ಬೆಂಗಳೂರು: ಜಾಗತಿಕ ವೀಸಾ, ಕಾನ್ಸುಲರ್ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸುವ ಪ್ರಮುಖ ಸಂಸ್ಥೆ ಬಿಎಲ್‌ಎಸ್ ಇಂಟರ್‌ನ್ಯಾಷನಲ್, 2027ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಹಾಗೂ ಮೊದಲಾರ್ಧದಲ್ಲಿ ಉತ್ತಮ ಆರ್ಥಿಕ ಸಾಧನೆ ದಾಖಲಿಸಿದೆ.
ಕಂಪನಿಯ ಎರಡನೇ ತ್ರೈಮಾಸಿಕದ (Q2FY27) ಕಾರ್ಯಾಚರಣೆಯ ಆದಾಯವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 32ರಷ್ಟು ಏರಿಕೆಯಾಗಿ ₹973 ಕೋಟಿಗೆ ತಲುಪಿದೆ. EBITDA ಶೇ. 16.6ರಷ್ಟು ಹೆಚ್ಚಾಗಿ ₹248 ಕೋಟಿಯಾಗಿದ್ದು, ತೆರಿಗೆ ನಂತರದ ಲಾಭ (PAT) ಶೇ. 8.6ರಷ್ಟು ಏರಿಕೆ ಯಾಗಿ ₹202 ಕೋಟಿ ದಾಖಲಾಗಿದೆ.
2027ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ (H1FY27) ಕಂಪನಿಯ ಆದಾಯವು ಶೇ. 28.7 ರಷ್ಟು ಬೆಳವಣಿಗೆಯೊಂದಿಗೆ ₹1,863 ಕೋಟಿಗೆ ತಲುಪಿದೆ. ಇದೇ ಅವಧಿಯಲ್ಲಿ EBITDA ಶೇ. 20ರಷ್ಟು ಹೆಚ್ಚಾಗಿ ₹500 ಕೋಟಿಯಾಗಿದ್ದು, ತೆರಿಗೆ ನಂತರದ ಲಾಭ ಶೇ. 10ರಷ್ಟು ಏರಿಕೆಯಾಗಿ ₹403 ಕೋಟಿಗೆ ತಲುಪಿದೆ.
ಇದನ್ನೂ ಓದಿ: Real Estate at Chamundi Hills: ಚಾಮುಂಡಿ ಬೆಟ್ಟದ ನಿಷೇಧಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ರಿಯಲ್ ಏಸ್ಟೇಟ್
ವಿಭಾಗವಾರು ಸಾಧನೆಯಲ್ಲಿ, ವೀಸಾ ಮತ್ತು ಕಾನ್ಸುಲರ್ ಸೇವೆಗಳ ಆದಾಯವು ಎರಡನೇ ತ್ರೈ ಮಾಸಿಕದಲ್ಲಿ ಶೇ. 11.2ರಷ್ಟು ಏರಿಕೆಯಾಗಿ ₹510 ಕೋಟಿ ತಲುಪಿದೆ. ಡಿಜಿಟಲ್ ಸೇವೆಗಳ ವಿಭಾಗವು ಶೇ. 66.4ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿ ₹463 ಕೋಟಿ ಆದಾಯ ಗಳಿಸಿದೆ. ಇ-ಆಡಳಿತ ಮತ್ತು ನಾಗರಿಕ ಸೇವೆಗಳಿಗೆ ಹೆಚ್ಚುತ್ತಿರುವ ಬೇಡಿಕೆ ಡಿಜಿಟಲ್ ವಿಭಾಗದ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಿದೆ.
ಈ ಅವಧಿಯಲ್ಲಿ ಕಂಪನಿಯು ಜಾಗತಿಕವಾಗಿ 500 ಮಿಲಿಯನ್‌ಗೂ ಹೆಚ್ಚು ವೀಸಾ, ಕಾನ್ಸುಲರ್ ಮತ್ತು ನಾಗರಿಕ ಸೇವೆಗಳ ಅರ್ಜಿಗಳನ್ನು ಸಂಸ್ಕರಿಸಿದ ಮೈಲಿಗಲ್ಲು ಸಾಧಿಸಿದೆ. ಪ್ರಸ್ತುತ 100ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು, ತನ್ನ ತಂತ್ರಜ್ಞಾನ ಆಧಾರಿತ ಸೇವೆ ಗಳನ್ನು ಮತ್ತಷ್ಟು ಬಲಪಡಿಸಲು ಕೃತಕ ಬುದ್ಧಿಮತ್ತೆ (AI), ಯಾಂತ್ರೀಕೃತಗೊಳಿಸುವಿಕೆ ಮತ್ತು ಸುರಕ್ಷಿತ ಡಿಜಿಟಲ್ ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುತ್ತಿದೆ.
ಈ ಕುರಿತು ಮಾತನಾಡಿದ ಬಿಎಲ್‌ಎಸ್ ಇಂಟರ್‌ನ್ಯಾಷನಲ್ ಸರ್ವಿಸಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗರ್ವಾಲ್, ಎರಡೂ ಪ್ರಮುಖ ವ್ಯವಹಾರ ವಿಭಾಗಗಳಲ್ಲಿ ಉತ್ತಮ ಬೆಳವಣಿಗೆ ದಾಖಲಿಸಿರುವುದು ಸಂತಸ ತಂದಿದೆ. ಜಾಗತಿಕ ವಿಸ್ತರಣೆ, ತಂತ್ರಜ್ಞಾನ ಸಾಮರ್ಥ್ಯ ಮತ್ತು ಡಿಜಿಟಲ್ ಸೇವೆಗಳ ಬೆಳವಣಿಗೆಯ ಮೂಲಕ ಮುಂದಿನ ದಿನಗಳಲ್ಲಿಯೂ ಸುಸ್ಥಿರ ಬೆಳವಣಿಗೆ ಹಾಗೂ ದೀರ್ಘಕಾಲೀನ ಮೌಲ್ಯ ಸೃಷ್ಟಿಗೆ ಕಂಪನಿ ಬದ್ಧವಾಗಿದೆ ಎಂದು ತಿಳಿಸಿದರು.