ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Vijeth Kumar DN

Sub Editor

[email protected]

ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ ಹೊಂದಿರುವ ವಿಜಯೇತ್ ಕುಮಾರ್ ಡಿ.ಎನ್‌ ಕ್ರೀಡೆ, ತಂತ್ರಜ್ಞಾನ, ಸಿನೆಮಾ, ರಾಜಕೀಯ ಮತ್ತು ರಿಯಲ್ ಎಸ್ಟೇಟ್ ವಿಚಾರಗಳಲ್ಲಿ ಕಥೆ ಹೇಳುವ ವಿಭಿನ್ನ ಧಾಟಿ ಹೊಂದಿದ್ದಾರೆ. ವಿಜಯ ಕರ್ನಾಟಕದಿಂದ ವೃತ್ತಿಜೀವನ ಆರಂಭಿಸಿ, ಟೈಮ್ಸ್‌ ಇಂಟರ್ನೆಟ್‌ ಹಾಗೂ ಒನ್‌ಇಂಡಿಯಾ ಮೂಲಕ ಡಿಜಿಟಲ್‌ ಮಾಧ್ಯಮದಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ನಿಖರತೆ, ಉತ್ಸಾಹ ಮತ್ತು ನವೀನ ವರದಿ ಶೈಲಿಯಿಂದ ವಿಶ್ವಾಸಾರ್ಹ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ.

Articles
ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿ 'ವಂದೇ ಮಾತರಂ'!

ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿ 'ವಂದೇ ಮಾತರಂ'!

2026ರ ಆಗಸ್ಟ್‌ 15ರಂದು ಕೆಂಪುಕೋಟೆಯಲ್ಲಿ ಇದೇ ಮೊದಲ ಬಾರಿ 'ವಂದೇ ಮಾತರಂ'ಗೆ ವಿಶೇಷ ಸ್ಥಾನ. 150 ವರ್ಷಗಳ ಇತಿಹಾಸ, ಸ್ವಾತಂತ್ರ್ಯ ಹೋರಾಟದಲ್ಲಿನ ಮಹತ್ವ ಮತ್ತು ಹಿನ್ನೆಲೆ ಇಲ್ಲಿದೆ. ಹೀಗಾಗಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅತ್ಯಂತ ವಿಶೇಷವಾದುದ್ದಾಗಿದೆ.

ರೈತ ಸ್ನೇಹಿ ಪೋರ್ಟಲ್‌: ಪಿಎಂ ಕಿಸಾನ್‌ ಸೇವೆಗಳು ಈಗ ಬೆರಳ ತುದಿಯಲ್ಲಿ!

ರೈತ ಸ್ನೇಹಿ ಪೋರ್ಟಲ್‌: ಪಿಎಂ ಕಿಸಾನ್‌ ಸೇವೆಗಳು ಈಗ ಬೆರಳ ತುದಿಯಲ್ಲಿ!

ಪಿಎಂ ಕಿಸಾನ್‌ ಪೋರ್ಟಲ್‌ ಮೂಲಕ ರೈತರಿಗೆ ಆನ್‌ಲೈನ್‌ ನೋಂದಣಿ, ಪಾವತಿ ಸ್ಥಿತಿ ಪರಿಶೀಲನೆ ಸೇರಿದಂತೆ ಹಲವು ಡಿಜಿಟಲ್‌ ಸೇವೆಗಳು ಲಭ್ಯ. ಸಂಪೂರ್ಣ ಮಾಹಿತಿ ಇಲ್ಲಿದೆ. ದೇಶದ ರೈತರಿಗೆ ಪ್ರಧಾನ ಮಂತ್ರಿಗಳ ಯೋಜನೆಯ ಸಂಪೂರ್ಣ ಲಾಭ ಸಿಗುವಂತೆ ಮಾಡುವುದು ಈ ಆನ್‌ಲೈನ್‌ ಸೇವೆಯ ಪ್ರಮುಖ ಉದ್ದೇಶವಾಗಿದೆ.

ಸೌದಿ-ಟರ್ಕಿ-ಪಾಕಿಸ್ತಾನ ಒಪ್ಪಂದ! ಭಾರತಕ್ಕಿದು ದೊಡ್ಡ ಸವಾಲು?

ಸೌದಿ-ಟರ್ಕಿ-ಪಾಕಿಸ್ತಾನ ಒಪ್ಪಂದ! ಭಾರತಕ್ಕಿದು ದೊಡ್ಡ ಸವಾಲು?

ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ಮೆಕ್ಕಾ ಜಂಟಿ ರಕ್ಷಣಾ ಒಪ್ಪಂದದ ಪ್ರಮುಖ ಅಂಶಗಳೇನು? ಈ ಒಪ್ಪಂದದಿಂದ ಭಾರತದ ಭದ್ರತೆ, ತೈಲ, ವ್ಯಾಪಾರ ಮತ್ತು ವಿದೇಶಾಂಗ ನೀತಿಯ ಮೇಲೆ ಏನು ಪರಿಣಾಮ? ಇದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ನಕ್ಷೆ ವಿವಾದ: 'ನಾವೂ ಭಾರತೀಯರೇ' ಎಂದು ಲವ್ಲಿನಾ ಬೋರ್ಗೊಹೇನ್ ಬೇಸರ

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತದ ನಕ್ಷೆ ವಿವಾದ!

2026ರ ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಳೆ ಗ್ಲಾಸ್ಗೋದ ಭಾರತೀಯ ರೆಸ್ಟೋರೆಂಟ್‌ನಲ್ಲಿ ಬಳಸಲಾದ ನ್ಯಾಪ್‌ಕಿನ್‌ನಲ್ಲಿ ಭಾರತದ ನಕ್ಷೆಯಿಂದ ಈಶಾನ್ಯ ರಾಜ್ಯಗಳು ಕಾಣಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಬೆಳ್ಳಿ ಪದಕ ವಿಜೇತೆ ಲವ್ಲಿನಾ ಬೋರ್ಗೊಹೇನ್ ಆಕ್ಷೇಪ ವ್ಯಕ್ತಪಡಿಸಿದ್ದು, ಬಳಿಕ ರೆಸ್ಟೋರೆಂಟ್ ಆಡಳಿತ ತಪ್ಪು ಸರಿಪಡಿಸುವುದಾಗಿ ತಿಳಿಸಿದೆ.

ಫಿಫಾ ವಿಶ್ವಕಪ್ ಗೆದ್ದರೂ ಸ್ಪೇನ್‌ಗೆ ಸಿಗಲಿಲ್ಲ ಅಸಲಿ ಟ್ರೋಫಿ! ಚಾಂಪಿಯನ್ಸ್‌ಗೆ ರೆಪ್ಲಿಕಾ ಮಾತ್ರ

ಫಿಫಾ ವಿಶ್ವಕಪ್ ಗೆದ್ದರೂ ಸ್ಪೇನ್‌ಗೆ ಸಿಗಲಿಲ್ಲ ಅಸಲಿ ಟ್ರೋಫಿ!

ಫಿಫಾ ವಿಶ್ವಕಪ್ ಗೆದ್ದ ತಂಡಕ್ಕೆ ಅಸಲಿ ಟ್ರೋಫಿ ಯಾಕೆ ಸಿಗುವುದಿಲ್ಲ? ಮೊದಲು ನೀಡಲಾಗುತ್ತಿದ್ದ ಅಪ್ಪಟ ಚಿನ್ನದ ಜೂಲ್ಸ್ ರಿಮೆಟ್ ಟ್ರೋಫಿಯ ಇತಿಹಾಸ, ಎರಡು ಬಾರಿ ಟ್ರೋಫಿಯ ಕಳುವು ಮತ್ತು ರೆಪ್ಲಿಕಾ ಟ್ರೋಫಿಯ ಹಿಂದಿನ ಕುತೂಹಲಕಾರಿ ರಹಸ್ಯವನ್ನು ಈ ಲೇಖನದಲ್ಲಿ ತಿಳಿಯಿರಿ.

ರೋಹಿತ್‌ ಶರ್ಮಾ ನಿವೃತ್ತಿ ಘೋಷಿಸಿದ್ರಾ? ಬ್ಯಾಟ್‌ನಿಂದಲೇ ಉತ್ತರ ಕೊಟ್ಟ ಹಿಟ್‌ಮ್ಯಾನ್!

ರೋಹಿತ್‌ ಶರ್ಮಾ ನಿವೃತ್ತಿ ಘೋಷಿಸಿದ್ರಾ? ಉತ್ತರ ಕೊಟ್ಟ ಹಿಟ್‌ಮ್ಯಾನ್!

ರೋಹಿತ್‌ ಶರ್ಮಾ ನಿವೃತ್ತಿ ಕುರಿತು ಹರಿದಾಡುತ್ತಿರುವ ಊಹಾಪೋಹಗಳ ನಡುವೆ, ಲಾರ್ಡ್ಸ್‌ನಲ್ಲಿ ಶತಕ ಸಿಡಿಸಿ ಎಲ್ಲ ಪ್ರಶ್ನೆಗಳಿಗೆ ಬ್ಯಾಟ್‌ನಿಂದಲೇ ಉತ್ತರ ನೀಡಿದ್ದಾರೆ. ಲಾರ್ಡ್ಸ್‌ನಲ್ಲಿ ಒಡಿಐ ಶತಕ ಬಾರಿಸಿದ ಮೊದಲ ಭಾರತೀಯ ಎನಿಸಿದ ಹಿಟ್‌ಮ್ಯಾನ್‌ ಖಾತಿಯ ಚಾಂಪಿಯನ್‌ ಆಟಗಾರನ ದಾಖಲೆಗಳು ಮತ್ತು 2027ರ ವಿಶ್ವಕಪ್‌ ಭವಿಷ್ಯದ ವಿಶ್ಲೇಷಣೆ ಇಲ್ಲಿದೆ.

ಅಭಿಮಾನಿಗಳ ಕಣ್ಣಲ್ಲಿ ವಿಲನ್ ಆಯ್ತಾ ಅರ್ಜೆಂಟೀನಾ?

ಅಭಿಮಾನಿಗಳ ಕಣ್ಣಲ್ಲಿ ವಿಲನ್ ಆಯ್ತಾ ಅರ್ಜೆಂಟೀನಾ?

2026ರ ಫಿಫಾ ವಿಶ್ವಕಪ್‌ ಫೈನಲ್‌ ಬಳಿಕ ಅರ್ಜೆಂಟೀನಾ ವಿರುದ್ಧ ಏಕೆ ಟೀಕೆ ವ್ಯಕ್ತವಾಯಿತು? ಸ್ಪೇನ್‌ನ ಐತಿಹಾಸಿಕ ಗೆಲುವು, ಪಂದ್ಯದ ವಿವಾದಗಳು ಮತ್ತು ಅಭಿಮಾನಿಗಳ ಪ್ರತಿಕ್ರಿಯೆಯ ವಿಶ್ಲೇಷಣೆ ಇಲ್ಲಿದೆ. 2022ರಲ್ಲಿ ಅರ್ಜೆಂಟೀನಾ ಗೆಲ್ಲಲಿ ಎಂದು ಪ್ರಾರ್ಥಿಸಿದ್ದ ಅಭಿಮಾನಿಗಳೇ ಇಂದು ಅರ್ಜೆಂಟೀನಾ ಸೋಲಲಿ ಎಂದು ಶಾಪ ಹಾಕಿದ್ದೇಕೆ? ಇಲ್ಲಿದೆ ಸಂಪೂರ್ಣ ವಿವರ.

ಅಲ್ವಿದಾ ಲಿಯೋನೆಲ್‌ ಮೆಸ್ಸಿ: ಕಣ್ಣೀರ ವಿದಾಯದಲ್ಲೂ ಸಾರ್ಥಕತೆ ಕಂಡ ಮಾಂತ್ರಿಕ!

ಅಲ್ವಿದಾ ಲಿಯೋನೆಲ್‌ ಮೆಸ್ಸಿ: ಕಣ್ಣೀರ ವಿದಾಯದಲ್ಲೂ ಸಾರ್ಥಕತೆ!

ಫುಟ್ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿಯ ಭಾವುಕ ಪಯಣ, 2014ರ ನಿರಾಶೆಯಿಂದ 2022ರ ವಿಶ್ವಕಪ್‌ ಗೆಲುವಿನವರೆಗೆ ಮತ್ತು 2026ರ ಕಣ್ಣೀರ ವಿದಾಯದ ಕಥೆಯನ್ನು ಈ ಲೇಖನದಲ್ಲಿ ತಿಳಿಯಿರಿ. ಅರ್ಜೆಂಟೀನಾದ ದಿಗ್ಗಜ ಆಟಗಾರ ಲಿಯೋನೆಲ್‌ ಮೆಸ್ಸಿ ಏಕೆ 'ದಿ GOAT' (ಗ್ರೇಟೆಸ್ಟ್‌ ಆಫ್‌ ಆಲ್‌ ಟೈಮ್‌) ಎಂದು ಕರೆಯಲ್ಪಡುತ್ತಾರೆ ಎಂಬುದನ್ನು ಓದಿ.

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಲಮೀನ್‌ ಯಮಾಲ್‌: ಮೆಸ್ಸಿ ಕೈಲ್ಲಿದ್ದ ಮಗು, ಈಗ ಫುಟ್ಬಾಲ್‌ ಜಗತ್ತಿನ ತಾರೆ!

ಲಮೀನ್‌ ಯಮಾಲ್‌ ಅವರ ಜೀವನಯಾನ, ಮೆಸ್ಸಿಯೊಂದಿಗೆ ವೈರಲ್‌ ಆದ ಬಾಲ್ಯದ ಫೋಟೋ, ಕುಟುಂಬದ ಹಿನ್ನೆಲೆ ಮತ್ತು ವಿಶ್ವ ಫುಟ್ಬಾಲ್‌ನಲ್ಲಿ ಅವರ ವೇಗದ ಬೆಳವಣಿಗೆಯ ಸಂಪೂರ್ಣ ಕಥೆ ಈ ಲೇಖನದಲ್ಲಿದೆ. 2026ರ ಫಿಫಾ ವಿಶ್ವಕಪ್‌ ಫೈನಲ್‌ಗೂ ಮುನ್ನ ಮೆಸ್ಸಿ ಮತ್ತು ಯಮಾಲ್‌ ನಡುವಣ ಜಟಾಪಟಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದೆ.

ಫುಟ್ಬಾಲ್‌ ಫೀವರ್‌ಗೆ ಸರ್ಕಾರದ ವಿಶೇಷ ಗಿಫ್ಟ್‌; ವಿಶ್ವಕಪ್‌ ಫೈನಲ್‌ಗೆ ಮಿಡ್‌ನೈಟ್ ಸಂಭ್ರಮಕ್ಕೆ ಅವಕಾಶ

ಫುಟ್ಬಾಲ್‌ ಫೀವರ್‌ಗೆ ಸರ್ಕಾರದ ಗಿಫ್ಟ್‌; ಮಿಡ್‌ನೈಟ್ ಸಂಭ್ರಮಕ್ಕೆ ಅವಕಾಶ!

ಫಿಫಾ ವಿಶ್ವಕಪ್‌ 2026ರ ಫೈನಲ್‌ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಫುಟ್ಬಾಲ್‌ ಅಭಿಮಾನಿಗಳಿಗೆ ವಿಶೇಷ ಅವಕಾಶ. ಜುಲೈ 20 ರಂದು ನಡೆಯಲಿರುವ ಅರ್ಜೆಂಟೀನಾ ಮತ್ತು ಸ್ಪೇನ್‌ ನಡುವಣ ಫೈನಲ್‌, ಮಧ್ಯರಾತ್ರಿ ಸಂಭ್ರಮ ಹಾಗೂ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಶ್ವದಾಖಲೆಯ ಹೊಸ್ತಿಲಲ್ಲಿ ಲಿಯೋನೆಲ್‌ ಮೆಸ್ಸಿ; ಐತಿಹಾಸಿಕ ಸಾಧನೆಗೆ ಕ್ಷಣಗಣನೆ!

ವಿಶ್ವದಾಖಲೆಯ ಹೊಸ್ತಿಲಲ್ಲಿ ಮೆಸ್ಸಿ; ಐತಿಹಾಸಿಕ ಸಾಧನೆಗೆ ಕ್ಷಣಗಣನೆ!

2026ರ ಫಿಫಾ ವಿಶ್ವಕಪ್‌ ಫೈನಲ್‌ನಲ್ಲಿ ಕಣಕ್ಕಿಳಿದರೆ ಲಿಯೋನೆಲ್‌ ಮೆಸ್ಸಿ ವಿಶ್ವಕಪ್‌ ಇತಿಹಾಸದ ಅಪರೂಪದ ದಾಖಲೆಯನ್ನು ಸರಿಗಟ್ಟುವ ಅವಕಾಶ ಹೊಂದಿದ್ದಾರೆ. ಗೋಲ್ಡನ್‌ ಬೂಟ್‌ ರೇಸ್‌, ಅರ್ಜೆಂಟೀನಾದ ಫೈನಲ್‌ ಪ್ರವೇಶ ಮತ್ತು ಮೆಸ್ಸಿಯ ಐತಿಹಾಸಿಕ ಸಾಧನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಪಿಎಲ್‌ ಪಿಚ್‌ಗಳ ಎಫೆಕ್ಟ್‌! ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಇದೇ ಕಾರಣ?

ಐಪಿಎಲ್‌ ಪಿಚ್‌ಗಳ ಎಫೆಕ್ಟ್‌! ಟೀಮ್ ಇಂಡಿಯಾ ಸೋಲಿಗೆ ಇದೇ ಕಾರಣ?

ಐರ್ಲೆಂಡ್‌ ಮತ್ತು ಇಂಗ್ಲೆಂಡ್‌ ಪ್ರವಾಸದಲ್ಲಿ ಟೀಮ್ ಇಂಡಿಯಾದ ಸತತ ಸೋಲಿನ ಹಿಂದೆ ಫ್ಲ್ಯಾಟ್‌ ಪಿಚ್‌ಗಳ ಪರಿಣಾಮ ಇದೆಯೇ? ಆಟಗಾರರ ಆಯ್ಕೆ, ಐಪಿಎಲ್‌ ಪಿಚ್‌ಗಳು ಮತ್ತು ಬಿಸಿಸಿಐ ಮುಂದೆ ಇರುವ ಸವಾಲುಗಳ ವಿಶ್ಲೇಷಣೆ ಈ ಲೇಖನದಲ್ಲಿದೆ. ಟೀಮ್ ಇಂಡಿಯಾದ ಇತ್ತೀಚಿನ ಪ್ರದರ್ಶನ ಮಟ್ಟದ ಬಗೆಗಿನ ಗಂಭೀರ ಚರ್ಚೆ ಇಲ್ಲಿದೆ.

7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್‌ ಆಗಿದ್ದ ನಾರ್ವೆ ಕೋಚ್‌! ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ ಸ್ಟೇಲ್‌ ಸೋಲ್ಬಾಕೆನ್

7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್‌ ಆಗಿದ್ದ ನಾರ್ವೆ ಕೋಚ್‌!

7 ನಿಮಿಷಗಳ ಕಾಲ ಕ್ಲಿನಿಕಲಿ ಡೆಡ್‌ ಆಗಿದ್ದ ನಾರ್ವೆ ಫುಟ್ಬಾಲ್‌ ತಂಡದ ಕೋಚ್‌ ಸ್ಟೇಲ್‌ ಸೋಲ್ಬಾಕೆನ್‌ ಹೇಗೆ ಸಾವಿನ ಅಂಚಿನಿಂದ ಮರಳಿ ಯಶಸ್ವಿ ಕೋಚ್‌ ಆದರು? ಅವರ ಪ್ರೇರಣಾದಾಯಕ ಕಥೆಯನ್ನು ಈ ಲೇಖನದಲ್ಲಿ ಓದಿ. ಆಟಗಾರನಾಗಿ ಸಾಧಿಸಲು ಸಾಧ್ಯವಾಗದ್ದನ್ನು ಕೋಚ್‌ ಆಗಿ ಸಾಧಿಸಿದ ಅಪೂರ್ವ ಸಾಧಕನ ಕಥೆಯಿದು.

20 ಗೋಲುಗಳ ಮೈಲಿಗಲ್ಲು ದಾಟಿದ ಕಿಲಿಯಾನ್‌ ಎಂಬಾಪ್ಪೆ! ಈಗ ವಿಶ್ವದಾಖಲೆಯ ಮೇಲೆ ಕಣ್ಣು

20 ಗೋಲುಗಳ ಮೈಲಿಗಲ್ಲು ದಾಟಿದ ಕಿಲಿಯಾನ್‌ ಎಂಬಾಪ್ಪೆ!

ಫಿಫಾ ವಿಶ್ವಕಪ್‌ 2026ರಲ್ಲಿ ಕಿಲಿಯಾನ್ ಎಂಬಾಪ್ಪೆ 8 ಗೋಲುಗಳೊಂದಿಗೆ ಅಬ್ಬರಿಸುತ್ತಿದ್ದಾರೆ. ಗೋಲ್ಡನ್ ಬೂಟ್ ರೇಸ್‌ನಲ್ಲಿ ಮುನ್ನಡೆ ಸಾಧಿಸಿರುವ ಫ್ರಾನ್ಸ್‌ ಸ್ಟಾರ್‌, ಜಸ್ಟ್ ಫಾಂಟೈನ್ ಅವರ 13 ಗೋಲುಗಳ ವಿಶ್ವದಾಖಲೆಯನ್ನು ಮುರಿಯಲಿದ್ದಾರಾ? ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ವಿಶ್ವಕಪ್‌ನಲ್ಲಿ ಎರ್ಲಿಂಗ್ ಹಾಲ್ಯಾಂಡ್ ಅಬ್ಬರ! ಫುಟ್ಬಾಲ್‌ಗೆ ಸಿಕ್ಕ ವೈ'ಕಿಂಗ್'

ವಿಶ್ವಕಪ್‌ನಲ್ಲಿ ಎರ್ಲಿಂಗ್ ಹಾಲ್ಯಾಂಡ್ ಅಬ್ಬರ! ಫುಟ್ಬಾಲ್‌ನ ವೈ'ಕಿಂಗ್'

2026ರ ಸಾಲಿನ ಫಿಫಾ ವಿಶ್ವಕಪ್‌ನಲ್ಲಿ ನಾರ್ವೆ ತಂಡದ ಸ್ಟಾರ್‌ ಸ್ಟ್ರೈಕರ್‌ ಎರ್ಲಿಂಗ್ ಹಾಲ್ಯಾಂಡ್ ಅಬ್ಬರಿಸಿದ್ದಾರೆ. ಐದು ಬಾರಿಯ ಚಾಂಪಿಯನ್ಸ್‌ ಬಲಿಷ್ಠ ಬ್ರೆಜಿಲ್ ವಿರುದ್ಧ 2 ಗೋಲು ಬಾರಿಸಿ ನಾರ್ವೆಯನ್ನು ಮೊದಲ ಬಾರಿ ಅಂತಿಮ 8ರ ಘಟ್ಟ ಅಂದರೆ ಕ್ವಾರ್ಟರ್‌ ಫೈನಲ್‌ಗೆ ಕೊಂಡೊಯ್ದ ಸ್ಟಾರ್ ಆಟಗಾರನ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ.

ಫಿಫಾ ವಿಶ್ವಕಪ್‌ನಲ್ಲಿ 'ವಯಾಗ್ರ' ಚರ್ಚೆ! ಆಟಗಾರರು ಎನರ್ಜಿ ಪಿಲ್ ಬಳಸಿದ್ರರಾ? ಇಲ್ಲಿದೆ ಸತ್ಯ!

ಫಿಫಾ ವಿಶ್ವಕಪ್‌ನಲ್ಲಿ 'ವಯಾಗ್ರ' ಚರ್ಚೆ! ಇಲ್ಲಿದೆ ಕುತೂಹಲಕಾರಿ ಸತ್ಯ

2026ರ ಸಾಲಿನ ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಆಟಗಾರರು ವಯಾಗ್ರ ಬಳಸಿದ್ದಾರೆ ಎಂಬ ವದಂತಿ ಎಷ್ಟು ಸತ್ಯ? ವಿಶ್ವ ಡೋಪಿಂಗ್ ತಡೆ ಸಂಸ್ಥೆ (ವಾಡಾ) ನಿಯಮಗಳು ಏನು ಹೇಳುತ್ತವೆ? ವಯಾಗ್ರ ನಿಜಕ್ಕೂ ಆಟಗಾರ ಸಾಮರ್ಥ್ಯ ಹೆಚ್ಚಿಸುತ್ತಾ? ಇವೆಲ್ಲದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

ಫಿಫಾ ವಿಶ್ವಕಪ್‌ 2026: ಜಪಾನ್‌ನ ಸೋಲಿಸಿದವರನ್ನು ಸೋಲಿಸಿದ ತಂಡವೇ ಚಾಂಪಿಯನ್ಸ್!

ಜಪಾನ್‌ನ ಸೋಲಿಸಿದವರನ್ನು ಸೋಲಿಸಿದ ತಂಡವೇ ವಿಶ್ವ ಚಾಂಪಿಯನ್ಸ್!

ಫಿಫಾ ವಿಶ್ವಕಪ್‌ನಲ್ಲಿ 2003ರಿಂದ ಮುಂದುವರಿದಿರುವ ವಿಚಿತ್ರ ಪ್ಯಾಟರ್ನ್ ಮತ್ತೆ ಚರ್ಚೆಗೆ ಬಂದಿದೆ. ಜಪಾನ್ ತಂಡವನ್ನು ಸೋಲಿಸಿದ ತಂಡವನ್ನು ಮಣಿಸಿದವರೇ ಚಾಂಪಿಯನ್ ಆಗುತ್ತಾರೆ ಎಂಬ ಟ್ರೆಂಡ್ ಈ ಬಾರಿಯೂ ನಿಜವಾಗುತ್ತದೆಯೇ? ಇದರ ವಿಶ್ಲೇಷಣೆ ಈ ಲೇಖನದಲ್ಲಿ ಪಡೆಯಬಹುದಾಗಿದೆ.

ತಂದೆಯ ಕನಸನ್ನು ನನಸಾಗಿಸಿದ ಎರ್ಲಿಂಗ್ ಹಾಲ್ಯಾಂಡ್! ನಾರ್ವೆಯ ವಿಶ್ವಕಪ್ ಕಮ್‌ಬ್ಯಾಕ್ ಕಥೆ

ತಂದೆಯ ಕನಸನ್ನು ನನಸಾಗಿಸಿದ ಎರ್ಲಿಂಗ್ ಹಾಲ್ಯಾಂಡ್!

1994ರಿಂದ ಎರ್ಲಿಂಗ್ ಹಾಲ್ಯಾಂಡ್ ತನಕ ನಾರ್ವೆ ಫುಟ್ಬಾಲ್‌ನ ಸ್ಫೂರ್ತಿದಾಯಕ ಪಯಣ, ಆಲ್ಫ್-ಇಂಗೆ ಹಾಲ್ಯಾಂಡ್ ಅವರ ವೃತ್ತಿಜೀವನ, ರಾಯ್ ಕೀನ್ ಜೊತೆಗಿನ ವಿವಾದ ಮತ್ತು ನಾರ್ವೆಯ ವಿಶ್ವಕಪ್ ಟೂರ್ನಿಯಲ್ಲಿ ಕಮ್‌ಬ್ಯಾಕ್ ಕುರಿತು ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.

'ಟ್ರೋಫಿ ಗೆಲ್ಲುವುದು ಅಡಿಕ್ಷನ್‌ ಆಗಲಿ' - ಆರ್‌ಸಿಬಿ ಆಟಗಾರರಿಗೆ ಮೊ ಬೋಬಾಟ್‌ ಸಂದೇಶ!

'ಅಡಿಕ್ಷನ್‌ ಆಗಲಿ' - ಆರ್‌ಸಿಬಿ ಆಟಗಾರರಿಗೆ ಮೊ ಬೋಬಾಟ್‌ ಸಂದೇಶ!

ಬ್ಯಾಕ್‌ ಟು ಬ್ಯಾಕ್‌ ಟ್ರೋಫಿ ಗೆದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಕ್ರಿಕೆಟ್‌ ಡೈರೆಕ್ಟರ್‌ ಮೊ ಬೋಬಾಟ್‌ ವಿಶೇಷ ಸಂದೇಶ ಒಂದನ್ನು ರವಾನಿಸಿದ್ದಾರೆ. ತಂಡಗಳು ಟ್ರೋಫಿ ಗೆಲ್ಲುತ್ತವೆ, ಆದರೆ, ದೈತ್ಯ ತಂಡಗಳು ಟ್ರೋಫಿಗಳನ್ನು ಗೆಲ್ಲುತ್ತಾ ಹೋಗುತ್ತವೆ ಅಂತಹ ಚಾಂಪಿಯನ್‌ ತಂಡ ಆರ್‌ಸಿಬಿ ಆಗಬೇಕೆಂದು ಬೋಬಾಟ್‌ ಕರೆ ನೀಡಿದ್ದಾರೆ.

ಕಪ್ಪು ಎರಡಲ್ಲ, ಐದಾಗಲಿ; ಆರ್‌ಸಿಬಿಯ ಹಳೇ ಬಾಕಿಯೆಲ್ಲವೂ ಚುಕ್ತಾ ಆಗಲಿ!

ಕಪ್ಪು ಎರಡಲ್ಲ, ಐದಾಗಲಿ; ಆರ್‌ಸಿಬಿಯ ಹಳೇ ಬಾಕಿಯೆಲ್ಲವೂ ಚುಕ್ತಾ ಆಗಲಿ!

ಇಷ್ಟು ವರ್ಷಗಳ ಕಾಲ ಮಲಗಿದ್ದ ಘಟ ಸರ್ಪ ಈಗ ಎದ್ದಾಗಿದೆ. 17 ವರ್ಷಗಳ ಕಾಲ ಟ್ರೋಫಿ 'ಗೆಲ್ಲದ ದೈತ್ಯ' ಎನಿಸಿಕೊಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈಗ ಬ್ಯಾಕ್‌ ಟು ಬ್ಯಾಕ್‌ ಚಾಂಪಿಯನ್ಸ್‌ ಎನಿಸಿಕೊಂಡಿದೆ. ಕಮ್‌ ಬ್ಯಾಕ್‌ ಅಂದರೆ ಇದು, ಇದು ಇಲ್ಲಿಗೆ ಮುಗಿಯುವಂಥದ್ದಲ್ಲ ಇಲ್ಲಿಂದ ಆರಂಭ ಎನ್ನುವ ದಿಟ್ಟ ಸಂದೇಶವನ್ನು ಆರ್‌ಸಿಬಿ ರವಾನಿಸಿದೆ.

ಹೊಟ್ಟೆ ಉರಿದುಕೊಳ್ಳೋರಿಗೆ ಮೈದಾನದಲ್ಲೇ ಉತ್ತರ ಕೊಟ್ಟ ಆರ್‌ಸಿಬಿ!

ಹೊಟ್ಟೆ ಉರಿದುಕೊಳ್ಳೋರಿಗೆ ಮೈದಾನದಲ್ಲೇ ಉತ್ತರ ಕೊಟ್ಟ ಆರ್‌ಸಿಬಿ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿ ಟ್ರೋಫಿ ಗೆದ್ದಾಗ ಅದನ್ನು 'ಫ್ಲೂಕ್‌' ಎಂದು ಉಡಾಫೆ ಮಾಡಿದವರೂ ಇದ್ದಾರೆ. ಹೀಗೆ ಆರ್‌ಸಿಬಿ ಎಂದರೆ ಹೊಟ್ಟೆ ಉರಿದುಕೊಳ್ಳೋ ಅದೆಷ್ಟೂ ಹೇಟರ್ಸ್‌ಗೆ ಚಾಲೆಂಜರ್ಸ್‌ ಬ್ಯಾಕ್‌ ಟು ಬ್ಯಾಕ್‌ ಟ್ರೋಫಿ ಗೆಲುವಿನೊಂದಿಗೆ ಖಡಕ್‌ ಉತ್ತರವನ್ನೇ ಕೊಟ್ಟಿದೆ. ಟೀಕಾಕಾರರ ಬಾಯಿಗೆ ಬೀಗ ಜಡಿದಿದೆ.

'ಈ ಸಲಾನೂ ಕಪ್‌ ನಮ್ದು' ಆದ್ರೆ, ಇನ್ನೊಂದು ದುರಂತ ಮಾತ್ರ ಬೇಡ!

'ಈ ಸಲಾನೂ ಕಪ್‌ ನಮ್ದು' ಆದ್ರೆ, ಇನ್ನೊಂದು ದುರಂತ ಮಾತ್ರ ಬೇಡ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿದೆ. ಸಿಎಸ್‌ಕೆ ಮತ್ತು ಮುಂಬೈ ಇಂಡಿಯನ್ಸ್‌ ಬಳಿಕ ಬ್ಯಾಕ್‌ ಟು ಬ್ಯಾಕ್‌ ಐಪಿಎಲ್‌ ಟ್ರೋಫಿ ಗೆದ್ದ ತಂಡ ಎನಿಸಿಕೊಂಡಿರುವುದು, ಅಭಿಮಾನಿಗಳ ಸಂಭ್ರವನ್ನು ಮುಗಿಲು ಮುಟ್ಟುವಂತೆ ಮಾಡಿದೆ. ಅಂದಹಾಗೆ ಈ ಸಂಭ್ರಮದ ಸಮಯ ಸೂತಕದ ಮನೆಯಾಗದಂತೆ ನೋಡಿಕೊಳ್ಳುವುದು ಅಭಿಮಾನಿಗಳ ಮೇಲಿರುವ ಹೊಣೆಗಾರಿಕೆ ಕೂಡ ಅನ್ನೋದನ್ನ ಮರೆಯಬಾರದು.

ಆರ್‌ಸಿಬಿಗೆ ಟ್ರೋಫಿ ಬೇಟೆಯಾಡಲು ಬಂದ 'ಧುರಂಧರ' ರಜತ್ ಪಾಟಿದಾರ!

ಆರ್‌ಸಿಬಿಗೆ ಟ್ರೋಫಿ ಬೇಟೆಯಾಡಲು ಬಂದ 'ಧುರಂಧರ' ರಜತ್ ಪಾಟಿದಾರ!

ಆರ್‌ಸಿಬಿ ತಂಡದ ಕನಸಿಗೆ ಟ್ರೋಫಿಯ ರೂಪ ತಂದುಕೊಟ್ಟ ನಾಯಕ ರಜತ್‌ ಪಾಟಿದಾರ್‌. ನಾವು ಡಿಫೆಂಡಿಂಗ್‌ ಚಾಂಪಿಯನ್ಸ್‌ ಅಂತ ಆಡೋದಿಲ್ಲ, ನಾವು ಬಂದಿರುವುದು ಟ್ರೋಫಿಗಳನ್ನು ಗೆಲ್ಲಲು. ಅದಕ್ಕೆ ಬೇಕಾದ ಆಟವಾಡಲಿದ್ದೇವೆ ಎಂದೇ ಹೇಳಿಕೊಂಡು ಬಂದಿದ್ದ ರಜತ್‌, ಇದೀಗ ಕ್ವಾಲಿಫೈಯರ್‌ 1 ಪಂದ್ಯದಲ್ಲಿ ಅಬ್ಬರಿಸಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ.

PBKS vs RCB Live: ಟಾಸ್‌ ಸೋತ ಆರ್‌ಸಿಬಿ ಬ್ಯಾಟಿಂಗ್‌

PBKS vs RCB Live: ಟಾಸ್‌ ಸೋತ ಆರ್‌ಸಿಬಿ ಬ್ಯಾಟಿಂಗ್‌

ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 2026ರ ಆವೃತ್ತಿಯಲ್ಲಿ ಪ್ಲೇ ಆಫ್ಸ್‌ಗೆ ಕಾಲಿಡುವ ಲೆಕ್ಕಾಚಾರದಲ್ಲಿರುವ ಡಿಫೆಂಡಿಂಗ್‌ ಚಾಂಪಿಯನ್ಸ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಶ್ರೇಯಸ್‌ ಅಯ್ಯರ್‌ ಸಾರಥ್ಯದ ಅಪಾಯಕಾರಿ ಪಂಜಾಬ್‌ ಕಿಂಗ್ಸ್‌ ಎದುರು ಪೈಪೋಟಿ ನಡೆಸಲಿದೆ. ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಉಳಿದು ಮುಂದಿನ ಹಂತಕ್ಕೆ ತೇರ್ಗಡೆಯಾಗಲಿ ಆರ್‌ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅಗತ್ಯ.

Loading...