ಬೆಂಗಳೂರು: ಬಿ ಖಾತಾ ಸೈಟ್ ಅನ್ನು ಎ ಖಾತಾಗೆ ಪರಿವರ್ತಿಸಬಹುದಾ? ಅನ್ನೋ ಅತ್ಯಂತ ಪ್ರಚಲಿತ ಹಾಗೂ ಬಹುಮುಖ್ಯ ವಿಷಯದ ಬಗ್ಗೆ ತಿಳಿಯೋಣ. ನಿಮ್ಮ ಸೈಟ್ ಬಿ ಖಾತಾ ಆಗಿದೆ ಎಂದಮಾತ್ರಕ್ಕೆ ಅದು ಲೀಗಲ್ ಆಗಿಲ್ಲ ಅಂತಲ್ಲ, ಆದರೆ ಅದರಿಂದಾಗಿ ನಿಮಗೆ ಕೆಲವು ಸವಾಲುಗಳು ಎದುರಾಗುತ್ತವೆ. ಅಂದ್ರೆ ಬ್ಯಾಂಕ್ ಲೋನ್ ಸಿಗೋದಿಲ್ಲ, ಮನೆ ಕಟ್ಟೋ ಅನುಮತಿ ಸಿಗೋದಿಲ್ಲ, ಹೀಗಾಗಿ ಮಾರಾಟದ ಹೊತ್ತಿನಲ್ಲಿ ಖರೀದಿದಾರರು ಆಸಕ್ತಿ ತೋರಲು ಹಿಂಜರಿಯುತ್ತಾರೆ.
ಆದ್ರೆ ಈಗ ಎಲ್ಲದಕ್ಕೂ ಪರಿಹಾರ ಇದೆ. ಈ ಬಗ್ಗೆ ಪೂರ್ಣ ಕಾನೂನು ಪ್ರಕ್ರಿಯೆ, ದಾಖಲೆ, ಶುಲ್ಕ, ಎಷ್ಟು ಸಮಯ ಬೇಕಾಗುತ್ತದೆ ಎಲ್ಲವನ್ನೂ ಹಂತ ಹಂತವಾಗಿ ತಿಳಿಯೋಣ.
ಈ ಬಿ ಖಾತಾ ಅಂದ್ರೇನು?
ಬಿ ಖಾತಾ ಎಂಬುದು ಬಿಬಿಎಂಪಿ ದಾಖಲೆಗಳಲ್ಲಿ ನೋಂದಣಿ ಆಗಿದ್ದರು, ಅಧಿಕೃತವಾಗಿ ಮಾನ್ಯತೆ ಪಡೆದ ಸೈಟ್ ಅಲ್ಲ. ಸಾಮಾನ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ನಿರ್ಮಾಣಗೊಂಡ ಸೈಟ್‌ಗಳು, ಅನಧಿಕೃತ ಲೇಔಟ್‌ಗಳು, ಡಿಸಿ ಕನ್ವರ್ಷನ್ ಆಗದ ಜಮೀನುಗಳಲ್ಲಿ ನಿರ್ಮಿಸಿದ ಸೈಟ್‌ಗಳು ಆಗಿರುತ್ತವೆ. ಬಿಬಿಎಂಪಿ ಇವುಗಳಿಗೂ ಟ್ಯಾಕ್ಸ್ ಕಲೆಕ್ಟ್ ಮಾಡುತ್ತದೆ, ಆದರೆ ಅದರಿಂದ ಆ ಪ್ರಾಪರ್ಟಿ ಮಾನ್ಯ ಆಗೋದಿಲ್ಲ.
ಉದಾಹರಣೆ: ನೀವು ಬಿ ಖಾತಾ ಸೈಟ್‌ನಲ್ಲಿ ಮನೆ ಕಟ್ಟಿದ್ರು, ಆ ಮನೆಗೆ ಪ್ಲ್ಯಾನ್ ಅನುಮತಿ ಸಿಗೋದಿಲ್ಲ. ಅದರಿಂದ ಬ್ಯಾಂಕ್ ಲೋನ್, ಮನೆ ಮಾರಾಟ ಎಲ್ಲವು ಸಮಸ್ಯೆಯಾಗುತ್ತದೆ.
'ಎ' ಖಾತಾ ಅಂದ್ರೇನು?
ಎ ಖಾತಾ ಅಂದ್ರೆ, ಬಿಬಿಎಂಪಿ ಕಡೆಯಿಂದ ಪೂರ್ಣ ಪ್ರಮಾಣದ ಮಾನ್ಯತೆ ಪಡೆದ ಪ್ರಾಪರ್ಟಿ. ಅಂದ್ರೆ, ಡಿಸಿ ಕನ್ವರ್ಷನ್ ಆಗಿರುವಂಥದ್ದು. ಬಿಡಿಎ ಲೇಯೌಟ್ ಅಥವಾ ಬಿಬಿಎಂಪಿ ಕಡೆಯಿಂದ ಮಾನ್ಯತೆ ಸಿಕ್ಕಿರುತ್ತದೆ. ಆ ಲೇಯೌಟ್‌ನ ಪ್ಲಾನ್‌ಗೆ ಮಾನ್ಯತೆ ಸಿಕ್ಕಿರುತ್ತದೆ. ಟ್ಯಾಕ್ಸ್ ದಾಖಲೆ ಸ್ಪಷ್ಟವಾಗಿರುತ್ತದೆ.
'ಎ' ಖಾತಾ ಪ್ರಾಪರ್ಟಿಯ ಲಾಭಗಳು
- ಬ್ಯಾಂಕ್ ಲೋನ್ ಸಿಗುತ್ತದೆ
- ಮಾರಾಟ-ಖರೀದಿ ಸುಲಭ
- ರಸ್ತೆ, ಒಳಚರಂಡಿ, ಕಾವೇರಿ ಸಂಪರ್ಕ ಲಭ್ಯ
- ಆಸ್ತಿಯ ಮೌಲ್ಯ ಹೆಚ್ಚು
ಬಿ ಖಾತೆಯಿಂದ ಎ ಖಾತಾಗೆ ಪರಿವರ್ತನೆ ಎಲ್ಲರಿಗೂ ಸಾಧ್ಯವಿಲ್ಲ. ಕೆಳಗಿನ ಶರತ್ತುಗಳು ಪೂರ್ತಿಯಾದ್ರೆ ಮಾತ್ರ ಅದು ಸಾಧ್ಯ.
- ಡಿಸಿ ಕನ್ವರ್ಷನ್ ಮಾಡಿಸಿರಬೇಕು.
- ಲೇಯೌಟ್ ಪ್ಲಾನ್ ಬಿಬಿಎಂಪಿ ಅಥವಾ ಬಿಡಿಎ ವತಿಯಿಂದ ಮಾನ್ಯತೆ ಆಗಿರಬೇಕು.
- ಪ್ರಾಪರ್ಟಿ ಟ್ಯಾಕ್ಸ್ ಎಲ್ಲ ವರ್ಷ ಪಾವತಿಸಿರಬೇಕು.
- ಎನ್‌ಕಂಬ್ರನ್ಸ್ ಸರ್ಟಿಫಿಕೇಟ್ ಕ್ಲೀನ್ ಆಗಿರಬೇಕು.
- ಖಾತಾ ವರ್ಗಾವಣೆಗೆ ಅಪ್ಲಿಕೇಷನ್ ಮಾಡಿರಬೇಕು.
ಇಲ್ಲಿ ಗಮನಿಸಬೇಕಾದ ಅಂಶ: ಒಂದೇ ಲೇಯೌಟ್‌ನಲ್ಲಿ ಕೆಲವು ಸೈಟ್‌ಗಳು ಕನ್ವರ್ಟ್ ಆಗಿದ್ದರೆ, ನೀವು ಕೂಡ ಅದೇ ವಿಧಾನ ಫಾಲೋ ಮಾಡಿ ಮಾಡಿಸಬಹುದು.
ಪಂಚಾಯ್ತಿ ಲೇಯೌಟ್ ಸೈಟ್‌ನ ರಿಜಿಸ್ಟ್ರೇಷನ್ ಹೇಗೆ?
ಕನ್ವರ್ಷನ್ ಪ್ರಕ್ರಿಯೆಯ ಸ್ಟೆಪ್ ಬೈ ಸ್ಟೆಪ್ ವಿವರ
ಸ್ಟೆಪ್ 1: ಅಗತ್ಯ ದಾಖಲೆಗಳು ಸಿದ್ಧಪಡಿಸಿ ಸೇಲ್ ಡೀಡ್ (ರಿಜಿಸ್ಟರ್ಡ್ ಕಾಪಿ) ಇತ್ತೀಚಿನ ಟ್ಯಾಕ್ಸ್ ಕಟ್ಟಿದ ರೆಸಿಪ್ಟ್ ಎನ್‌ಕಂಬ್ರನ್ಸ್ ಸರ್ಟಿಫಿಕೇಟ್ (10-15 ವರ್ಷಗಳ) ಡಿಸಿ ಕನ್ವರ್ಷನ್ ಆರ್ಡರ್ ಮಾನ್ಯತೆ ಪಡೆದ ಲೇಯೌಟ್ ಪ್ಲಾನ್ ಮಾಲೀಕರ ಐಡಿ ಪ್ರೂಫ್ (ಆಧಾರ್, ಪ್ಯಾನ್) ಪ್ರಾಪರ್ಟಿ ಸ್ಕೆಚ್ / ಬ್ಲೂಪ್ರಿಂಟ್. ಸ್ಟೆಪ್ 2: ಬಿಬಿಎಂಪಿ ಕಚೇರಿಗೆ ಅರ್ಜಿ ನೀಡಿ. ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಅಸಿಸ್ಟಂಟ್ ರೆವೆನ್ಯೂ ಆಫೀಸರ್ (ಎಆರ್‌ಒ) ಕಚೇರಿಗೆ ಹೋಗಿ ಖಾತಾ ಟ್ರಾನ್ಸ್‌ಫರ್ ಅಪ್ಲಿಕೇಷನ್ ಫಾರ್ಮ್ (ಫಾರ್ಮ್ B)ಪಡೆಯಿರಿ.
ಸ್ಟೆಪ್ 3: ಡಾಕ್ಯುಮೆಂಟ್ಸ್ ವೆರಿಫಿಕೇಷನ್. ಎಆರ್‌ಒ ಅಧಿಕಾರಿ ನಿಮ್ಮ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಅಲ್ಲಿ ಲೇಯೌಟ್ ಡಿಸಿ ಕನ್ವರ್ಷನ್ ಮತ್ತು ಅಪ್ರೂವಲ್ ಆರ್ಡರ್ ದೃಢಪಡಿಸಬೇಕು.
ಸ್ಟೆಪ್ 4: ಪ್ರಾಪರ್ಟಿ ಪರಿಶೀಲನೆ. ಬಿಬಿಎಂಪಿ ರೆವೆನ್ಯೂ ಇನ್‌ಸ್ಪೆಕ್ಟರ್ ಸ್ಥಳ ಪರಿಶೀಲನೆ ಮಾಡ್ತಾರೆ. ಕಟ್ಟಡ/ಪ್ಲಾಟ್ ವಿವರಗಳು ದಾಖಲೆಗಳಿಗೆ ಸರಿಹೊಂದಿತ್ತಾ ಎಂದು.
ಸ್ಟೆಪ್ 5: ಕನ್ವರ್ಷನ್ ಶುಲ್ಕ ಪಾವತಿ ಬಿಬಿಎಂಪಿ ಕಡೆಯಿಂದ ನಿಗದಿಯಾದ ಖಾತಾ ಕನ್ವರ್ಷನ್ ಫೀ ಪಾವತಿಸಬೇಕು. ಸಾಮಾನ್ಯವಾಗಿ ಇದು ಪ್ರಾಪರ್ಟಿ ಮೌಲ್ಯದ ಶೇ. 2 ರಷ್ಟರ ಒಳಗೆ ಇರುತ್ತದೆ.
ಸ್ಟೆಪ್ 6: ಎ ಖಾತಾ ಸರ್ಟಿಫಿಕೇಟ್ ಮತ್ತು ಎಕ್ಸ್‌ಟ್ರಾಕ್ಟ್ ಪಡೆಯಿರಿ. ಅರ್ಜಿ ಸರಿ ಎಂದು ಕಂಡುಬಂದ ಮೇಲೆ, BBMP ನಿಮ್ಮ ಹೆಸರಲ್ಲಿ A ಖಾತಾ ಸರ್ಟಿಫಿಕೇಟ್ ನೀಡುತ್ತದೆ. ಈ ದಾಖಲೆಯಿಂದ ನಿಮ್ಮ ಪ್ರಾಪರ್ಟಿ 'ಲೀಗಲಿ ಮಾನ್ಯತೆ' ಪಡೆಯುತ್ತದೆ.
ರೆವೆನ್ಯೂ ಸೈಟ್‌ಗೆ ಇ-ಖಾತಾ ಮಾಡಿಸೋದು ಹೇಗೆ?
ಬಿಬಿಎಂಪಿ ಇದೀಗ ವಿಶೇಷ ಸೌಲಭ್ಯ ಒಂದನ್ನು ನೀಡಿದೆ
ಬಿ ಖಾತಾ ಇಂದಾ ಎ ಖಾತಾಗೆ ಪರಿವರ್ತನೆ ಮಾಡುವ ಪ್ರಕ್ರಿಯೆ ಆನ್‌ಲೈನ್ ಮೂಲಕವೂ ಸಾಧ್ಯ. ಅದು ಹೇಗೆ ಮಾಡಬೇಕು ನೋಡೋಣ.
ಸ್ಟೆಪ್ 1: ಅಧಿಕೃತ ವೆಬ್‌ಸೈಟ್ ತೆರೆಯಿರಿ: https://bbmpsas.com ಅಥವಾ ಗೂಗಲ್‌ನಲ್ಲಿ BMP Property Tax Portal ಎಂದು ಟೈಪ್ ಮಾಡಿ.
ಸ್ಟೆಪ್ 2: ಪ್ರಾಪರ್ಟಿ ವಿವರ ಹುಡುಕಿ * Property Details ಕ್ಲಿಕ್ ಮಾಡಿ * Property PID Number ಅಥವಾ Owner Name ಹಾಕಿ * ನಿಮ್ಮ ಸೈಟ್‌ನ ಡೇಟಾ ಕಾಣಿಸುತ್ತದೆ (B Khata ಅಥವಾ A Khata ಎಂದು ಕಾಣಬಹುದು).
ಸ್ಟೆಪ್ 3: Application for Khata Transfer / Conversion ಆಯ್ಕೆ ಮಾಡಿ. BBMP ಪೋರ್ಟಲ್‌ನಲ್ಲಿ 'Apply for Khata Transfer' ಅಥವಾ “Khata Conversion” ಎಂಬ ಆಯ್ಕೆ ಇದೆ ಅಲ್ಲಿ ಹೊಸ Application Form ತೆರೆದುಕೊಳ್ಳುತ್ತದೆ.
ಸ್ಟೆಪ್ 4: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು ಸೇಲ್ ಡೀಡ್ (ನೋಂದಣಿಯ ಕಾಪಿ) ಇತ್ತೀಚೆಗೆ ಟ್ಯಾಕ್ಸ್ ಕಟ್ಟಿರುವುದರ ರಸೀತಿ ಡಿಸಿ ಕನ್ವರ್ಷನ್ ಸರ್ಟಿಫಿಕೇಟ್ ಲೇಯೌಟ್ ಪ್ಲಾನ್ ಅಪ್ರೂವಲ್ ಕಾಪಿ ಮಾಲೀಕರ ಐಡಿ ಪ್ರೂಫ್ (ಆಧಾರ್, ಪ್ಯಾನ್) ಎನ್‌ಕಂಬ್ರನ್ಸ್ ಸರ್ಟಿಫಿಕೇಟ್. ಅಂದಹಾಗೆ ಅಪ್‌ಲೋಡ್ ಮಾಡಬೇಕಾದ ದಾಖಲೆಗಳು ಎಲ್ಲವೂ PDF ಫಾರ್ಮ್ಯಾಟ್‌ನಲ್ಲಿ ಇರಬೇಕು, ಜೊತೆಗೆ ಫೈಲ್‌ನ ಗಾತ್ರ ಗರಿಷ್ಠ 2MB ಇರುವಂತೆ ನೋಡಿಕೊಳ್ಳಿ.
ಸ್ಟೆಪ್ 5: ಆನ್‌ಲೈನ್‌ನಲ್ಲಿ ಶುಲ್ಕ ಪಾವತಿ: ಖಾತೆ ಕನ್ವರ್ಷನ್ ಶುಲ್ಕವನ್ನು ಬಿಬಿಎಂಪಿ ಆನ್‌ಲೈನ್ Payment Gateway ಮೂಲಕ ಪಾವತಿಸಬಹುದು. UPI / Net Banking / Credit Card ಎಲ್ಲ ಆಯ್ಕೆಗಳು ಲಭ್ಯ. Payment ಮಾಡಿದ ನಂತರ Acknowledgement Slip ಸಿಗುತ್ತದೆ — ಅದನ್ನು ಸೇವ್ ಮಾಡಿಕೊಳ್ಳಿ.
ಸ್ಟೆಪ್ 6: ಅಪ್ಲಿಕೇಷನ್ ಟ್ರ್ಯಾಕಿಂಗ್: ಬಿಬಿಎಂಪಿ ಪೋರ್ಟಲ್‌ನಲ್ಲಿ ಟ್ರ್ಯಾಕ್ 'Application Status' ಆಯ್ಕೆ ಇದೆ. Application ನಂಬರ್ ಹಾಕಿದ್ರೆ ನಿಮ್ಮ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬ ಮಾಹಿತಿ ಬರುತ್ತದೆ. ಸಾಮಾನ್ಯವಾಗಿ 30–60 ದಿನಗಳೊಳಗೆ ರೆವೆನ್ಯೂ ಆಫೀಸರ್ ವೆರಿಫಿಕೇಷನ್ ಮತ್ತು ಇನ್‌ಸ್ಪೆಕ್ಷನ್ ಮುಗಿಸುತ್ತಾರೆ.
ಸ್ಟೆಪ್ 7: ಎ ಖಾತಾ ಸರ್ಟಿಫಿಕೇಟ್ ಡೌನ್‌ಲೋಡ್: ಅರ್ಜಿ ಸರಿ ಆಗಿ ಅಪ್ರೂವ್ ಆದ ನಂತರ, ನಿಮ್ಮ BBMP SAS ಅಕೌಂಟ್‌ನಲ್ಲಿ “Download Khata Certificate” ಆಯ್ಕೆಯಿಂದ 'ಎ' ಖಾತಾ ಸರ್ಟಿಫಿಕೇಟ್ ಪಡೆಯಬಹುದು.
ಸೈಟ್ vs ಫ್ಲಾಟ್ – ಯಾವುದು ಉತ್ತಮ?
ಖಾತಾ ಕನ್ವರ್ಷನ್‌ನಲ್ಲಿನ ಸಾಮಾನ್ಯ ತಪ್ಪು ಕಲ್ಪನೆಗಳು
* 'ಬಿ ಖಾತಾ ಪ್ರಾಪರ್ಟಿ ಲೀಗಲ್ ಅಲ್ಲ — ಸಂಪೂರ್ಣ ತಪ್ಪು.
* ಅದಕ್ಕೆ ಮಾನ್ಯತೆ ಸಿಕ್ಕಿಲ್ಲ ಅಷ್ಟೇ.
* ಏಜೆಂಟ್ ಮುಖಾಂತರ ಮಾಡಿದ್ರೆ ಖಾತಾ ಬೇಗ ಬರುತ್ತದೆ. ಇದು ಕೆಲವೊಮ್ಮೆ ಅಪಾಯಕಾರಿ ಆಗಬಹುದು.
* ಎಲ್ಲ ದಾಖಲೆಗಳನ್ನು ನೇರವಾಗಿ BBMP ಮೂಲಕ ಮಾಡಿಸಿ.
* ಖಾತಾ ಟ್ರಾನ್ಸ್‌ಫರ್ ಆಗಿದ್ರೆ ಅದು ಎ ಖಾತಾ ಆಗುತ್ತದೆ. ಅಲ್ಲ, ಅದು ಬಿ ಖಾತಾದಲ್ಲೇ ಉಳಿಯುತ್ತದೆ.
ಕಾನೂನು ಸಲಹೆ ಮತ್ತು ವಾಸ್ತವ ಉದಾಹರಣೆ ಒಂದು ಉದಾಹರಣೆ ಬನಶಂಕರಿಯ ಸುರೇಶ್ ಅವರ ಬಳಿ ಬಿ ಖಾತಾ ಸೈಟ್ ಇತ್ತು. ಅವರು ಮೊದಲು ಡಿಸಿ ಕನ್ವರ್ಷನ್ ಮಾಡಿಸಿದರು, ನಂತರ ಮಾನ್ಯತೆ ಇರುವ ಲೇಯೌಟ್ ಎಂದು ಸಾಬೀತು ಪಡಿಸಿದರು, ನಂತರ 6 ತಿಂಗಳಲ್ಲಿ ಅವರಿಗೆ ಎ ಖಾತಾ ಸಿಕ್ಕಿತು. ಈಗ ಅವರು ಅದೇ ಸೈಟ್ ಮೇಲೆ ಮನೆ ಕಟ್ಟೋ ಅನುಮತಿ ಪತ್ರ ಪಡೆದುಕೊಂಡಿದ್ದಾರೆ.
ಇಲ್ಲಿ ವಕೀಲರ ಸಲಹೆ ಏನಂದ್ರೆ: ನೀವು ಬಿ ಖಾತಾದಲ್ಲಿ ಮನೆ ಖರೀದಿ ಅಥವಾ ಕಟ್ಟುವ ಮೊದಲು: ಕನ್ವರ್ಷನ್ ಆರ್ಡರ್ ಇದೆ ಅಂತ ಖಚಿತಪಡಿಸಿ ಎನ್‌ಕಂಬ್ರನ್ಸ್ ಸರ್ಟಿಫಿಕೇಟ್ ಸ್ಪಷ್ಟವಿದೆಯೇ ನೋಡಿ. ಲೇಯೌಟ್ ಪ್ಲಾನ್‌ಗೆ ಮಾನ್ಯತೆ ಇದೆಯೇ ಎಂದು ನೋಡಿ. ಹೀಗಾಗಿ ನಿಮ್ಮ ಆಸ್ತಿಯ ಭವಿಷ್ಯ ಭದ್ರ ಮಾಡಬೇಕೆಂದ್ರೆ, ಇಂದೇ ಎಲ್ಲ ದಾಖಲೆಗಳನ್ನು ಸರಿಪಡಿಸಿ.