ನವದೆಹಲಿ: ಯುಎಸ್ (US), ಇಸ್ರೇಲ್ (Israel) ಮತ್ತು ಇರಾನ್ (Iran) ನಡುವಿನ ಸಂಘರ್ಷದ ಪರಿಣಾಮ ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಉದ್ವಿಗ್ನತೆ (Confllict) ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಅಪಾಯವಿರುವ ವಾಯುಪ್ರದೇಶಗಳಿಗೆ ಭಾರತದ ವಿಮಾನ ಪ್ರವೇಶ ಮಾಡದೇ ಇರಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಯುದ್ಧದ ವಾತಾವರಣದ ಹಿನ್ನೆಲೆಯಲ್ಲಿ ಹೆಚ್ಚು ಅಪಾಯವಿರುವ 11 ವಾಯುಪ್ರದೇಶಗಳನ್ನು ತಪ್ಪಿಸಲು ಭಾರತ ಮುಂದಾಗಿದ್ದು, ಇದರಲ್ಲಿ ಇರಾನ್, ಇಸ್ರೇಲ್, ಲೆಬನಾನ್, ಸೌದಿ ಅರೇಬಿಯಾ, ಬಹರೈನ್, ಓಮನ್, ಇರಾಕ್, ಜೋರ್ಡಾನ್, ಯುಎಇ, ಕತಾರ್ ಮತ್ತು ಕುವೈತ್ ಮೇಲಿನ ವಾಯುಪ್ರದೇಶಗಳು ಸೇರಿವೆ.
ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳ ವಿಮಾನಗಳು ಈ ಮೇಲಿನ ಹನ್ನೊಂದು ವಾಯುಪ್ರದೇಶಗಳಿಂದ ದೂರವಿರಲು ಮತ್ತು ಸಂಘರ್ಷ ಸ್ಥಳಗಳಿಗೆ ಆಕಸ್ಮಿಕವಾಗಿ ತೆರಳುವ ಮುನ್ನ ಯೋಜನೆಗಳನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿದೆ. ಈ ಆದೇಶವು ಮಾರ್ಚ್ 28ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.
ಜಾಗತಿಕ ತೈಲ ಬಿಕ್ಕಟ್ಟು; ಪ್ರೀಮಿಯಂ ಪೆಟ್ರೋಲ್ ಬೆಲೆ ಲೀಟರ್‌ಗೆ 2.30 ರೂ. ಹೆಚ್ಚಳ
ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸಂಘರ್ಷ ಪೀಡಿತ ಪ್ರದೇಶಗಳ ವಿಮಾನ ನಿಲ್ದಾಣಗಳಿಗೆ ತೆರಳುವಾಗ ಅಪಾಯದ ಮೌಲ್ಯಮಾಪನಗಳ ಭಾಗವಾಗಿ ಬಲವಾದ ಆಕಸ್ಮಿಕ ಯೋಜನೆಯನ್ನು ಕೂಡ ಒಳಗೊಂಡಿರಬೇಕು ಎಂದು ಡಿಜಿಸಿಎ ತಿಳಿಸಿದೆ.
ಸೌದಿ ಅರೇಬಿಯಾ ಮತ್ತು ಒಮಾನ್‌ನಲ್ಲಿ ವಿಮಾನಯಾನ ಸಂಸ್ಥೆಗಳು ಎಫ್ ಎಲ್ 320 ಗಿಂತ ಕಡಿಮೆ ಕಾರ್ಯನಿರ್ವಹಿಸದಂತೆ ತಿಳಿಸಲಾಗಿದೆ, ಇದು ವಾಯುಯಾನದಲ್ಲಿ ಪ್ರಮಾಣಿತ ಸಮುದ್ರ ಮಟ್ಟದ ಒತ್ತಡಕ್ಕಿಂತ 32,000 ಅಡಿ ಎತ್ತರವನ್ನು ಸೂಚಿಸಲು ಬಳಸುವ ಪದವಾಗಿದೆ. ಇದರರ್ಥ ವಿಮಾನಗಳು ಹೆಚ್ಚಿನ ಕ್ರೂಸಿಂಗ್ ಎತ್ತರವನ್ನು ಕಾಯ್ದುಕೊಳ್ಳಬೇಕು, ಅವುಗಳನ್ನು ಸಂಭಾವ್ಯ ನೆಲ-ಆಧಾರಿತ ಬೆದರಿಕೆಗಳು ಅಥವಾ ಸಂಘರ್ಷ-ಸಂಬಂಧಿತ ಅಪಾಯಗಳಿಂದ ದೂರವಿರಿಸಬೇಕು.
ಸಂಘರ್ಷದ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದ್ದು, ಇದು ಇರಾನ್ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳ ಮೇಲೂ ಅಪಾಯವನ್ನು ಹೆಚ್ಚಿಸಿದೆ. ಮಿಲಿಟರಿ ಚಟುವಟಿಕೆ, ತಪ್ಪು ಲೆಕ್ಕಾಚಾರಗಳು ನಾಗರಿಕ ವಿಮಾನಗಳ ಮೇಲೆ ಪರಿಣಾಮ ಬೀರುವ ಅಪಾಯಗಳ ಸಾಧ್ಯತೆ ಬಗ್ಗೆ ಡಿಜಿಸಿಎ ಎಚ್ಚರಿಸಿದೆ.
ಅನುಮತಿಸಲಾದ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡುವಾಗ ಕಟ್ಟುನಿಟ್ಟಾಗಿ ಜಾಗರೂಕತೆಯನ್ನು ಪಾಲಿಸಬೇಕು. ವಿಶೇಷವಾಗಿ ಈ ಪ್ರದೇಶದ ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ವಿಮಾನಗಳು ಬಲವಾದ ಪರ್ಯಾಯ ಯೋಜನೆಯನ್ನು ಒಳಗೊಂಡಿರಲೇಬೇಕು ಎಂದು ತಿಳಿಸಿದೆ.
ನಿರ್ವಾಹಕರು ತಮ್ಮ ವಿಮಾನ ಸಿಬ್ಬಂದಿಗೆ ಇತ್ತೀಚಿನ ವಾಯುಪ್ರದೇಶ ಮತ್ತು ನಿರ್ಬಂಧಗಳ ಕುರಿತು ಮಾಹಿತಿಯನ್ನು ಒದಗಿಸುವಂತೆ ಸೂಚಿಸಲಾಗಿದೆ. ವಾಯುಪ್ರದೇಶ ಮತ್ತು ವಿಮಾನ ನಿಲ್ದಾಣಗಳ ಬಗ್ಗೆ ನೈಜ-ಸಮಯದ ನವೀಕರಣಗಳನ್ನು ಒದಗಿಸುವ ಸೂಚಿಸಲಾಗಿದೆ. ಪ್ರಸ್ತುತ ಪರಿಸ್ಥಿತಿಯು ನಾಗರಿಕ ವಿಮಾನ ಕಾರ್ಯಾಚರಣೆಗಳಿಗೆ ಅಪಾಯಕಾರಿಯಾಗಿದೆ. ಸಿರಿಯನ್ ಮತ್ತು ಯೆಮೆನ್ ವಾಯುಪ್ರದೇಶಗಳನ್ನು ಕೂಡ ತಪ್ಪಿಸಲು ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ ಎಂದು ಡಿಜಿಸಿಎ ತಿಳಿಸಿದೆ.