ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India's GDP: ಅಮೆರಿಕಕ್ಕೆ ರಫ್ತು ಕುಸಿತಕ್ಕೀಡಾಗಿದ್ದರೂ, ಭಾರತದ ಎರಡನೇ ತ್ರೈಮಾಸಿಕ ಜಿಡಿಪಿ ಬೆಳವಣಿಗೆ 8.2% ಕ್ಕೆ ಏರಿಕೆ!

GDP Rate: ಅಮೆರಿಕಕ್ಕೆ ರಫ್ತು ಕುಸಿದಿದ್ದರೂ, ಚಿನ್ನದ ಆಮದು ಜಾಸ್ತಿಯಾಗಿದ್ದರೂ, ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ನಿರೀಕ್ಷೆಗೂ ಮೀರಿ ಬೆಳೆದು ಅಚ್ಚರಿ ಮೂಡಿಸಿದೆ. ಭಾರತದ ಜಿಡಿಪಿ 8 ಪರ್ಸೆಂಟ್‌ ಗೂ ಹೆಚ್ಚು ಆಗಿರುವುದು ಅನಿರೀಕ್ಷಿತ.

ಜಿಡಿಪಿ ದರ (ಸಂಗ್ರಹ ಚಿತ್ರ)

ನವದೆಹಲಿ: ಅಮೆರಿಕಕ್ಕೆ ರಫ್ತು ಕುಸಿದಿದ್ದರೂ, ಚಿನ್ನದ ಆಮದು ಜಾಸ್ತಿಯಾಗಿದ್ದರೂ, ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಭಾರತದ (India's GDP) ಜಿಡಿಪಿ ಬೆಳವಣಿಗೆ ನಿರೀಕ್ಷೆಗೂ ಮೀರಿ ಬೆಳೆದು ಅಚ್ಚರಿ ಮೂಡಿಸಿದೆ. ಸ್ವತಃ ಆರ್‌ಬಿಐ ಆಗಲಿ, ಐಎಂಎಫ್‌ ಆಗಲಿ, ಯಾರೂ ಇಷ್ಟು ಜಿಡಿಪಿ ಗ್ರೋತ್‌ ಆಗಬಹುದು ಎಂದು ನಿರೀಕ್ಷಿಸಿರಲಿಲ್ಲ. ಭಾರತದ ಜಿಡಿಪಿ 8 ಪರ್ಸೆಂಟ್‌ ಗೂ ಹೆಚ್ಚು ಆಗಿರುವುದು ಅನಿರೀಕ್ಷಿತ. ಎಲ್ಲರೂ 7ರಿಂದ 7.50% ದಾಖಲಾಗಬಹುದು ಎಂದು ಅಂದುಕೊಂಡಿದ್ದರು. ಆದರೆ ಗುಡ್‌ ನ್ಯೂಸ್‌ ಆಗಿದೆ.

ಜಿಎಸ್‌ಟಿ ಕಡಿತದ ಪ್ರಯೋಜನವು ಪೂರ್ಣ ಪ್ರಮಾಣದಲ್ಲಿ ಸಿಗುವುದಕ್ಕೆ ಮೊದಲೇ ಭಾರತದ ಎರಡನೇ ತ್ರೈಮಾಸಿಕದ, ಅಂದರೆ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ, ಜಿಡಿಪಿ ಬೆಳವಣಿಗೆ 8.2% ಕ್ಕೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ಶುಕ್ರವಾರ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5.6% ಬೆಳವಣಿಗೆ ದಾಖಲಾಗಿತ್ತು. ಕಳೆದ ಏಪ್ರಿಲ್-ಜೂನ್‌ ತ್ರೈಮಾಸಿಕದಲ್ಲಿ 7.8% ಬೆಳವಣಿಗೆ ದಾಖಲಾಗಿತ್ತು. ಆರ್‌ಬಿಐ 7% ಜಿಡಿಪಿ ಗ್ರೋತ್‌ ಅಂದಾಜಿಸಿತ್ತು. ಇದನ್ನೂ ಮೀರಿ ಏರಿಕೆಯಾಗಿರುವುದು ವಿಶೇಷ. ಜುಲೈ-ಸೆಪ್ಟೆಂಬರ್‌ನಲ್ಲಿ 48 ಲಕ್ಷದ 63 ಸಾವಿರ ಕೋಟಿ ರುಪಾಯಿ ಜಿಡಿಪಿ ಮೌಲ್ಯ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 44 ಲಕ್ಷದ 94 ಸಾವಿರ ಕೋಟಿ ರುಪಾಯಿಯಷ್ಟಿತ್ತು.

ಇದಕ್ಕೆ ಕಾರಣವೇನು?

ಉತ್ಪಾದನಾ ಕ್ಷೇತ್ರ 9.1% ವಿಸ್ತರಿಸಿರುವುದು, ನಿರ್ಮಾಣ ಕ್ಷೇತ್ರ 7.2%, ಹಣಕಾಸು, ರಿಯಲ್‌ ಎಸ್ಟೇಟ್‌ ಮತ್ತು ವೃತ್ತಿಪರ ಸೇವಾ ವಲಯ 10.2% ಬೆಳವಣಿಗೆ ಕಂಡಿರುವುದು ಪುಷ್ಟಿ ಕೊಟ್ಟಿದೆ. ಮುಖ್ಯವಾಗಿ ಉತ್ಪಾದನಾ ಕ್ಷೇತ್ರವು 9.1% ಬೆಳವಣಿಗೆಯನ್ನು ದಾಖಲಿಸಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2.2% ಪ್ರಗತಿ ಕಂಡಿತ್ತು.

ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಕೆಗಳು ಪ್ರಬಲವಾಗಿರುವುದು ಮತ್ತು ಸರಕಾರದ ವೆಚ್ಚಗಳಲ್ಲಿ ಹೆಚ್ಚಳವಾಗಿರುವುದು. ಖಾಸಗಿ ಬಂಡವಾಳ ಹೂಡಿಕೆ ಮಂದಗತಿಯಲ್ಲಿದ್ದರೂ, ಸರಕಾರದ ಸಾರ್ವಜನಿಕ ಹೂಡಿಕೆಗೆಳು ಹೆಚ್ಚಳವಾಗಿದೆ. ಸರಕಾರ ತನ್ನ ಆಡಳಿತ, ಸಾರ್ವಜನಿಕರ ಉಪಯೋಗಕ್ಕಾಗಿ ಮತ್ತು ಆರ್ಥಿಕ ಅಭಿವೃದ್ಧಿಗೆ ಮಾಡುವ ಖರ್ಚುಗಳು ಜಿಡಿಪಿ ಬೆಳವಣಿಗೆಗೆ ಪುಷ್ಟಿ ನೀಡಿದೆ. ಜತೆಗೆ ಖಾಸಗಿಯಾಗಿ ಗ್ರಾಹಕರ ವೆಚ್ಚಗಳು ಜಿಡಿಪಿಗೆ 57% ಕೊಡುಗೆ ನೀಡುತ್ತವೆ. ಇದು ಜುಲೈ-ಸೆಪ್ಟೆಂಬರ್‌ ನಲ್ಲಿ 7.9% ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿಇದು 7% ಇತ್ತು.

Karnataka GST Collection: ಜಿಎಸ್‌ಟಿ ಮಾಸಿಕ ವರದಿ: ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ ಬೆಳವಣಿಗೆಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ಕಳೆದ ಸೆಪ್ಟೆಂಬರ್‌ 22ರಿಂದ ಜಿಎಸ್‌ಟಿ ದರದಲ್ಲಿ ಗಣನೀಯ ಕಡಿತ ಉಂಟಾಗಿತ್ತು. ಹೀಗಿದ್ದರೂ ಇದಕ್ಕೂ ಮುನ್ನವೇ ಹೌಸ್‌ಹೋಲ್ಡ್‌ ಪ್ರಾಡಕ್ಟ್‌ಗಳು ಮತ್ತು ದಿನಸಿ ವಸ್ತುಗಳಿಗೆ ಬೇಡಿಕೆ ಉಂಟಾಗಿತ್ತು. ಎಫ್‌ಎಂಸಿಜಿ ಕಂಪನಿಗಳ ಡೇಟಾಗಳು ಇದನ್ನು ತಿಳಿಸಿವೆ. ಜಿಎಸ್‌ ಟಿ ದರ ಕಡಿತದ ಪರಿಣಾಮ ಜನರ ಕೈಗೆ 2 ಲಕ್ಷ ಕೋಟಿ ರುಪಾಯಿ ಉಳಿಯಲಿದ್ದು, ಜನ ಹೆಚ್ಚು ಖರ್ಚು ಮಾಡುವ ನಿರೀಕ್ಷೆ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದರು. ಜುಲೈ-ಸೆಪ್ಟೆಂಬರ್‌ನಲ್ಲಿ ಕೃಷಿ 3.1% ಮತ್ತು ಉದ್ದಿಮೆ ವಲಯವು 3.5% ಬೆಳವಣಿಗೆ ದಾಖಲಿಸಿದೆ.

ಜಿಡಿಪಿ ಬೆಳವಣಿಗೆಯಲ್ಲಿ ಗ್ರಾಮೀಣ ಆರ್ಥಿಕತೆಯ ಚೇತರಿಕೆಯೂ ಗಮನಾರ್ಹ ಕೊಡುಗೆ ನೀಡಿದೆ. ಇದು ಸರಕಾರದ ವೆಚ್ಚವನ್ನೂ ಮೀರಿಸಿದೆ. ಕೃಷಿ, ಉತ್ಪಾದನೆ ಮತ್ತು ನಿರ್ಮಾಣ ವಲಯದಲ್ಲಿ ಗಣನೀಯ ಬೆಳವಣಿಗೆಯಾಗಿದೆ ಎಂದು ಎನ್‌ಎಸ್‌ ಇ ಅಂಕಿ ಅಂಶಗಳು ತಿಳಿಸಿವೆ.

ಕೇಶವ ಪ್ರಸಾದ್​ ಬಿ

View all posts by this author