ಬೆಂಗಳೂರು: ಲಿಬರ್ಟಿ ಜನರಲ್ ಇನ್ಶೂರೆನ್ಸ್(Liberty General Insurance) ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಸಮಗ್ರ ಆರೋಗ್ಯ ರಕ್ಷಣೆ ಹಾಗೂ ದೀರ್ಘಕಾಲೀನ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ‘ಲಿಬರ್ಟಿ ಎಟರ್ನಿಯಾ’ ಆರೋಗ್ಯ ವಿಮಾ ಯೋಜನೆಯನ್ನು ಪರಿಚಯಿಸಿದೆ.
ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು ಮತ್ತು ಬದಲಾಗುತ್ತಿರುವ ಆರೋಗ್ಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಈ ಯೋಜನೆಯು ಎಟರ್ನಿಯಾ ಬೇಸಿಕ್, ಎಟರ್ನಿಯಾ ಎನ್ಹ್ಯಾನ್ಸ್ಡ್ ಮತ್ತು ಎಟರ್ನಿಯಾ ಇನ್ಫಿನಿಟ್ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿದ್ದು, ₹5 ಲಕ್ಷದಿಂದ ₹3 ಕೋಟಿವರೆಗಿನ ವಿಮಾ ಮೊತ್ತವನ್ನು ಒದಗಿಸುತ್ತದೆ.
ಈ ಯೋಜನೆಯು ಐದು ಪ್ರಮುಖ ಐಚ್ಛಿಕ ಸೌಲಭ್ಯಗಳನ್ನು ಒಳಗೊಂಡಿದೆ. ಜೀವಿತಾವಧಿಯಲ್ಲಿ ಒಮ್ಮೆ ಬಳಸಬಹುದಾದ ಅನಿಯಮಿತ ಕ್ಲೈಮ್ ಸೌಲಭ್ಯದಡಿ ಆಯ್ದ ಕ್ಲೈಮ್ಗೆ ವಾರ್ಷಿಕ ವಿಮಾ ಮೊತ್ತದ ಮಿತಿ ಅನ್ವಯಿಸುವುದಿಲ್ಲ. ‘ಪಾಸ್ ದಿ ಏಜ್’ ಸೌಲಭ್ಯವು ಮೊದಲ ಕ್ಲೈಮ್ ಸಲ್ಲಿಸುವವರೆಗೆ ವಯಸ್ಸಿನ ಆಧಾರದ ಪ್ರೀಮಿಯಂ ಹೆಚ್ಚಳಕ್ಕೆ ವಿರಾಮ ನೀಡುತ್ತದೆ. ವಿಮಾ ಮೊತ್ತದ ಅನಿಯಮಿತ ಮರುಸ್ಥಾಪನೆ, ಎರಡು ಗಂಟೆಗಳ ಆಸ್ಪತ್ರೆ ದಾಖಲಾತಿಗೂ ವಿಮಾ ರಕ್ಷಣೆ ಹಾಗೂ ಗಂಭೀರ ಅನಾರೋಗ್ಯ ಅಥವಾ ದೀರ್ಘಕಾಲದ ಆಸ್ಪತ್ರೆ ದಾಖಲಾತಿಯ ಸಂದರ್ಭಗಳಲ್ಲಿ ಇಎಂಐ ಮರುಪಾವತಿಗೆ ನೆರವಾಗುವ ‘ಇಎಂಐ ಪ್ರೊಟೆಕ್ಟರ್’ ಇತರ ಪ್ರಮುಖ ಸೌಲಭ್ಯಗಳಾಗಿವೆ.
ಇದನ್ನೂ ಓದಿ: Liberty General Insurance: ET ನೌ ಶೃಂಗಸಭೆಯಲ್ಲಿ ಲಿಬರ್ಟಿ ಜನರಲ್ ಇನ್ಸೂರನ್ಸ್ಗೆ ಪ್ರಾಂಪ್ಟ್ ಇನ್ಸೂರೆರ್ ಗರಿಮೆ
ಇದರ ಮೂಲ ವಿಮಾ ರಕ್ಷಣೆಯಲ್ಲಿ ಒಳರೋಗಿ ಚಿಕಿತ್ಸೆ, ಡೇ ಕೇರ್ ಚಿಕಿತ್ಸೆಗಳು, ಮನೆಯಲ್ಲಿಯೇ ಆಸ್ಪತ್ರೆ ಚಿಕಿತ್ಸೆ, ಆಯುಷ್ ಚಿಕಿತ್ಸೆ, ಅಂಗಾಂಗ ದಾನಿಗಳ ಚಿಕಿತ್ಸಾ ವೆಚ್ಚ, ಆಂಬ್ಯುಲೆನ್ಸ್ ಸೇವೆಗಳು ಮತ್ತು ಆರೋಗ್ಯ ಕ್ಷೇಮ ಕಾರ್ಯಕ್ರಮಗಳು ಸೇರಿವೆ. ಆಯ್ಕೆ ಮಾಡಿಕೊಂಡ ಯೋಜನೆಯ ಪ್ರಕಾರ, ಆಸ್ಪತ್ರೆ ದಾಖಲಾತಿಗೆ ಮುನ್ನ 120 ದಿನಗಳು ಹಾಗೂ ಬಿಡುಗಡೆಯ ನಂತರ 180 ದಿನಗಳವರೆಗೆ ಚಿಕಿತ್ಸಾ ವೆಚ್ಚದ ರಕ್ಷಣೆ ಲಭ್ಯವಿದೆ.
ಗ್ರಾಹಕರು ಝೀರೋ ಡಿಡಕ್ಟ್ ಕವರ್, 500% ವರೆಗೆ ಸೂಪರ್ ಬೂಸ್ಟರ್, ಜಾಗತಿಕ ಆರೋಗ್ಯ ರಕ್ಷಣೆ, OPD, ಹೆರಿಗೆ ಸೌಲಭ್ಯ, ನವಜಾತ ಶಿಶುವಿನ ವಿಮೆ ಹಾಗೂ ಮನೆಯಲ್ಲಿಯೇ ನರ್ಸಿಂಗ್ ಸೇವೆಗಳಂತಹ ಹೆಚ್ಚುವರಿ ಸೌಲಭ್ಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ವೈಯಕ್ತಿಕ ಹಾಗೂ ಕುಟುಂಬದ ಫ್ಲೋಟರ್ ಯೋಜನೆಯಾಗಿ ಲಭ್ಯವಿರುವ ಈ ಪಾಲಿಸಿಯು ಗರಿಷ್ಠ ಇಬ್ಬರು ವಯಸ್ಕರು ಮತ್ತು ಮೂವರು ಮಕ್ಕಳನ್ನು ಒಳಗೊಳ್ಳುತ್ತದೆ. 7,000ಕ್ಕೂ ಹೆಚ್ಚು ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಯ ಸೌಲಭ್ಯವೂ ಲಭ್ಯವಿದೆ.
ಲಿಬರ್ಟಿ ಜನರಲ್ ಇನ್ಶೂರೆನ್ಸ್ನ ರಿಟೇಲ್ ಡಿಸ್ಟ್ರಿಬ್ಯೂಷನ್ ಮತ್ತು ಮಾರ್ಕೆಟಿಂಗ್ ವಿಭಾಗದ ಅಧ್ಯಕ್ಷರಾದ ಶ್ರೀ ಜಯೇಶ್ ಖತ್ರಿ ಮಾತನಾಡಿ, ಆರೋಗ್ಯ ವಿಮೆಯಲ್ಲಿನ ಅಂತರವನ್ನು ಕಡಿಮೆ ಮಾಡಲು ಸಮಗ್ರ ರಕ್ಷಣೆ, ಕೈಗೆಟುಕುವ ಪ್ರೀಮಿಯಂ ಮತ್ತು ದೀರ್ಘಕಾಲೀನ ಆರ್ಥಿಕ ಭದ್ರತೆಯನ್ನು ಒದಗಿಸುವ ಪರಿಹಾರಗಳ ಅಗತ್ಯವಿದೆ. ಲಿಬರ್ಟಿ ಎಟರ್ನಿಯಾ ಈ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.