ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆಮದು ಸುಂಕ ಕಡಿತ: ಹಬ್ಬದ ಋತುವಿನಲ್ಲಿ ಇಳಿಕೆಯಾಗುವತ್ತ ಅಡುಗೆ ಎಣ್ಣೆ ಬೆಲೆ

ವಿಶ್ವದ ಅತಿದೊಡ್ಡ ಸಸ್ಯಜನ್ಯ ಎಣ್ಣೆ ಆಮದುದಾರ ರಾಷ್ಟ್ರವೆನಿಸಿರುವ ಭಾರತ ದೇಶೀಯ ಬೇಡಿಕೆಯ ಸುಮಾರು ಮೂರನೇ ಎರಡರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹೀಗೆ ಆಮದು ಮಾಡಲಾಗುವ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಇದೀಗ ಕಡಿತಗೊಳಿಸಿದೆ. ಹೀಗಾಗಿ ಮುಂದಿನ ಹಬ್ಬದ ದಿನಗಳಲ್ಲಿ ಅಡುಗೆ ಎಣ್ಣೆಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಹೆಚ್ಚಾಗಿದೆ.

ಸಂಗ್ರಹ ಚಿತ್ರ

ನವದೆಹಲಿ: ಕಚ್ಚಾ ಮತ್ತು ಸಂಸ್ಕರಿಸಿದ ಅಡುಗೆ ಎಣ್ಣೆಯ (vegetable oils) ಮೇಲಿನ ಆಮದು ಸುಂಕವನ್ನು (Import duty cut) ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಅಡುಗೆ ಎಣ್ಣೆಯ ಬೆಲೆ ಇಳಿಕೆಯಾಗುವ ನಿರೀಕ್ಷೆ ಹೆಚ್ಚಾಗಿದೆ. ವಿಶ್ವದ ಅತಿದೊಡ್ಡ ಸಸ್ಯಜನ್ಯ ಎಣ್ಣೆ ಆಮದುದಾರ ರಾಷ್ಟ್ರವಾಗಿರುವ ಭಾರತ ಅಡುಗೆ ಎಣ್ಣೆಯ ತನ್ನ ದೇಶೀಯ ಬೇಡಿಕೆಯ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಆಮದು (Cooking oil prices) ಮಾಡಿಕೊಳ್ಳುತ್ತದೆ. ಇದೀಗ ಆಮದು ಸುಂಕ ಕಡಿಮೆಯಾಗಿರುವುದರಿಂದ ಮುಂದಿನ ಹಬ್ಬದ ಋತುವಿನಲ್ಲಿ ಅಡುಗೆ ಎಣ್ಣೆಗಳು ಕೈಗೆಟಕುವ ಬೆಲೆಗಳಲ್ಲಿ ಸಿಗಬಹುದು ಎನ್ನುವ ನಿರೀಕ್ಷೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ಕಚ್ಚಾ ಸೋಯಾಬೀನ್ ಮತ್ತು ಪಾಮ್ ಎಣ್ಣೆ ಮೇಲಿನ ಮೂಲ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇಕಡಾ 10 ರಿಂದ 5ಕ್ಕೆ ಇಳಿಸಿದೆ. ಅಂತೆಯೇ ಸಂಸ್ಕರಿಸಿದ ಸೋಯಾಬೀನ್ ಮತ್ತು ಪಾಮ್ ಎಣ್ಣೆ ಮೇಲಿನ ಸುಂಕವನ್ನು ಶೇಕಡಾ 32.5 ರಿಂದ 27.5ಕ್ಕೆ ಕಡಿತಗೊಳಿಸಲಾಗಿದೆ.

ದೆಹಲಿ ಗ್ಯಾಂಗ್‌ರೇಪ್‌: ಯುವತಿಯರ ಜತೆಗಿನ ಅಸಭ್ಯ ವರ್ತನೆಗೆ ತಿಂಗಳ ಹಿಂದಷ್ಟೇ ಜಿಮ್‌ನಿಂದ ಹೊರ ಹಾಕಲ್ಪಟ್ಟಿದ್ದ ಪ್ರಮುಖ ಆರೋಪಿ ಆಸಿಫ್‌

ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 10 ರಿಂದ ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಸುಂಕವನ್ನು ಶೇಕಡಾ 32.5 ರಿಂದ 22.5 ಕ್ಕೆ ಕಡಿತಗೊಳಿಸಲಾಗಿದೆ.

ಜಾಗತಿಕ ಸಂಘರ್ಷದ ಪರಿಣಾಮ ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಸಸ್ಯಜನ್ಯ ಎಣ್ಣೆಗಳ ಬೆಲೆಗಳು ಸುಮಾರು ಶೇಕಡಾ 20ರಷ್ಟು ಹೆಚ್ಚಳವಾಗಿದ್ದವು. ಸಾಮಾನ್ಯವಾಗಿ ಸೆಪ್ಟೆಂಬರ್‌ನಿಂದ ನವೆಂಬರ್ ಅವಧಿಯ ಹಬ್ಬದ ದಿನಗಳಾಗಿರುವುದರಿಂದ ಈ ಸಂದರ್ಭದಲ್ಲಿ ಅಡುಗೆ ಎಣ್ಣೆಯ ಬೇಡಿಕೆ ಸಾಮಾನ್ಯವಾಗಿ ಹೆಚ್ಚಿರುತ್ತದೆ. ಹೀಗಾಗಿ ಕೇಂದ್ರ ಸರ್ಕಾರವು ಅಡುಗೆ ಎಣ್ಣೆಗಳ ಮೇಲೆ ಸುಂಕ ಕಡಿತ ಮಾಡಲು ನಿರ್ಧರಿಸಿದೆ. ಈ ಕುರಿತು ಹಣಕಾಸು ಸಚಿವಾಲಯ ಬುಧವಾರ ಅಧಿಸೂಚನೆಯನ್ನು ಹೊರಡಿಸಿದ್ದು, ಈ ಬದಲಾವಣೆಗಳು ಸೆಪ್ಟೆಂಬರ್ 24 ರಿಂದ ಜಾರಿಗೆ ಬರಲಿವೆ ಎಂದು ತಿಳಿಸಿದೆ.

ವಿಶ್ವದ ಅತಿದೊಡ್ಡ ಆಮದುದಾರ ರಾಷ್ಟ್ರ

ಜಾಗತಿಕ ಮಟ್ಟದಲ್ಲಿ ಸಸ್ಯ ಜನ್ಯ ಅಡುಗೆ ಎಣ್ಣೆಯ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿರುವ ಭಾರತ ತನ್ನ ದೇಶೀಯ ಬೇಡಿಕೆಯ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಮುಖ್ಯವಾಗಿ ಪಾಮ್, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳು ಸೇರಿವೆ. ಉಳಿದಂತೆ ಮಲೇಷ್ಯಾ, ಇಂಡೋನೇಷ್ಯಾ, ಅರ್ಜೆಂಟೀನಾ, ರಷ್ಯಾ ಮತ್ತು ಉಕ್ರೇನ್‌ ಹೆಚ್ಚಿನ ಪ್ರಮಾಣದ ಅಡುಗೆ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಾಗಿವೆ.

ಶಬರಿಮಲೆಯಲ್ಲಿ ಮತ್ತೊಂದು ಅಕ್ರಮ ಬೆಳಕಿಗೆ; ಅಯ್ಯಪ್ಪನ ಚಿನ್ನದ ಕಿರೀಟ ನಾಪತ್ತೆ: 446 ಗ್ರಾಂ ತೂಕದ ಕಿರೀಟ ಬದಲು ನಕಲಿ ಪತ್ತೆ

ಕಚ್ಚಾ ಮತ್ತು ಸಂಸ್ಕರಿಸಿದ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರವು 2025ರ ಅಕ್ಟೋಬರ್ ತಿಂಗಳಲ್ಲಿ ತಿದ್ದುಪಡಿ ಮಾಡಿದ್ದು, ಇದರಲ್ಲಿ ಈಗ ಬದಲಾವಣೆ ಮಾಡಲಾಗಿದೆ. 2025ರ ಮೇ ತಿಂಗಳಲ್ಲಿ ಕಚ್ಚಾ ಖಾದ್ಯ ತೈಲಗಳ ಮೇಲಿನ ಮೂಲ ಆಮದು ತೆರಿಗೆಯನ್ನು ಕೇಂದ್ರ ಸರ್ಕಾರವು ಅರ್ಧಕ್ಕೆ ಇಳಿಸಿತ್ತು. ಇದರಿಂದ ಕಚ್ಚಾ ಪಾಮ್ ಎಣ್ಣೆ, ಸೋಯಾಬೀನ್ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಆಮದು ಸುಂಕ ಶೇಕಡಾ 16.5ರಷ್ಟಾಗಿತ್ತು. ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕ ಕಡಿತವು ಜಾಗತಿಕ ಖಾದ್ಯ ತೈಲ ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

ವಿದ್ಯಾ ಇರ್ವತ್ತೂರು

View all posts by this author