ಕರ್ನಾಟಕವು ಬ್ಲೂ-ಚಿಪ್ ಸಂಪತ್ತುಗಳ ಮೇಲೆ ಹೆಚ್ಚಿನ ವಿಶ್ವಾಸ ತೋರುತ್ತಿದ್ದು, ಶೇ.32ರಷ್ಟು ಪೋರ್ಟ್ ಫೋಲಿಯೊ ವಿತರಣೆಯಾಗಿದೆ.
- ಕ್ರಿಪ್ಟೊ ಅಳವಡಿಕೆಯು ಭಾರತದಲ್ಲಿ ಹಿಂದಿನ ಮಿಲೆನಿಯಲ್ ಗಳು ಮತ್ತು ಜೆನ್ ಎಕ್ಸ್ ಗಳಲ್ಲಿ ಹೆಚ್ಚಾಗುತ್ತಿದೆ: ಕಾಯಿನ್ ಸ್ವಿಚ್ ಕ್ಯೂ1 ವರದಿ
ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಕ್ರಿಪ್ಟೊ ಹೂಡಿಕೆ ಮತ್ತು ಟ್ರೇಡಿಂಗ್ ಪ್ಲಾಟ್'ಫಾರಂ ಕಾಯಿನ್ ಸ್ವಿಚ್ ಇಂದು ತನ್ನ ಮುಂಚೂಣಿಯ ವರದಿಯ ಕ್ಯೂ1 2026ರ ವರದಿ “ಇಂಡಿಯಾಸ್ ಕ್ರಿಪ್ಟೊ ಪೋರ್ಟ್ ಫೋಲಿಯೊ; ಹೌ ಇಂಡಿಯಾ ಇನ್ವೆಸ್ಟ್ಸ್” ಬಿಡುಗಡೆ ಮಾಡಿದ್ದು ದೇಶಾದ್ಯಂತ ಇರುವ 2.5 ಕೋಟಿಗೂ ಹೆಚ್ಚು ಹೂಡಿಕೆದಾರರ ಚಟುವಟಿಕೆ ಆಧರಿತ ಒಳನೋಟಗಳನ್ನು ನೀಡುತ್ತದೆ. ಈ ಫಲಿತಾಂಶಗಳು ಮಾರುಕಟ್ಟೆ ಪ್ರಬುದ್ಧತೆಯ ಸ್ಪಷ್ಟ ಬದಲಾವಣೆ ತೋರುತ್ತದೆ.
26-35 ವರ್ಷ ವಯಸ್ಸಿನ ಹೂಡಿಕೆದಾರರು ಒಟ್ಟು ಶೇ.48ರಷ್ಟು ಭಾಗವಹಿಸುವಿಕೆಯಲ್ಲಿ ಪ್ರಭಾ ವಿಸಿದರೆ 35+ ವರ್ಗವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನ ಸಮುದಾಯವಾಗಿದ್ದು ನಂತರ ಜೆನ್ ಎಕ್ಸ್ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಿಲೆನಿಯಲ್ ಗಳು ಮಾರುಕಟ್ಟೆ ಪ್ರವೇಶಿಸು ತ್ತಿದ್ದಾರೆ.
ಯುವ ಸಮೂಹವು ಪ್ರಯೋಗದ ಹಂತಗಳಲ್ಲಿ ಮಾರುಕಟ್ಟೆಗಳನ್ನು ಪ್ರವೇಶಿಸಿದರೆ ಜೆನ್ ಎಕ್ಸ್ ಮತ್ತು ಅದಕ್ಕಿಂತ ಹೆಚ್ಚಿನ ಮಿಲೆನಿಯಲ್ ಗಳು ಅವುಗಳ ದೀರ್ಘಾವಧಿ ಮೌಲ್ಯ ಮತ್ತು ನಿಯಂತ್ರಣ ದ ಸ್ಪಷ್ಟತೆ ಪಡೆದ ನಂತರ ಹೊಸ ಹಣಕಾಸು ಸಂಪತ್ತುಗಳಿಗೆ ಹೂಡಿಕೆ ಮಾಡುತ್ತಿದ್ದಾರೆ. ಈ ಬದಲಾವಣೆಯು ಭಾರತದಲ್ಲಿ ಕ್ರಿಪ್ಟೊ ಪ್ರಾರಂಭಿಕ ಅಳವಡಿಕೆಯಿಂದ ಹೆಚ್ಚು ಪ್ರಬುದ್ಧ ಭಾಗ ವಹಿಸುವಿಕೆ ಹಂತಕ್ಕೆ ಚಲಿಸುತ್ತಿದ್ದು ಇದರಲ್ಲಿ ಹೆಚ್ಚಿನ ಹಣಕಾಸು ಅನುಭವ ಮತ್ತು ಬಂಡವಾಳ ಹೊಂದಿರುವ ಹೂಡಿಕೆದಾರರು ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದಾರೆ.
ಇದನ್ನೂ ಓದಿ: Keshava Prasad B Column: ಸಮಯ ನಿಲ್ಲದೆ ಓಡುತ್ತಿದೆ, ಆದರೆ ಹಣ ಬೆಳೆಯುತ್ತಿದೆಯೇ ?
“ಈ ತ್ರೈಮಾಸಿಕದಲ್ಲಿ ಪ್ರತ್ಯೇಕವಾಗಿ ನಿಲ್ಲುವುದು ಬರೀ ಯಾರು ಹೂಡಿಕೆ ಮಾಡುತ್ತಾರೆ ಎನ್ನುವು ದಲ್ಲ, ಬದಲಿಗೆ ಹೇಗೆ ಎನ್ನುವುದು. 35+ ವಲಯ ಹೆಚ್ಚಾಗಿರುವುದು ಹೆಚ್ಚಿನ ಡಿಪ್ ಬೈಯಿಂಗ್ ಮತ್ತು ದೀರ್ಘಾವಧಿ ಹಿಡುವಳಿಗೆ ಮುಂದುವರಿದ ಪ್ರಭಾವವು ಹೆಚ್ಚಿನ ಪ್ರಬುದ್ಧ ಮಾರುಕಟ್ಟೆಯತ್ತ ಸ್ಪಷ್ಟ ಬದಲಾವಣೆ ತೋರಿಸಿದೆ” ಎಂದು ಕಾಯಿನ್ ಸ್ವಿಚ್ ಸಹ-ಸಂಸ್ಥಾಪಕ ಆಶಿಶ್ ಸಿಂಘಾಲ್ ಹೇಳಿದರು.
ಭೌಗೋಳಿಕವಾಗಿ ಉತ್ತರ ಪ್ರದೇಶ (~12.9%) ಮತ್ತು ಮಹಾರಾಷ್ಟ್ರ (~12.3%) ಅಳವಡಿಕೆಯಲ್ಲಿ ಮುಂಚೂಣಿಯಲ್ಲಿ ಮುಂದುವರಿದಿದ್ದು ಭಾರತದ ಮುಂಚೂಣಿಯ ಕ್ರಿಪ್ಟೊ ಅಳವಡಿಕೆಯ ಮಾರುಕಟ್ಟೆಗಳಲ್ಲಿ ತಮ್ಮ ಸ್ಥಾನ ಭದ್ರ ಪಡಿಸಿಕೊಂಡಿವೆ.
ಬಿಟ್ ಕಾಯಿನ್ ಭಾರತದ ಕ್ರಿಪ್ಟೊ ಇಕೊಸಿಸ್ಟಂ ಬೆನ್ನೆಲುಬಾಗಿದ್ದು ಎಲ್ಲ ಟ್ರ್ಯಾಕ್ ಮಾಡಲಾದ ಸಂಪತ್ತುಗಳಲ್ಲಿ ಶೇ.9.2ರಷ್ಟು ಒಟ್ಟು ಪೋರ್ಟ್ ಫೋಲಿಯೊ ಅಳವಡಿಕೆ ಹೊಂದಿದ್ದು ಒಟ್ಟು ವಹಿವಾಟುಗಳ ಶೇ.17.4ರಷ್ಟು ವಹಿವಾಟಿನ ಚಟುವಟಿಕೆಗಳನ್ನು ನಡೆಸುತ್ತಿದ್ದು ಮಾರುಕಟ್ಟೆಯ ವಿಶ್ವಾಸಾರ್ಹ ದೀರ್ಘಾವಧಿ ಹಿಡುವಳಿ ಸಂಪತ್ತಾಗಿ ಮತ್ತು ಆದ್ಯತೆಯ ಟ್ರೇಡಿಂಗ್ ಸಾಧನವಾಗಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಬಿಟ್ ಕಾಯಿನ್ ಜೊತೆಯಲ್ಲಿ ಡೋಜ್ ಕಾಯಿನ್ (ಶೇ.6.0) ಮತ್ತು ಶಿಬಾ ಇನು (ಶೇ.4.4)ರಂತಹ ಮೀಮ್ ಕಾಯಿನ್ ಗಳು ಭಾರತದ ಪೋರ್ಟ್ ಫೋಲಿಯೋಗಳಲ್ಲಿ ಮುಂಚೂಣಿಯಲ್ಲಿವೆ. ವ್ಯಾಪಾರದ ವರ್ತನೆಯು ಭಾರತದ ವಿಶಿಷ್ಟ ಹೂಡಿಕೆದಾರರ ಲಯವನ್ನು ಎತ್ತಿ ತೋರಿಸುತ್ತಿದ್ದು ಗರಿಷ್ಠ ವಹಿವಾಟು ರಾತ್ರಿ 10-11ರ ನಡುವೆ ನಡೆಯುತ್ತದೆ. ತಡರಾತ್ರಿಯ ಮಾರುಕಟ್ಟೆ ವಹಿವಾಟು ಹೇಗೆ ಕ್ರಿಪ್ಟೊ ಹೂಡಿಕೆಯು ಕೆಲಸದ ವೇಳಾಪಟ್ಟಿಗಳಿಗೆ ಹೊಂದಿಕೊಳ್ಳು ತ್ತದೆ ಎನ್ನುವುದನ್ನು ತೋರುತ್ತದೆ, ಅದರಲ್ಲಿ ಹಲವಾರು ಹೂಡಿಕೆದಾರರು ಸಾಂಪ್ರದಾಯಿಕ ಮಾರುಕಟ್ಟೆ ಅವಧಿಯ ನಂತರ ಭಾಗವಹಿಸುತ್ತಿದ್ದಾರೆ.
ಡಿಜಿಟಲ್ ಸಂಪತ್ತುಗಳ 24x7 ಸ್ವರೂಪದನಡುವೆಯೂ ವಾರದ ದಿನಗಳು ವಾರಾಂತ್ಯಗಳಿಗಿಂತ ಹೆಚ್ಚು ಚಟುವಟಿಕೆಯನ್ನು ಹೊಂದಿದ್ದು ಹೂಡಿಕೆದಾರರು ಅವಕಾಶದ ಚಟುವಟಿಕೆಗಿಂತ ಯೋಜಿತ ವಹಿವಾಟಿನ ದಿನಚರಿಗಳನ್ನು ಹೆಚ್ಚಾಗಿ ಅನುಸರಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ.
ಫೆಬ್ರವರಿ 05 ಮತ್ತು 06 ಗರಿಷ್ಠ ಟ್ರೇಡಿಂಗ್ ಪ್ರಮಾಣಗಳನ್ನು ದಾಖಲಿಸಿದ್ದು ಮಾರುಕಟ್ಟೆ ತಿದ್ದುಪಡಿ ಗಳು ಈ ಅವಧಿಯಲ್ಲಿ ಕಂಡುಬಂದಿದ್ದು ಬೆಲೆ ಕುಸಿತದಲ್ಲಿ ಹೆಚ್ಚಿನ ಖರೀದಿ ಚಟುವಟಿಕೆ ಸೂಚಿಸಿದೆ.
ದೀರ್ಘಾವಧಿ ಹೂಡಿಕೆಯು ಪ್ರಭಾವಿಸುವುದನ್ನು ಮುಂದುವರಿಸಿದ್ದು ಶೇ.61.3ರಷ್ಟು ಹೂಡಿಕೆ ದಾರರು ಒಂದು ವರ್ಷಕ್ಕಿಂತ ಹೆಚ್ಚು ಅವಧಿ ಹೂಡಿಕೆ ಉಳಿಸಿಕೊಂಡಿದ್ದು ಶೇ.28.3ರಷ್ಟು ಮೊಮೆಂಟಂ ಟ್ರೇಡಿಂಗ್ ಮತ್ತು ಶೇ.20.4 ಡಿಪ್-ಬೈಯಿಂಗ್ ಕಾರ್ಯತಂತ್ರಗಳನ್ನು ಅಳವಡಿಸಿ ಕೊಳ್ಳುತ್ತಿದ್ದಾರೆ. ಈ ಸಂಯೋಜನೆಯು ಮಾರುಕಟ್ಟೆಯಲ್ಲಿ ಪ್ರಚೋದನೆಯಿಂದ ಪ್ರೇರಿತ ವಹಿವಾಟುಗಳಿಗಿಂತ ಯೋಜಿತ ಕಾರ್ಯತಂತ್ರಗಳನ್ನು ಸಂಯೋಜನೆ ಎತ್ತಿ ತೋರಿಸಿದೆ.
ಪ್ರಾದೇಶಿಕ ಒಳನೋಟಗಳು ವಿಸ್ತಾರ ಹೂಡಿಕೆಯ ಶೈಲಿಗಳನ್ನು ಮತ್ತಷ್ಟು ಅನಾವರಣಗೊಳಿಸಿವೆ:
- ಕರ್ನಾಟಕವು ಬ್ಲೂ-ಚಿಪ್ ಸಂಪತ್ತುಗಳ ಮೇಲೆ ಹೆಚ್ಚಿನ ವಿಶ್ವಾಸ ತೋರುತ್ತಿದ್ದು, ಶೇ.32ರಷ್ಟು ಪೋರ್ಟ್ ಫೋಲಿಯೊ ವಿತರಣೆಯಾಗಿದೆ.
- ಬಿಹಾರವು ಸಣ್ಣ ಬಂಡವಾಳದ ಸಂಪತ್ತುಗಳಲ್ಲಿ ಹೆಚ್ಚಿನ ಭಾಗವಹಿಸುವಿಕೆ ತೋರಿಸಿದೆ
- ಆಂಧ್ರ ಪ್ರದೇಶದಲ್ಲಿ ಶೇ.59.1ರಷ್ಟು ಮಹಿಳಾ ಭಾಗವಹಿಸುವಿಕೆ ತೋರಿಸಿದೆ
- ಹರಿಯಾಣದಲ್ಲಿ ಅತ್ಯಂತ ಹೆಚ್ಚಿನ ಪುರುಷರ ಭಾಗವಹಿಸುವಿಕೆ ದಾಖಲಿಸಿದೆ
ಭಾರತದಾದ್ಯಂತ ಈಗ ಪೋರ್ಟ್ ಫೋಲಿಯೋಗಳು ಬ್ಲೂ-ಚಿಪ್, ದೊಡ್ಡ ಮತ್ತು ಸಣ್ಣ ಬಂಡವಾ ಳದ ಸಂಪತ್ತುಗಳ ಸಮತೋಲನ ತೋರುತ್ತಿದ್ದು ರಚನಾತ್ಮಕ ಹೂಡಿಕೆಯತ್ತ ಬದಲಾಗುತ್ತಿದೆ. ಈ ಫಲಿತಾಂಶಗಳು ಮಾಹಿತಿಪೂರ್ಣ ಮತ್ತು ಜವಾಬ್ದಾರಿಯುತ ಹೂಡಿಕೆಯ ಪ್ರಾಮುಖ್ಯತೆ ಮತ್ತು ಜವಾಬ್ದಾರಿಯುತ ಹೂಡಿಕೆಯನ್ನು ತೋರಿಸುತ್ತಿದ್ದು ಹೆಚ್ಚು ಹೂಡಿಕೆದಾರರು ರಚನಾತ್ಮಕ ಪೋರ್ಟ್ ಫೋಲಿಯೊ ವಿತರಣೆ ಮತ್ತು ದೀರ್ಘಾವಧಿ ಕಾರ್ಯತಂತ್ರಗಳಿಗೆ ಬದಲಾಗುತ್ತಿದ್ದಾರೆ.
ಸೂಚನೆ: ಈ ಒಳನೋಟಗಳನ್ನು ಕಾಯಿನ್ ಸ್ವಿಚ್ ಬಳಕೆದಾರರ ದತ್ತಾಂಶ ಆಧರಿಸಿದೆ ಮತ್ತು ಇತರೆ ಪ್ಲಾಟ್ ಫಾರಂಗಳಲ್ಲಿ ಟ್ರೇಡಿಂಗ್ ಅಥವಾ ಇತರೆ ಹೂಡಿಕೆಯ ಚಟುವಟಿಕೆಯನ್ನು ಬಿಂಬಿಸುವುದಿಲ್ಲ.