಪ್ರಚಾರ ಕಿಟ್‌ಗಳ ಮೂಲಕ ವಿತರಿಸಲಾದ ಸ್ಟೆನ್ಸಿಲ್ ಅನ್ನು ಬಳಸಿಕೊಂಡು, ಸಾರ್ವಜನಿಕರು ಬಣ್ಣಗಳು, ವಿವಿಧ ಧಾನ್ಯಗಳು ಅಥವಾ ಕಾಳುಗಳ ಹಿಟ್ಟಿನಿಂದ ರಂಗವಲ್ಲಿ ಬಿಡಿಸಿ, ಆ ಕಲಾಕೃತಿಯ ಛಾಯಾಚಿತ್ರವನ್ನು ಸಾಮಾಜಿಕ ಮಾಧ್ಯಮಗಳು ಅಥವಾ ವಾಟ್ಸಾಪ್ ಮೂಲಕ ಇಂದ್ರಿಯಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಬಹುದಾಗಿದೆ. ಈ ಸ್ಪರ್ಧೆಯ ಭಾಗವಾಗಿ ಆಯ್ಕೆಯಾಗುವ 100 ಅದೃಷ್ಟಶಾಲಿ ವಿಜೇತರಿಗೆ ತಲಾ 200 ಮಿಲಿಗ್ರಾಂ ತೂಕದ 22 ಕ್ಯಾರೆಟ್ ಚಿನ್ನದ ನಾಣ್ಯವನ್ನು ಗೆಲ್ಲುವ ಸುವರ್ಣಾವಕಾಶ ಕಲ್ಪಿಸಲಾಗಿದ್ದು, ಸೃಜನಶೀಲತೆ, ಪಾರಂಪರಿಕ ಸಂಸ್ಕೃತಿ ಮತ್ತು ಹಬ್ಬದ ಸಂಭ್ರಮವನ್ನು ಒಂದೇ ವೇದಿಕೆಗೆ ತರಲಾಗಿದೆ.