ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತೀಯ ರಫ್ತುದಾರರಿಗೆ ಗುಡ್‌ ನ್ಯೂಸ್‌; ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕರಡು ಸಿದ್ಧ

India-US Trade Deal: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಮೊದಲ ಹಂತ ಅಂತಿಮಗೊಂಡಿದೆ. ಇದರ ಕಾನೂನು ಕರಡು ರಚನೆ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲೇ ಇದು ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಭಾರತ ಮತ್ತು ಅಮೆರಿಕ (India- america) ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ (India-US bilateral trade agreement) ಮೊದಲ ಹಂತವು ಕೊನೆಯಾಗಿದೆ. ಪ್ರಸ್ತುತ ಇದರ ಕಾನೂನು ಕರಡು ರಚನೆ ಪ್ರಕ್ರಿಯೆ (Legal Drafting) ನಡೆಯುತ್ತಿದ್ದು, ಶೀಘ್ರದಲ್ಲೇ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ (Union Commerce and Industry Minister) ಪಿಯೂಷ್ ಗೋಯಲ್ (Piyush Goyal) ತಿಳಿಸಿದ್ದಾರೆ. ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (SRCC) ನಲ್ಲಿ ಗುರುವಾರ ನಡೆದ 'ಸೆಂಟೆನರಿ ಕಾನ್‌ಕ್ಲೇವ್' ಶತಮಾನೋತ್ಸವ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಕುರಿತು ಮಾಹಿತಿ ಹಂಚಿಕೊಂಡರು.

ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದ ಮಾತುಕತೆಗಳ ಕುರಿತು ತಮ್ಮ ನಿಲುವು ಈ ಹಿಂದಿನ ಹೇಳಿಕೆಗಳಿಗೆ ಅನುಗುಣವಾಗಿಯೇ ಇದೆ ಎಂದ ಅವರು ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕಾನೂನು ಕರಡು ರಚಿಸುವ ಕೆಲಸ ನಡೆಯುತ್ತಿದೆ. ಈ ಒಪ್ಪಂದದಿಂದ ನಮ್ಮ ಪ್ರತಿಸ್ಪರ್ಧಿ ರಾಷ್ಟ್ರಗಳಿಗೆ ಹೋಲಿಸಿದರೆ ನಮಗೆ ಅನುಕೂಲಕರ ಅಥವಾ ಸ್ಪರ್ಧಾತ್ಮಕ ಲಾಭ ಸಿಗುವಂತಾಗಲಿದೆ ಎಂದರು.

Srirangapatna Dasara 2026: ಐತಿಹಾಸಿಕ ಶ್ರೀರಂಗಪಟ್ಟಣ ದಸರಾಗೆ ಸಚಿವ ಚಲುವರಾಯಸ್ವಾಮಿ, ನಟ ರವಿಚಂದ್ರನ್ ಚಾಲನೆ

ಬಳಿಕ ಅವರು ಸುದ್ದಿಗಾರರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿ ತಾವು ಈಗ ನೀಡಿದ ಹೇಳಿಕೆಗಳು ಈ ಹಿಂದೆ ನೀಡಿದ ಹೇಳಿಕೆಗಳಿಗೆ ಪೂರಕವಾಗಿಯೇ ಇವೆ. ಇದರಲ್ಲಿ ಹೊಸದೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದ ಅವರು, ಆದರೆ ಈ ಒಪ್ಪಂದವನ್ನು ಅಂತಿಮಗೊಳಿಸಲು ಅಥವಾ ಜಾರಿಗೆ ತರಲು ಯಾವುದೇ ನಿರ್ದಿಷ್ಟ ಕಾಲಮಿತಿಯನ್ನು ನೀಡಿಲ್ಲ ಎಂದು ಹೇಳಿದರು.

ಮೊದಲ ಹಂತದಲ್ಲಿ ಯಾವ ವಲಯಗಳು ಅಥವಾ ಉತ್ಪನ್ನಗಳು ಈ ಒಪ್ಪಂದದಲ್ಲಿ ಸೇರಿವೆ ಎನ್ನುವ ಕುರಿತು ಪ್ರಶ್ನೆಗೆ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಸಮಾನ ರಾಷ್ಟ್ರಗಳಿಗೆ ಹೋಲಿಸಿದರೆ ಇದರಿಂದ ಸ್ಪರ್ಧಾತ್ಮಕ ಪ್ರಯೋಜನ ದೊರೆಯಲಿದೆ ಎಂದರು.

ಹೆಚ್ಚಿನ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಯನ್ನು ಪ್ರತಿಪಾದಿಸುತ್ತಿರುವ ಪಿಯೂಷ್ ಗೋಯಲ್ ಅವರು ಕೆನಡಾದೊಂದಿಗೂ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಕೆನಡಾ ತನ್ನ ವ್ಯವಹಾರಗಳು ಜಾಗತಿಕ ಮಾರುಕಟ್ಟೆಗಳಿಗೆ ಭಾರತವನ್ನು ಉತ್ಪಾದನೆ, ನಾವೀನ್ಯತೆ ಮತ್ತು ವಿನ್ಯಾಸ ನೆಲೆಯಾಗಿ ಬಳಸುವಂತೆ ಅವರು ಇತ್ತೀಚಿಗೆ ತಿಳಿಸಿದ್ದರು.

ಈ ಕುರಿತು ಭಾರತಕ್ಕೆ ಟೀಮ್ ಕೆನಡಾ ಟ್ರೇಡ್ ಮಿಷನ್ ಸಂದರ್ಭದಲ್ಲಿ ಮುಂಬೈನಲ್ಲಿ ನಡೆದ ವ್ಯಾಪಾರ ಸ್ವಾಗತ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆನಡಾದ ಕಂಪೆನಿಗಳು ಭಾರತದ ದೇಶೀಯ ಮಾರುಕಟ್ಟೆಯನ್ನು ಮೀರಿ ನೋಡಬೇಕು ಮತ್ತು ದೇಶದಿಂದ ಉತ್ಪಾದಿಸುವ ಮತ್ತು ರಫ್ತು ಮಾಡುವ ಅವಕಾಶಗಳನ್ನು ಅನ್ವೇಷಿಸಬೇಕು ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಆರೋಪ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಈ ಸಂದರ್ಭದಲ್ಲಿ ಅವರು ಭಾರತದ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು ಎತ್ತಿ ತೋರಿಸಿದರು. ಮುಂದಿನ 12 ರಿಂದ 18 ತಿಂಗಳುಗಳಲ್ಲಿ ಇತರ ಎಂಟು ದೇಶಗಳೊಂದಿಗೆ ಮಾತುಕತ ನಡೆಸಲಾಗುವುದು ಎಂದು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author