ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಫಿಕ್ಸ್ಡ್ ಬ್ರಾಡ್‌ಬ್ಯಾಂಡ್ ಅನುಭವದ ಕುರಿತು ಓಪನ್‌ಸಿಗ್ನಲ್ ಹೊಸ ವರದಿ ಬಿಡುಗಡೆ‌

ಎಲ್ಲಾ ಐದು ಎಫ್‌ಡಬ್ಲ್ಯೂಎ ಪ್ರಶಸ್ತಿಗಳನ್ನು ಏಕಪಕ್ಷೀಯವಾಗಿ ಗೆಲ್ಲುವ ಮೂಲಕ ಏರ್‌ಟೆಲ್ ಅತ್ಯುತ್ತಮ ಫಿಕ್ಸ್‌ಡ್ ವೈರ್‌ಲೆಸ್ ಹೋಮ್ ಇಂಟರ್ನೆಟ್ ಆಗಿ ಹೊರಹೊಮ್ಮಿದೆ. ಇದು 32.4 ಎಂಬಿಪಿಎಸ್ ಡೌನ್‌ಲೋಡ್ ಮತ್ತು 20.7 ಎಂಬಿಪಿಎಸ್ ಅಪ್‌ಲೋಡ್ ವೇಗವನ್ನು ದಾಖಲಿಸಿದ್ದು, ಜಿಯೋದ 25.7 ಎಂಬಿಪಿಎಸ್ ಮತ್ತು 17.1 ಎಂಬಿಪಿಎಸ್ ವೇಗಕ್ಕಿಂತ ಕ್ರಮವಾಗಿ 6.7 ಎಂಬಿಪಿಎಸ್ ಮತ್ತು 3.6 ಎಂಬಿಪಿಎಸ್ ನಷ್ಟು ಮುಂದಿದೆ.

ಮುಂಬೈ: ವಿಶ್ವಾಸಾರ್ಹತೆ, ಸ್ಥಿರ ಗುಣಮಟ್ಟ, ಡೌನ್‌ಲೋಡ್ ವೇಗ, ಅಪ್‌ಲೋಡ್ ವೇಗ ಮತ್ತು ವಿಡಿಯೋ ಅನುಭವದ ಆಧಾರದ ಮೇಲೆ ಏರ್‌ಟೆಲ್(Airtel), ಬಿಎಸ್‌ಎನ್‌ಎಲ್(BSNL) ಮತ್ತು ಜಿಯೋ(JIO) ಸೇವೆಗಳನ್ನು ಹೋಲಿಸಿ, ಭಾರತದ ಫಿಕ್ಸ್‌ಡ್ ಬ್ರಾಡ್‌ಬ್ಯಾಂಡ್(Fixed Broadband) ಅನುಭವದ ಕುರಿತು ಓಪನ್‌ಸಿಗ್ನಲ್(Open Signal) ಹೊಸ ವರದಿಯನ್ನು ಬಿಡುಗಡೆ ಮಾಡಿದೆ.

ವಿಶ್ವಾಸಾರ್ಹತೆ, ಸ್ಥಿರ ಗುಣಮಟ್ಟ, ಡೌನ್‌ಲೋಡ್ ವೇಗ, ಅಪ್‌ಲೋಡ್ ವೇಗ ಮತ್ತು ವಿಡಿಯೋ- ಈ ಎಲ್ಲಾ ಐದು ಒಟ್ಟಾರೆ ಅನುಭವ ವಿಭಾಗಗಳ ಪ್ರಶಸ್ತಿಗಳನ್ನು ಏಕಪಕ್ಷೀಯವಾಗಿ ಗೆಲ್ಲುವ ಮೂಲಕ ಏರ್‌ಟೆಲ್ ಭಾರತದ ಅತ್ಯುತ್ತಮ ಹೋಮ್ ಇಂಟರ್ನೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ: Roopa Gururaj Column: ಪಂಚತಂತ್ರ ಕಥೆಗಳು: ಕಾಗೆಗಳು ಮತ್ತು ಕ್ರೂರಿಯಾದ ಕೃಷ್ಣಸರ್ಪ

ಒಟ್ಟಾರೆ ವಿಶ್ವಾಸಾರ್ಹತೆಯಲ್ಲಿ ಏರ್‌ಟೆಲ್ ಜಿಯೋಗಿಂತ 15% ರಷ್ಟು ಮತ್ತು ಒಟ್ಟಾರೆ ವೇಗದಲ್ಲಿ 26-27% ರಷ್ಟು ಮುನ್ನಡೆ ಸಾಧಿಸಿದೆ. 100-1,000 ವಿಶ್ವಾಸಾರ್ಹತೆ ಮಾಪಕದಲ್ಲಿ ಜಿಯೋದ 423 ಅಂಕಗಳಿಗೆ ಪ್ರತಿಯಾಗಿ ಏರ್‌ಟೆಲ್ 486 ಅಂಕಗಳನ್ನು ಗಳಿಸಿದ್ದು, 63 ಅಂಕಗಳ ಅಂತರವನ್ನು ಕಾಯ್ದುಕೊಂಡಿದೆ. ವೇಗದ ವಿಭಾಗದಲ್ಲಿ ಬಿಎಸ್‌ಎನ್‌ಎಲ್ ನಿಕಟ ಪೈಪೋಟಿ ನೀಡಿದ್ದು, ಡೌನ್‌ ಲೋಡ್‌ನಲ್ಲಿ ಏರ್‌ಟೆಲ್‌ಗಿಂತ ಕೇವಲ 0.5 ಎಂಬಿಪಿಎಸ್ ಮತ್ತು ಅಪ್‌ಲೋಡ್‌ನಲ್ಲಿ 0.8 ಎಂಬಿ ಪಿಎಸ್ ನಷ್ಟು ಮಾತ್ರ ಹಿಂದಿದೆ.

ಎಲ್ಲಾ ಐದು ಎಫ್‌ಡಬ್ಲ್ಯೂಎ ಪ್ರಶಸ್ತಿಗಳನ್ನು ಏಕಪಕ್ಷೀಯವಾಗಿ ಗೆಲ್ಲುವ ಮೂಲಕ ಏರ್‌ಟೆಲ್ ಅತ್ಯುತ್ತಮ ಫಿಕ್ಸ್‌ಡ್ ವೈರ್‌ಲೆಸ್ ಹೋಮ್ ಇಂಟರ್ನೆಟ್ ಆಗಿ ಹೊರಹೊಮ್ಮಿದೆ. ಇದು 32.4 ಎಂಬಿಪಿಎಸ್ ಡೌನ್‌ಲೋಡ್ ಮತ್ತು 20.7 ಎಂಬಿಪಿಎಸ್ ಅಪ್‌ಲೋಡ್ ವೇಗವನ್ನು ದಾಖಲಿಸಿದ್ದು, ಜಿಯೋದ 25.7 ಎಂಬಿಪಿಎಸ್ ಮತ್ತು 17.1 ಎಂಬಿಪಿಎಸ್ ವೇಗಕ್ಕಿಂತ ಕ್ರಮವಾಗಿ 6.7 ಎಂಬಿಪಿಎಸ್ ಮತ್ತು 3.6 ಎಂಬಿಪಿಎಸ್ ನಷ್ಟು ಮುಂದಿದೆ.

ಎಫ್‌ಡಬ್ಲ್ಯೂಎ ಸ್ಥಿರತೆ ಮತ್ತು ವಿಶ್ವಾಸಾರ್ಹತೆಯಲ್ಲಿ ಏರ್‌ಟೆಲ್ ಜಿಯೋವನ್ನು ಹಿಂದಿಕ್ಕಿದೆ. ಜಿಯೋದ ಅರ್ಧಕ್ಕಿಂತ ಸ್ವಲ್ಪ ಹೆಚ್ಚು ಪರೀಕ್ಷೆಗಳು (55.0%) ಮಾತ್ರ ಸ್ಥಿರ ಗುಣಮಟ್ಟದ ಮಾನ ದಂಡಗಳನ್ನು ತಲುಪಿದ್ದರೆ, ಏರ್‌ಟೆಲ್‌ನ ಸುಮಾರು ಮೂರನೇ ಎರಡರಷ್ಟು ಪರೀಕ್ಷೆಗಳು (66.2%) ಈ ಮಾನದಂಡಗಳನ್ನು ಪೂರೈಸಿವೆ- ಇದು 11.2 ಶೇಕಡಾವಾರು ಅಂಕಗಳ ಅಂತರವಾಗಿದೆ.

ಎಫ್‌ಡಬ್ಲ್ಯೂಎ ವಿಶ್ವಾಸಾರ್ಹತೆಯಲ್ಲಿ ಏರ್‌ಟೆಲ್ 450 ಅಂಕಗಳನ್ನು ಗಳಿಸಿದ್ದು, ಜಿಯೋದ 382 ಅಂಕಗಳಿಗಿಂತ 68 ಅಂಕಗಳಷ್ಟು (18%) ಮುಂದಿದೆ.